Blog

  • ಕ್ರೀಡಾಪಟುಗಳ ಉತ್ತಮ ಅಭ್ಯಾಸಕ್ಕೆ ಸೌಕರ್ಯಗಳ ಕೊರತೆ : ಸ್ಥಳೀಯವಾಗಿ ಸಿಂತೆಟಿಕ್ ಟ್ರ್ಯಾಕ್ ನೀಡಲು ಕ್ರೀಡಾಪಟುಗಳ ಮನವಿ

    ದೊಡ್ಡಬಳ್ಳಾಪುರ : ತಾಲ್ಲೂಕಿನ ಪ್ರತಿಭಾನ್ವಿತ ಕ್ರೀಡಾಪಟುಗಳು ರಾಷ್ಟ್ರ ಮಟ್ಟದಲ್ಲಿ ತಮ್ಮ ಕ್ರೀಡೆಯನ್ನು ಪ್ರದರ್ಶನ ಮಾಡುತ್ತಿದ್ದು ಸ್ಥಳೀಯವಾಗಿ ಉತ್ತಮ ಅಭ್ಯಾಸ ನಡೆಸಲು ಸೌಕರ್ಯಗಳ ಕೊರತೆ ಇದೆ ಸಿಂತೇಟಿಕ್ ಟ್ರ್ಯಾಕ್ ಗಾಗಿ ನಮ್ಮ ಸ್ಥಳೀಯ ಮಟ್ಟದ ಕ್ರೀಡಾ ಪಟುಗಳು ತುಮಕೂರು ಅಥವಾ ಬೆಂಗಳೂರಿಗೆ ಹೋಗುವ ಪರಿಸ್ಥಿತಿ ಎಂದುರಾಗಿದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲೆ ಸ್ಪೋರ್ಟ್ಸ್ ಕಲ್ಬ್ ನ ತರಬೇತುದಾರ ಆನಂದ್ ಭೈರವ ತಿಳಿಸಿದರು

     

    2024 ಫೆಬ್ರುವರಿ ತಿಂಗಳಿನಲ್ಲಿ ಗುಜರಾತ್ ನ ಅಹಮದಾಬಾದ್ ನಲ್ಲಿ ನಡೆಯಲಿರುವ ರಾಷ್ಟ್ರೀಯ ಕ್ರೀಡಾಕೂಟಕ್ಕೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲ್ಲೂಕಿನ ಯುವ ಕ್ರೀಡಾಪಟುಗಳು ಆಯ್ಕೆಯಾಗಿದ್ದು ಈ ಕುರಿತು ನಗರದ ಭಗತ್ ಸಿಂಗ್ ಕ್ರೀಡಾಂಗಣದಲ್ಲಿ ಮಾತನಾಡಿದ ಅವರು ನಮ್ಮ ಗ್ರಾಮಾಂತರ ಪ್ರತಿಭೆಗಳು ರಾಜ್ಯ ಹಾಗೂ ರಾಷ್ಟ್ರಮಟ್ಟದ ಕ್ರೀಡಾಕೂಟಗಳಲ್ಲಿ ಭಾಗವಹಿಸುತ್ತಿದ್ದು ಸಾಧನೆ ಮಾಡುವ ಯುವ ಮನಸ್ಸುಗಳಿಗೆ ಸೌಲಭ್ಯಗಳ ಕೊರತೆ ಎದುರಾಗಿದೆ ಸ್ಥಳೀಯವಾಗಿ ಭಗತ್ ಸಿಂಗ್ ಕ್ರೀಡಾಂಗಣದಲ್ಲಿ ನಿರಂತರ ಅಭ್ಯಾಸ ನಡೆಸುತ್ತಿದ್ದು ನಮ್ಮಲ್ಲಿ ಸೌಲಭ್ಯಗಳ ಕೊರತೆಯಿದೆ ಯುವ ಕ್ರೀಡಾ ಪ್ರತಿಭೆಗಳಿಗೆ ಕ್ರೀಡಾ ಇಲಾಖೆಯ ಸಹಕಾರದ ಅವಶ್ಯಕತೆ ಇದೆ ಸ್ಥಳೀಯವಾಗಿ ಸಿಂತೇಟಿಕ್ ಟ್ರ್ಯಾಕ್ ಜೊತೆಗೆ ಪ್ರತ್ಯೇಕ ಕ್ರೀಡಾಂಗಣ ನಿರ್ಮಾಣದ ಅವಶ್ಯಕತೆ ಇದೆ ಎಂದು ತಿಳಿಸಿದರು

     

    ತರಬೇತುದಾರ ಸುನಿಲ್ ಮಾತನಾಡಿ ಈ ಹಿಂದೆ ಹೊಸಕೋಟೆಯಲ್ಲಿ ನೆಡದ ನಿದ್ಜಮ್ ಕ್ರೀಡಾಕೂಟದಲ್ಲಿ ದೊಡ್ಡಬಳ್ಳಾಪುರದ ವತಿಯಿಂದ 30 ಕ್ಕೂ ಅಧಿಕ ಕ್ರೀಡಾಪಟುಗಳು ಭಾಗವಹಿಸಿದ್ದು 20 ಕ್ರೀಡಾಪಟುಗಳು ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ ಕ್ರೀಡಾಪಟುಗಳು ಉತ್ತಮ ರೀತಿಯಲ್ಲಿ ಅಭ್ಯಾಸ ನಡೆಸಿದ್ದು ಈ ಭಾರಿ ರಾಷ್ಟ್ರಮಟ್ಟದಲ್ಲಿ ನಮ್ಮ ಜಿಲ್ಲೆ ಹಾಗೂ ತಾಲ್ಲೂಕಿನ ಕ್ರೀಡಾಪಟುಗಳು ಸಾಧನೆ ಮಾಡಲಿದ್ದಾರೆ ಎಂದು ತಿಳಿಸಿದರು

    ಯುವ ಕ್ರೀಡಾಪಟು ನಿತೇಶ್ ಗೌಡ ಮಾತನಾಡಿ ಕಳೆದ ಬಾರಿ ರಾಜ್ಯಮಟ್ಟದಲ್ಲಿ ರಾಷ್ಟ್ರಮಟ್ಟದಲ್ಲಿ 400 ಮೀಟರ್ ಓಟದ ಸ್ಪರ್ಧೆಯಲ್ಲಿ ಪದಕ ಪಡೆದಿದ್ದು ಈ ಭಾರಿ ಪಟ್ನಾದಲ್ಲಿ ನೆಡೆಯುವ ರಾಷ್ಟ್ರಮಟ್ಟದ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆಲ್ಲುವ ಬರವೆಸೆ ಇದೆ ಎಂದು ತಿಳಿಸಿದರು

    ಈ ಸಂದರ್ಭದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಸ್ಪೋರ್ಟ್ಸ್ ಕ್ಲಬ್ ನ ತರಬೇತಿದಾರರು ಪೋಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು

  • ಪ್ಯಾರಾಮಿಲಿಟರಿ ಮಾಜಿ ಯೋಧರ ವತಿಯಿಂದ ಫೆಬ್ರವರಿ 14ರಂದು ಬೃಹತ್ ಸಮಾವೇಶ : ಕಾರ್ಯಕ್ರಮದಲ್ಲಿ 17000 ಅರೆಸೇನಾಪಡೆ ಮಾಜಿ ಯೋಧರು ಭಾಗಿಯಾಗುವ ಸಾಧ್ಯತೆ

    ಯಲಹಂಕ :ಭಾರತ ದೇಶದ ಸಂಪೂರ್ಣ ಗಡಿ ಭಾಗವನ್ನು ಕಾಯುತ್ತಿರುವುದು ನಮ್ಮ ಅರೇಸೇನಾ ಪಡೆಗಳು ದೇಶದ ನಕ್ಸಲ್ ಹಾಗೂ ಭಯೋತ್ಪಾದನೆ ವಿರುದ್ಧ ನಮ್ಮ ಅರೇಸೇನಾ ಪಡೆಗಳು ಶ್ರಮಿಸುತ್ತಿದ್ದು ವಾಘಗಡಿಯಂತಹ ಸ್ಥಳಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ನಂತರ ತಮ್ಮ ತಾಯಿನಾಡಿನಲ್ಲಿ ಜೀವನ ಸಾಗಿಸಲು ಬರುವ ಸಿಬ್ಬಂದಿಗಳು ಇಲ್ಲಿ ಕೇವಲ(ಸೆಕ್ಯೂರಿಟಿ )ಭದ್ರತಾ ಸಿಬ್ಬಂದಿಗಳಾಗಿ ಸೇವೆ ಸಲ್ಲಿಸುವ ಪರಿಸ್ಥಿತಿ ಎದುರಾಗಿದೆ ಸರ್ಕಾರದ ನಿಯಮಗಳ ಪ್ರಕಾರ ಸೈನಿಕ ಎಂಬ ಪರಿಭಾಷೆಯಲ್ಲಿ ನಮ್ಮನ್ನು ಹೊರಗಿಡಲಾಗಿದೆ ಕೇವಲ ಕಂದಾಯ ಇಲಾಖೆಯಲ್ಲಿ ಮಾತ್ರ ನಮ್ಮನ್ನು ಗುರುತಿಸಲಾಗುತ್ತಿದ್ದು ನಮ್ಮ ಅರಸೇನಾ ಪಡೆಗಳ ಕೂಗನ್ನು ಸರ್ಕಾರಕ್ಕೆ ಮುಟ್ಟಿಸುವ ಸಲುವಾಗಿ ಫೆಬ್ರವರಿ 14ರಂದು ಪುಲ್ವಾಮ ದಾಳಿಯಲ್ಲಿ 44 ಯೋಧರು ಮೃತಪಟ್ಟಿರುವ ಕಹಿ ನೆನಪನ್ನು ಭಾವನಾತ್ಮಕವಾಗಿ ಸ್ಮರಿಸುತ್ತಾ ಕೇಂದ್ರೀಯ ಅರೆಸೇನಾ ಪಡೆಗಳ ಮಾಜಿ ಯೋಧರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಬೃಹತ್ ಸಮಾವೇಶವನ್ನು ಆಯೋಜನೆ ಮಾಡಲಾಗಿದೆ ಈ ಸಮಾವೇಶದಲ್ಲಿ ರಾಜ್ಯಾದ್ಯಂತ 17000ಕ್ಕೂ ಹೆಚ್ಚು ಅರಸೇನಾ ಪಡೆಗಳ ಮಾಜಿ ಯೋಧರು ಭಾಗವಹಿಸುವ ನಿರೀಕ್ಷೆ ಇದೆ ಎಂದು ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಅನಂತ ರಾಜಗೋಪಾಲ ತಿಳಿಸಿದರು

