Blog

  • ನಿವೇಶನ ಹಂಚಿಕೆ ಪಾರದರ್ಶಕವಾಗಿರಲಿ : ಪರಿಶಿಷ್ಟ ಹಾಗೂ ಹಿಂದುಳಿದ ಸಮುದಾಯಗಳಿಗೆ ಮೊದಲ ಆದ್ಯತೆ ನೀಡಿ – ಬಚ್ಚಹಳ್ಳಿ ನಾಗರಾಜ್

    ಹಾಡೋನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡ ಹಾಗೂ ಹಿಂದುಳಿದ ವರ್ಗಗಳ ಕುಟುಂಬಗಳಿಗೆ ಸರ್ಕಾರಿ ನಿವೇಶನಗಳನ್ನು ಮಂಜೂರು ಮಾಡುವಂತೆ ಆಗ್ರಹಿಸಿ ಬಚ್ಚಹಳ್ಳಿ ಗ್ರಾಮಸ್ಥರು ತಾಲ್ಲೂಕು ಪಂಚಾಯಿತಿ ಮುಂಭಾಗ ಪ್ರತಿಭಟನೆ ನೆಡೆಸಿದರು.

    ಈ ಸಂದರ್ಭದಲ್ಲಿ ಹಾಡೋನಹಳ್ಳಿ ಗ್ರಾಮಪಂಚಾಯ್ತಿ ಮಾಜಿ ಅಧ್ಯಕ್ಷ ಬಚ್ಚಹಳ್ಳಿ ನಾಗರಾಜ್ ಮಾತನಾಡಿ ದೇವನಹಳ್ಳಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ, ದೊಡ್ಡಬಳ್ಳಾಪುರ ತಾಲ್ಲೂಕಿನ, ತೂಬಗೆರೆ ಹೋಬಳಿ, ಹಾಡೋನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಚ್ಚಹಳ್ಳಿ ಗ್ರಾಮದ ಸರ್ವೆ ನಂ 10ರಲ್ಲಿ 5:00 ಎಕರೆ ಭೂಮಿಯನ್ನು ಆಶ್ರಯ ನಿವೇಶನಗಳಿಗಾಗಿ ಅಭಿವೃದ್ಧಿಪಡಿಸಿ ಫಲಾನುಭವಿಗಳಿಗೆ ಹಂಚಿಕೆ ಮಾಡಲು ತಯಾರಿ ನಡೆಸುತ್ತಿದ್ದು, ಈ ಹಿಂದೆ ಸರ್ಕಾರದಿಂದ ಅಲ್ಪಜಾಗವನ್ನು ಮಂಜೂರು ಪಡೆದಿರುವ ಕುಟುಂಬಗಳು ಫಲಾನುಭವಿ ಆಗಲು ಸಾಧ್ಯವಿಲ್ಲ ಎನ್ನುತ್ತಿದ್ದಾರೆ. ಆದರೆ ಹತ್ತಾರು ಎಕರೆ ಭೂಮಿ ಹೊಂದಿರುವ ಆರ್ಥಿಕವಾಗಿ ಸಬಲರಾಗಿರುವ ಹಲವು ಕುಟುಂಬಗಳಿಗೆ ನಿವೇಶನ ಕಲ್ಪಿಸಲು ಮುಂದಾಗಿರುವುದು ವಿಷಾದನೀಯ ಸಂಗತಿಯಾಗಿದೆ .

    ಹಾಕ್ಕೋತ್ತಾಯಗಳೇನು…???

