Blog

  • ಕುಂದು ಕೊರತೆಗಳ ಸಭೆಯಲ್ಲಿ ಸ್ವೀಕರಿಸಿದ ಸಾರ್ವಜನಿಕರ ಮನವಿಗಳಿಗೆ ಒಂದು ತಿಂಗಳ ಗಡುವು : ಸಮಸ್ಯೆ ಬಗೆಹರಿಸುವಂತೆ ಸಚಿವರಿಂದ ಅಧಿಕಾರಿಗಳಿಗೆ ಖಡಕ್ ವಾರ್ನಿಂಗ್

    ದೊಡ್ಡಬಳ್ಳಾಪುರ :  ಸಾರ್ವಜನಿಕರ ಹಲವು ಅಹವಾಲುಗಳನ್ನು ಜನಸ್ಪಂದನ ಕಾರ್ಯಕ್ರಮದಲ್ಲಿ ಸ್ವೀಕರಿಸಿದ್ದೇನೆ ನ್ಯಾಯಾಲಯದಲ್ಲಿ ಇರುವ ದಾವೆಗಳನ್ನು ಹೊರತುಪಡಿಸಿ ಉಳಿದೆಲ್ಲಾ ಅರ್ಜಿಗಳನ್ನು ಸರಿಪಡಿಸುವ ಅವಕಾಶ ನಮ್ಮಲ್ಲಿದೆ ಸಾರ್ವಜನಿಕರು ತಾಲ್ಲೂಕು ಕಚೇರಿ ಅಥವಾ ಜಿಲ್ಲಾ ಕಚೇರಿಗಳಿಗೆ ಆಲೆಯುವ ಪರಿಸ್ಥಿತಿ ಎದುರಾಗದಂತೆ ನೋಡಿಕೊಳ್ಳಲು ಈ ಕಾರ್ಯಕ್ರಮ ಅನುಕೂಲವಾಗಿದೆ ಎಂದು ಮಾನ್ಯ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವರಾದ ಕೆ.ಹೆಚ್. ಮುನಿಯಪ್ಪ ನವರು ತಿಳಿಸಿದರು

    ಮೇಲಿನಾಜೂಗಾನಹಳ್ಳಿ(ಘಾಟಿ) ಗ್ರಾಮ ಪಂಚಾಯತಿಯಲ್ಲಿ ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ವತಿಯಿಂದ ಇಂದು ಸಾರ್ವಜನಿಕ ಸಂಪರ್ಕ ಸಭೆಯನ್ನು ಉದ್ಘಾಟಿಸಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು

    ಅಹವಾಲುಗಳನ್ನು ಸ್ವೀಕರಿಸಿ ಸ್ಥಳದಲ್ಲಿಯೇ ಅವುಗಳಿಗೆ ಸಾಧ್ಯವಾದಷ್ಟು ಪರಿಹಾರ ಕೊಡಲು ಪ್ರಯತ್ನಿಸಿದ್ದೇನೆ ಹಾಗೂ ಎಲ್ಲಾ ಅರ್ಜಿಗಳನ್ನು ಕುರಿತಂತೆ ಒಂದು ತಿಂಗಳ ಒಳಗಾಗಿ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಹಾಗೂ ತಾಲ್ಲೂಕು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ

    ಸ್ಥಳೀಯವಾಗಿ ಉತ್ತಮ ಮೂಲಭೂತ ಸೌಕರ್ಯಗಳನ್ನು

    ತೂಬಗೆರೆ ಪಂಚಾಯತಿಯಲ್ಲಿ ರಸ್ತೆ ಗಳ ನಿರ್ಮಾಣ,ನೀರಿನ ಸಮಸ್ಯೆಗಳು, ಆಸ್ಪತ್ರೆಯ ಸಮಸ್ಯಗಳ ಬಗ್ಗೆ ಮನವಿಗಳನ್ನು ನೀಡಿದ್ದು ಅವುಗಳನ್ನು ಅತಿ ಬೇಗನೆ ಈಡೇರಿಸಲು ಸ್ಥಳದಲ್ಲಿಯೇ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ತಿಳಿಸಿದರು

     

    ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಶಿವಶಂಕರ್, ಮುಖ್ಯಕಾರ್ಯನಿರ್ವಹಣಾಧಿಕಾರಿ.ಡಾ.ಅನುರಾಧ, ಅಪರ ಮುಖ್ಯ ಜಿಲ್ಲಾಧಿಕಾರಿ ಅಂಬರೀಶ್, ತಹಶಿಲ್ದಾರ್ ವಿಭಾ ರಾಥೋಡ್, ಘಾಟಿ ಗ್ರಾಮ ಪಂಚಾಯತಿ ಅಧ್ಯಕ್ಷ ಗೋಪಾಲ್ ನಾಯಕ್, ರಂಗಪ್ಪ ತೂಬಗೆರೆ ಹೋಬಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಹಾಗೂ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

  • ಕೋವಿಡ್ ಸೋಂಕಿಗೆ ಸ್ಟಾರ್ ನಟ ಬಲಿ: ಇಹಲೋಕ ತ್ಯಜಿಸಿದ ನಟ ವಿಜಯಕಾಂತ್

    ಚೆನ್ನೈ : ತಮಿಳು‌ ಚಿತ್ರರಂಗದ ಖ್ಯಾತ‌ ನಟ, ಡಿಎಂಡಿಕೆ ಸಂಸ್ಥಾಪಕ ವಿಜಯಕಾಂತ್(71) ಅವರು‌ ಗುರುವಾರ ಬೆಳಿಗ್ಗೆ ಇಹಲೋಕ ತ್ಯಜಿಸಿದ್ದಾರೆ.

    ಮೃತ ವಿಜಯಕಾಂತ್ ಅವರು ಪತ್ನಿ ಪ್ರೇಮಲತಾ ಮತ್ತು ಮಕ್ಕಳಾದ ಷಣ್ಮುಗ ಪಾಂಡಿಯನ್ ಮತ್ತು ವಿಜಯ ಪ್ರಭಾಕರನ್ ಅವರನ್ನು ಅಗಲಿದ್ದಾರೆ.

    ನ್ಯುಮೋನಿಯಾದಿಂದ‌ ಬಳಲುತ್ತಿದ್ದ ವಿಜಯಕಾಂತ್ ಅವರಿಗೆ ಐಸಿಯುನಲ್ಲಿ‌ ಚಿಕಿತ್ಸೆ ನೀಡಲಾಗುತ್ತಿತ್ತು. ಇದೇ ವೇಳೆ ಕೋವಿಡ್ ಸೋಂಕು ದೃಢಪಟ್ಟಿದ್ದು ವೈದ್ಯಕೀಯ ಸಿಬ್ಬಂದಿಯ ಪ್ರಯತ್ನದ ಹೊರತಾಗಿಯೂ ಅವರು ಡಿ. 28 ರಂದು ಬೆಳಿಗ್ಗೆ ನಿಧನರಾದರು ಎಂದು ಮಿಯೋಟ್ ಆಸ್ಪತ್ರೆ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

    ವಿಜಯಕಾಂತ್ ಅವರು ಕಳೆದ 4-5 ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಕಾರಣ ಅವರ ಪತ್ನಿ ಪ್ರೇಮಲತಾ ಡಿ. 14 ರಂದು ಡಿಎಂಡಿಕೆ ಪ್ರಧಾನ ಕಾರ್ಯದರ್ಶಿಯಾಗಿ ಔಪಚಾರಿಕವಾಗಿ ಅಧಿಕಾರ ವಹಿಸಿಕೊಂಡಿದ್ದರು.