    ಫೆಬ್ರವರಿ 14ರಂದು ನಡೆಯುವ ಸಮಾವೇಶದ ಹಿನ್ನೆಲೆ ಪೂರ್ವಭಾವಿ ಸಭೆ ನಡೆಸಲಾಯಿತು ಸಭೆಯ ನಂತರ ಮಾತನಾಡಿದವರು ಕಾಲಕಾಲಕ್ಕೆ ಸರ್ಕಾರಗಳು ಬದಲಾಗುತ್ತಿವೆ ಆದರೆ ಅರಸೇನಾ ಪಡೆಗಳ ಬೇಡಿಕೆಗಳನ್ನು ಈಡೇರಿಸುವ ಮನಸ್ಸು ಯಾವ ಸರ್ಕಾರವೂ ಮಾಡಿಲ್ಲ ಎಂಬುದೇ ವಿಪರ್ಯಾಸದ ಸಂಗತಿ ನಮ್ಮ ಅರಸೇನಾಪಡೆಗಳಿಗೆ ಯಾವುದೇ ಅಧಿಕೃತ ಬೋರ್ಡ್ ಹೀಗಾಗಿ ಸೇನಾ ಪಡೆಗಳಿಗೆ ಸಿಗುವ ಸೌಲಭ್ಯಗಳು ನಮ್ಮ ಅರೇಸೇನಾ ಪಡೆಗಳಿಗೆ ಸಿಗುತ್ತಿಲ್ಲ ಸರ್ಕಾರದ ಗಮನ ಸೆಳೆಯಲು ಹಾಗೂ ಯುದ್ಧ ಭೂಮಿಯಲ್ಲಿ ಮೃತಪಟ್ಟ ಯೋಧರಿಗೆ ಗೌರವನ ನಮನ ಸಲ್ಲಿಸಲು ಈ ಸಮಾವೇಶವು ಸಹಕಾರಿಯಾಗಲಿದೆ ಎಂದು ತಿಳಿಸಿದರು

     

    ಕರ್ನಾಟಕ ಸಿಎಪಿಎಫ್ ನ ಅಧ್ಯಕ್ಷರಾದ ನರಸಿಂಹ ರೆಡ್ಡಿ ಮಾತನಾಡಿ ಮಾಜಿ ಯೋಧರು ಸರ್ಕಾರದ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ ನಮ್ಮ ಸಂಘ ನೊಂದ ಮಾಜಿ ಯೋಧರ ಧ್ವನಿಯಾಗಿ ಶ್ರಮಿಸಲಿದೆ ದೇಶ ಕಾಯುವ ಯೋಧನಿಗೆ ಸರ್ಕಾರಿ ಸೌಲಭ್ಯಗಳು ಸಿಗದಿರುವುದು ಶೋಚನೀಯ ಸಂಗತಿ ದೇಶದ ರಕ್ಷಣೆಗಾಗಿ ಜೀವ ಸವೆಸಿರುವ ಯೋಧರು ತಮಗೆ ಸರ್ಕಾರದ ವತಿಯಿಂದ ಸಿಗಬೇಕಾಗಿರುವ ಸೌಲಭ್ಯಗಳಿಗೆ ಪರದಾಡುವ ಪರಿಸ್ಥಿತಿ ಎದುರಾಗಿದೆ ಈ ಸ್ಥಿತಿ ಬದಲಾಗಬೇಕೆಂಬುದೇ ನಮ್ಮೆಲ್ಲರ ಆಶಯ ಹಾಗಾಗಿ ಈ ಬೃಹತ್ ಸಮಾವೇಶದ ಆಯೋಜನೆ ಮಾಡಲಾಗುತ್ತಿದೆ ರಾಜ್ಯದ ಎಲ್ಲಾ ಜಿಲ್ಲೆಗಳಿಂದ ಮಾಜಿ ಸೈನಿಕರು ಕಾರ್ಯಕ್ರಮಕ್ಕೆ ಆಗಮಿಸುತ್ತಿದ್ದು ಸುಮಾರು 17000 ಮಾಜಿ ಯೋಧರು ಭಾಗವಹಿಸುವ ಸಾಧ್ಯತೆ ಇದೆ ಎಂದು ತಿಳಿಸಿದರು

     

    ಸಂಘದ ಕಾರ್ಯಕಾರಿ ಸಮಿತಿಯ ಅಧ್ಯಕ್ಷರಾದ ಕೃಷ್ಣಪ್ಪ ಅವರು ಮಾತನಾಡಿ 2019ನೇ ಇಸವಿಯಲ್ಲಿ ಫೆಬ್ರವರಿ 14ರಂದು ದೇಶ ತನ್ನ 44 ವೀರ ಯೋಧರನ್ನು ಕಳೆದುಕೊಂಡಿತು . ಹುತಾತ್ಮ ಯೋಧರ ನೆನಪಿಗಾಗಿ ಈ ಸಮಾವೇಶವನ್ನು ರೂಪಿಸುತ್ತಿದ್ದು ರಾಜ್ಯಾದ್ಯಂತ ಮಾಜಿ ಯೋಧರು ಒಟ್ಟಾಗಲಿದ್ದೇವೆ. ಹಾಗೂ ಸರ್ಕಾರಕ್ಕೆ ನಮ್ಮ ಬೇಡಿಕೆಗಳನ್ನು ಕೂಡ ತಿಳಿಸಿದ್ದೇವೆ ಮುಂದೆ ಮಾಧ್ಯಮಗಳ ಸಹಕಾರದೊಂದಿಗೆ ಮಾಜಿ ಯೋಧರ ಪರ ಶ್ರಮಿಸುವ ಕಾರ್ಯ ಸಂಘದ ಕಾರ್ಯಕಾರಿ ಸಮಿತಿ ವತಿಯಿಂದ ನಡೆಯುವುದು ಎಂದು ತಿಳಿಸಿದರು

    ಈ ಸಂದರ್ಭದಲ್ಲಿ ಕೇಂದ್ರೀಯ ಅರೆಸೇನಾ ಪಡೆಗಳ ಮಾಜಿ ಯೋಧರ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳು ಹಾಗೂ ರಾಜ್ಯದ ಹಲವು ಮಾಜಿ ಸೈನಿಕರು ಉಪಸಿತರಿದ್ದರು

  • ತೂಬಗೆರೆ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ನಡೆದ 2023-24 ನೇ ಸಾಲಿನ ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆಗಳ ಸಮಾರೋಪ ಸಮಾರಂಭ

    ದೊಡ್ಡಬಳ್ಳಾಪುರ(ತೂಬಗೆರೆ)ಜ. 9: ದ್ವಿತೀಯ ಪಿಯು ವಿದ್ಯಾರ್ಥಿಗಳು ಬಯಪಡುವ ಅಗತ್ಯವಿಲ್ಲ, ಇದು ವಿದ್ಯಾರ್ಥಿಗಳಿಗೆ ಮಹತ್ತರವಾದ ಘಟ್ಟ. ಮಾನಸಿಕದಿಂದ ಹೊರಬಂದು ಓದಿನ ಕಡೆ ಹೆಚ್ಚಿನ ಗಮನ ನೀಡಬೇಕು ವಿದ್ಯಾರ್ಥಿಗಳಿಗೆ ಸಮಯ ಶ್ರದ್ದೆ, ಸಹನೆ ಅತಿಮುಖ್ಯವಾಗಿದ್ದು, ನಿರಂತರ ಅಬ್ಯಾಸದಿಂದ ಮುಂದೆ ಬರಲು ಸಾದ್ಯವೆಂದು ದೊಡ್ಡಬಳ್ಳಾಪುರ ಸರ್ಕಾರಿ ಪದವಿ ಕಾಲೇಜು ಸ್ನಾತಕೋತ್ತರ ಕೇಂದ್ರದ ರಾಜ್ಯಶಾಸ್ತ್ರ ಮುಖ್ಯಸ್ಥ ಪ್ರೊಫೆಸರ್ ಸತೀಶ್ ಅಭಿಪ್ರಾಯ ಪಟ್ಟರು.

