Blog

  • ಪ್ರಸಿದ್ಧ ಘಾಟಿ ಸುಬ್ರಮಣ್ಯ ಜಾತ್ರಾ ಮಹೋತ್ಸವ ಜನವರಿ 16 ಕ್ಕೆ ಫಿಕ್ಸ್ : ರಾತ್ರಿ 8:30ರವರೆಗೂ ಭಕ್ತರಿಗೆ ದೇವರ ದರ್ಶನ ಪಡೆಯಲು ವ್ಯವಸ್ಥೆ

    ದೊಡ್ಡಬಳ್ಳಾಪುರ : ದಕ್ಷಿಣ ಭಾರತದ ಸುಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ದೊಡ್ಡಬಳ್ಳಾಪುರ ತಾಲ್ಲೂಕಿನ ತೂಬಗೆರೆ ಹೋಬಳಿಯ ಶ್ರೀ ಘಾಟಿ ಕ್ಷೇತ್ರದಲ್ಲಿ ನೆಲೆಸಿರುವ ಶ್ರೀ ಸುಬ್ರಹ್ಮಣ್ಯ ಸ್ವಾಮಿಯ ಪ್ರಸಿದ್ಧ ಬ್ರಹ್ಮರಥೋತ್ಸವ ಕಾರ್ಯಕ್ರಮವು ಜನವರಿ 16 ರಂದು ಮಂಗಳವಾರ ಮಧ್ಯಾಹ್ನ 12-15ರಿಂದ 12-30 ಗಂಟೆಗೆ ಈ ಸಲ್ಲುವ ಶುಭ ಮೇಷ ಲಗ್ನದ ಮುಹೂರ್ತದಲ್ಲಿ ನಡೆಯಲಿದೆ.

      ಷಷ್ಠಿಯ ದಿನದಂದು ದೇವಸ್ಥಾನದಲ್ಲಿ ಮುಂಜಾನೆ 3ರಿಂದ ಪೂಜಾ ಕಾರ್ಯಗಳು ಆರಂಭವಾಗೊಳ್ಳಲಿವೆ. ಅಭಿಷೇಕ ಕಾರ್ಯಗಳು ನೆರವೇರಲಿದೆ. ಗರ್ಭಗುಡಿಯಲ್ಲಿನ ಸುಬ್ರಹ್ಮಣ್ಯ ಸ್ವಾಮಿ ಹಾಗೂ ಲಕ್ಷ್ಮೀನರಸಿಂಹಸ್ವಾಮಿ ಮೂರ್ತಿಗಳಿಗೆ ಪ್ರಾತಃ ಕಾಲದಲ್ಲಿ ಕ್ಷೀರಾಭಿಷೇಕ, ಪಂಚಾಮೃತಾಭಿಷೇಕ, ರುದ್ರಾಭಿಷೇಕ, ಶ್ರೀಗಂಧಾಭಿಷೇಕ, ಭಸ್ಮಾಭಿಷೇಕದೊಂದಿಗೆ ವಿಶೇಷ ಹೂವಿನ ಅಲಂಕಾರ ಮಾಡುವ ಮೂಲಕ ಜಾತ್ರಾ ಮಹೋತ್ಸವವನ್ನು ನೆರವೇರಿಸಲಾಗುತ್ತದೆ. ರಾತ್ರಿ 8:30ರವರೆಗೂ ಭಕ್ತರಿಗೆ ದೇವರ ದರ್ಶನ ವ್ಯವಸ್ಥೆ ದೊರೆಯಲಿದೆ.

  • ಭೈರಸಂದ್ರಪಾಳ್ಯ ಗ್ರಾಮದಲ್ಲಿ ಟೊಮೊಟೊ ಕಳ್ಳತನ : ಬರೋಬ್ಬರಿ 2 ಟನ್ ಟೊಮೊಟೊ ಕದ್ದ ಕಳ್ಳರು

    ದೊಡ್ಡಬಳ್ಳಾಪುರ : ಟೊಮೆಟೊ ದರ ಮತ್ತೆ ಏರಿಯಾಗುತ್ತಿದೆ, ಇದರ ಜೊತೆಗೆ ಮತ್ತೆ ಟೊಮೊಟೊ ಕಳವು ಸಹ ಪ್ರಾರಂಭವಾಗಿದೆ, ತಾಲ್ಲೂಕಿನ ಬೈರಸಂದ್ರ ಪಾಳ್ಯದ ರೈತ ದಿವಾಕರ್ ರವರ ತೋಟದಲ್ಲಿ ಘಟನೆ ಸಂಭವಿಸಿದೆ. ರೈತ ದಿವಾಕರ್ ಖಾಸಗಿ ಕಂಪನಿಯಿಂದ ಅರ್ಡರ್ ಪಡೆದಿದ್ದರು ಇಂದು ಬೆಳಗ್ಗೆ ಹಣ್ಣುಗಳನ್ನು ಕಿತ್ತು ಮಾರುಕಟ್ಟೆಗೆ ಹಾಕಲು ಸಿದ್ಧತೆ ನಡೆಸಿದ್ದರು ಆದರೆ ರಾತ್ರೋ ರಾತ್ರಿ ತೋಟಕ್ಕೆ ನುಗ್ಗಿದ ಕಳ್ಳರು ಟೊಮೊಟೊ ಗಿಡಗಳಿಂದ 2 ಟನ್ ಟೊಮೆಟೊ ಕಿತ್ತು ಹಣ್ಣಿನ್ನೊಂದಿಗೆ ಪರಾರಿಯಾಗಿದ್ದಾರೆ.

    ಟೊಮೆಟೊ ಬೆಳೆಯ ತೋಟಕ್ಕೆ ನುಗ್ಗಿದ ಕಳ್ಳರ ತಂಡ ಗಿಡಗಳಿಂದ ಸುಮಾರು 80 ಸಾವಿರ ಮೌಲ್ಯದ ಹಣ್ಣುಗಳನ್ನು ಕದ್ದು ಪರಾರಿಯಾಗಿದ್ದಾರೆ, ಅಂದಹಾಗೇ ದಿವಾಕರ್ ಸುಮಾರು 1 ಎಕರೆಯಲ್ಲಿ ಟೊಮೊಟೊ ಬೆಳೆದಿದ್ದು, ಸದ್ಯ ಮಾರುಕಟ್ಟೆಯಲ್ಲಿ ಪ್ರತಿ ಕೆಜಿಗೆ 40 ರೂ.ಬೆಲೆ ಇದೆ. ಕಳ್ಳರ ಕೈಚಳಕಕ್ಕೆ ಬಡ ರೈತ ಕಂಗಾಲಾಗಿದ್ದಾನೆ .