    ವಿಜಯಕಾಂತ್‌ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ‌ ಅವರು ಸಂತಾಪ ಸೂಚಿಸಿದ್ದಾರೆ. ತಿರು ವಿಜಯಕಾಂತ್ ಅವರ ನಿಧನದಿಂದ ಅತೀವ ದುಃಖವಾಗಿದೆ. ಈ ದುಃಖದ ಸಮಯದಲ್ಲಿ ನಾವೆಲ್ಲ ಅವರ ಕುಟುಂಬ ಹಾಗೂ ಅಭಿಮಾನಿಗಳ ಜೊತೆಗಿದ್ದೇವೆ ಎಂದು ಎಕ್ಸ್ ಮೂಲಕ ತಿಳಿಸಿದ್ದಾರೆ.

  • ರೈತರ ಸಹಾಯಕ್ಕೆ ನಿಂತ ನವ ಕರ್ನಾಟಕ ಯುವ ಶಕ್ತಿ ವೇದಿಕೆ : ದನಗಳಿಗೆ ಉಚಿತ ಮೇವು ನೀರು ವಿತರಣೆ

    ದೊಡ್ಡಬಳ್ಳಾಪುರ : ಕಳೆದ ಮೂರು ವರ್ಷಗಳಿಂದ ಶ್ರೀ ಕ್ಷೇತ್ರ ಘಾಟಿ ಸುಬ್ರಮಣ್ಯ ದಲ್ಲಿ ನಿಂತು ಹೋಗಿದ್ದ ದನಗಳ ಜಾತ್ರೆ ಈ ಬಾರಿ ಅದ್ಧೂರಿಯಾಗಿ ಆರಂಭವಾಗಿದ್ದು ಸಾವಿರಾರು ಸಂಖ್ಯೆಯಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಜೋಡಿ ಎತ್ತುಗಳು ಜಾತ್ರೆಯಲ್ಲಿ ಸೇರಿವೆ.ಜಾತ್ರೆಯಲ್ಲಿ ಸೇರಿರುವ ಜಾನುವಾರುಗಳಿಗೆ ನವ ಕರ್ನಾಟಕ ಯುವ ಶಕ್ತಿ ವೇದಿಕೆ ವತಿಯಿಂದ ಉಚಿತವಾಗಿ ಮೇವು ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಮಾಡುವ ಮೂಲಕ ರೈತರಿಗೆ ನೆರವಾಗಿದೆ

     

    ಈ ಸಂದರ್ಭದಲ್ಲಿ ನವ ಕರ್ನಾಟಕ ಯುವ ಶಕ್ತಿ ವೇದಿಕೆಯ ರಾಜ್ಯಾಧ್ಯಕ್ಷರಾದ ಅಂಬರೀಷ್ ಮಾತನಾಡಿ ಕಳೆದ ವರ್ಷಗಳಲ್ಲಿ ಕೊರೊನಾ ವೈರಸ್ ಹಾಗೂ ದನಗಳಲ್ಲಿ ಕಂಡುಬಂದ ಗಂಟು ರೋಗದ ಕಾರಣ ಮೂರು ವರ್ಷಗಳ ಕಾಲ ದನಗಳ ಜಾತ್ರೆಯನ್ನು ನಿಲ್ಲಿಸಲಾಗಿತ್ತು ಆದರೆ ಈ ಬಾರಿ ಘಾಟಿ ಸುಬ್ರಮಣ್ಯ ಕ್ಷೇತ್ರದ ದನಗಳ ಜಾತ್ರೆ ಬಹಳ ಅದ್ದೂರಿಯಾಗಿ ಜ ನಡೆಯುತ್ತಿದ್ದು ಬಹಳಷ್ಟು ಸಂಖ್ಯೆಯಲ್ಲಿ ರೈತರು ತಮ್ಮ ಎತ್ತುಗಳನ್ನು ಪ್ರದರ್ಶಿಸಲು ಹಾಗೂ ಮಾರಾಟ ಮಾಡಲು ಬಂದಿದ್ದಾರೆ.ನಮ್ಮ ವೇದಿಕೆಯ ವತಿಯಿಂದ ಜಾನುವಾರುಗಳಿಗೆ ದಿನದಲ್ಲಿ ಎರಡು ಬಾರಿ ಉಚಿತವಾಗಿ ಮೇವು ಮತ್ತು ಉಚಿತವಾಗಿ ನೀರಿನ ವ್ಯವಸ್ಥೆ ಮಾಡಲಾಗಿದೆ,ರೈತರು ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ತಿಳಿಸಿದರು

     

    ಈ ಸಂದರ್ಭದಲ್ಲಿ ಕಾರ್ಯಕ್ರಮಕ್ಕೆ ಆಗಮಿಸಿ ದನಗಳಿಗೆ ಮೇವು ವಿತರಣೆ ಮಾಡಿದ ಹಲವು ಗಣ್ಯರಿಗೆ ಸನ್ಮಾನಿಸಿ ಗೌರವಿಸಲಾಯಿತು

     

    ಕಾರ್ಯಕ್ರಮದಲ್ಲಿ ಬಿಜೆಪಿ ಮುಖಂಡರಾದ ಆರ್ ಪ್ರತಾಪ್ , ತೂಬಗೆರೆ ಪಂಚಾಯ್ತಿ ಸದಸ್ಯ ಕೃಷ್ಣಪ್ಪ , ಸ್ಥಳೀಯರಾದ ವಾಸು, ಹರೀಶ್, ಸಿ ಎ ಪಿ ಎಫ್ ನ ಪ್ರಧಾನ ಕಾರ್ಯದರ್ಶಿ ಅನಂತ ರಾಜ ಗೋಪಾಲ ,ಉದಯ ಆರಾಧ್ಯ, ಮತ್ತಿತರರು ಉಪಸ್ಥಿತರಿದ್ದರು

  • ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲಿ ನೂತನ ಪಿಎಸ್ಏನ್ ಘಟಕ ಸ್ಥಾಪನೆ : ಸಂಸ್ಥೆಯ ಗಣ್ಯರಿಂದ ಉದ್ಘಾಟನೆಗೊಂಡ ತಾಲ್ಲೂಕಿನ ಮೊದಲ ಅಧಿಕೃತ ಪಿಎಸ್ಏನ್ ಮಾರಾಟ ಮತ್ತು ಸೇವಾ ಘಟಕ

    ದೊಡ್ಡಬಳ್ಳಾಪುರ : ಸ್ಥಳೀಯವಾಗಿ ಶಾಲಾ ಬಸ್ ಹಾಗೂ ಟೆಂಪೋ ಟ್ರಕ್ ಗಳ ಮಾರಾಟದ ಬೇಡಿಕೆ ಮೇರೆಗೆ ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲಿ ಮೊದಲ ಬಾರಿಗೆ ಪಿಎಸ್ಏನ್  ಘಟಕವನ್ನು ಸ್ಥಾಪಿಸಲಾಗಿದೆ ಅತ್ಯುತ್ತಮ ಸೇವೆ ನೀಡುವಲ್ಲಿ ಹೆಸರುವಾಸಿಯಾಗಿರುವ ನಮ್ಮ ಸಂಸ್ಥೆ ಇನ್ನೂ ಮುಂದೆ ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲಿ ಅಧಿಕೃತವಾಗಿ ಕಾರ್ಯ ನಿರ್ವಹಿಸಲಿದೆ ಎಂದು ಪಿಎಸ್ಏನ್  ಸಂಸ್ಥೆಯ ಜಂಟಿ ನಿರ್ವಾಹಕ ನಿರ್ದೇಶಕರಾದ ಪವಿತ್ರ ಪದ್ಮನಾಭನ್ ತಿಳಿಸಿದರು