    *ನೈಜ ಫಲಾನುಭವಿಗಳ ಆಯ್ಕೆಗಾಗಿ ತಾಲ್ಲೂಕು ಸಮಾಜ ಕಲ್ಯಾಣ ಅಧಿಕಾರಿಗಳನ್ನು ಒಳಗೊಂಡಂತೆ ಸಮಿತಿ ರಚಿಸಬೇಕು

    *ಈ ಸಮಿತಿಯು ಪರಿಶಿಷ್ಟ ಜಾತಿಯ ಕುಟುಂಬಗಳನ್ನು ಆದ್ಯತೆಯ ಮೇರೆಗೆ ಆಯ್ಕೆ ಮಾಡಬೇಕು

    *ಹಿಂದೆ ನಡೆದ ಗ್ರಾಮ ಸಭೆಯಲ್ಲಿ ಅನುಮೋದನೆಗೊಂಡಿರುವ ಫಲಾನುಭವಿಗಳ ಪಟ್ಟಿ ಮತ್ತು ಈಗ ಆನ್ ಲೈನ್ ನಲ್ಲಿರುವ ನಿವೇಶನ ರಹಿತ ಫಲಾನುಭವಿಗಳ ಪಟ್ಟಿ ಎರಡನ್ನೂ ಪರಿಷ್ಕರಿಸಿ ಅಂತಿಮ ಪಟ್ಟಿ ಸಿದ್ಧಗೊಳಿಸಬೇಕು

    * ಸಮಿತಿಯು ಪ್ರತಿ ಮನೆಯ ಸಮೀಕ್ಷೆ ಮಾಡಿ. ಸಾಮಾಜಿಕ ಮತ್ತು ಆರ್ಥಿಕ ಹಿಂದುಳಿದಿರುವಿಕೆಯನ್ನು ಪರಿಗಣಿಸಿ ಸಾಮಾಜಿಕ ನ್ಯಾಯದ ಆಧಾರದಲ್ಲಿ ಫಲಾನುಭವಿಗಳನ್ನು ಆಯ್ಕೆ ಮಾಡಬೇಕು

    *ಈಗಿರುವ 20X30 ಅಳತೆಗೆ ಬದಲಾಗಿ 20×60 ಅಳತೆಯ ನಿವೇಶನಗಳನ್ನು ನೀಡಬೇಕು.

     

    ನಾವುಗಳು ಕೃಷಿ ಕೂಲಿ ಕಾರ್ಮಿಕರಾಗಿರುವುದರಿಂದ ನಮ್ಮ ಜೀವನ ನಿರ್ವಹಣೆಗೆ ಒಂದು ಹಸು, ಕುರಿ, ಕೋಳಿ ಸಾಕಣೆ ಮಾಡಿಕೊಂಡಿರುತ್ತೇವೆ ಈಗ ಗುರುತಿಸಿ ನೀಡಿರುವ ನಿವೇಶನಗಳು 20*30 ಅಳತೆಯದ್ದಾಗಿದ್ದು ಈ ಅಳತೆಯಲ್ಲಿ ನಾವುಗಳು ಮನೆಯನ್ನು ಎಲ್ಲಿ ಕಟ್ಟಿಕೊಳ್ಳಬೇಕು ಕೊಟ್ಟಿಗೆಯನ್ನು ಎಲ್ಲಿ ಕಟ್ಟಿಕೊಳ್ಳಬೇಕು ಹಾಗಿರುವುದರಿಂದ 20X30 ಅಳತೆಯ ಬದಲಾಗಿ 20*60 ಅಳತೆ ನಿವೇಶನಗಳನ್ನು ಹಂಚಿಕೆ ಮಾಡಿಕೊಡಬೇಕೆಂದು ತಿಳಿಸಿದರು.

    ಈ ಕುರಿತು ನಮ್ಮ ಗ್ರಾಮದ ಪ್ರತಿ ಮನೆಮನೆಯನ್ನು ಸಮೀಕ್ಷೆಗೆ ಒಳಪಡಿಸಬೇಕು. ಪ್ರತಿ ಕುಟುಂಬದ ಸಾಮಾಜಿಕ ಮತ್ತು ಆರ್ಥಿಕ ಪರಿಸ್ಥಿತಿಯನ್ನು ತಿಳಿದುಕೊಂಡು ನೈಜ ಫಲಾನುಭವಿಗಳನ್ನು ಗುರುತಿಸಿ ನಿವೇಶನ ಹಂಚಿಕೆ ಮಾಡಬೇಕು ಎಂದು ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಮನವಿ ಮಾಡಿದರು