    ಬೆಳೆ ಕಳೆದುಕೊಂಡ ರೈತ ದಿವಾಕರ್ ಮಾತನಾಡಿ  ನಿನ್ನೆ ರಾತ್ರಿ 2 ಗಂಟೆಯವರೆಗೂ ತೋಟದಲ್ಲಿಯೇ ಇದ್ದು ಗಿಡಗಳಿಗೆ ನೀರು ಹಾಯಿಸಿದ್ದೇನೆ ತೋಟದ ಮನೆಯಲ್ಲಿದ್ದ ಕೆಲಸಗಾರರ ಕುಟುಂಬ ಹೊಸ ವರ್ಷದ ಸಿದ್ಧತೆ ನಡೆಸುತ್ತಿದ್ದರು, ಮಧ್ಯರಾತ್ರಿ 3 ಗಂಟೆಯ ಸಮಯದಲ್ಲಿ ತೋಟಕ್ಕೆ ನುಗ್ಗಿದ ಕಳ್ಳರು ಈ ಕೃತ್ಯ ಎಸಗಿದ್ದಾರೆ ನಮ್ಮ ಜೀವನೋಪಾಯಕ್ಕೆ ಮೂಲವಾಗಿದ್ದ ಬೆಳೆಗೆ ಈ ಪರಿಸ್ಥಿತಿ ಎದುರಾಗಿದೆ ಪೊಲೀಸರು ಈ ಕುರಿತು ತನಿಖೆ ಕೈಗೊಂಡು ನಮಗೆ ನ್ಯಾಯ ಒದಗಿಸಬೇಕು ಎಂದು ಮನವಿ ಮಾಡಿದರು

    ಕೆಲಸಾಗರರಾದ ಮಂಜಮ್ಮ ಮಾತನಾಡಿ ತಡರಾತ್ರಿಯವರೆಗೂ ತೋಟದಲ್ಲಿ ಕೆಲಸ ಮಾಡಿದ್ದೇವೆ ನಂತರ ಬೆಳಗಿನಜಾವ ಯಾರೋ ಕಳ್ಳರು ಈ ಕೃತ್ಯವೆಸಗಿದ್ದಾರೆ ಎಂದು ತಿಳಿಸಿದರು

     

    ಈ ಕುರಿತು ಪೊಲೀಸರಿಗೆ ದೂರು ನೀಡಿದ್ದು ಸ್ಥಳಕ್ಕೆ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ತನಿಖೆ ನಂತರವಷ್ಟೇ ಸತ್ಯ ಹೊರಬೀಳಲಿದೆ .

  • ಶ್ರೀ ಕ್ಷೇತ್ರ ಘಾಟಿ ಸುಬ್ರಮಣ್ಯ ದೇವಾಲಯದಲ್ಲಿ ಹುಂಡಿ ಎಣಿಕೆ : ಎಣಿಕೆಯಲ್ಲಿ ಒಟ್ಟು 62,42,075 ರೂ. ಮೊತ್ತ ಸಂಗ್ರಹ

    ದೊಡ್ಡಬಳ್ಳಾಪುರ : ತಾಲ್ಲೂಕಿನ ಪ್ರಸಿದ್ಧ ದೇವಾಲಯವಾದ ಶ್ರೀ ಘಾಟಿ ಸುಬ್ರಹ್ಮಣ್ಯ ದೇವರ ಹುಂಡಿಯಲ್ಲಿ ಹಾಕಲಾಗಿದ್ದ ಕಾಣಿಕೆಯನ್ನು ಶನಿವಾರ ಎಣಿಕೆ ಮಾಡಲಾಯಿತು. ಹುಂಡಿ ಎಣಿಕೆಯಲ್ಲಿ ಒಟ್ಟು 62,47,075ರೂ. ಮೊತ್ತ ಸಂಗ್ರಹವಾಗಿದೆ ಎಂದು ಮೂಲಗಳು ತಿಳಿಸಿವೆ

    ಇದರೊಂದಿಗೆ 66,600 ರೂ ಮೌಲ್ಯದ 01 ಕೆಜಿ 500 ಗ್ರಾಂ ಬೆಳ್ಳಿಯನ್ನು ಭಕ್ತರು ಹುಂಡಿಯಲ್ಲಿ ಹಾಕುವ ಮೂಲಕ ಭಕ್ತರು ಹರಕೆ ತೀರಿಸಿದ್ದಾರೆ.

    ಹುಂಡಿಯನ್ನು ನಿಯಮಾನುಸಾರ ತೆಗೆದು ದೇವಾಲಯಕ್ಕೆ ಆಗಮಿಸಿದ್ದ ಭಕ್ತಾದಿಗಳ ಸಮ್ಮುಖದಲ್ಲಿ ಎಣಿಕೆ ಕಾರ್ಯ ನಡೆಸಲಾಗಿದೆ

    ಈ ವೇಳೆ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ನಾಗರಾಜು, ಪ್ರಧಾನ ಅರ್ಚಕ ನಾಗೇಂದ್ರ ಶರ್ಮ, ಸಿಬ್ಬಂದಿ ನಂಜಪ್ಪ ಸೇರಿದಂತೆ ಇಂಡಿಯನ್ ಓವರ್ ಸೀಸ್ ಬ್ಯಾಂಕ್ ಸಿಬ್ಬಂದಿ, ಪೊಲೀಸ್ ಹಾಗೂ ದೇವಸ್ಥಾನದ ಸಿಬ್ಬಂದಿ ವರ್ಗ, ಭಕ್ತಾದಿಗಳು ಉಪಸ್ಥಿತರಿದ್ದರು .