     

    ತಾಲ್ಲೂಕಿನ ಕೆಸ್ತೂರು ಗೇಟ್ ಬಳಿ ಯಿಚರ್ ಪಿಎಸ್ಏನ್  ಉದ್ಘಾಟಿಸಿ ಮಾತನಾಡಿದ ಅವರು  ದೊಡ್ಡಬಳ್ಳಾಪುರ ತಾಲ್ಲೂಕಿನ ನೂತನ ಪಿಎಸ್‌ಏನ್  ಘಟಕ ಜನತೆಯ ಸೇವೆಗೆ ಸಿದ್ಧವಾಗಿದೆ ಎಂದು ತಿಳಿಸಲು ಹರ್ಷಿಸುತ್ತೇವೆ. ನಮ್ಮ ಸಂಸ್ಥೆಯ ಹೆಮ್ಮೆಯ ಘಟಕ ಇದಾಗಿದ್ದು ಈ ಘಟಕದಲ್ಲಿ ಗ್ರಾಹಕರಿಗೆ ವಾಹನಗಳ ಮಾರಾಟದ ಜೊತೆಗೆ ಸೇವೆಯು ಲಭ್ಯವಿದ್ದು ಗ್ರಾಹಕರು ಪಿಎಸ್ಏನ್  ಸೇವೆಯನ್ನು ಸದ್ಭಳಕೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು

     

    ಪಿಎಸ್ಏನ್  ಘಟಕ ಕಾರ್ಯಚರಣೆಯ ಮುಖ್ಯಸ್ಥರಾದ ಸುದರ್ಶನ್ ಮಾತನಾಡಿ ಪಿಎಸ್ಏನ್   ಘಟಕದಲ್ಲಿ 350 ಕ್ಕೂ ಅಧಿಕ ಸಿಬ್ಬಂದಿ ಇದ್ದು ಕರ್ನಾಟಕದಲ್ಲಿ 20 ಕಡೆಗಳಲ್ಲಿ ನಮ್ಮ ಅಧಿಕೃತ ಬ್ರಾಂಚ್ ಗಳಿವೆ ನಮ್ಮ ಬ್ರಾಂಚ್ ಗಳು ನೀಡುತ್ತಿರುವ ಸೇವೆಗಳಿಂದ ನಾವು ಉನ್ನತ ಮಟ್ಟದಲ್ಲಿದ್ದೇವೆ ಗ್ರಾಹಕರ ಸ್ಥಳಕ್ಕೆ ಭೇಟಿನೀಡಿ ಸೇವೆ ಸಲ್ಲಿಸುವುದು ನಮ್ಮ ವಿಶೇಷತೆ. ಸ್ಥಳೀಯವಾಗಿ 400ಕ್ಕೂ ಅಧಿಕ ಶಾಲೆಗಳಿರುವ ಕಾರಣ ಶಾಲಾ ವಾಹನಗಳು ಹಾಗೂ ವಾಣಿಜ್ಯ ವಾಹನಗಳಿಗೆ ನಮ್ಮ ಬ್ರಾಂಚ್ ಅತ್ಯುತ್ತಮ ಸೇವೆ ಒದಗಿಸಲಿದೆ ಎಂದು ತಿಳಿಸಿದರು

    ಗ್ರಾಹಕ ಸೇವೆ ಮತ್ತು ಜಾಲತಾಣ ತಂತ್ರಗಾರಿಕೆ ವಿಭಾಗದ ಕಾರ್ಯಕಾರಿ ಉಪಾಧ್ಯಕ್ಷರಾದ ರಮೇಶ್ ರಾಜಗೋಪಾಲ್ ಮಾತನಾಡಿ ದೊಡ್ಡಬಳ್ಳಾಪುರ ತಾಲ್ಲೂಕಿನ ನೂತನ ಘಟಕ ಪಿಎಸ್ಏನ್  ಸಂಸ್ಥೆಗೆ 10 ಘಟಕವಾಗಿದೆ ಗ್ರಾಹಕರಿಗೆ ಅತ್ಯುತ್ತಮ ಸೇವೆ ಒದಗಿಸುವ ಉದ್ದೇಶದಿಂದ ಗ್ರಾಹಕರ ಬೇಡಿಕೆ ಮೇರೆಗೆ ಈ ಘಟಕವನ್ನು ಪ್ರಾರಂಭಿಸಲಾಗಿದೆ ನೂತನ ಘಟಕವು ಹೆದ್ದಾರಿಯ ಪಕ್ಕದಲ್ಲೇ ಇರುವ ಕಾರಣ ಗ್ರಾಹಕರಿಗೆ ಮತ್ತಷ್ಟು ಸಹಕಾರಿಯಾಗಲಿದೆ ಎಂದು ತಿಳಿಸಿದರು

     

    ದೊಡ್ಡಬಳ್ಳಾಪುರ ಕಾರ್ಯಗಾರ ಘಟಕದ ಮುಖ್ಯಸ್ಥರಾದ ಯುವರಾಜ್ ಸಿ ವಿ ಮಾತನಾಡಿ ದೊಡ್ಡಬಳ್ಳಾಪುರ ತಾಲ್ಲೂಕಿನ ಜನತೆಯ ಅನುಕೂಲಕ್ಕೆ ತಕ್ಕಂತೆ ಅತ್ಯುತ್ತಮ ಸೇವೆ ಹಾಗೂ ತಂತ್ರಜ್ಞಾನದೊಂದಿಗೆ ನಮ್ಮ ಘಟಕ ಪ್ರಾರಂಭವಾಗಿದ್ದು ನುರಿತ ಅನುಭವಿತಂಡದೊಂದಿಗೆ ಗ್ರಾಹಕ ಸೇವೆಗೆ ಮುಂದಾಗಿದ್ದೇವೆ.   ಗ್ರಾಹಕರ ಸೇವಾ ತೃಪ್ತಿ ನಮ್ಮ ಮುಖ್ಯ ಉದ್ದೇಶ ನಮ್ಮಲ್ಲಿ ಹಲವು ಬಗೆಯ ಸೇವೆಗಳು ಲಭ್ಯವಿದ್ದು ಗ್ರಾಹಕರ ಕೈಗೆಟುಕುವ ಬೆಲೆಯಲ್ಲಿ ನೀಡಲಾಗುತ್ತಿದೆ ಪಿಎಸ್‌ಏನ್  ಸಂಸ್ಥೆಗೆ ಭೇಟಿ ನೀಡಿ ಅತ್ಯುತ್ತಮ ಸೇವಾ ಭಾವನೆ ಪಡೆಯಿರಿ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು

     

    ಈ ಸಂದರ್ಭದಲ್ಲಿ ಸಂಸ್ಥೆಯ ವಿನಯ್ ಕುಮಾರ್ ಪಂಡಿತ್ ಒಳಗೊಂಡಂತೆ ಪಿಎಸ್ಏನ್  ಸಂಸ್ಥೆಯ ಸಿಬ್ಬಂದಿ ಉಪಸ್ಥಿತರಿದ್ದರು