    ಅವರು ತೂಬಗೆರೆಯ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ನಡೆದ 2023-24 ನೇ ಸಾಲಿನ ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆಗಳ ಸಮಾರೋಪ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

    ಮುಂದಿನ ಉಜ್ವಲ ಬವಿಷ್ಯಕ್ಕಾಗಿ ಪ್ರತಿಯೊಬ್ಬ ವಿದ್ಯಾರ್ಥಿಯು ಕಷ್ಟ ಪಟ್ಟು ಅಬ್ಯಾಸ ಮಾಡಿ ಹೆಚ್ಚಿನ ಅಂಕಗಳೊಂದಿಗೆ ಪಾಸಾದಾಗ ಮಾತ್ರ ಒಳ್ಳೆಯ ವಿದ್ಯಾಲಯಗಳಲ್ಲಿ ಸರಳವಾಗಿ ಪ್ರವೇಶ ದೊರೆಯುತ್ತದೆ. ತಮ್ಮಲ್ಲಿ ಆಗಾಧವಾದ ಶಕ್ತಿ ಇದೆ. ದೃಡ ಸಂಕಲ್ಪದಿಂದ ಓದಿ ನಿವು ಕಲಿಸಿದ ಗುರುಗಳಿಗೆ ಇಲಾಖೆಗೆ ತಂದೆ ತಾಯಿಗಳಿಗೆ ಹೆಸರು ತರಬೇಕು ಎಂದು ಹೇಳಿದರು.

    ಮುಖ್ಯ ಅತಿಥಿಯಾಗಿ ಆಗಮಿಸಿದ ತೂಬಗೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ನಂಜಮ್ಮ ಮಾತನಾಡಿ ಮಕ್ಕಳ ಶೈಕ್ಷಣಿಕ ವ್ಯವಸ್ಥೆಯಲ್ಲಿ ಪಾಠವೂ ಎಷ್ಟು ಮುಖ್ಯವೋ ಅದರಂತೆ ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮಗಳು, ಚರ್ಚಾಸ್ಪರ್ಧೆ,ಪ್ರವಾಸ ಸೇರಿದಂತೆ ಇನ್ನಿತರ ಕಾರ್ಯಕ್ರಮಗಳಿರಬೇಕು ಇದರಿಂದ ಮಕ್ಕಳಲ್ಲಿನ ಪ್ರತಿಭೆಯನ್ನು ಹೊರತರಲು ಸಾಧ್ಯ ಎಂದರು. ಕಾಲೇಜಿನಲ್ಲಿ ಅಯೋಜಿಸುವಂತ ಅನೇಕ ಕಾರ್ಯಕ್ರಮಗಳಲ್ಲಿ ವಿದ್ಯಾರ್ಥಿಗಳು ಸ್ವಯಂ ಪ್ರೇರಿತರಾಗಿ ಪಾಲ್ಗೊಳ್ಳಬೇಕು ಎಂದು ಕಿವಿಮಾತು ಹೇಳಿದರು.

     

    ಕಳೆದ ಸಾಲಿನಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮಾಡಲಾಯಿತು.

    ಕಾರ್ಯಕ್ರಮದ ಅಧ್ಯಕ್ಷತೆ ಪ್ರಾಂಶುಪಾಲರಾದ ಉಷಾ ವಿ ವಹಿಸಿದರು. ಇತಿಹಾಸ ಉಪನ್ಯಾಸಕಿ ಸರಸ್ವತಿ ನಿರೂಪಿಸಿದರು, ಗಣಿತ ಉಪನ್ಯಾಸಕಿ ಪುಷ್ಪಾವತಿ ವಾರ್ಷಿಕ ವರದಿ ಮಂಡಿಸಿದರು.

    ಕಾರ್ಯಕ್ರಮ ಅಂಗವಾಗಿ ಶಾಲಾ ವಿದ್ಯಾರ್ಥಿಗಳು ನಡೆಸಿಕೊಟ್ಟ ಸಾಂಸ್ಕೃತಿಕ ಕಾರ್ಯಕ್ರಮಗಳು ನೋಡುಗರ ಮನಸೂರೆಗೊಂಡವು.

    ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯರಾದ ಅರವಿಂದ, ಕೆಪಿಸಿಸಿ ಸದಸ್ಯರಾದ ಮುನಿರಾಜು, ಗ್ರಾಮ ಪಂಚಾಯಿತಿ ಸದಸ್ಯರುಗಳಾದ ಮುನಿಕೃಷ್ಣಪ್ಪ, ಯುವ ಮುಖಂಡ ಉದಯ ಆರಾಧ್ಯ. ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸತ್ಯನಾರಾಯಣಪ್ಪ, ವೆಂಕಟೇಶ್, ಮುಖಂಡರಾದ ರವಿಸಿದ್ದಪ್ಪ, ಅಂಬರೀಶ್, ವೆಂಕಟಪ್ಪ, ದೇವೇಂದ್ರ ಸ್ವಾಮಿ ರಾಜಗೋಪಾಲ್ ಹಾಗೂ ಗ್ರಾಮಸ್ಥರು ಹಾಜರಿದ್ದರು.

  • ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ. ಸಿ ಟ್ರಸ್ಟ್ ವತಿಯಿಂದ ತಾಲ್ಲೂಕು ಮಟ್ಟದ ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮ

    ದೊಡ್ಡಬಳ್ಳಾಪುರ : ಮಹಿಳೆಯರು ಸ್ವಾವಲಂಬಿಗಳಾಗಿ ಉತ್ತಮ ಜೀವನ ನೆಡೆಸಲು ಇಂತಹ ಕಾರ್ಯಗಾರಗಳು ಸಹಾಯ ಮಾಡಲಿವೆ. ಕಾರ್ಯಕ್ರಮದ ಮುಖ್ಯ ಉದ್ದೇಶವೇ ಮಹಿಳಾ ಸಬಲೀಕರಣ ಎಂದು ಜಿಲ್ಲಾ ನಿರ್ದೇಶಕರಾದ ಉಮರಬ್ಬ ತಿಳಿಸಿದರು

    ದೊಡ್ಡಬಳ್ಳಾಪುರ ತಾಲ್ಲೂಕಿನ ಕನಸವಾಡಿ ( ಚಿಕ್ಕ ಮಧುರೆ) ಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ವತಿಯಿಂದ ಆಯೋಜನೆ ಮಾಡಲಾಗಿದ್ದ ತಾಲ್ಲೂಕು ಮಟ್ಟದ ವಿಚಾರಗೋಷ್ಠಿಯನ್ನು ಉದ್ಘಾಟಿಸಿ ಮಾತನಾಡಿದ ಅವರು ತಾಲ್ಲೂಕಿನ ಮಹಿಳೆಯರು ಸ್ವಾವಲಂಬಿಗಳಾಗಿ ಜೀವಿಸಲು ಸ್ವ ಉದ್ಯೋಗಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳಲು ಈ ಕಾರ್ಯಕ್ರಮವು ಸಹಾಯಕಾರಿಯಾಗಿದೆ ಈ ಕಾರ್ಯಕ್ರಮದಿಂದ ಮಹಿಳೆಯರಿಗೆ ಮತ್ತಷ್ಟು ನೂತನ ಉದ್ಯೋಗ ಪ್ರಾರಂಭಿಸಲು ಉತ್ತೇಜನ ಸಿಗಲಿದೆ ಎಂದು ತಿಳಿಸಿದರು

    ಕನಸವಾಡಿ ಶನಿಮಹಾತ್ಮ ದೇವಾಲಯದ ಧರ್ಮದರ್ಶಿಗಳಾದ ಶ್ರೀ ಸತ್ಯನಾರಾಯಣ ರವರ ಅಧ್ಯಕ್ಷತೆಯಲ್ಲಿ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು

     

    ವಕೀಲರಾದ ಸ್ಮಿತಾ ಕುಮಾರ್ ಮಾತನಾಡಿ ಸಮಾಜದಲ್ಲಿ ಮಹಿಳೆಯರಿಗೆ ಆಸ್ತಿಯಲ್ಲಿ ಸಮಾನ ಹಕ್ಕು ನೀಡಬೇಕೆಂದು ಕೋಟ್ ಆದೇಶ ಮಾಡಿದ್ದರು ಇಂದಿಗೂ ಸಮಾಜದಲ್ಲಿ ಹಲವು ಮಹಿಳೆಯರು ತಮ್ಮ ಕುಟುಂಬಗಳಿಂದ ಆರ್ಥಿಕ ನೆರವು ಸಿಗದೆ ಪರದಾಡುತ್ತಿದ್ದಾರೆ ಹೆಣ್ಣು ಮಕ್ಕಳ ಕೌಟುಂಬಿಕ ಸಮಸ್ಯೆಗಳಿಗೆ ಉಚಿತ ಕಾನೂನೂ ನೆರವು ಸಿಗಬೇಕಿದೆ ಎಂದರು ಹಾಗೂ ಚೆಕ್ ಬೌನ್ಸ್,ಬ್ಯಾಂಕ್ ಮತ್ತು ಆರ್ಥಿಕ ವ್ಯವಹಾರಗಳಲ್ಲಿ ನೋಟರಿ ಬಾಂಡ್ ಮತ್ತಿತರ ಭದ್ರತೆಗಳನ್ನು ಕುರಿತು ಮಾಹಿತಿ ನೀಡಿದರು