  • ಸಾರ್ವಜನಿಕರ ಆರೋಗ್ಯ ಮತ್ತು ಸ್ವಚ್ಚತೆಗೆ ಆದ್ಯತೆ ನೀಡಿ – ಕರುನಾಡು ಯುವ ರಕ್ಷಣಾ ವೇದಿಕೆಯ ವತಿಯಿಂದ ದೊಡ್ಡಬಳ್ಳಾಪುರ ನಗರಸಭೆಗೆ ಮನವಿ

    ದೊಡ್ಡಬಳ್ಳಾಪುರ : ತಾಲ್ಲೂಕಿನ ನಗರಭಾಗದ ಕಛೇರಿ ಪಾಳ್ಯದ ನಿವಾಸಿ ಶಂಕರ್ ರವರ ಸಮಸ್ಯೆ ಕುರಿತಂತೆ ನಗರ ಸಭೆಯ ಅಧಿಕಾರಿಗಳನ್ನು ಭೇಟಿ ಮಾಡಿದ ಕರುನಾಡು ಯುವ ರಕ್ಷಣಾ ವೇದಿಕೆಯ ಪದಾಧಿಕಾರಿಗಳು ನಗರಸಭಾ ಅಧಿಕಾರಿಗಳಿಗೆ ನಗರಭಾಗದಲ್ಲಿ ಸ್ವಚ್ಛತೆ ಕಾಪಾಡುವಂತೆ ಹಾಗೂ ಉತ್ತಮ ರೀತಿಯಲ್ಲಿ ಮೂಲಭೂತ ಸೌಕರ್ಯ ಕಲ್ಪಿಸಿ ಕೊಡುವಂತೆ ಕೋರಿ ಮನವಿ ಸಲ್ಲಿಸಲಾಯಿತು

     

    ಈ ಸಂದರ್ಭದಲ್ಲಿ ಕರುನಾಡು ಯುವ ರಕ್ಷಣಾ ವೇದಿಕೆಯ ತಾಲ್ಲೂಕು ಅಧ್ಯಕ್ಷ ಚೇತನ್ ಮಾತನಾಡಿ ಕಛೇರಿ ಪಾಳ್ಯದ ನಿವಾಸಿ ಶಂಕರ್ ರವರು ನಮ್ಮ ಸಂಘಟನೆಗೆ ದೂರು ನೀಡಿದ್ದ ಹಿನ್ನಲೆಯಲ್ಲಿ ಸ್ಥಳಕ್ಕೆ ಭೇಟಿ ನೀಡಲಾಗಿತ್ತು ಶಂಕರ್ ರವರ ಮನೆಯ ಮುಂಭಾಗ ಕೊಳಚೆ ನೀರು ತುಂಬಿದ್ದು ಸ್ವಚ್ಛತೆ ಸಂಪೂರ್ಣ ಹಾಳಾಗಿದೆ ಹಾಗೂ ನಗರ ಸಭೆ ಈ ಕುರಿತು ಯಾವುದೇ ಕ್ರಮ ಕೈಗೊಂಡಿಲ್ಲ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದ್ದು ಈ ಕುರಿತು ಸ್ಥಳೀಯವಾಗಿ ಸ್ವಚ್ಛತೆ ಕಾಪಾಡುವ ಕಾರ್ಯ ನಗರ ಸಭೆಯ ವತಿಯಿಂದ ಆಗಬೇಕಾಗಿದೆ ಸದರಿ ವಿಚಾರಕ್ಕೆ ಸಂಬಂಧಿಸಿದಂತೆ ನಗರಸಭೆಯ ಅಧ್ಯಕ್ಷರಿಗೆ ಮನವಿ ಸಲ್ಲಿಸಲಾಯಿತು ಈ ಕುರಿತು ತ್ವರಿತವಾಗಿ ಕ್ರಮಕೈಗೊಂಡು ಸಾರ್ವಜನಿಕರ ಆರೋಗ್ಯ ಕಾಪಾಡಬೇಕೆಂದು ತಿಳಿಸಿದರು

     

    ಈ ಸಂದರ್ಭದಲ್ಲಿ ಕರುನಾಡು ಯುವ ರಕ್ಷಣಾ ವೇದಿಕೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು

  • ಕುವೆಂಪುರವರ ಸಾಹಿತ್ಯ ಬರಹಗಳನ್ನು ಓದುವುದರ ಜೊತೆಗೆ ಅವರ ಚಿಂತನೆಗಳನ್ನು ವಿಧ್ಯಾರ್ಥಿಗಳು ಮೈಗೂಡಿಸಿಕೊಳ್ಳಬೇಕು – ಜಿ.ಟಿ.ನರೇಂದ್ರಕುಮಾರ್

    ದೊಡ್ಡಬಳ್ಳಾಪುರ : ಕುವೆಂಪುರವರು ಸಾಮಾಜಿಕ ಸಮಾನತೆಯನ್ನು ತಮ್ಮ ಸಾಹಿತ್ಯ, ವೈಚಾರಿಕತೆ ಹಾಗೂ ಚಿಂತನೆಗಳ ಮೂಲಕ ಹರಡಿದ್ದಾರೆ ಎಂದು ಎಂದು ಸಮಾಜವಾದಿ ಚಿಂತಕರು ಹಾಗೂ ಹೈಕೋರ್ಟಿನ ವಕೀಲರಾದ ಜಿ.ಟಿ.ನರೇಂದ್ರಕುಮಾರ್ ತಿಳಿಸಿದರು.

     

    ಅವರು ದೊಡ್ಡಬಳ್ಳಾಪುರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವತಿಯಿಂದ ನಡೆದ. ವಿಶ್ವ ಮಾನವ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಶಿಕ್ಷಣ ಉಳ್ಳವರು ಮತ್ತು ಇಲ್ಲದವರ ನಡುವಿನ ಅಂತರವನ್ನು ಕಡಿಮೆ ಮಾಡಬೇಕು ಎಂಬುದನ್ನು ಕುವೆಂಪುರವರ ಸಾಹಿತ್ಯ ಮತ್ತು ವೈಚಾರಿಕತೆ ಬರಹಗಳು ತಿಳಿಸುತ್ತವೆ. ಕುವೆಂಪುವರ ಚಿಂತನೆಗಳನ್ನು ವಿದ್ಯಾರ್ಥಿಗಳು ಮೈಗೂಡಿಸಿಕೊಳ್ಳಬೇಕು ಮೂಲಕ ಪುರೋಹಿತರನ್ನು ಅವಲಂಬಿಸದೆ, ಜ್ಞಾನವಂತರಾಗಿ ಸರ್ವೋದಯದತ್ತ ಮುಖ ಮಾಡಬೇಕು ಎಂದರು.