  • ಕನ್ನಡ ಭಾಷೆಯ ನಾಮಫಲಕ ಬಳಕೆ ಕಡ್ಡಾಯ ಖಡಕ್ ವಾರ್ನಿಂಗ್ ಕೊಟ್ಟ ಕರವೇ : ವ್ಯಾಪಾರಸ್ಥರು ಎಚ್ಚೆದ್ದುಕೊಳ್ಳದ ಪಕ್ಷದಲ್ಲಿ ಉಗ್ರ ಹೋರಾಟ ಖಂಡಿತಾ – ಪುರುಷೋತ್ತಮ್ ಗೌಡ

    ಬೆಂಗಳೂರು : ಕರ್ನಾಟಕ ರಕ್ಷಣಾ ವೇದಿಕೆ ಸಂಸ್ಥಾಪಕರಾದ ಟಿ .ಎ. ನಾರಾಯಣ್ ಗೌಡ ಅವರು ಒಂದು ತಿಂಗಳ ಹಿಂದೆ ಕರ್ನಾಟಕ ರಾಜ್ಯ ಕನ್ನಡ ಅಭಿಮಾನೋತ್ಸವದ ಸಂದರ್ಭದಲ್ಲಿ ಬೆಂಗಳೂರಿನ ಹಾಗೂ ರಾಜ್ಯದಲ್ಲಿ ವಾಸಿಸುವ ಹೊರ ರಾಜ್ಯದ ವಲಸಿಗರಿಗೆ ಡಿಸೆಂಬರ್ 27ರ ವರೆಗೆ ಇಂಗ್ಲಿಷ್ ನಾಮಪಲಕಗಳನ್ನು ತೆರವು ಗೊಳಿಸಿ 65% ಕನ್ನಡ ಕಡ್ಡಾಯವಾಗಿ ಹೊಂದಿರುವ ನಾಮಫಲಕಗಳನ್ನು ಹಾಕಬೇಕೆಂದು ಎಚ್ಚರಿಕೆ ನೀಡಲಾಗಿತ್ತು
    ಈ ಕುರಿತಂತೆ ಇಂದು ಕರ್ನಾಟಕ ರಕ್ಷಣಾ ವೇದಿಕೆ ತಾಲ್ಲೂಕು ಘಟಕದ ವತಿಯಿಂದ ತಾಲ್ಲೂಕು ಅಧ್ಯಕ್ಷರಾದ ಪುರುಷೋತ್ತಮ್ ಗೌಡ ರವರ ನೇತೃತ್ವದಲ್ಲಿ ನೂರಾರು ಕಾರ್ಯಕರ್ತರು ದೊಡ್ಡಬಳ್ಳಾಪುರದಿಂದ ಬೆಂಗಳೂರಿಗೆ  ನೂರಾರು ಕಾರ್ಯಕರ್ತರು ಹೊರಟು ನಾರಯಣಗೌಡರ ಜೊತೆ ಪ್ರತಿಭಟನೆಯಲ್ಲಿ ಪಾಲ್ಗೊಂಡರು

    ವಾಣಿಜ್ಯ ಮಳಿಗೆಗಳ ನಾಮಫಲಕಗಳಲ್ಲಿ ಶೇಕಡಾ 65 ರಷ್ಟು ಕನ್ನಡ ಬಳಕೆ ಕಡ್ಡಾಯ ಎಂದು ಕರ್ನಾಟಕ ಸರ್ಕಾರ ಆದೇಶ ಹೊರಡಿಸಿದೆ ಸರ್ಕಾರಿ ಆದೇಶವನ್ನು ಲೆಕ್ಕಿಸದ ವ್ಯಾಪಾರಸ್ಥರ ,ಹಾಗೂ ಕನ್ನಡ ಭಾಷೆಯನ್ನು ಗೌರವಿಸದ ಕೆಲ ಉದ್ಯಮಿಗಳ ವಿರುದ್ಧ ನಮ್ಮ ಹೋರಾಟ ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲಿ ಮಾರ್ವಡಿಗಳಿಗೂ ಎಚ್ಚರಿಕೆ ನೀಡಲಾಗಿದೆ ನಮ್ಮ ನಾಡು ನಮ್ಮ ಭಾಷೆ ಮೊದಲು ಎಂದು ಕರ್ನಾಟಕ ರಕ್ಷಣಾ ವೇದಿಕೆ( ನಾರಯಣ ಗೌಡ ಬಣ) ದೊಡ್ಡಬಳ್ಳಾಪುರ ತಾಲ್ಲೂಕು ಅಧ್ಯಕ್ಷರಾದ ಪುರುಷೋತ್ತಮ್ ಗೌಡ ತಮ್ಮ ಆಕ್ರೋಶ ವ್ಯಕ್ತಪಡಿಸಿದರು

    ಪ್ರತಿಭಟನೆಯಲ್ಲಿ ಮಾತನಾಡಿದ ಅವರು ಇತ್ತೀಚೆಗೆ ತಾಲ್ಲೂಕಿನಲ್ಲಿ ಕರ್ನಾಟಕ ರಕ್ಷಣಾ ವೇದಿಕೆ( ನಾರಾಯಣಗೌಡರ ಬಣ) ಯು ಪ್ರಬಲವಾಗಿ ಬೆಳೆಯುತ್ತಿದ್ದು ಅಪಾರ ಸಂಖ್ಯೆಯ ಕಾರ್ಯಕರ್ತರನ್ನು ಒಳಗೊಂಡಿರುವ ಸಂಘಟನೆ ತಾಲ್ಲೂಕಿನ ವಾಣಿಜ್ಯ ಮಳಿಗೆಗಳಿಗೆ ಭೇಟಿ ನೀಡಿ ಮಳಿಗೆಗಳ ಮುಂಭಾಗ ಕನ್ನಡ ನಾಮಫಲಕ ಬಳಸುವಂತೆ ಎಚ್ಚರಿಕೆ ನೀಡಿದೆ ಹೊರರಾಜ್ಯಗಳಿಂದ ಕನ್ನಡನಾಡಿಗೆ ಬಂದು ಇಲ್ಲಿ ಜೀವನ ಕಟ್ಟಿಕೊಂಡಿರುವ ಕೆಲ ವ್ಯಾಪಾರಸ್ಥರಿಗೆ ನಮ್ಮ ಕನ್ನಡ ಭಾಷೆ ಎಂದರೇ ತಾತ್ಸಾರ ಮನೋಭಾವ ನಮ್ಮ ನಾಡಿನ ಮೂಲಭೂತ ಸೌಕರ್ಯಗಳನ್ನು ಸರಕಾರಿ ಸವಲತ್ತುಗಳನ್ನು ಯಾವುದೇ ಮುಜುಗರವಿಲ್ಲದೆ ಬಳಸುವ ಇವರಿಗೆ ನಮ್ಮ ಭಾಷೆ ಎಂದರೇ ಬೇಜವಾಬ್ದಾರಿ ಅಸಡ್ಡೆ ಈ ವರ್ತನೆ ಬದಲಾಗಬೇಕಿದೆ ಇಲ್ಲವಾದಲ್ಲಿ ಮುಂದೆ ಇದರ ಪ್ರತಿಫಲವಾಗಿ ಉಗ್ರ ಹೋರಾಟ ಎದುರಿಸಬೇಕಾಗುತ್ತದೆ ಎಂದು ತಿಳಿಸಿದರು