     

    ಈ ಸಂದರ್ಭದಲ್ಲಿ ತಾಲೂಕು ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಜಾಗ್ರತಿ ಮತ್ತು ಉಸ್ತುವಾರಿ ಸಮಿತಿ ಸದಸ್ಯರಾದ ನಾಗರಾಜು ಬಚ್ಚಹಳ್ಳಿ, ಗ್ರಾಮ ಪಂಚಾಯಿತಿ ಸದಸ್ಯರಾದ ಪರಮೇಶ್,ಮಂಜುಳಮ್ಮ,ಗೀತಾ ಬಾಯಿ,ಮಾಜಿ ಉಪಾಧ್ಯಕ್ಷರಾದ ಶ್ರೀನಿವಾಸ,ರೈತ ಸಂಘದ ಮುಖಂಡ ಸತೀಶ್ ಗೊಲ್ಲಹಳ್ಳಿ,ಮುನಿಯಪ್ಪ,ಹರೀಶ್ ನಾಯ್ಕ, ಮಂಜುನಾಯ್ಕ,ವಿಜಿ ನಾಯ್ಕ,ಹನುಮಂತೇಗೌಡ ಮತ್ತು ಬಚ್ಚಹಳ್ಳಿ ಗ್ರಾಮದ ಮಹಿಳೆಯರು ಮತ್ತು ಮುಖಂಡರು ಹಾಜರಿದ್ದರು

     

     

  • ಆಗಸ್ಟ್ 15ರಂದು ದೊಡ್ಡತುಮಕೂರು ಮತ್ತು ಮಜರಾಹೊಸಹಳ್ಳಿ ಗ್ರಾಮ ಪಂಚಾಯಿತಿಯ ಎಲ್ಲಾ ಮನೆಗಳ ಮೇಲೆ ಕಪ್ಪು ಬಾವುಟ…??? ಏನಿದು…??

    ದೊಡ್ಡಬಳ್ಳಾಪುರ : ದೊಡ್ಡತುಮಕೂರು ಮತ್ತು ಮಜರಾಹೊಸಹಳ್ಳಿ ಗ್ರಾಮ ಪಂಚಾಯಿತಿಯ ಕೆರೆ ನೀರು, ಕೊಳವೆ ಬಾವಿ ನೀರು, ಶುದ್ಧ ಕುಡಿಯುವ ಘಟಕದ ನೀರು ಸಹ ಕುಡಿಯಲು ಯೋಗ್ಯವಾಗಿಲ್ಲ ಈ ಕುರಿತು ಹಲವಾರು ಬಾರಿ ಅಧಿಕಾರಿಗಳಿಗೆ ಮನವರಿಕೆ ಮಾಡಿಕೊಟ್ಟರು ಯಾವುದೇ ಪ್ರಯೋಜನವಾಗಿಲ್ಲ ಹಾಗಾಗಿ ಸ್ವತಂತ್ರ ದಿನಾಚರಣೆ ದಿನದಂದು ಗ್ರಾಮಸ್ಥರು ಕಪ್ಪು ಪಟ್ಟಿ ಧರಿಸಿ ಎರಡು ಪಂಚಾಯತಿಯ ಎಲ್ಲ ಮನೆಗಳ ಮೇಲೆ ಕಪ್ಪು ಬಾವುಟ ಹಾರಿಸಲು ತೀರ್ಮಾನಿಸಿದ್ದೇವೆ ಎಂದು ಅರ್ಕಾವತಿ ನದಿ ಪಾತ್ರದ ಕೆರೆಗಳ ಸಂರಕ್ಷಣಾ ವೇದಿಕೆಯ ಮುಖಂಡರಾದ ಸತೀಶ್ ತಿಳಿಸಿದರು.