     

     

    ಜಾತಿ ಮತ್ತು ಪುರೋಹಿತಶಾಹಿ ವಂಚನೆಯನ್ನು ಅರಿಯಲು ಕ ನಿರಂಕುಶಮತಿಗಳಾಗಬೇಕೆಂದು ಕುವೆಂಪು ಹೇಳಿದರು. ಕುವೆಂಪುರವರ ಶೂದ್ರತಪಸ್ವಿ, ಜಲಗಾರ ಹಾಗೂ ಬೆರಳ್ಗೆ ಕೊರಳ್ ನಾಟಕಗಳು ಸಮಾಜದ ಮೌಢ್ಯ ಹಾಗೂ ಅವಿವೇಕವನ್ನು ಕುರಿತು ಹೇಳುವುದರ ಜೊತೆಗೆ ಸಮಾಜದಲ್ಲಿ ವಿಚಾರಶಕ್ತಿಯನ್ನು ಉದ್ಧೀಪಿಸುತ್ತವೆ. ಸ್ವಸ್ಥ ಸಮಾಜ ನಿರ್ಮಾಣಕ್ಕಾಗಿ ನಾವು ಧರ್ಮಗಳ ಆಚೆಗೂ ಬದುಕುವ ಚೈತನ್ಯವನ್ನು ಹೊಂದಬೇಕಾಗುತ್ತದೆ. ಇಂದಿನ ವರದಕ್ಷಿಣೆ ಹಾಗೂ ಆಡಂಬರದ ಮದುವೆಯ ಅನಿಷ್ಠಗಳನ್ನು ಮೀರಿ ಮಂತ್ರಮಾಂಗಲ್ಯದಂತಹ ಸರಳ ಹಾಗೂ ವೈಚಾರಿಕ ಜೀವನ ದೃಷ್ಟಿಯ ದೀಕ್ಷೆಯತ್ತ ಯುವಜನ ಆಕರ್ಷಿತರಾಗಬೇಕಾಗುತ್ತದೆ. ಕುವೆಂಪು ವಿಚಾರಧಾರೆಗಳನ್ನು ಇಂದಿನ ಯುವಕರ ಅರಿಯುವುದರಿಂದ ಸಮಾಜ ಆರೋಗ್ಯವಾಗಿರಲು ಸಾಧ್ಯವಾಗುತ್ತದೆ ಎಂದರು.

     

    ಇದೇ ಸಂದರ್ಭದಲ್ಲಿ ಕುವೆಂಪುರವರ ವಿಶ್ವಮಾನವತೆ ಎಂಬ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದವರಿಗೂ ಬಹುಮಾನ ವಿತರಣಾ ಕಾರ್ಯಕ್ರಮ ನಡೆಯಿತು ಪ್ರಬಂಧ ಸ್ಪರ್ಧೆಯಲ್ಲಿ ಆಶಾ ಪ್ರಥಮ ಸ್ಥಾನ, ತೃತೀಯ ಬಿ.ಎ. , ಮೀನ ದ್ವಿತೀಯ ಸ್ಥಾನ ಬಿ.ಎ. ಮಹಿಳಾ ಕಾಲೇಜು, ಹಾಗೂ ಭವ್ಯ ತೃತೀಯ ಬಿ.ಎ ರವರಿಗೆ ನೀಡಿ ಶುಭಕೋರಲಾಯಿತು .

     

    ಕವಿ ಮತ್ತು ಚಿಂತಕ ಡಾ.ಪ್ರಕಾಶ್ ಮಂಟೇದ ಮಾತನಾಡಿ, , ಕುವೆಂಪು ಈ ನಾಡು ಹಾಗೂ ನಮ್ಮ ಬದುಕಿನ ಅದಮ್ಯ ಚೇತನ. ವಿದ್ಯಾರ್ಥಿಗಳು ಆತ್ಮಶ್ರೀಗಳಾಗಲು ಇಂತಹ ಮಾನವತವಾದಿ ಲೇಖಕರನ್ನು ಓದುತ್ತ ತಮ್ಮ ಚೈತನ್ಯವನ್ನು ಉದ್ಧೀಪನಗೊಳಿಸಿಕೊಳ್ಳಬೇಕು. ಅಲ್ಲದೆ, ಯುವ ಸಮುದಾಯ ಕುವೆಂಪು ಓದಿನ ಮೂಲಕ ಎಲ್ಲ ಜನರನ್ನು ಪ್ರೀತಿಸುವ ಸಮಾಜವಾದಿ ಚೇತನವಾಗಿ ಹೊರಹೊಮ್ಮಬೇಕೆಂದು ಎಂದರು.

    ಪ್ರಾಂಶುಪಾಲ ಡಾ.ಸದಾಶಿವ ರಾಮಚಂದ್ರಗೌಡ ಮಾತನಾಡಿ, ಕುವೆಂಪುರವರನ್ನು ಒಂದು ಜಾತಿ ಮತ್ತು ವೈಚಾರಿಕ ದೃಷ್ಟಿಕೋನಕ್ಕೆ ಕಟ್ಟಿಹಾಕದೆ ಮುಕ್ತ ಮನಸ್ಸಿನಿಂದ ಓದಿ ತಮ್ಮ ಜ್ಞಾನವನ್ನು ವಿಕಸನ ಮಾಡಿಕೊಳ್ಳಬೇಕು ಎಂದರು.

     

    ಕಾರ್ಯಕ್ರಮದಲ್ಲಿ ಪ್ರೊ.ಉಮೇಶ್, ಪ್ರೊ. ಸತೀಶ್ , ಡಾ. ಬಿ.ಆರ್ ಗಂಗಾಧರಯ್ಯ, ಕವಿ ಚಿನ್ನುಪ್ರಕಾಶ್, ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳಾದ. ಉದಯರಾಧ್ಯ, ಫಷೀರ್, ಕಾಲೇಜಿನ ಅಧ್ಯಾಪಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು. .

  • ದೊಡ್ಡಬಳ್ಳಾಪುರ ನಿವೇದಿತಾ ವಿಧ್ಯಾ ಸಂಸ್ಥೆಯ ವಾರ್ಷಿಕೋತ್ಸವ (ವೈಭವ )ಕಾರ್ಯಕ್ರಮ : ಮುಖ್ಯ ಅಥಿತಿಗಳಾಗಿ ಮಳೆ ಹುಡುಗಿ ನಟಿ ಪೂಜಗಾಂಧಿ ಭಾಗಿ

    ದೊಡ್ಡಬಳ್ಳಾಪುರ : ಡಿಸೆಂಬರ್ 29 ರಾಷ್ಟ್ರಕವಿ ಕುವೆಂಪು ರವರ ಜನ್ಮ ದಿನಾಚರಣೆಯ ಜೊತೆಗೆ ಈ ದಿನ ತುಂಬಾ ಸ್ಪೆಷಲ್ ಕಾರಣ 2006 ನೇ ಇಸವಿಯಲ್ಲಿ ಇದೇ ದಿನಾಂಕದಂದು ಮುಂಗಾರು ಮಳೆ ಸಿನಿಮಾ ತೆರೆ ಕಂಡಿದ್ದು ಸಂತಸದ ಸಂಗತಿಯಾಗಿದೆ ಇದೇ ದಿನ ದೊಡ್ಡಬಳ್ಳಾಪುರ ತಾಲ್ಲೂಕಿನ ಪ್ರತಿಷ್ಠಿತ ಶಾಲೆಗಳಲ್ಲಿ ಒಂದಾದ ನಿವೇದಿತಾ ವಿಧ್ಯಾ ಸಂಸ್ಥೆಯ ವಾರ್ಷಿಕೋತ್ಸವ (ವೈಭವ) ಕಾರ್ಯಕ್ರಮ ಆಯೋಜನೆ ಮತ್ತಷ್ಟು ಸಂತಸ ತಂದಿದೆ ಎಂದು ನಟಿ ಪೂಜಾಗಾಂಧಿ ತಿಳಿಸಿದರು