     

    ಈ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯ ಉಪಾಧ್ಯಕ್ಷರಾದ ಪುಟ್ಟೇಗೌಡ, ಮಹಿಳಾ ರಾಜ್ಯ ಉಪಾಧ್ಯಕ್ಷರಾದ ಅನ್ನಪೂರ್ಣ, ಕಾರ್ಮಿಕ ಘಟಕದ ಅಧ್ಯಕ್ಷ ಪುಟ್ಟರಾಜು, ಮಹಿಳಾ ಘಟಕದ ಗೀತಾ ,ಶೋಭಾ, ರೋಜಿ ಪುರ ಯುವವಕೀಲರಾದ ಮನು , ಸಂಜೀವ್ ನಾಯಕ್ ಮತ್ತು ನೂರಾರು ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡು ಪ್ರತಿಭಟನೆ ಯಶಸ್ವಿಗೊಳಿಸಿದರು

  • ಮನೆಮುಂದೆ ನಿಂತ ಕೊಳಚೇನೀರು : ಅವ್ಯವಸ್ಥೆ ಸರಿಪಡಿಸಲು ನಗರಸಭೆಗೆ ಮನವಿ ಮಾಡಿದ ಸ್ಥಳೀಯ ನಿವಾಸಿಗಳು

    ದೊಡ್ಡಬಳ್ಳಾಪುರ : ವಾರದಲ್ಲಿ ಎರಡು ಮೂರು ದಿನ ಮಕ್ಕಳು ಕಾಯಿಲೆಗೆ ಒಳಗಾಗುತ್ತಿದ್ದಾರೆ ಸರಿಯಾಗಿ ಶಾಲೆಗೆ ಹೋಗಲು ಸಾಧ್ಯವಾಗುತ್ತಿಲ್ಲ ಕೊಳೆತ ನೀರಿನ ವಾಸನೆಗೆ ಮನೆಯಲ್ಲಿ ವಾಸಿಸಲು ಆಗುತ್ತಿಲ್ಲ ನಮ್ಮ ಗೋಳು ಯಾರಿಗೆ ಹೇಳುವುದು ಎಂದು ಕಛೇರಿ ಪಾಳ್ಯ ನಿವಾಸಿಗಳು ತಮ್ಮ ನೋವನ್ನು ಹೇಳಿಕೊಂಡರು

    ತಾಲ್ಲೂಕು ಕಚೇರಿಯ ಕೂಗಳತೆ ದೂರದಲ್ಲಿ ಇರುವ ಮನೆಗಳ ಪರಿಸ್ಥಿತಿ ಇದಾಗಿದ್ದು ತಾಲ್ಲೂಕಿನ ಕಛೇರಿ ಪಾಳ್ಯದ ಕೆಲ ಮನೆಗಳ ನಿವಾಸಿಗಳು ಕೊಳೆತ ಕಲುಷಿತ ನೀರಿನ ಪಕ್ಕದಲ್ಲಿ ಜೀವನ ಸಾಗಿಸುವಂಥಾಗಿದೆ ದೊಡ್ಡಬಳ್ಳಾಪುರ ತಾಲ್ಲೂಕಿನ ನಗರ ಭಾಗದ ಮುಖ್ಯ ವಾರ್ಡ್ ಗಳಲ್ಲಿ ಒಂದಾದ ಕಛೇರಿ ಪಾಳ್ಯದ ಪರಿಸ್ಥಿತಿ ನೋಡಲಾಗದು ಸುತ್ತ ಮುತ್ತಲಿನ ಕೊಳಚೆ ನೀರು ಕಛೇರಿ ಪಾಳ್ಯದಲ್ಲಿ ಕುಂಟೆರೀತಿಯ ಗುಂಡಿ ಸೇರುತ್ತಿದ್ದು ಗುಂಡಿಯ ಪಕ್ಕದಲ್ಲಿ ಇರುವ ಮನೆಗಳಿಗೆ ಕೊಳಚೆ ನೀರಿನ ವ್ಯವಸ್ಥೆಯಿಂದಾಗಿ ಸಮಸ್ಯೆ ಎದುರಾಗಿದೆ

    ಸ್ಥಳೀಯರಾದ ಲತಾ ಮಾತನಾಡಿ ಚುನಾವಣೆ ಸಂದರ್ಭದಲ್ಲಿ ಮತಕ್ಕಾಗಿ ಬರುವ ಎಲ್ಲಾ ನಾಯಕರೂ ಆಶ್ವಾಸನೆ ನೀಡಿ ಹೋಗುತ್ತಾರೆ ಆದರೆ ಚುನಾವಣೆ ನಂತರ ಯಾರೊಬ್ಬರೂ ನಮ್ಮ ಮನೆಗಳ ಕಡೆ ಬರುವುದಿಲ್ಲ ಮನೆಯಲ್ಲಿ ಪುಟ್ಟ ಮಕ್ಕಳಿದ್ದಾರೆ ಆರೋಗ್ಯದ ಸಮಸ್ಯೆಗಳು ಎದುರಾಗಿದ್ದು ನಮ್ಮ ಗೋಳು ಕೇಳುವವರಿಲ್ಲ ನಗರಸಭೆಯ ಸಿಬ್ಬಂದಿಯೂ ಸಹ ನಮ್ಮ ಮನೆಗಳ ಕಡೆ ಬರುತ್ತಿಲ್ಲ ನಮ್ಮ ಪರಿಸ್ಥಿತಿ ಹೇಳಿಕೊಂಡರು ಯಾರಿಗೂ ಅರ್ಥವಾಗುತ್ತಿಲ್ಲ ನಗರ ಸಭೆಯ ಅಧಿಕಾರಿಗಳಲ್ಲಿ ಮನವಿ ಮಾಡುತ್ತೇವೆ ನಮ್ಮ ಆರೋಗ್ಯದ ದೃಷ್ಟಿಯಿಂದ ಕೊಳಚೆ ನೀರು ಉತ್ತಮ ರೀತಿಯಲ್ಲಿ ಹರಿದು ಹೋಗಲು ಚರಂಡಿ ನಿರ್ಮಾಣ ಮಾಡಿಕೊಡಿ ಎಂದು ಮನವಿ ಮಾಡಿದರು

    ಸ್ಥಳೀಯರಾದ ಶಂಕರ್ ಮಾತನಾಡಿ ಅಭಿವೃದ್ಧಿಯ ವಿಚಾರದಲ್ಲಿ ರಾಜಕೀಯ ಸಲ್ಲದು ನಮಗೆ ಯಾರ ಮೇಲೂ ಅರೋಪವಿಲ್ಲ .ಮಕ್ಕಳು ಶಾಲೆಯಿಂದ ಹೊಟ್ಟೆನೋವು, ಜ್ವರ ,ವಾಂತಿ ಎಂದು ಮನೆಗೆ ಬರುತ್ತಿದ್ದು ಆರೋಗ್ಯದ ಸಮಸ್ಯೆಯಿಂದ ವಿಧ್ಯಾಭ್ಯಾಸ ಹಾಳಾಗುತ್ತಿದೆ .ನಮ್ಮ ನೆಮ್ಮದಿಯ ಬದುಕಿಗೆ ,ಉತ್ತಮ ಆರೋಗ್ಯಕ್ಕಾಗಿ ಮೂಲಭೂತ ಸೌಕರ್ಯ ಕಲ್ಪಿಸಿ ಹಾಗೂ ಸ್ವಚ್ಛತೆ ಕಾಪಾಡಲು ನಗರ ಸಭಾ ಸಿಬ್ಬಂದಿ ಸಹಕರಿಸಬೇಕೆಂದು ಮನವಿ ಮಾಡಿದರು