     

    ಕಾರ್ಯಕ್ರಮದಲ್ಲಿ ಡಾಕ್ಟರ್ ಕಾಮೇಶ್ವರಿ ಮಾತನಾಡಿ ಮಹಿಳೆಯರು ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಮುಖ್ಯವಾಗಿ ತಮ್ಮ ಆರೋಗ್ಯ ಸಮಸ್ಯೆಗಳನ್ನು ಮುಕ್ತವಾಗಿ ಡಾಕ್ಟರ್ ಗಳೊಂದಿಗೆ ಹಂಚಿಕೊಳ್ಳಬೇಕು ಇತ್ತೀಚಿನ ದಿನಗಳಲ್ಲಿ ಮಹಿಳೆಯರು ಹಲವು ಗುಪ್ತ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದು ಇತರರೊಂದಿಗೆ ಹಚ್ಚಿಕೊಳ್ಳಲು ಮುಜುಗರಕ್ಕೆ ಒಳಗಾಗುತ್ತಿದ್ದಾರೆ ಮಹಿಳೆಯರಲ್ಲಿ ಹೆಚ್ಚಾಗಿ ಕಂಡು ಬರುವ ಸ್ತನ ಕ್ಯಾನ್ಸರ್ ಹಾಗೂ ಗರ್ಭಕೋಶ ಕ್ಯಾನ್ಸರ್ ಗಳ ಬಗ್ಗೆ ಎಚ್ಚರ ವಹಿಸಬೇಕು ಎಂದರು ಹಾಗೂ ಈ ಸಂದರ್ಭದಲ್ಲಿ ಸ್ತನ ಹಾಗೂ ಗರ್ಭಕೋಶ ಕ್ಯಾನ್ಸರ್ ನ ಗುಣಲಕ್ಷಣಗಳು ಹಾಗೂ ಚಿಕಿತ್ಸಾ ವಿಧಾನ ಕುರಿತು ಸಂಪೂರ್ಣ ಮಾಹಿತಿ ನೀಡಿದರು

     

    ಕಾರ್ಯಕ್ರಮದಲ್ಲಿ ಯೋಜನಾಧಿಕಾರಿಗಳಾದ ಶ್ರೀಮತಿ ಸುಧಾಭಾಸ್ಕರ್ ನಾಯ್ಕ್ ಕೃಷಿ ಮೇಲ್ವಿಚಾರಕರಾದ ಲೋಹಿತ್ ಗೌಡ,ಮೇಲ್ವಿಚಾರಕರಾದ ದೀಪಕ್, ಮೇಲ್ವಿಚಾರಕರಾದ   ಶ್ರೀಮತಿ ವೈಷ್ಣವಿ ರೆಡ್ಡಿ ,ಶ್ರೀಮತಿ ಛಾಯ ಒಕ್ಕೂಟದ ಅಧ್ಯಕ್ಷರು ,ಸೇವಾಪ್ರತಿನಿಧಿಗಳು , ವಿ.ಎಲ್.ಈ ಗಳು ಹಾಗೂ ಸಂಘದ ಸದಸ್ಯರು ಉಪಸ್ಥಿತರಿದ್ದರು

  • ಅಕೌಂಟ್ ನಲ್ಲಿದ್ದ ಹಣ ಗಾಯಬ್ : ನಮಗೆ ಸಂಬಂಧವೇ ಇಲ್ಲ ಎಂದ ಬ್ಯಾಂಕ್ ಅಧಿಕಾರಿಗಳು

    ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲ್ಲೂಕಿನ ತೂಬಗೆರೆ ಗ್ರಾಮದಲ್ಲಿ ಎಇಪಿಎಸ್ ಪ್ರಕರಣ ದಾಖಲಾಗಿದೆ .ಇತ್ತೀಚೆಗೆ ಎಇಪಿಎಸ್ ಸೈಬರ್ ವಂಚನೆ ಪ್ರಕರಣಗಳು ಹೆಚ್ಚಾಗುತ್ತಿದ್ದು . ಸಬ್‌ರಿಜಿಸ್ಟ್ರಾರ್ ಕಚೇರಿಗಳಲ್ಲಿ ಅಳವಡಿಸಿರುವ ತಂತ್ರಾಂಶದಲ್ಲಿ ಬೆರಳಚ್ಚು ನೀಡಿದವರ ಖಾತೆಯಿಂದ ಹಣ ಕಡಿತವಾಗಿರುವ ಪ್ರಕರಣ ತೂಬಗೆರೆಯಲ್ಲಿ ಬೆಳಕಿಗೆ ಬಂದಿದೆ.

    ಈ ಹಿನ್ನೆಲೆಯಲ್ಲಿ ಹಣ ಕಳೆದುಕೊಂಡಿರುವ ನಾರಾಯಣಪ್ಪ ಪರವಾಗಿ ತೂಬಗೆರೆ ಗ್ರಾಮಸ್ಥರು ಗ್ರಾಮದ ಯೂನಿಯನ್ ಬ್ಯಾಂಕ್ ಮುಂಭಾಗ ಪ್ರತಿಭಟನೆ ನಡೆಸಿದರು.ಜಮೀನು ಮಾರಾಟ ಸಂಬಂಧ ಸಬ್ ರಿಜಿಸ್ಟರ್ ಕಚೇರಿಯಲ್ಲಿ ಬೆರಳಚ್ಚು ನೀಡಿದ ಮರುದಿನದಿಂದ ನನ್ನ ಮತ್ತು ನನ್ನ ಮಗಳ ಬ್ಯಾಂಕ್ ಖಾತೆಯಿಂದ 45,000 ರೂ ಡ್ರಾ ಆಗಿದೆ. ಈ ಕುರಿತು ನಾನು ಬ್ಯಾಂಕ್ ಮ್ಯಾನೇಜರ್ ಬಳಿ ಕೇಳಿದರೆ ಇದಕ್ಕೂ ಬ್ಯಾಂಕಿಗೂ ಯಾವುದೇ ಸಂಬಂಧವಿಲ್ಲ ಇದು ಸೈಬರ್ ಕ್ರೈಮ್ ಪ್ರಕರಣ ಎಂದು ಹರಿಕೆ ಉತ್ತರ ನೀಡುತ್ತಾರೆ ಎಂದು ನೊಂದ ವ್ಯಕ್ತಿ ನಾರಾಯಣಪ್ಪ ಆಕ್ರೋಶ ವ್ಯಕ್ತಪಡಿಸಿದರು.

    ಈ ವೇಳೆ ಸ್ಥಳೀಯ ಗ್ರಾಮಸ್ಥರಾದ ಉದಯ ಆರಾಧ್ಯ ಮಾತನಾಡಿ ನಾರಾಯಣಪ್ಪರವರ ಖಾತೆ ತೂಬಗೆರೆ ಗ್ರಾಮದ ಯೂನಿಯನ್ ಬ್ಯಾಂಕ್ ನಲ್ಲಿದ್ದು ಅವರು ಎಟಿಎಂ ಹಾಗೂ ಆನ್ ಲೈನ್ ಬ್ಯಾಂಕಿಂಗ್ ಬಳಸುತ್ತಿಲ್ಲ. ಆದರೂ ಹಣ ಡ್ರಾ ಆಗಿದೆ. ಇಂತಹ ವಂಚನೆ ಪ್ರಕರಣಗಳು ನಿರಂತರವಾಗಿ ರಾಜ್ಯದ ವಿವಿಧ ಭಾಗಗಳಲ್ಲಿ ಸಂಭವಿಸುತ್ತಿವೆ. ಇದು ನಮ್ಮ ತೂಬಗೆರೆ ಗ್ರಾಮದಲ್ಲಿ ನಡೆದಿದೆ ಹಣ ಕಳೆದುಕೊಂಡಿರುವವರಿಗೆ ವಾಪಸ್ ಕೊಡಿಸುವ ಕಾರ್ಯಕ್ಕೆ ಬ್ಯಾಂಕ್ ಅಧಿಕಾರಿಗಳು ಮುಂದಾಗಬೇಕು ಎಂದು ತಿಳಿಸಿದರು

    .

    ಈ ಕುರಿತಂತೆ ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆಯಲ್ಲಿ ಸೈಬರ್ ವಂಚನೆ ಅಡಿಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿಸಿದರು‌.