    ದೊಡ್ಡ ತುಮಕೂರು ಕೆರೆ ಬಳಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು ಈ ವಿಚಾರವಾಗಿ ಅನೇಕ ಹೋರಾಟಗಳು ನಡೆಸಿದರು ಚುನಾವಣೆ ಬಹಿಷ್ಕರಿಸಿ, ಹಲವು ಹೋರಾಟ ಹಮ್ಮಿಕೊಂಡಿದ್ದೆವು ಹಿಂದಿನ ಸ್ವಾತಂತ್ರ್ಯ ದಿನಾಚರಣೆಯಂದು ಕಪ್ಪು ಬಾವುಟ ಹಾರಿಸುವ ಕಾರ್ಯಕ್ರಮ ಹಮ್ಮಿಕೊಂಡರು ಆ ದಿನಗಳಲ್ಲಿ ಜಿಲ್ಲಾಧಿಕಾರಿಗಳು ಬಂದು ನಿಮ್ಮ ಒತ್ತಾಯ ಸರಿ ಇದೆ ನೀವು ಕೇಳಿತ್ತಿರುವುದು ನ್ಯಾಯ ಇದೆ ನಮಗೆ ಸ್ವಲ್ಪ ಕಾಲಾವಕಾಶ ಕೊಡಿ ಸರಿಪಡಿಸಿ ಕೊಡುತ್ತೇವೆ ಎಂದು ಹೇಳಿರುವುದು ಇತಿಹಾಸ, ಆದರೆ ಇಲ್ಲಿವರೆಗೂ ಯಾವುದೇ ಕೆಲಸಗಳು ಆಗಿಲ್ಲ. ಗ್ರಾಮ ಪಂಚಾಯಿತಿಯ 2023ರಲ್ಲಿ ಎರಡು ಪಂಚಾಯಿತಿಯ 36 ಕೊಳವೆ ಬಾವಿಗಳಿಗೆ 34 ಕೊಳವೆ ಭಾವಿಗಳು ಉಪಯೋಗಿಸಲು ಯೋಗ್ಯವಾಗಿಲ್ಲ ಎಂಬ ವರದಿ ಬಂದಿದೆ. 2024ರಲಿ ಕೊಳವೆ ಬಾವಿಗಳಲ್ಲಿ ಕಪ್ಪು ನೀರು ಬರುತ್ತಿದೆ.

     

    ಒತ್ತಾಯಗಳೇನು…???

    *ಪ್ರತಿ ಮನೆಗಳಿಗೂ ಮಳೆ ಕೊಯ್ದು ಮಾಡಿಕೊಡಬೇಕು.

    *ದೊಡ್ಡಬಳ್ಳಾಪುರ ನಗರಸಭೆಯ ಒಳಚರಂಡಿ ನೀರನ್ನು ಮೂರನೇ ಹಂತದ ಶುದ್ದೀಕರಣ ಮಾಡಬೇಕು.

    * ಅವೈಜ್ಞಾನಿಕವಾಗಿ ನಿರ್ಮಾಣ ಮಾಡಿರುವ STP ಘಟಕವನ್ನು ಚಿಕ್ಕತುಮಕೂರು ಕೆರೆಯಿಂದ ಹೊರ ತೆಗೆದು ಕೆರೆಯನ್ನು ಕೆರೆಯಾಗಿ ಬಿಡಬೇಕು.

    *ಬೆರೆ ಪಂಚಾಯಿತಿ ಯಿಂದ ನೀರು ಕೊಡುತ್ತೇವೆ ಎಂದು ಬಾಯಿ ಮಾತಿನಲ್ಲಿ ಮತ್ತು ಕಡತಗಳಲ್ಲಿ ಮಾತ್ರ ಇದೆ ಅದನ್ನು ವಾಸ್ತವವಾಗಿ ಜಾರಿಗೆ ತರಬೇಕು.