  • ಸ್ವ ಉದ್ಯೋಗ ಆರಂಭಿಸಲು ತರಬೇತಿ ಶಿಬಿರ : ಯೋಜನಾಧಿಕಾರಿಗಳಿಂದ ವಿವಿಧ ಸ್ವ ಉದ್ಯೋಗ ಕುರಿತು ಶಿಬಿರಾರ್ಥಿಗಳಿಗೆ ಮಾಹಿತಿ

    ದೊಡ್ಡಬಳ್ಳಾಪುರ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ದೊಡ್ಡಬಳ್ಳಾಪುರ ತಾಲ್ಲೂಕಿನ ಕಸಬಾ ವಲಯದ ಇಸ್ಲಾಪುರ ಕಾರ್ಯಕ್ಷೇತ್ರದಲ್ಲಿ ಸ್ವ ಉದ್ಯೋಗ ತರಬೇತಿ ಕಾರ್ಯಾಗಾರ ನಡೆಯಿತು

    ಮಹಿಳೆಯರಿಗೆ ಸ್ವಾವಲಂಬಿ ಜೀವನ ನಡೆಸಲು ಸ್ವ ಉದ್ಯೋಗ ಅತ್ಯಂತ ಅವಶ್ಯಕವಾಗಿದ್ದು ಮಹಿಳಾ ಸಬಲೀಕರಣಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸದಾ ಸಹಕಾರ ನೀಡಿ ಸ್ಪಂದಿಸುತ್ತದೆ ಎಂದು ಯೋಜನಾಧಿಕಾರಿಗಳಾದ ಶ್ರೀಮತಿ ಸುಧಾ ಭಾಸ್ಕರ್ ನಾಯ್ಕ್ ತಿಳಿಸಿದರು

     

    ಕಾರ್ಯಕ್ರಮವನ್ನು ಉದ್ಘಾಟಿಸಿ ಪ್ರಾಸ್ತಾವಿಕವಾಗಿಮಾತನಾಡಿದ ಅವರು ಸ್ವ ಉದ್ಯೋಗ ಕೈಗೊಳ್ಳುವುದರಿಂದ ಮನೆಯಲ್ಲಿ ಕುಳಿತು ಉದ್ಯೋಗ ಮಾಡುವುದರಿಂದ ಕುಟುಂಬದ ಆರ್ಥಿಕ ಸಮಸ್ಯೆ ಬಗೆಹರಿಯುತ್ತದೆ ನಾವು ಮಾಡುವುದರ ಜೊತೆಗೆ ಮತ್ತಷ್ಟು ಜನರಿಗೆ ಉದ್ಯೋಗ ಸೃಷ್ಠಿ ಮಾಡಬಹುದಾಗಿದೆ ಮತ್ತು ಪ್ರಸ್ತುತ ಉತ್ತಮ ಮಾರುಕಟ್ಟೆ ವ್ಯವಸ್ಥೆ ಇರುವುದರಿಂದ ಸದಸ್ಯರು ಈ ಅವಕಾಶವನ್ನು ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು

     

    ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಂಪನ್ಮೂಲ ವ್ಯಕ್ತಿಗಳಾದ ಗೋವಿಂದ ರಾಜು ಮಾತನಾಡಿ ಮೇಣದ ಬತ್ತಿ ತಯಾರಿಕೆ ,ಅಗರಬತ್ತಿ ತಯಾರಿ ಹಾಗೂ ಮಾರುಕಟ್ಟೆ ಕುರಿತು ಸವಿಸ್ತಾರವಾಗಿ ಮಾಹಿತಿ ನೀಡಿದರು ಹಾಗೂ ಸ್ವ ಉದ್ಯೋಗಕ್ಕೆ ಬ್ಯಾಂಕುಗಳ ಸಹಕಾರ ಬಗ್ಗೆ ವಿವರ ನೀಡಿದರು

     

    ಕಾರ್ಯಕ್ರಮದಲ್ಲಿ ವಲಯ ಮೇಲ್ವಿಚಾರಕರಾದ ಶಶಿಕಲಾ ಕೃಷಿ ಮೇಲ್ವಿಚಾರಕರಾದ ಲೋಹಿತ್,ಸಿ ಎಸ್ ಸಿ ನೋಡಲ್ ರೇಣುಕಾ ಪ್ರಸಾದ್,ಗ್ರೀನ್ ವೇ ಸಂಸ್ಥೆಯ ಕಾರ್ತಿಕ್,ಸೋಲಾರ್ ಸಂಸ್ಥೆಯ ರಮೇಶ್,ಸೇವಾಪ್ರತಿನಿಧಿ ಹಾಗೂ ಸದಸ್ಯರು ಹಾಜರಿದ್ದರು

  • ಮೇಕೆಯನ್ನು ಬಲಿ ಪಡೆದ ಚಿರತೆ : ಹೊಸಹಳ್ಳಿ ವ್ಯಾಪ್ತಿಯ ಕುಕ್ಕಲಳ್ಳಿ ಗ್ರಾಮದಲ್ಲಿ ಘಟನೆ

    ದೊಡ್ಡಬಳ್ಳಾಪುರ : ಚಿರತೆಯೊಂದು ಮನೆ ಬಳಿ ಇದ್ದ ಮೇಕೆಯನ್ನು ಎಳೆದೊಯ್ದು ಕೊಂದು ಹಾಕಿರುವ ಘಟನೆ ಇಂದು‌ ಮುಂಜಾನೆ ಸುಮಾರು 3:45ರ ಸಮಯದಲ್ಲಿ ತಾಲೂಕಿನ ಹೊಸಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಕ್ಕಲಳ್ಳಿ ಗ್ರಾಮದಲ್ಲಿ ನಡೆದಿದೆ.

     

    ರೈತ ಶಶಿಧರ್ ಅವರಿಗೆ ಸೇರಿದ ಮೇಕೆಯನ್ನು ಚಿರತೆ ಬಲಿ ಪಡೆದಿದೆ.

     

    ಎಂದಿನಂತೆ ಮನೆಯ ಕಾಂಪೌಂಡ್ ಒಳಗೆ ಎರಡು ಮೇಕೆಗಳನ್ನ ಕಟ್ಟಿಹಾಕಲಾಗಿತ್ತು. ಎರಡು ಮೇಕೆಗಳಲ್ಲಿ ಒಂದು ಮೇಕೆಯನ್ನು‌ ಊರ ಹೊರವಲಯದಲ್ಲಿರುವ ಹಳ್ಳದ ಕಡೆ ಹೊತ್ತೊಯ್ದು ಅರೆಬರೆ ತಿಂದು ಪರಾರಿಯಾಗಿದೆ.