  • ಅನುಮತಿಯಿಲ್ಲದೆ ಶಾಲಾ ಆವರಣದಲ್ಲಿ ಗ್ರಾಮ ಸಭೆ ಆಯೋಜನೆ : ದ್ವನಿವರ್ಧಕ ಬಳಸಿ ಮಕ್ಕಳ ವಿಧ್ಯಾಭ್ಯಾಸಕ್ಕೆ ಕಿರಿಕಿರಿ ಕೊಟ್ಟ ಕಂಟನಕುಂಟೆ ಪಂಚಾಯಿತಿ

    ದೊಡ್ಡಬಳ್ಳಾಪುರ: ಬೆಂಗಳೂರು ಗ್ರಾಮ ಪಂಚಾಯಿತಿ, ತಾಲೂಕು ಪಂಚಾಯಿತಿ ಹಾಗೂ ಕಂಟನಕುಂಟೆ ಗ್ರಾಮ ಪಂಚಾಯಿತಿ ವತಿಯಿಂದ 2023-24ನೇ ಸಾಲಿನ ಮೊದಲನೇ ಹಂತದ ಗ್ರಾಮಸಭೆಯನ್ನು ಕಂಟನಕುಂಟೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ನಡೆಸಲಾಯಿತು.

    ಶಾಲಾ ಆವರಣದಲ್ಲಿ ಗ್ರಾಮಸಭೆ ಆಯೋಜನೆ ಮಾಡಿ ದ್ವನಿವರ್ಧಕ ಬಳಸಿದ ಹಿನ್ನೆಲೆಯಲ್ಲಿ ಶಾಲಾ ಮಕ್ಕಳ ಪಾಠ ಪ್ರವಚನಕ್ಕೆ ತೊಂದರೆ ಉಂಟಾಗಿತ್ತು.

     

    ಶಾಲಾ ಶಿಕ್ಷಕರ ಬಳಿ, ಶಾಲಾ ಆವರಣದಲ್ಲಿ ಗ್ರಾಮ ಸಭೆ ನಡೆಸಲು ಅವಕಾಶ ಕೊಡಲು ಕಾರಣವೇನು ಎಂಬ ಮಾದ್ಯಮಗಳ ಪ್ರಶ್ನೆಗೆ ಬೇಜವಾಬ್ದಾರಿಯಿಂದ ಉತ್ತರಿಸಿದ ಶಿಕ್ಷಕ ಧನಂಜಯ ಅವರು, ಮಾಡಲಿ ಬಿಡಿ, ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿಗಿಂತಲೂ ಕ್ಷೇತ್ರ ಶಿಕ್ಷಣಾಧಿಕಾರಿ ದೊಡ್ಡವರಲ್ಲ, ಏನಾದರೂ ಮಾಡಿಕೊಳ್ಳಲಿ ಎಂದು ಉದ್ಧಟತನದಿಂದ ಉತ್ತರಿಸಿದರು ಎನ್ನಲಾಗಿದೆ.

     

     

    ಈ ಕುರಿತು ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ರಂಗಪ್ಪ ಅವರು ಪ್ರತಿಕ್ರಿಯಿಸಿ, ಕೂಸಿನ ಮನೆ ಉದ್ಘಾಟನಾ ಕಾರ್ಯಕ್ರಮಕ್ಕೆ ಮಾತ್ರ ಅವಕಾಶ ನೀಡಲಾಗಿದೆ. ಶಾಲಾ ಆವರಣದಲ್ಲಿ ಗ್ರಾಮಸಭೆ ನಡೆಸಲು ಸಂಬಂಧಪಟ್ಟವರು ಯಾವುದೇ ರೀತಿಯ ಅನುಮತಿಯನ್ನೂ ಪಡೆದುಕೊಂಡಿಲ್ಲ. ಈ ಕುರಿತು ಶಾಲೆಯ ಮುಖ್ಯ ಉಪಾಧ್ಯಯ ರಿಂದ ವರದಿ ಪಡೆದುಕೊಂಡು ಮುಂದಿನ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದರು.

     

    ಗ್ರಾಮ ಸಭೆಯಲ್ಲಿ ಶಾಸಕ ಧೀರಜ್ ಮುನಿರಾಜು, ತಾಲೂಕು‌ ಪಂಚಾಯಿತಿ ಕಾರ್ಯನಿರ್ವಾಹಕಾಧಿಕಾರಿ ಮುನಿರಾಜು, ಪಿಡಿಒ ನಂದಕುಮಾರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

  • ರೈತರ ಭೂಮಿಗೆ ವೈಜ್ಞಾನಿಕ ಬೆಲೆ ನಿಗದಿ ಪಡಿಸಲು ಅಗ್ರಹ : ರೈತರ ಭೂಮಿಗೆ ಉತ್ತಮ ಬೆಲೆ ನೀಡದೇ ಇದ್ದಲ್ಲಿ ಭೂಮಿ ಮಾರಾಟ ಮಾಡುವುದಿಲ್ಲ – ಜಿ. ಲಕ್ಷ್ಮೀಪತಿ

    ದೊಡ್ಡಬಳ್ಳಾಪುರ : ಕೆಐಡಿಬಿ ಅಧಿಕಾರಿಗಳು ರೈತರಿಗೆ ಹಲವಾರು ಭೂ ದಾಖಲೆಗಳನ್ನು ನೀಡುವಂತೆ ಸೂಚಿಸುವ ಮೂಲಕ ಮಧ್ಯವರ್ತಿಗಳ ಹಾವಳಿಗೆ ಅವಕಾಶ ಮಾಡಿಕೊಡುತ್ತಿದ್ದಾರೆ. ಭೂಮಿಗೆ ಸಂಬಂಧಿಸಿದ ಎಲ್ಲಾ ದಾಖಲೆಗಳು ತಾಲ್ಲೂಕು ಕಚೇರಿಯಲ್ಲೇ ಇರುವಾಗ ದಾಖಲೆ ನೀಡುವಂತೆ ರೈತರಿಗೆ ನೋಟಿಸ್ ನೀಡುವ ಅಗತ್ಯವಾದರು ಏನಿದೆ ಎಂದು ಕೆಪಿಸಿಸಿ ವಕ್ತಾರ ಜಿ. ಲಕ್ಷ್ಮೀಪತಿ ಆಗ್ರಹಿಸಿದರು

    ಅವರು ನಗರದ ಪ್ರವಾಸಿ ಮಂದಿರದಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು

    ಕೈಗಾರಿಕೆ ಸೇರಿದಂತೆ ಇತರೆ ಉದ್ದೇಶಗಳಿಗೆ ಸರ್ಕಾರ ರೈತರ ಕೃಷಿ ಭೂಮಿ ಸ್ವಾಧೀನ ಮಾಡಿಕೊಳ್ಳುವಾಗ ಕೇಂದ್ರ ಸರ್ಕಾರ ಜಾರಿಗೆ ತಂದಿರುವ 2013ರ ಭೂಸ್ವಾಧೀನ ನಿಯಮವನ್ನು ಕಡ್ಡಾಯವಾಗಿ ಪಾಲಿಸಬೇಕು ಕೇಂದ್ರ ಸರ್ಕಾರ ಮಾಡಿರುವ ಕಾನೂನುಗಳನ್ನು ಬದಿಗೊತ್ತಿರುವ ಅಧಿಕಾರಿಗಳು ನಾಗದೇನಹಳ್ಳಿ, ಕೊನಘಟ್ಟ, ಕೋಡಿಹಳ್ಳಿ, ಆದಿನಾರಾಯಣ ಹೊಸಹಳ್ಳಿ ಗ್ರಾಮಗಳ 970 ಎಕರೆ, ಲಿಂಗನಹಳ್ಳಿ ಗ್ರಾಮದ ಸುತ್ತ 570 ಎಕರೆ ರೈತರ ಫಲವತ್ತಾದ ಭೂಮಿಗೆ ಅವರದೇ ಆದ ಮಾನದಂಡಗಳ ಆಧಾರದ ಮೇಲೆ ಬೆಲೆ ನಿಗದಿ ಮಾಡಿಕೊಂಡು ಬಲವಂತದ ಭೂಸ್ವಾಧೀನ ಮಾಡಿಕೊಳ್ಳಲು ಮುಂದಾಗಿರುವುದು ಖಂಡನೀಯ.

     

    ತಾಲ್ಲೂಕಿನ ಅಭಿವೃದ್ಧಿಗೆ ಕೈಗಾರಿಕೆಗಳ ಸ್ಥಾಪನೆ ಮುಖ್ಯ. ಆದರೆ ರೈತರ ಭೂಮಿಗೆ ಸರ್ಕಾರ ರೂಪಿಸಿರುವ ಕಾನೂನುಗಳನ್ನು ಗಾಳಿಗೆ ತೂರಿರುವ ಅಧಿಕಾರಿಗಳು ವೈಜ್ಞಾನಿಕ ಬೆಲೆ ನೀಡದೆ ತಮಗಿಷ್ಟ ಬಂದ ರೀತಿಯಲ್ಲಿ ವರ್ತಿಸುತ್ತಿದ್ದಾರೆ. ರೈತರ ಕೃಷಿ ಭೂಮಿಗೆ ಸೂಕ್ತ ಬೆಲೆ ನಿಗದಿಪಡಿಸುವಂತೆ ಆಗ್ರಹಿಸಿ ಜ.9 ರಂದು ನಾಗದೇನಹಳ್ಳಿ ಸಮೀಪ ರಸ್ತೆ ತಡೆ ನಡೆಸುವ ಮೂಲಕ ಅಮರಣಾಂತ ಉಪವಾಸ ಸತ್ಯಾಗ್ರಹ ನಡೆಸಲಾಗುವುದು ಎಂದು ಹೇಳಿದರು.