    *ಕಾನೂನು ವಿರುದ್ಧವಾಗಿ ರಾಸಾಯನಿಕ ನೀರು ಬಿಡುವ ಕಾರ್ಖಾನೆಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು.

     

     

    ಹಿಂದೆ ಇದ್ದಂತಹ ಜಿಲ್ಲಾಧಿಕಾರಿಗಳು ಇನ್ನು ನಾಲ್ಕು ತಿಂಗಳಲ್ಲಿ STP ಘಟಕ ಶುರು ಮಾಡುತ್ತೇವೆ ಎಂದು ತಿಳಿಸಿದರು ಎರಡು ವರ್ಷ ಕಳೆದರೂ ಇನ್ನೂ ಶುರು ಮಾಡಿಲ್ಲ. ಅದಕ್ಕೆ ಬೇಕಾದಂತ ಜಮೀನು ಸಹ ತೆಗೆದುಕೊಂಡಿಲ್ಲ ಕೇಳಿದರೆ ಹಣ ಇಲ್ಲ ಎಂದು ಹೇಳುತ್ತಾರೆ ಬೆಂಗಳೂರಿನಲ್ಲಿ ಬೀದಿ ನಾಯಿಗಳಿಗೆ ಕೋಳಿ ಮಾಂಸ ಹಾಕಲು ಕೋಟಿಗಟ್ಟಲೆ ಹಣ ಖರ್ಚು ಮಾಡುತ್ತಿದ್ದಾರೆ ಒಂದು ನದಿ ಉಳಿಸಲು ಜನರ ಆರೋಗ್ಯ ಕಾಪಾಡಲು ಹಣ ಇಲ್ಲ ಎಂಬುವುದು ಯಾವ ನ್ಯಾಯ. ನಾಯಿಗಿಂತ ಕಡೆಯಾಗಿ ಹೋಯಿತೇ ನಮ್ಮ ಬಾಳು ಎಂದು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

    ಆದ್ದರಿಂದ ಸಂವಿಧಾನ ಉಳಿಸಲು. ಕಾನೂನು ರಕ್ಷಿಸಲು ಹಾಗೂ ಜನರ ಆರೋಗ್ಯದ ದೃಷ್ಟಿಯಿಂದ ಸ್ವತಂತ್ರ ದಿನಾಚರಣೆಯ ದಿನದಂದು ಎರಡು ಪಂಚಾಯತಿ ವ್ಯಾಪ್ತಿಯ ಎಲ್ಲಾ ಗ್ರಾಮಗಳ ಎಲ್ಲ ಮನೆಗಳ ಮೇಲೆ ಕಪ್ಪು ಬಾವುಟ ಆರಿಸುವುದಕ್ಕೆ ತೀರ್ಮಾನಿಸಿದ್ದೇವೆ ಇದಕ್ಕೆ ಸಂಬಂಧಪಟ್ಟಂತೆ ಜನಗಳ ಸಹಿ ಸಂಗ್ರಹ ಕೂಡ ಮಾಡಿ ಜಿಲ್ಲಾಧಿಕಾರಿಗಳಿಗೆ ಕೊಡಲಿದ್ದೇವೆ ಎಂದರು.

     