     

    ಇದರಿಂದ ಬೆಚ್ಚಿಬಿದ್ದಿರುವ ಗ್ರಾಮಸ್ಥರು ಅರಣ್ಯ ಇಲಾಖೆಗೆ ಮಾಹಿತಿ‌‌ ಮುಟ್ಟಿಸಿದ್ದಾರೆ. ಆದರೆ ಇದೂವರೆಗೂ ಸ್ಥಳಕ್ಕೆ ಭೇಟಿ‌ ನೀಡದ ಸಿಬ್ಬಂದಿ. ಸಿಬ್ಬಂದಿಯ ನಿರ್ಲಕ್ಷ್ಯತನಕ್ಕೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

     

    ಮೊನ್ನೆ ರಾತ್ರಿ ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಚಿರತೆ ಚಲನವಲನ‌ ಕಂಡುಬಂದಿತ್ತು. ಭಾರೀ ಅನಾಹುತ ಆಗುವ ಮೊದಲು ಕೂಡಲೇ ಅರಣ್ಯ ಇಲಾಖೆ ಎಚ್ಚೆತ್ತುಕೊಂಡು ಚಿರತೆಗಳ ಹಾವಳಿಯನ್ನ ತಪ್ಪಿಸಬೇಕು.

  • ರಂಗೇರಿದ ವ್ಯಾಪಾರ ಭರಾಟೆ : ಹಲವು ವರ್ಷಗಳ‌ ನಂತರ ಕಳೆಗಟ್ಟಿದ ಘಾಟಿ ದನಗಳ ಜಾತ್ರೆ

    ಘಾಟಿ ಸುಬ್ರಹ್ಮಣ್ಯ ಜಾತ್ರೆಯಲ್ಲಿ ಕೃಷಿ ಕೆಲಸಕ್ಕೆ ಬೇಕಾಗುವ ಹೋರಿಗಳನ್ನು ಖರೀದಿಸಲು ರಾಜ್ಯದ ಬಳ್ಳಾರಿ, ದಾವಣಗೆರೆ, ರಾಯಚೂರು, ಬೀದರ್ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಮಾತ್ರವಲ್ಲದೆ ಹೊರ ರಾಜ್ಯದ ತಮಿಳುನಾಡಿನ ಸೇಲಂ, ಹೊಸೂರು,ಆಂಧ್ರಪ್ರದೇಶದ ಹಿಂದೂಪುರ,ಅನಂತಪುರ,ಮಹಾರಾಷ್ಟ್ರದ ಕೊಲ್ಲಾಪುರ,ಸಾಂಗ್ಲಿ ಸೇರಿದಂತೆ ವಿವಿಧ ಕಡೆಗಳಿಂದಲು ರೈತರು ಬರುತ್ತಾರೆ.

     

    ದಕ್ಷಿಣ ಭಾರತದಲ್ಲೇ ದನಗಳ ಜಾತ್ರೆಗೆ ಪ್ರಸಿದ್ಧಿಯಾಗಿರುವ ಘಾಟಿ ಸುಬ್ರಹ್ಮಣ್ಯಸ್ವಾಮಿ ದನಗಳ ತುಂಬು ಜಾತ್ರೆಗೆ ದೂರದ ಊರುಗಳಿಂದ ಹೊರಿಗಳೊಂದಿಗೆ ಸಾಲು ಸಾಲಾಗಿ ರೈತರು ಬರುತ್ತಿದ್ದಾರೆ. ಕಳೆದ ಹಲವು ವರ್ಷಗಳ ಬಳಿಕ ಘಾಟಿ ದನಗಳ ಸಂತೆ ಕಳೆಗಟ್ಟಿದೆ. ಘಾಟಿ ಕ್ಷೇತ್ರದಲ್ಲಿ ರೈತರು ತಮ್ಮ ರಾಸುಗಳನ್ನು ವ್ಯಾಪಾರಕ್ಕಾಗಿ ಕಟ್ಟುವ ಸ್ಥಳದಲ್ಲಿ ಹೈಟೆಕ್ ಮಾದರಿಯ ಪೆಂಡಾಲ್ ಗಳನ್ನು ಸಿದ್ಧಪಡಿಸಿ, ಶೃಂಗಾರಗೊಂಡ ಹೋರಿಗಳನ್ನ ನಿಲ್ಲಿಸಿದ್ದಾರೆ.

     

    ಜಾತ್ರೆಯಲ್ಲಿ ಅಮೃತ್ ಮಹಲ್, ಹಳ್ಳಿಕಾರ್ ಸೇರಿದಂತೆ ಸ್ಥಳೀಯ ನಾಟಿ ಹೋರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟಕ್ಕೆ ಬರುತ್ತವೆ. ಹೀಗಾಗಿಯೇ ಹೆಚ್ಚಿನ ಸಂಖ್ಯೆಯಲ್ಲಿ ಹೊರ ಜಿಲ್ಲೆ, ಹೊರ ರಾಜ್ಯದ ರೈತರು ಕೃಷಿ ಕೆಲಸಗಳಿಗೆ ಹೋರಿಗಳ ಖರೀದಿಗೆ ಬರುತ್ತಾರೆ.

     

     

    ಬೆಂಗಳೂರಿಗೆ ಸಮೀಪದಲ್ಲೇ ಇರುವ ಘಾಟಿ ಸುಬ್ರಹ್ಮಣ್ಯಸ್ವಾಮಿ ದನಗಳ ಜಾತ್ರೆ ವೀಕ್ಷಣೆಗೆ ಇತ್ತೀಚಿನ ದಿನಗಳಲ್ಲಿ ಮಕ್ಕಳೊಂದಿಗೆ ಬರುವ ನೋಡುಗರ ಸಂಖ್ಯೆಯು ಹೆಚ್ಚಾಗಿದೆ.

     

    ಜಾತ್ರೆಯಲ್ಲಿ ಹೋರಿಗಳನ್ನು ಕಟ್ಟುವ ಸ್ಥಳಕ್ಕೆ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಹೈಟೆಕ್ ಮಾದರಿಯಲ್ಲಿ ಪೆಂಡಾಲ್ ಗಳನ್ನು ನಿರ್ಮಿಸುವ ರೈತರ ಸಂಖ್ಯೆಯು ಹೆಚ್ಚಾಗಿದೆ.

    ಹೋರಿಗಳು ಮಲಗಲು ವಿಶೇಷವಾಗಿ ನಿರ್ಮಿಸುವ ಮೆತ್ತನೆಯ ಹುಲ್ಲಿನ ಹಾಸಿಗೆ, ಪೆಂಡಾಲ್ ಅನ್ನು ಬಣ್ಣ ಬಣ್ಣದ ಅಲಂಕಾರಿಕ ಹೂವುಗಳಿಂದ ಸಿಂಗರಿಸಲಾಗುತ್ತಿದೆ.

     

    ಜಾತ್ರೆಯಲ್ಲಿ ಹೈಟೆಕ್ ಮಾದರಿಯ ಪೆಂಡಾಲ್ ಗಳನ್ನು ನಿರ್ಮಿಸುವುದು, ಹೋರಿಗಳನ್ನು ಮೇಯಿಸಿ ಜಾತ್ರೆಗೆ ಕರೆತುರುವುದು ಇತ್ತೀಚಿನ ದಿನಗಳಲ್ಲಿ ಕೆಲ ರೈತರಿಗೆ ಪ್ರತಿಷ್ಠೆಯ ಸಂಗತಿಯಾಗಿದ್ದು, ಲಕ್ಷಾಂತರ ರೂಪಾಯಿಗಳನ್ನು ಇದಕ್ಕಾಗಿಯೇ ಖರ್ಚು ಮಾಡಲಾಗುತ್ತಿದೆ.