    ತಾಲ್ಲೂಕಿನ ನಿವೇದಿತಾ ವಿಧ್ಯಾ ಸಂಸ್ಥೆಯ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು ಮಕ್ಕಳಲ್ಲಿ ಕಲೆ ಮತ್ತು ಸಂಸ್ಕೃತಿ ಬಗ್ಗೆ ಅಭಿಮಾನ ಬೆಳೆಸುವುದು ಇಂತಹ ಕಾರ್ಯಕ್ರಮಗಳು ಮಕ್ಕಳಲ್ಲಿ ಅಡಗಿರುವ ಕಲೆ ಹೊರ ತರುವುದೇ ನಿಜವಾದ ಶಿಕ್ಷಣ ಜೊತೆ ಜೊತೆಗೆ ಕನ್ನಡಾಭಿಮಾನ ಬೆಳೆಸುವುದು ಅತಿ ಮುಖ್ಯ ,ಕನ್ನಡ ನಮ್ಮ ಭಾಷೆ ಮಕ್ಕಳಿಗೆ ಶಾಲಾ ಹಂತದಲ್ಲಿಯೇ ಭಾಷಾಭಿಮಾನ ಬೆಳೆಸುವುದು ಶಿಕ್ಷಕರ ಜವಾಬ್ಧಾರಿ ಎಂದು ತಿಳಿಸಿದರು

     

    ಕನ್ನಡ ನಾಮಫಲಕ ವಿಚಾರವಾಗಿ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು ಕನ್ನಡ ಭಾಷೆಯ ವಿಚಾರದಲ್ಲಿ ನನ್ನ ಸಂಪೂರ್ಣ ಬೆಂಬಲವಿದೆ ಕರ್ನಾಟಕದಲ್ಲಿ ವಾಣಿಜ್ಯ ಮಳಿಗೆಗಳ ನಾಮಫಲಕಗಳಲ್ಲಿ ಕನ್ನಡ ಬಳಕೆ ಮಾಡುವ ವಿಚಾರದಲ್ಲಿ ಹೋರಾಟ ನಡೆಸುತ್ತಿರುವ ಕನ್ನಡ ಪರ ಹೋರಾಟಗಾರರ ನಿರ್ಧಾರ ಶ್ಲಾಘನೀಯ ಆದರೆ ಈ ಪ್ರಕ್ರಿಯೆ ಹಿಂಸೆಯ ಮೂಲಕ ಆಗಬಾರದು ಕಾನೂನಾತ್ಮಕವಾಗಿ ಈ ಹೋರಾಟ ಸಾಗಲಿ ಅನ್ಯರು ಕನ್ನಡ ಬಳಕೆ ಮಾಡುವಂತೆ ಪ್ರೀತಿಯಿಂದ ತಿಳಿಸೋಣ ಎಂದರು .

    ಮಕ್ಕಳೊಂದಿಗೆ ಬೊಂಬೆ ಹೇಳುತೈತೆ ಸೇರಿದಂತೆ ಕನ್ನಡ ಸಿನಿಮಾಗಳ ಹಲವು ಗೀತೆಗಳನ್ನು ಹಾಡುವ ಮೂಲಕ ಎಲ್ಲರನ್ನೂ ರಂಜಿಸಿದರು ರಾಷ್ಟ್ರಕವಿ ಕುವೆಂಪು ರವರ ಕಾವ್ಯವನ್ನು ಹೇಳುವ ಮೂಲಕ ಶಾಲಾ ಮಕ್ಕಳಲ್ಲಿ ಕುವೆಂಪು ಸಾಹಿತ್ಯ ಓದುವಂತೆ ಮನವಿ ಮಾಡಿದರು

    ನಿವೇದಿತಾ ಶಾಲೆಯ ಕಾರ್ಯದರ್ಶಿ ಪುರುಷೋತ್ತಮ್ ಮಾತನಾಡಿ ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲಿ ಕಡಿಮೆ ವೆಚ್ಚದಲ್ಲಿ ಉತ್ತಮ ಶಿಕ್ಷಣ ನೀಡುತ್ತಿರುವ ವಿಧ್ಯಾಸಂಸ್ಥೆ ನಮ್ಮ ನಿವೇದಿತಾ ವಿಧ್ಯಾಸಂಸ್ಥೆಯಾಗಿದೆ 43ನೇ ವರ್ಷದ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ವೈಭವ ಎಂಬ ಎಂಬ ಹೆಸರಿನಡಿಯಲ್ಲಿ ಆಚರಿಸಲಾಗುತ್ತಿದ್ದು ಸ್ಟೇಟ್ ಹಾಗೂ ಸಿಬಿಎಸ್ ಸಿ ಮಾದರಿಯ ಶಿಕ್ಷಣ ವ್ಯವಸ್ಥೆಯಲ್ಲಿ ಉತ್ತಮ ಫಲಿತಾಂಶ ನೀಡುತ್ತಿರುವ ಶಾಲೆ ನಮ್ಮದಾಗಿದ್ದು ಮುಂದೆ ಹಲವು ವಿಧ್ಯಾರ್ಥಿಗಳಿಗೆ ಆಸರೆಯಾಗಲಿ ಎಂದು ತಿಳಿಸಿದರು

    ನಿವೃತ್ತ ಎಸಿಪಿ ಸುಬ್ಬಣ್ಣ ಮಾತನಾಡಿ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಪೂಜಾಗಾಂಧಿ ಆಗಮಿಸಿದ್ದು ಸಂತೋಷ ತಂದಿದೆ ನಮ್ಮ ನಿವೇದಿತಾ ಶಾಲೆಯು ತಾಲ್ಲೂಕಿನ ಹೆಸರಾಂತ ಶಾಲೆಯಾಗಿದ್ದು ಹಲವು ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ರಾಜ್ಯ ಹಾಗೂ ತಾಲ್ಲೂಕಿಗೆ ಕೊಡುಗೆಯಾಗಿ ನೀಡಿದೆ ಮುಂದೆಯೂ ನಮ್ಮ ಶಾಲೆಯಿಂದ ಹಲವು ಪ್ರತಿಭಾನ್ವಿತ ವಿದ್ಯಾರ್ಥಿಗಳು ಸಮಾಜದಲ್ಲಿ ಉತ್ತಮ ಸೇವೆ ಸಲ್ಲಿಸುವಂತಾಗಲಿ ಎಂದು ತಮ್ಮ ಅಭಿಪ್ರಾಯ ವ್ಯಕ್ತ ಪಡಿಸಿದರು .