    ಖ್ಯಾತ ವೈದ್ಯರಾದ ಡಾ. ಎಚ್. ಅಂಜಿನಪ್ಪ ಮಾತನಾಡಿ ನಾನು ಇದೇ ಗ್ರಾಮದಲ್ಲಿ ಹುಟ್ಟಿ ಗ್ರಾಮದ ಕೆರೆಯಲ್ಲಿ ನೀರು ಕುಡಿದು ಬೆಳೆದಿದ್ದೇನೆ, ಆದರೆ ಇಂದು ನಮ್ಮ ಗ್ರಾಮದ ಕೆರೆಗೆ ಬಂದಿರುವ ಪರಿಸ್ಥಿತಿ ಹೇಳಲು ಅಸಾಧ್ಯವಾಗಿದೆ. ಅಧಿಕಾರಿಗಳು ಕೂಡಲೇ ಈ ಕುರಿತು ಕ್ರಮಕ್ಕೆ ಮುಂದಾಗಬೇಕಿದೆ ಈಗಾಗಲೇ ಹಲವಾರು ಬಾರಿ ಮನವಿ ಮಾಡಿದ್ದೇವೆ ಹೋರಾಟಗಳನ್ನು ಮಾಡಿದ್ದೇವೆ ಆದರೂ ಯಾವುದೇ ಪ್ರಯೋಜನವಾಗಿಲ್ಲ , ಹಾಗಾಗಿ ಸ್ವಾತಂತ್ರ ದಿನದಂದು ದೊಡ್ಡ ತುಮಕೂರು ಹಾಗೂ ಮಜರಾಹೊಸಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಎಲ್ಲಾ ಗ್ರಾಮಗಳ ಎಲ್ಲ ಮನೆಗಳ ಮೇಲೆ ಕಪ್ಪು ಬಾವುಟ ಪ್ರದರ್ಶಿಸಲು ಗ್ರಾಮಸ್ಥರು ನಿರ್ಧರಿಸಿದ್ದು ಈಗಲಾದರೂ ಅಧಿಕಾರಿಗಳು ಎಚ್ಚೆದ್ದು ಜಲ ಸಂಪನ್ಮೂಲ ಉಳಿಸಲು ಮುಂದಾಗಲಿ ಎಂದರು .

    ಪ್ರತಿ ಬಾರಿ ಗ್ರಾಮಸ್ಥರು ಹೋರಾಟ ಮಾಡುತ್ತಿವೆ ಎಂದು ಮುಂದೆ ಬರುವುದು ಅಧಿಕಾರಿ ವರ್ಗ ಗ್ರಾಮಗಳಿಗೆ ಭೇಟಿ ಕೊಟ್ಟು ಸಾಂತ್ವನ ಹೇಳುವ ಮೂಲಕ ಸಂಧಾನಕ್ಕೆ ಮುಂದಾಗುವುದು ಕೆಲ ಸಮಯದ ನಂತರ ಮತ್ತೆ ಹೋರಾಟ ಪ್ರಾರಂಭಗೊಳ್ಳುವುದು ಸರ್ವೇಸಾಮಾನ್ಯವಾಗಿದೆ . ಈ ಬಾರಿಯಾದರೂ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಂಡು ಗ್ರಾಮಸ್ಥರ ಜೀವ ಉಳಿಸುವ ಕಾರ್ಯ ಮಾಡಬೇಕಾಗಿದೆ ಎಂದು ಸ್ಥಳೀಯ ಗ್ರಾಮಸ್ಥರು ಅಭಿಪ್ರಾಯಪಟ್ಟಿದ್ದಾರೆ.

     

     

  • ಮಾಜಿ ಸಚಿವ ಶ್ರೀರಾಮುಲು ಅವರ ಹುಟ್ಟುಹಬ್ಬವನ್ನು ಕೇಕ್ ಕತ್ತರಿಸಿ ಅನ್ನದಾನ ಮಾಡುವ ಮೂಲಕ ಆಚರಿಸಿದ ಅಭಿಮಾನಿಗಳು

    ದೊಡ್ಡಬಳ್ಳಾಪುರ : ಕರ್ನಾಟಕ ಸರ್ಕಾರದ ಮಾಜಿ ಸಚಿವರಾದ ಶ್ರೀ ರಾಮುಲು ಅವರ 54ನೇ ಹುಟ್ಟು ಹಬ್ಬವನ್ನು ಶ್ರೀರಾಮುಲು ಅಭಿಮಾನಿ ಬಳಗದ ವತಿಯಿಂದ ಅದ್ದೂರಿಯಾಗಿ ಆಚರಿಸಲಾಯಿತು.