     

    ಈ ಹಿಂದಿನ ಜಾತ್ರೆಯಲ್ಲಿ ಒಂದು ಜೋಡಿ ಹೋರಿಗಳನ್ನು ₹1.75 ಲಕ್ಷಕ್ಕೆ ಮಾರಾಟ ಮಾಡಲಾಗಿತ್ತು. ಈ ಬಾರಿ ಇದಕ್ಕಿಂತಲು ಹೆಚ್ಚಿನ ಮೊತ್ತದ ಹೋರಿಗಳು ಬರುವ ನಿರೀಕ್ಷೆ ಮಾಡಲಾಗಿದೆ.

     

     

    ಕೃಷಿ ಕೆಲಸ ಮಾಡುವ ಹೋರಿಗಳು ಸೇರಿದಂತೆ ರಾಸುಗಳ ಕೊರಣಿಗೆ ಕಟ್ಟುವ ಕಂಬಲಳಿ ದಾರ, ಘಂಟೆಗಳು, ಗೌಸಿಣಿಗೆ, ಬಣ್ಣ ಬಣ್ಣದ ಬಾರು ಕೋಲುಗಳು, ಘಂಟೆ ಸರ, ರಾಗಿ ಒಕ್ಕಣೆಯಲ್ಲಿ ಬಳಸುವ ವಿವಿಧ ಕೃಷಿ ಪರಿಕರಗಳನ್ನು ಮಾರಾಟ ಮಾಡುವ ಅಂಗಡಿಗಳು ಈಗಾಗಲೇ ವ್ಯಾಪಾರಕ್ಕೆ ಸಿದ್ಧಗೊಂಡಿವೆ.

     

    ಈ ಹಿಂದೆ ಹೋರಿಗಳನ್ನು ಕಟ್ಟುವ ರೈತರು ಮಾತ್ರ ಬಾರು ಕೋಲುಗಳನ್ನು ಖರೀದಿಸುತ್ತಿದ್ದರು. ಆದರೆ ಇತ್ತೀಚಿಗೆ ಜಾತ್ರೆಯಲ್ಲಿ ಬಣ್ಣ ಬಣ್ಣದ ಬಾರು ಕೋಲುಗಳನ್ನು ಖರೀದಿ ಮನೆಗೆ ಕೊಂಡೊಯ್ಯುವುದು ಶೋಕಿಯ ಸಂಗತಿಯಾಗಿದೆ. ಹಾಗಾಗಿ ಜಾತ್ರೆಗೆ ಬರುವ ಮಕ್ಕಳು,ಅದರಲ್ಲೂ ಯುವ ಸಮುದಾಯ ಬಾರು ಕೋಲುಗಳನ್ನು ಖರೀದಿಸಿ ಜಾತ್ರೆಯಲ್ಲಿ ಕೈ ಯಲ್ಲಿಡಿದುಕೊಂಡು ಒಡಾಡುವ ದೃಶ್ಯಗಳು ಸಾಮಾನ್ಯವಾಗಿವೆ.

     

    ಸಾಮಾನ್ಯವಾಗಿ ಡಿಸೆಂಬರ್ ತಿಂಗಳಲ್ಲಿ ನಡೆಯುವ ಘಾಟಿ ಸುಬ್ರಹ್ಮಣ್ಯ ದನಗಳ ಜಾತ್ರೆಯಲ್ಲಿ ರೈತರು, ರಾಸುಗಳು ಚಳಿಯೊಂದಿಗೆ ಇರುವುದು ಮಾಮೂಲು. ಆದರೆ ಈ ಬಾರಿ ತೀವ್ರ ಮಳೆಯ ಕೊರತೆಯಿಂದಾಗಿ ಅಷ್ಟಾಗಿ ಚಳಿ ಇರುವುದಿಲ್ಲ ಎನ್ನುವ ನಿರೀಕ್ಷೆ ಇತ್ತು. ಆದರೆ ಎರಡು ದಿನಗಳಿಂದ ಮೈ ಕೊರೆಯುವ ಚಳಿ ಪ್ರಾರಂಭವಾಗಿದೆ.

  • ದೇವಾಲಯದ ಪ್ರಸಾದ ಸೇವಿಸಿ ಸಿದ್ದಗಂಗಮ್ಮ (45)ಸಾವು : ಆಸ್ಪತ್ರೆಯಲ್ಲಿ 15ಕ್ಕೂ ಹೆಚ್ಚು ಮಂದಿಯ ಸ್ಥಿತಿ ಗಂಭೀರ

    ಹೊಸಕೋಟೆ: ಹನುಮ ಜಯಂತಿ ಅಂಗವಾಗಿ ದೇವಾಲಯದಲ್ಲಿ ನೀಡಿದ ಪ್ರಸಾದ ಸೇವಿಸಿದ ಪರಿಣಾಮ ಓರ್ವ ಮಹಿಳೆ ಮೃತಪಟ್ಟು, ನೂರಾರು ಜನ ಅಸ್ವಸ್ಥಗೊಂಡಿರುವ ಘಟನೆ ನಗರದಲ್ಲಿ ನಡೆದಿದೆ.

     

    ನಗರದ ವೆಂಕಟರಮಣಸ್ವಾಮಿ, ಊರುಬಾಗಿಲ ಆಂಜನೇಯ ಸ್ವಾಮಿ, ಕೋಟೆ ಆಂಜನೇಯ ಸ್ವಾಮಿ ದೇವಾಲಯಗಳಲ್ಲಿ ಭಾನುವಾರ ಹನುಮ ಜಯಂತಿಯ ಅಂಗವಾಗಿ ಭಕ್ತರಿಗೆ ಪ್ರಸಾದ ವಿತರಿಸಲಾಗಿತ್ತು.

     

    ಪುಳಿಯೊಗರೆ, ಪಾಯಸ , ಲಡ್ಡು ಸೇವನೆ ಮಾಡಿದ್ದ ಭಕ್ತರಿಗೆ ವಾಂತಿ ಭೇದಿ ಕಾಣಿಕೊಂಡಿದೆ. ಕೂಡಲೇ ಅಸ್ವಸ್ಥರನ್ನು ನಗರದ ಖಾಸಗಿ ಆಸ್ಪತ್ರೆ, ಕೋಲಾರ, ಬೆಂಗಳೂರು ಆಸ್ಪತ್ರೆಗಳಲ್ಲಿ ಸ್ಥಳಾಂತರಿಸಿ, ಚಿಕಿತ್ಸೆ ನೀಡಲಾಯಿತು.

     

    ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕಾವೇರಿ ನಗರದ ಸಿದ್ದಗಂಗಮ್ಮ(45) ಎಂಬುವರು ಬುಧವಾರ ಮೃತಪಟ್ಟಿದ್ದಾರೆ. ಇದೇ ಆಸ್ಪತ್ರೆಯಲ್ಲಿ 15 ಕ್ಕೂ ಹೆಚ್ಚು ಮಂದಿಯ ಸ್ಥಿತಿ ಗಂಭೀರವಾಗಿದೆ.

     

    ನಗರದ ಎಲ್ಲಾ ಖಾಸಗಿ ಆಸ್ಪತ್ರೆಗಳಲ್ಲಿ ಬೆಡ್ ಭರ್ತಿಯಗಿವೆ. ಆಸ್ಪತ್ರೆಗಳಲ್ಲಿ‌ ಅಸ್ವಸ್ಥಗೊಂಡವರ ನರಳಾಟ ಕೇಳ ತೀರದಾಗಿದೆ.