     

    ಕಾರ್ಯಕ್ರಮದಲ್ಲಿ ನಿವೇದಿತಾ ಶಾಲೆಯ ಮುಖ್ಯ ಶಿಕ್ಷಕರು , ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು

  • ಕರವೇ ನಾರಾಯಣ ಗೌಡರ ಬಂಧನ ಖಂಡಿಸಿ ಪ್ರತಿಭಟನೆ : ಬೆತ್ತಲೆ ಮೆರವಣಿಗೆ ಎಚ್ಚರಿಕೆ ನೀಡಿದ ಕರವೇ ಪುರುಷೋತ್ತಮ್ ಗೌಡ

    ದೊಡ್ಡಬಳ್ಳಾಪುರ :ಕನ್ನಡಿಗರ ಹೋರಾಟವನ್ನು ಹತ್ತಿಕ್ಕುವ ಪ್ರಯತ್ನ ರಾಜ್ಯ ಸರ್ಕಾರದಿಂದ ನಡೆಯುತ್ತಿದೆ ನಮ್ಮ ನಾಯಕರಾದ ನಾರಾಯಣ ಗೌಡ ರವರನ್ನು ಈ ಕೂಡಲೇ ಬಿಡುಗಡೆಗೊಳಿಸಿ ಇಲ್ಲವಾದಲ್ಲಿ ನಮ್ಮ ಕರವೇ ಕಾರ್ಯಕರ್ತರು ಬೆತ್ತಲೆ ಮೆರವಣಿಗೆ ನಡೆಸುತ್ತಿವೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು

    ಇದು ದೊಡ್ಡಬಳ್ಳಾಪುರ ತಾಲ್ಲೂಕಿನ ತಾಲ್ಲೂಕು ಕಛೇರಿ ವೃತ್ತದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ನಾರಾಯಣ ಗೌಡರ ಬಣ ದ ವತಿಯಿಂದ ತಾಲ್ಲೂಕು ಅಧ್ಯಕ್ಷರಾದ ಪುರುಷೋತ್ತಮ್ ಗೌಡ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು ಈ ಸಂದರ್ಭದಲ್ಲಿ ಪುರುಷೋತ್ತಮ್ ಗೌಡ ಮಾತನಾಡಿ ನಾವು ಕನ್ನಡಿಗರು ನಮ್ಮ ಭಾಷೆಯ ಉಳಿವಿಗಾಗಿ ಹೋರಾಟ ಮಾಡುತ್ತಿದ್ದೇವೆ ಸರ್ಕಾರವೇ ಹೇಳಿರುವಂತೆ ಶೇಕಡಾ 60 ವಾಣಿಜ್ಯ ಮಳಿಗೆಗಳ ನಾಮಫಲಕಗಳಲ್ಲಿ ಕನ್ನಡ ಭಾಷೆಯ ಬಳಕೆ ಮಾಡಬೇಕು ಎಂಬುದು ನಮ್ಮ ಒತ್ತಾಯ. ಡಿಸೆಂಬರ್ 27ರಂದು ಕರ್ನಾಟಕ ರಕ್ಷಣಾ ವೇದಿಕೆಯ ನಾರಯಣ ಗೌಡರನ್ನು ಬಂಧಿಸಲಾಗಿದ್ದು ಕನ್ನಡಿಗರ ಹೋರಾಟವನ್ನು ಹತ್ತಿಕ್ಕುವ ಪ್ರಯತ್ನ ನಡೆದಿದೆ ನಮ್ಮ ನಾಯಕರನ್ನು ಈ ಕೂಡಲೇ ಬಿಡುಗಡೆಗೊಳಿಸಬೇಕು ಇಲ್ಲವಾದಲ್ಲಿ ದೊಡ್ಡಬಳ್ಳಾಪುರ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ಸರ್ಕಾರಕ್ಕೆ ಬುದ್ಧಿ ಕಲಿಸುವ ನಿಟ್ಟಿನಲ್ಲಿ ಬೆತ್ತಲೆ ಮೆರವಣಿಗೆ ಮಾಡುತ್ತೇವೆ ಎಂದು ತಿಳಿಸಿದರು

     

    ಇಂದಿನ ಹೋರಾಟ ಸಾಂಕೇತಿಕವಾಗಿ ನಡೆಸಿದ್ದು ಈ ಕೂಡಲೇ ಬಂಧಿತರನ್ನು ಬಿಡುಗಡೆಗೊಳಿಸಬೇಕು , ನಮ್ಮ ಕನ್ನಡ ಹೋರಾಟಗಾರರು ಪ್ರಾಣ ತ್ಯಾಗಕ್ಕೂ ಸಿದ್ಧ ನಮ್ಮ ಹೋರಾಟ ಮುಂದುವರೆಯುತ್ತದೆ ಕನ್ನಡ ಪರ ಹೋರಾಟಗಾರರ ಬಗ್ಗೆ ಬೇಜವಾಬ್ದಾರಿ ಅಸಡ್ಡೆ ವರ್ತನೆ ಬದಲಾಗಬೇಕಿದೆ ಇಲ್ಲವಾದಲ್ಲಿ ಮುಂದೆ ಇದರ ಪ್ರತಿಫಲವಾಗಿ ಉಗ್ರ ಹೋರಾಟ ಎದುರಿಸಬೇಕಾಗುತ್ತದೆ ಎಂದು ತಿಳಿಸಿದರು

     

    ಈ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ನೂರಾರು ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡು ಪ್ರತಿಭಟನೆ ಯಶಸ್ವಿಗೊಳಿಸಿದರು

  • ನಾಳೆ ದೊಡ್ಡಬಳ್ಳಾಪುರದ ಮಾಲ್ ಗಳಿಗೆ ಕರವೇ ಕನ್ನಡಿಗರ ಬಣ ಭೇಟಿ : ಕನ್ನಡ ಬಳಕೆ ಮಾಡಲು ಹಾಗೂ ಕನ್ನಡದಲ್ಲಿ ವ್ಯವಹರಿಸುವಂತೆ ಆಗ್ರಹ