    ನಗರದ ದಿ. ಜಗದೀಶ್ ವೃತ್ತದಲ್ಲಿ ಶ್ರೀರಾಮುಲು ಅಭಿಮಾನಿ ಬಳಗದ ವತಿಯಿಂದ ತಮ್ಮ ನೆಚ್ಚಿನ ನಾಯಕನ ಹುಟ್ಟು ಹಬ್ಬದ ಅಂಗವಾಗಿ ಕೇಕ್ ಕತ್ತರಿಸಿ ಸಿಹಿ ಹಂಚಿಕೆ ಮಾಡಿ ನೆರೆದಿದ್ದ ಸಾರ್ವಜನಿಕರಿಗೆ ಅನ್ನದಾಸೋಹ ಮಾಡುವ ಮೂಲಕ ಮಾಜಿ ಸಚಿವರಾದ ಶ್ರೀರಾಮುಲು ಅವರಿಗೆ ಅಭಿಮಾನಿಗಳು ಹುಟ್ಟು ಹಬ್ಬದಂದು ಶುಭ ಹಾರೈಸಿದರು.

     

    ಈ ಸಂದರ್ಭದಲ್ಲಿ ಅಭಿಮಾನಿ ಕೃಷ್ಣಪ್ಪ (ಕಿಟ್ಟಿ )ಮಾತನಾಡಿ ಹಲವಾರು ವರ್ಷಗಳಿಂದ ನಾವು ತುಂಬಾ ಇಷ್ಟಪಡುವ ಶ್ರೀರಾಮುಲು ಅವರ ಹುಟ್ಟು ಹಬ್ಬವನ್ನು ತಾಲೂಕಿನಲ್ಲಿ ಆಚರಣೆ ಮಾಡಿಕೊಂಡು ಬರುತ್ತಿದ್ದೇವೆ. ರಾಜ್ಯಕ್ಕೆ ಅವರ ನಿರಂತರ ನಿಸ್ವಾರ್ಥ ಸೇವೆ ನಮ್ಮೆಲ್ಲರಿಗೂ ಆದರ್ಶ ಅವರ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಸಾರ್ವಜನಿಕರಿಗೆ ಅನ್ನದಾಸೋಹ ಮಾಡುವ ಮೂಲಕ ಆಚರಿಸಿದ್ದೇವೆ ಎಂದರು

     

    ರಾಜಕುಮಾರ್ ಮಾತನಾಡಿ ಕರ್ನಾಟಕ ಸರ್ಕಾರದ ಮಾಜಿ ಸಚಿವರಾದ ಶ್ರೀರಾಮುಲು ಅವರು ರಾಜ್ಯಕ್ಕೆ ನೀಡಿರುವ ಕೊಡುಗೆ ಅಪಾರ, ಅಲ್ಲದೆ ನಾಯಕ ಸಮುದಾಯಕ್ಕೆ ಅವರ ಕೊಡುಗೆ ಸಾಕಷ್ಟಿದೆ , ಸಮುದಾಯದ ಯಾವುದೇ ಕುಟುಂಬಕ್ಕೆ ಸಮಸ್ಯೆಯಾದ ಸಂದರ್ಭದಲ್ಲಿ ಅವರು ಸಹಕರಿಸುವ ರೀತಿ ವಿಶೇಷ, ಶ್ರೀರಾಮುಲು ಅವರ ಅಭಿಮಾನಿ ಎಂದು ಹೇಳಿಕೊಳ್ಳಲು ಹೆಮ್ಮೆ ಎನಿಸುತ್ತದೆ , ಅವರ ಹುಟ್ಟು ಹಬ್ಬದ ಅಂಗವಾಗಿ ಸಾಂಕೇತಿಕವಾಗಿ ಕಾರ್ಯಕ್ರಮ ಮಾಡಿದ್ದೇವೆ , ಅವರು ನೂರಾರು ವರ್ಷ ಸುಖ ಸಂತೋಷದೊಂದಿಗೆ ಬಾಳಲಿ ಎಂಬುದು ನಮ್ಮೆಲ್ಲರ ಹಾರೈಕೆ ಎಂದರು.