     

    ಟಿಎಪಿಎಂಸಿಎಸ್ ನಿರ್ದೇಶಕ ಆನಂದ್, ತಾಪಂ ಮಾಜಿ ಅಧ್ಯಕ್ಷ ನಾರಾಯಣಗೌಡ ಮಾತನಾಡಿ, ಇತ್ತೀಚೆಗೆ ಜಿಲ್ಲಾಧಿಕಾರಿಗಳ ಸಮ್ಮುಖದಲ್ಲಿ ನಡೆದ ಭೂಮಿಯ ದರ ನಿಗದಿ ಸಭೆಯಲ್ಲಿ ಅಧಿಕಾರಿಗಳು ನಿಗದಿಪಡಿಸಿದ್ದ ಬೆಲೆಗೆ ಎಲ್ಲಾ ರೈತರು ಒಕ್ಕೊರಲಿನಿಂದ ವಿರೋಧ ವ್ಯಕ್ತಪಡಿಸಿ ಸಹಿ ಮಾಡದೇ ಸಭೆಯಿಂದ ಹೊರಬಂದಿದ್ದೇವೆ. ಆದರೂ ಸಹ ಏಕಪಕ್ಷೀಯವಾಗಿ ಕೆಐಡಿಬಿ ಅಧಿಕಾರಿಗಳೇ ತರಿ, ಖುಷ್ಕ, ಬಾಗಾಯ್ತು ಭೂಮಿಗೆ ಇಂತಿಷ್ಟು ಎಂದು ಬೆಲೆ ನಿಗದಿಪಡಿಸಿಕೊಂಡು ರೈತರಿಗೆ ಅಂತಿಮ ಭೂಸ್ವಾಧೀನದ ನೋಟಿಸ್ ಜಾರಿಗೊಳಿಸಲು ಮುಂದಾಗಿದ್ದಾರೆ ಎಂದರು ದೂರಿದರು.ಬೆಂಗಳೂರಿನಲ್ಲಿ ಇರುವ ವಿಶೇಷ ಭೂಸ್ವಾಧೀನ ಅಧಿಕಾರಿಗಳ ಕಚೇರಿಯನ್ನು ದೇವನಹಳ್ಳಿ ತಾಲ್ಲೂಕಿನ ಜಿಲ್ಲಾಧಿಕಾರಿಗಳ ಕಚೇರಿಗೆ ವರ್ಗಾವಣೆ ಮಾಡಬೇಕು.

     

    ಸುದ್ದಿಗೋಷ್ಠಿಯಲ್ಲಿ ರೈತರಾದ ನರಸಿಂಹಮೂರ್ತಿ, ನಿವೃತ್ತ ಶಿಕ್ಷಕ ಕೃಷ್ಣಪ್ಪ, ನಾರಾಯಣಸ್ವಾಮಿ, ಬಾಬು ಮತ್ತಿತರರಿದ್ದರು

  • ಕರ್ನಾಟಕ ದಲಿತ ಸಂಘರ್ಷ ಸಮಿತಿ ತಾಲ್ಲೂಕು ಪದಾಧಿಕಾರಿಗಳ ಆಯ್ಕೆ : ದೊಡ್ಡಬಳ್ಳಾಪುರ ತಾಲ್ಲೂಕು ಅಧ್ಯಕ್ಷರಾಗಿ ದಲಿತ ಮುಖಂಡರಾದ ರಾಮು ಆಯ್ಕೆ

    ದೊಡ್ಡಬಳ್ಳಾಪುರ : ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲ್ಲೂಕಿನ ನಗರ ಭಾಗದ ಪ್ರವಾಸಿ ಮಂದಿರದಲ್ಲಿ ಪ್ರೊಫೆಸರ್ ಕೃಷ್ಣಪ್ಪ ಸ್ಥಾಪಿತ ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಘಟಕದ ವತಿಯಿಂದ ತಾಲ್ಲೂಕು ಹಾಗೂ ಹೋಬಳಿ ಮಟ್ಟದ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಸಲಾಯಿತು ಕಾರ್ಯಕ್ರಮವನ್ನು ಬಾಬಾಸಾಹೇಬ್ ಅಂಬೇಡ್ಕರ್ ಹಾಗೂ ಪ್ರೊಫೆಸರ್ ಬಿ. ಕೃಷ್ಣಪ್ಪ ರವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಉದ್ಘಾಟಿಸಲಾಯಿತು

    ಕರ್ನಾಟಕ ದಲಿತ ಸಂಘರ್ಷ ಸಮಿತಿ ದೊಡ್ಡಬಳ್ಳಾಪುರ ತಾಲ್ಲೂಕು ಘಟಕದ ನೂತನ ಅಧ್ಯಕ್ಷರಾಗಿ ತಾಲ್ಲೂಕಿನ ದಲಿತ ಮುಖಂಡ ರಾಮು ರವರನ್ನು ಆಯ್ಕೆ ಮಾಡಲಾಯಿತು

    ಈ ಸಂದರ್ಭದಲ್ಲಿ ನೂತನ ಅಧ್ಯಕ್ಷರಾದ ರಾಮು ಮಾತನಾಡಿ ತಾಲ್ಲೂಕಿನಲ್ಲಿ ಬಡವರ ನೊಂದವರ ಹಾಗೂ ದಲಿತರ ದ್ವನಿಯಾಗಲಿದೆ ತಾಲ್ಲೂಕಿನ ಹಲವು ಭಾಗಗಳಲ್ಲಿ ಕುಂದು ಕೊರತೆಗಳಿದ್ದು ಅವುಗಳನ್ನು ಬಗೆಹರಿಸುವಲ್ಲಿ ನಮ್ಮ ಸಂಘಟನೆ ಶ್ರಮಿಸುವುದು .ನಮ್ಮ ದಲಿತ ಸಮುದಾಯದ ಮೇಲೆ ಇಂದಿಗೂ ನಡೆಯುತ್ತಿರುವ ಶೋಷಣೆಯನ್ನು ನಮ್ಮ ಸಂಘಟನೆ ಖಂಡಿಸಲಿದೆ ತಾಲ್ಲೂಕಿನ ಪ್ರತಿ ಹೋಬಳಿ ಮಟ್ಟದಲ್ಲಿ ನಮ್ಮ ಸಂಘಟನೆಯ ಘಟಕಗಳು ಶ್ರಮಿಸಲು ಸಿದ್ಧವಾಗಿವೆ ಎಂದು ತಿಳಿಸಿದರು

     

    ಜಿಲ್ಲಾ ಪ್ರಧಾನ ಸಂಚಾಲಕರಾದ ಗಂಗಾಧರ್ ಮಾತನಾಡಿ ಪ್ರೊಫೆಸರ್ ಬಿ. ಕೃಷ್ಣಪ್ಪ ರವರ ಆಶಯದಂತೆ ನಮ್ಮ ಸಂಘಟನೆ ಕಾರ್ಯ ನಿರ್ವಹಿಸಲಿದೆ ತಾಲ್ಲೂಕಿನ ಮೂಲೆ ಮೂಲೆಗೂ ನಮ್ಮ ಸಂಘಟನೆಯ ಸೈನಿಕರು ತಲುಪಿ ದಲಿತ ಪರ ದ್ವನಿಯಗಿ ಶ್ರಮಿಸಲಿದ್ದಾರೆ ತಾಲ್ಲೂಕು ಘಟಕಕ್ಕೆ ಬೇಕಾದ ನೈತಿಕ ಬೆಂಬಲ ಸದಾ ನೀಡುತ್ತೇವೆ ತಾಲ್ಲೂಕಿನಲ್ಲಿ ಪ್ರೊಫೆಸರ್ ಬಿ.ಕೃಷ್ಣಪ್ಪ ರವರ ಕನಸು ನನಸಾಗುವ ನಿಟ್ಟಿನಲ್ಲಿ ತಾಲ್ಲೂಕು ಘಟಕ ಶ್ರಮಿಸಲಿ ಎಂದು ಹಾರೈಸಿದರು

     

    ದಲಿತ ಮುಖಂಡರಾದ ನರಸಯ್ಯ ಮಾತನಾಡಿ ನೂತನ ಅಧ್ಯಕ್ಷರಾದ ರಾಮು ರವರ ನೇತೃತ್ವದಲ್ಲಿ ದಲಿತ ಸಂಘರ್ಷ ಸಮಿತಿ ಮತ್ತಷ್ಟು ಉನ್ನತ ಸ್ಥಾನ ಮನ ಸಿಗುವಂತಾಗಲಿ ತಾಲ್ಲೂಕಿನಲ್ಲಿ ದಲಿತ ಸಮುದಾಯಗಳ ಮೇಲೆ ದೌರ್ಜನ್ಯ ಪ್ರಕರಣಗಳು ಸಾಕಷ್ಟು ನಡೆದಿದೆ ಈಗಲೂ ನಡೆಯುತ್ತಿದೆ ಈ ಕುರಿತು ಪ್ರಶ್ನಿಸುವ ಕಾರ್ಯ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ವತಿಯಿಂದ ಆಗಬೇಕಿದೆ ನೂತನ ತಾಲ್ಲೂಕು ಘಟಕದ ಪದಾಧಿಕಾರಿಗಳಿಗೆ ಶುಭವಾಗಲಿ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು

     

    ಬೆಂಗಳೂರು ಗ್ರಾಮಾಂತರ ಜಿಲ್ಲಾ ಸಂಚಾಲಕರಾದ ದೊಡ್ಡಯ್ಯ ,ಜಿಲ್ಲಾ ಸಂಘಟನಾ ಸಂಚಾಲಕರಾದ ಸಕ್ಕರೆಗೊಲ್ಲಹಳ್ಳಿ ಹನುಮಂತಯ್ಯ ,ಹನುಮಯ್ಯ ,ಜಿಲ್ಲಾ ಸಂಚಾಲಕರಾದ ನರೇಂದ್ರ ಮೂರ್ತಿ, ಜಿಲ್ಲಾ ಖಜಾಂಜಿಗಳಾದ ಆನಂದ್ ಕುಮಾರ್ ಸಕ್ಕರೆ ಗೊಲ್ಲಹಳ್ಳಿ , ಜಿಲ್ಲಾ ಮಹಿಳಾ ಘಟಕ ಜಿಲ್ಲಾ ಸಂಚಾಲಕರಾದ ನಾಗರತ್ನಮ್ಮ ಮಾಲ್ಲೋಹಳ್ಳಿ, ಮುನಿರಾಜು ಚಿಕ್ಕ ಬೆಳವಂಗಲ ,ಹಾಗೂ ಮತ್ತಿತರು ಉಪಸ್ಥಿತರಿದ್ದರು

  • ಮುನಿರಾಜು (ಚಿಕ್ಕಪ್ಪಿ)ಸಾರಥ್ಯದಲ್ಲಿ ಕರ್ನಾಟಕ ರಾಜ್ಯ ಮಹರ್ಷಿ ವಾಲ್ಮೀಕಿ ಎಸ್ ಟಿ ಸಮಿತಿ ರಚನೆ : ರಾಜ್ಯಾದ್ಯಂತ ನೊಂದವರ ಸಮಸ್ಯೆಗಳಿಗೆ ಸ್ಪಂದಿಸುವ ಭರವಸೆ ನೀಡಿದ ಸಮಿತಿ

    ದೊಡ್ಡಬಳ್ಳಾಪುರ : ರಾಜ್ಯಾದ್ಯಂತ ಸಮಿತಿ ವತಿಯಿಂದ ಪರ್ಯಟನೆ ಮಾಡಿ ಸಮುದಾಯದ ಸಮಸ್ಯೆಗಳಿಗೆ ತ್ವರಿತವಾಗಿ ಸ್ವಂದಿಸಲಾಗುವುದು ಹಾಗೂ ನಗರಸಭೆ ಸದಸ್ಯ ಮುನಿರಾಜು (ಚಿಕ್ಕಪ್ಪಿ) ನೇತೃತ್ವದಲ್ಲಿ ಕರ್ನಾಟಕ ರಾಜ್ಯ ವಾಲ್ಮೀಕಿ ಮಹರ್ಷಿ ಎಸ್‌ಟಿ ಸಮಿತಿಯನ್ನು ನೋಂದಣಿ ಮಾಡಲಾಗಿದ್ದು, ಇಂದು ಅಧಿಕೃತವಾಗಿ ಘೋಷಣೆ ಮಾಡಲಾಗಿದೆ.

     

    ಈ ಸಮಿತಿಯ ರಾಜ್ಯಾಧ್ಯಕ್ಷರಾಗಿ ಮುನಿರಾಜು (ಚಿಕ್ಕಪ್ಪಿ), ರಾಜ್ಯ ಉಪಾಧ್ಯಕ್ಷ ಕೇಬಲ್ ರಾಮಚಂದ್ರ, ರಾಜ್ಯ ಪ್ರಧಾನ ಕಾರ್ಯದರ್ಶಿ ಶಿವಕುಮಾರ್, ರಾಜ್ಯ ಖಜಾಂಚಿ ರಾಜಣ್ಣ, ಸಂಘಟನಾ ಕಾರ್ಯದರ್ಶಿ ಗಂಗರಾಜು, ಕಾನೂನು ಸಲಹೆಗಾರರಾಗಿ ಅಂಬರೀಶ್, ರಾಜ್ಯ ಸದಸ್ಯರನ್ನಾಗಿ ರಾಜಣ್ಣ, ರಘು, ನವೀನ್ ಕುಮಾರ್ ಅವರನ್ನು ಆಯ್ಕೆ ಮಾಡಲಾಗಿದ್ದು

     

    ವಾಲ್ಮೀಕಿ ನಾಯಕ ಸಮಾಜದ ಸರ್ವತೋಮುಖ ಅಭಿವೃದ್ಧಿ ನಮ್ಮ ಸಂಕಲ್ಪವಾಗಿದೆ‌.ರಾಜ್ಯದಲ್ಲಿ ಅನೇಕ ಸಂಘಟನೆಗಳಿದ್ದಾಗಿಯೂ ವಾಲ್ಮೀಕಿ ನಾಯಕ ಸಮುದಾಯದ ಜನತೆ ಅನ್ಯರಿಂದ ಶೋಷಣೆ ಹಾಗೂ ದೌರ್ಜನ್ಯಕ್ಕೆ ಒಳಗಾಗುವುದನ್ನು ತಪ್ಪಿಸಲಾಗುತ್ತಿಲ್ಲ.. ಈ ನಿಟ್ಟಿನಲ್ಲಿ ಹೆಚ್ಚಿನ ಗಮನಹರಿಸಿ ಸಮುದಾಯದ ಜನರನ್ನು ಸ್ವಾವಲಂಬಿಗಳಾಗಿ ಜೀವಿಸಲು ಅವಕಾಶ ಕಲ್ಪಿಸುವುದು ನಮ್ಮ ಮುಖ್ಯ ಉದ್ದೇಶವಾಗಿದೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೂಪಿಸಿದ ಕಾರ್ಯಕ್ರಮಗಳ ಮತ್ತು ಯೋಜನೆಗಳ ಪೂರ್ಣ ಪ್ರಯೋಜನಗಳನ್ನು ವಾಲ್ಮೀಕಿ ಜನಾಂಗದ ಜನರಿಗೆ ದೊರಕಿಸುವ ಅಗತ್ಯವಿದ್ದು. ಈ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ನೆರವು ಮತ್ತು ಸ್ವ-ಸಹಾಯ ಸಂಘಗಳ ಸಹಾಯದಿಂದ ಜನಾಂಗದ ಮಹಿಳೆಯರ ಮತ್ತು ಮಕ್ಕಳ ಕಲ್ಯಾಣ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು. ನಮ್ಮ ನಾಯಕ ಸಮಾಜದ ವಿದ್ಯಾರ್ಥಿಗಳು, ನಿರುದ್ಯೋಗಿಗಳು,ಅಂಗವಿಕಲರು ಮತ್ತು ವಿಧವೆಯರಿಗೆ ಸರ್ಕಾರದಿಂದ ದೊರೆಯುವ ಸೌಲಭ್ಯಗಳನ್ನು ದೊರಕಿಸಿಕೊಡುವ ಮೂಲಕ ಜನಾಂಗದ ಅಭಿವೃದ್ಧಿಗೆ ಎಲ್ಲರೂ ಒಗ್ಗೂಡಿಸಿಕೊಂಡು ಪ್ರಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ತಿಳಿಸಿದರು

     