    ದೊಡ್ಡಬಳ್ಳಾಪುರ : ನಾಳೆ ನಮ್ಮ ಕಾರ್ಯಕರ್ತರು ತಾಲ್ಲೂಕಿನ ಡಿ ಮಾರ್ಟ್ ಸೇರಿದಂತೆ ಹಲವು ಮಾಲ್ ಗಳಿಗೆ ಭೇಟಿ ನೀಡಲಿದ್ದು, ಕನ್ನಡ ಬಳಕೆ ಮಾಡುವ ಬಗ್ಗೆ ಅರಿವು ಮೂಡಿಸಿ ಕನ್ನಡ ಭಾಷೆಯಲ್ಲಿ ವ್ಯವಹರಿಸುವಂತೆ ತಿಳಿಸಲಾಗುವುದು ಎಂದು ಕರ್ನಾಟಕ ರಕ್ಷಣಾ ವೇದಿಕೆ ( ಕನ್ನಡಿಗರ ಬಣ) ದ ಬಿ.ಎಸ್.ಚಂದ್ರಶೇಖರ್ ತಿಳಿಸಿದರು.

     

    ಶುಕ್ರವಾರ ಕರವೇ ( ಕನ್ನಡಿಗರ ಬಣ )ಕಚೇರಿಯಲ್ಲಿ ಆಯೋಜನೆ ಮಾಡಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸರ್ಕಾರಕ್ಕೆ ಹೋರಾಟ ಕುರಿತು ಮಾಹಿತಿ ನೀಡಿದ್ದರು ರ್ಯಾಲಿ ನೆಡೆಸಲು ಅನುಮತಿ ಕೊಡದೆ ಸತಾಯಿಸಿ ಕನ್ನಡಿಗರ ಆಕ್ರೋಶ ಕೆರಳುವಂತೆ ಮಾಡಿದೆ. ಕೆಲ ಮಾಲ್ ಗಳು ತಮ್ಮ ಸಿಬ್ಬಂದಿಯಿಂದಲ್ಲೇ ಇಂಗ್ಲಿಷ್ ನಾಮಫಲಕಗಳಿಗೆ ಹನಿ ಮಾಡಿಸಿ ಕನ್ನಡ ಹೋರಾಟಗಾರರ ಮೇಲೆ ಆರೋಪಿಸಲಾಗಿದೆ ಕನ್ನಡ ಪರ ಹೋರಾಟಗಾರರಾದ ನಾರಾಯಣ ಗೌಡ ರವರನ್ನು ಬಂಧಿಸಿರುವ ಸರ್ಕಾರ ಈ ಕೂಡಲೇ ಅವರನ್ನು ಬಿಡುಗಡೆಗೊಳಿಸಬೇಕು ಎಂದು ಆಗ್ರಹಿಸಿದರು

     

    ಕರ್ನಾಟಕ ರಕ್ಷಣಾ ವೇದಿಕೆ (ಕನ್ನಡಿಗರ ಬಣ)ಯ ವತಿಯಿಂದ ನಾಳೆ ಡಿಸೆಂಬರ್ 30 ರಂದು ಬೆಳ್ಳಿಗೆ 11 ಗಂಟೆಗೆ ದೊಡ್ಡಬಳ್ಳಾಪುರ ತಾಲ್ಲೂಕಿನ ತಾಲ್ಲೂಕು ಕಛೇರಿ ಯಿಂದ ಅಭಿಯಾನವನ್ನು ಆರಂಭಿಸಿ ತಾಲ್ಲೂಕಿನ ಹಲವು ಮಾಲ್ ಹಾಗೂ ವಾಣಿಜ್ಯ ಮಳಿಗೆಗಳಿಗೆ ಕರವೇ ಕಾರ್ಯಕರ್ತರೊಂದಿಗೆ ಭೇಟಿ ನೀಡಿ ಕನ್ನಡ ಬಳಸಲು ಹಾಗೂ ಕನ್ನಡ ಭಾಷೆಯಲ್ಲಿ ವ್ಯವಹರಿಸಲು ತಿಳಿಸಲಾಗುವುದು ಹಾಗೂ ಕೆಲ ವಾಣಿಜ್ಯ ಮಳಿಗೆಗಳಲ್ಲಿ ಇಂಗ್ಲೀಷ್ ಭಾಷೆಯ ಬಿಲ್ ಗಳನ್ನು ನೀಡುತ್ತಿದ್ದು ಇದನ್ನು ಕರವೇ ಕನ್ನಡಿಗರ ಬಣ ಖಂಡಿಸುತ್ತದೆ ಎಂದು ತಿಳಿಸಿದರು

     

    ಸುದ್ದಿ ಗೋಷ್ಟಿಯಲ್ಲಿ ಕರವೇ ಕನ್ನಡಿಗರ ಬಣದ ತಾಲ್ಲೂಕು ಮಹಿಳಾ ಘಟಕ ಉಪಾಧ್ಯಕ್ಷರಾದ ಕಮಲಮ್ಮ , ತಾಲ್ಲೂಕು ಯುವ ಘಟಕ ಅಧ್ಯಕ್ಷ ರಂಜಿತ್ ಗೌಡ ,ತಾಲ್ಲೂಕು ಪ್ರಧಾನ ಕಾರ್ಯದರ್ಶಿ ರಮೇಶ್,ಯುವಘಟಕದ ಮುಖಂಡರಾದ ಶಿವಾನಂದ ,ವಿನಯ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು

  • ಭಾರತ ಸೇವಾದಳ ರಾಷ್ಟ್ರೀಯ ಭಾವೈಕ್ಯತೆ,ಮಕ್ಕಳ ಮೇಳ ಕಾರ್ಯಕ್ರಮಕ್ಕೆ ಗಣ್ಯರಿಂದ ಚಾಲನೆ

    ದೊಡ್ಡಬಳ್ಳಾಪುರ : ಮಕ್ಕಳಲ್ಲಿ ಶಿಸ್ತು , ಸಂಯಮ ಮತ್ತು ಸಾಮರ್ಥ್ಯ ಬೆಳವಣಿಗೆಗೆ ಭಾರತ ಸೇವಾದಳ ಸಹಕಾರಿ, ಮಕ್ಕಳಲ್ಲಿ ಸೇವೆಯ ಕುರಿತು ಅದ್ಭುತ ಚಿಂತನೆ ಮೂಡಿಸುವಲ್ಲಿ ಸೇವಾದಳ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಭಾರತ ಸೇವಾದಳದ ಬೆಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷರಾದ ಜಿ .ಲಕ್ಷ್ಮೀಪತಿ ತಿಳಿಸಿದರು