    ರಾಜ್ಯಉಪಾಧ್ಯಕ್ಷ ಕೇಬಲ್ ರಾಮಚಂದ್ರ ಮಾತನಾಡಿ, ವಾಲ್ಮೀಕಿ ನಾಯಕ ಸಮಾಜದ ಜನರು ವಾಸಿಸುತ್ತಿರುವ ಹಳ್ಳಿಗಳಿಗೆ ಎಲ್ಲ ಮೂಲಭೂತ ಸೌಲಭ್ಯಗಳನ್ನು ಸರ್ಕಾರದಿಂದ ಒದಗಿಸುವುದು ನಮ್ಮ ಆಧ್ಯತೆಯಾಗಿದೆ. ಸರ್ಕಾರಗಳು ವಿವಿಧ ಇಲಾಖೆಗಳ ಅಡಿಯಲ್ಲಿ ಅನೇಕ ಯೋಜನೆಗಳನ್ನು ನಮ್ಮ ಸಮುದಾಯಕ್ಕೆ ನೀಡುತ್ತಿದೆ. ಆದರೆ ಅರ್ಹರಿಗೆ ತಲುಪುತ್ತಿಲ್ಲ. ಸಮಾಜ ಕಲ್ಯಾಣ ಇಲಾಖೆಯಿಂದ ದೊರಕಬೇಕಾದ ಸೌಲಭ್ಯ ಕೆಲ ರಾಜಕಾರಣಿಗಳ ಹಿಂಬಾಲಕರಿಗೆ ಸೀಮಿತವಾಗಿದೆ. ಈ ನಿಟ್ಟಿನಲ್ಲಿ ಸಮಿತಿ ಪ್ರಮಾಣಿಕ ಹೋರಾಟ ನಡೆಸಿ ಅರ್ಹರಿಗೆ ಯೋಜನೆ ತಲುಪಿಸುತ್ತೇವೆ.ಈಗಾಗಲೆ ಅಸ್ಥಿತ್ವದಲ್ಲಿರುವ ಸಂಘಟನೆಗಳ ಸಲಹೆ ಸಹಕಾರದೊಂದಿಗೆ, ನಮ್ಮ ಸಂಘದ ಧೈಯೋದ್ದೇಶಗಳ ಈಡೇರಿಕೆಗೆ ಅಗತ್ಯವಾದ ಮತ್ತು ಸೂಕ್ತವಾದ ಭೂಮಿಕೆಯನ್ನು ಸಿದ್ಧಪಡಿಸಲು ರಾಜ್ಯಾದ್ಯಂತ ಪ್ರವಾಸವನ್ನು ಕೈಗೊಂಡು, ಕಾರ್ಯಕರ್ತರನ್ನು ಸಜ್ಜುಗೊಳಿಸಲಿದ್ದೇವೆ. ಎಂದು ತಿಳಿಸಿದರು

     

    ಕಾನೂನು ಸಲಹೆಗಾರ ನ್ಯಾಯವಾದಿ ಅಂಬರೀಶ್ ಮಾತನಾಡಿ ಮಹರ್ಷಿ ವಾಲ್ಮೀಕಿ,ಮದಕರಿ ನಾಯಕ ರಂತಹ ಮಹಾನ್ ಪುರುಷರನ್ನು ಇತಿಹಾಸಕ್ಕೆ ಕೊಡುಗೆ ನೀಡಿದ ಜನಾಂಗ ನಮ್ಮದು. ಆದರೆ ಆಧುನಿಕತೆ ಬೆಳೆದರು ನಮ್ಮ ಸಮಾಜಕ್ಕೆ ಸಿಗಬೇಕಾದ ಗೌರವ , ಸೌಲಭ್ಯಗಳು ಸಿಗುತ್ತಿಲ್ಲ . ನಮ್ಮ ಸಮುದಾಯದ ಅಥವಾ ಯಾವುದೇ ಸಮುದಾಯದ ಜನತೆಗೆ ಅನ್ಯಾಯವಾದಲ್ಲಿ ನಮ್ಮ ಸಮಿತಿ ಆವರ ದ್ವನಿಯಾಗಿ ನಿಲ್ಲಲಿದೆ ಈ ರೀತಿಯ ಘಟನೆಗಳು ಎದುರಾದಲ್ಲಿ ನಮ್ಮ ಸಂಘದವತಿಯಿಂದ ಉಚಿತವಾಗಿ ಕಾನೂನು ನೆರವನ್ನು ನೀಡಲಾಗುವುದು ಎಂದರು.

  • ನಾವು ಮಾಡುವ ಉತ್ತಮ ಕಾರ್ಯಗಳಿಂದಲೇ ನಮ್ಮನ್ನು ಗುರುತಿಸಬೇಕು – ದೀಪು ಗೌಡ

    ಸೇವೆಯೇ ನಮ್ಮ ಗುರಿಯಾಗಿದ್ದು ನಾವು ಮಾಡುವ ಕಾರ್ಯದಿಂದಲೇ ಜನತೆ ನಮ್ಮನ್ನು ಗುರುತಿಸಬೇಕು.ಸದಾ ನನ್ನೊಂದಿಗೆ ಶ್ರಮಿಸುವ ನನ್ನ ಸ್ನೇಹಿತರೇ ನನ್ನ ಶಕ್ತಿ ಎಂದು ದೀಪು ಗೌಡ ತಿಳಿಸಿದರು

    ಯುವ ಜನತಾದಳ ಕಸಬಾ ಹೋಬಳಿ ಅಧ್ಯಕ್ಷರು, ಕರುನಾಡು ವಿಜಯ ಸೇನೆ ಬೆಂಗಳೂರು ಗ್ರಾಮಾಂತರ ಯುವ ಘಟಕದ ಜಿಲ್ಲಾಧ್ಯಕ್ಷರು , ಎನ್ ವಿ ಡಿ ಡೆವಲಪರ್ಸ್ ಅಂಡ್ ರಿಯಲ್ ಎಸ್ಟೇಟ್ ನ ಮಾಲೀಕರು ಹಾಗೂ ದೀಪು ಮಸಾಲಾ ಕಂಪನಿ ಸಂಸ್ಥಾಪಕರಾದ ದೀಪು ಗೌಡ ರವರ ಹುಟ್ಟು ಹಬ್ಬವನ್ನು ಸ್ನೇಹಿತರು ಹಾಗೂ ಅಭಿಮಾನಿಗಳ ವತಿಯಿಂದ ಆಚರಿಸಲಾಯಿತು

    ಈ ಸಂದರ್ಭದಲ್ಲಿ ಮಾತನಾಡಿದ ಅವರು ನೂತನ ವರ್ಷವನ್ನು ಎಲ್ಲರೂ ಪ್ರೀತಿಯಿಂದ ಹೊಸ ಹುಮ್ಮಸ್ಸಿನಿಂದ ಸ್ವಾಗತಿಸಿದ್ದೇವೆ. ಇಂದೇ ನನ್ನ ಹುಟ್ಟು ಹಬ್ಬವಿದ್ದ ಕಾರಣ ನನ್ನ ಸ್ನೇಹಿತರ ಒತ್ತಾಯದ ಮೇರೆಗೆ ಆಚರಣೆ ಮಾಡಲಾಗುತ್ತಿದೆ ನನ್ನ ಹುಟ್ಟು ಹಬ್ಬಕ್ಕೆ ತಾಲ್ಲೂಕಿನ ಹಲವು ಗಣ್ಯರು ಶುಭಾಶಯಗಳನ್ನು ಕೋರಿ ಹಾರೈಸಿದ್ದಾರೆ ಎಲ್ಲರಿಗೂ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದು ತಿಳಿಸಿದರು

    ಈ ಸಂದರ್ಭದಲ್ಲಿ ಶುಭಕೋರಿದ ಜೆಡಿಎಸ್ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಹರೀಶ್ ಗೌಡ ರವರು ಮಾತನಾಡಿ ಜೆಡಿಎಸ್ ಯುವ ಘಟಕವನ್ನು ಬಲಪಡಿಸುವಲ್ಲಿ ದೀಪು ಗೌಡ ರವರ ಶ್ರಮ ಅಪಾರವಾದದ್ದು ಮುಂದೆ ತಾಲ್ಲೂಕಿನಲ್ಲಿ ಜೆಡಿಎಸ್ ಪಕ್ಷದ ವತಿಯಿಂದ ಉನ್ನತ ಅವಕಾಶಗಳು ಸಿಗಲಿವೆ ಎಂದರು

    ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯರು , ಬೆಂಗಳೂರು ಗ್ರಾಮಾಂತರ ಜೆಡಿಎಸ್ ಯುವ ಘಟಕದ ಅಧ್ಯಕ್ಷರು, ವಕೀಲರು ಆದ ಸುನಿಲ್ ಕುಮಾರ್ ರವರು ಮಾತನಾಡಿ ಅತ್ಯಂತ ಆತ್ಮೀಯರು ಸೋದರ ಸಮಾನರು ಸದಾ ತಾಲ್ಲೂಕಿನ ಜನತೆಯ ಕಷ್ಟಗಳಿಗೆ ಸ್ಪಂದಿಸುವ ಯುವನಾಯಕ ದೀಪು ಗೌಡ ರವರಿಗೆ ಮುಂದಿನ ದಿನಗಳಲ್ಲಿ ಪಕ್ಷದ ವತಿಯಿಂದ ಹಾಗೂ ರಾಜಕೀಯವಾಗಿ ಉನ್ನತ ಸ್ಥಾನ ಮಾನಗಳು ದೊರೆಯಲಿ ಎಂದು ಹಾರೈಸಿದರು

    ಈ ಸಂದರ್ಭದಲ್ಲಿ ತಾಲೂಕಿನ ಮುಖಂಡರಾದ ನಾಗರಾಜ್, ಪ್ರವೀಣ್ ಕುಮಾರ್ ,ಅಶ್ವಥ್ ನಾರಾಯಣ, ಶಶಿಧರ್ ಬಿ ಆರ್ ,ಕನಕ ರಾಜ್ ,ತೆರೆದಾಳ್ ಶ್ರೀನಿವಾಸ್ , ಮಂಜುನಾಥ ಡಿ ಏನ್ ,ಕೃಷ್ಣಪ್ಪ ಮತ್ತಿತರರು ಉಪಸ್ಥಿತರಿದ್ದರು