     

    ಸೇವಾದಳ ಶತಮಾನೋತ್ಸವದ ಅಂಗವಾಗಿ ರಾಷ್ಟ್ರೀಯ ಭಾವೈಕ್ಯತೆ ಮಕ್ಕಳ ಮೇಳ ಕಾರ್ಯಕ್ರಮವನ್ನು ತಾಲ್ಲೂಕಿನ ಕೊಂಗಡಿಯಪ್ಪ ಪದವಿಪೂರ್ವ ಕಾಲೇಜ್ ನಲ್ಲಿ ಹಮ್ಮಿಕೊಳ್ಳಲಾಯಿತು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಕಾರ್ಯಕ್ರಮದಲ್ಲಿ ಧ್ವಜವಂದನೆ, ಗೌರವರಕ್ಷೆ, ಏರೋಬಿಕ್ಸ್ ,ಪ್ರಭಾತ್ ಬೇರಿ ನಡೆಸಲಾಗಿದೆ ಮಕ್ಕಳಲ್ಲಿ ಅದ್ಧುತ ಸಾಮರ್ಥ್ಯವಿದ್ದು ಮಕ್ಕಳ ಕ್ರಿಯಾತ್ಮಕ ಗುಣಗಳನ್ನು ಸಮಾಜಕ್ಕೆ ಉತ್ತಮ ಕೊಡುಗೆಯಾಗಿ ನೀಡುವ ಪ್ರಯತ್ನ ನಮ್ಮ ಸೇವಾದಳ ಮಾಡುತ್ತದೆ ಸಮಾಜದ ಒಳಿತಿಗಾಗಿ ಶ್ರಮಿಸುವ ಭಾರತ ಸೇವಾದಳದಲ್ಲಿ ನಾವೆಲ್ಲಾ ಸೇವೆ ಸಲ್ಲಿಸುತ್ತಿರುವುದು ಪುಣ್ಯವೇ ಸರಿ ದೇಶದ ರಕ್ಷಣೆಗೆ ನಮ್ಮ ಶ್ರಮ ಎಂದಿಗೂ ಇರುತ್ತದೆ ಸೇವಾದಳದಲ್ಲಿ ತರಬೇತಿ ಪಡೆದಿರುವ ಮಕ್ಕಳು ನಮ್ಮ ಅವಶ್ಯಕತೆ ಇದ್ದಾಗ ಸಮಾಜದಲ್ಲಿ ಯಾವುದೇ ಫಲಾಪೇಕ್ಷೆ ಇಲ್ಲದೆ ಸೇವೆ ಸಲ್ಲಿಸಬೇಕು ಎಂದು ತಿಳಿಸಿದರು

    ಈ ಕಾರ್ಯಕ್ರಮದಲ್ಲಿ ಕಾಲೇಜಿನ ಆಡಳಿತ ಮಂಡಳಿ , ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಭಾರತ ಸೇವದಳ ಬೆಂಗಳೂರು ಗ್ರಾಮಾಂತರ ಜಿಲ್ಲಾ ಮತ್ತು ತಾಲ್ಲೂಕು ಸಮಿತಿಯ ಎಲ್ಲಾ ಪದಾಧಿಕಾರಿಗಳು ,ಸದಸ್ಯರು ಹಾಜರಿದ್ದರು

  • ನಾಳೆ (ಡಿ.29) ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಕಾಟೇರ ಬಿಡುಗಡೆ : ಸಂಭ್ರಮಾಚರಣೆಗೆ ಸಕಲ ಸಿದ್ಧತೆ ಮಾಡಿಕೊಂಡಿರುವ ಅಭಿಮಾನಿ ಬಳಗ

    ಯಾವುದೇ ಸಂದರ್ಭದಲ್ಲೇ ಆಗಲಿ ಸಿನಿಮಾ ಬಿಡುಗಡೆಯಾದರೂ ಅದ್ಧೂರಿಯಾಗಿ ಸ್ವಾಗತ ಪಡೆಯುವ ಸಿನಿಮಾಗಳಲ್ಲಿ ಸ್ಟಾರ್ ನಟ ದರ್ಶನ್ ರವರ ಸಿನಿಮಾ ಮುಂಚೂಣಿಯಲ್ಲಿರುತ್ತದೆ

     

    ಹೌದು ನಾಳೆ ಡಿಸೆಂಬರ್ 29 ರಂದು ತೆರೆ ಕಾಣಲಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಚಿತ್ರ “ಕಾಟೇರ ” ಈ ಸಿನಿಮಾ ಕುರಿತಂತೆ ಅಭಿಮಾನಿಗಳಲ್ಲಿ ಹಬ್ಬದ ಸಂಭ್ರಮ ಮನೆ ಮಾಡಿದೆ.ಮೊದಲ ದಿನದ ಟಿಕೇಟ್ ಗಳು ಈಗಾಗಲೇ ಮಾರಾಟವಾಗಿವೆ ಎಂದು ಮೂಲಗಳು ತಿಳಿಸಿವೆ. ಹಾಗೂ ರಾಜ್ಯಾದ್ಯಂತ 457 ಚಿತ್ರ ಮಂದಿರಗಳಲ್ಲಿ ತೆರೆ ಕಾಣಲಿರುವ ಕಾಟೇರ ಬಾಕ್ಸ್ ಆಫೀಸ್ ನಲ್ಲಿ ಕಾಮಾಲ್ ಮಾಡಲಿದೆ ಎಂಬುದು ಎಲ್ಲರ ಲೆಕ್ಕಾಚಾರ

     

    ರಾಕ್ ಲೈನ್ ಎಂಟರ್ಟೈನ್ಮೆಂಟ್ ಬೈನರ್ ಅಡಿಯಲ್ಲಿ ತರುಣ್ ಸುಧೀರ್ ನಿರ್ದೇಶನದಲ್ಲಿ ವಿ. ಹರಿಕೃಷ್ಣ ಸಂಗೀತ ಸಂಯೋಜನೆಯಲ್ಲಿ ಬಹು ತಾರಾಗಣದೊಂದಿಗೆ ಮೂಡಿಬರುತ್ತಿರುವ ಕಾಟೇರ ಚಿತ್ರ ಬಹು ನಿರೀಕ್ಷೆಯನ್ನು ಹುಟ್ಟುಹಾಕಿದೆ .ನಟ ದರ್ಶನ್ ಹಾಗೂ ಆರಾಧನಾ ಜೋಡಿ ಮೋಡಿ ಮಾಡಲಿದೆಯೇ ಕಾದು ನೋಡಬೇಕಿದೆ