    ನಟರಾಜ್ ಮಾತನಾಡಿ ಇಂದು ನಮಗೆಲ್ಲಾ ವಿಶೇಷವಾದ ದಿನ ಕಾರಣ ನಮ್ಮೆಲ್ಲರ ಆರಾಧ್ಯರು ನೆಚ್ಚಿನ ನಾಯಕರು, ಕರ್ನಾಟಕ ಸರ್ಕಾರದ ಮಾಜಿ ಸಚಿವರಾದ ಶ್ರೀರಾಮುಲು ಅವರ ಜನ್ಮದಿನ , ಈ ದಿನವನ್ನು ದುಂದು ವೆಚ್ಚ ಸರ್ವರಿಗೂ ಮಾದರಿಯಾಗುವ ರೀತಿಯಲ್ಲಿ ಸಾರ್ವಜನಿಕರಿಗೆ ಅನ್ನದಾನ ಮಾಡುವ ಮೂಲಕ ಆಚರಿಸಿದ್ದೇವೆ, ಅವರಿಗೆ ಮತ್ತೊಮ್ಮೆ ಅಧಿಕಾರ ಸಿಗಲಿ ನಾಡಿಗೆ ಮತ್ತಷ್ಟು ಒಳಿತು ಮಾಡಲಿ ಎಂಬುದು ನಮ್ಮೆಲ್ಲರ ಹಾರೈಕೆ ಎಂದರು.

    ಈ ಸಂದರ್ಭದಲ್ಲಿ ದೊಡ್ಡಬಳ್ಳಾಪುರ ಶ್ರೀರಾಮುಲು ಅಭಿಮಾನಿ ಬಳಗದ ಮಂಜುನಾಥ್, ವೆಂಕಟೇಶ್, ರಾಜಕುಮಾರ್, ಕೃಷ್ಣಮೂರ್ತಿ, ಸಂಜೀವ್ ನಾಯಕ್ ಸೇರಿದಂತೆ ಹಲವು ಪ್ರಮುಖರು ಹಾಜರಿದ್ದರು.

  • ಕರೆಂಟ್ ಕಂಬಕ್ಕೆ ಡಿಕ್ಕಿ ಹೊಡೆದ ಲಾರಿ : ಅರ್ಧಕ್ಕೆ ಮುರಿದ ವಿದ್ಯುತ್ ಕಂಬ

    ದೊಡ್ಡಬಳ್ಳಾಪುರ : ಬೆಳ್ಳಂಬೆಳಗ್ಗೆ ಲಾರಿ ಕರೆಂಟ್ ಕಂಬಕ್ಕೆ ಗುದ್ದಿರುವ ಘಟನೆ ದೊಡ್ಡಬಳ್ಳಾಪುರ ನಗರದ ಬೆಸ್ಕಾಂ ಕಚೇರಿ ಮುಂಭಾಗ ನಡೆದಿದೆ.

    ಲಾರಿಯನ್ನು ಹಿಂದೆ ತೆಗೆದುಕೊಳ್ಳುವ ಸಂದರ್ಭದಲ್ಲಿ ಚಾಲಕನು ಕಂಬವನ್ನು ಗಮನಿಸದೆ ಏಕಾಏಕಿ ಹಿಂದೆ ಹೋದ ಕಾರಣ ಲಾರಿ ಕಂಬಕ್ಕೆ ಡಿಕ್ಕಿ ಹೊಡೆದಿದೆ . ಲಾರಿ ಹೊಡೆತಕ್ಕೆ ಕಂಬ ಸಂಪೂರ್ಣ ಮುರಿದಿದ್ದು , ವಿದ್ಯುತ್ ತಂತಿಗಳು ನೆಲಕ್ಕೆ ಉರುಳಿವೆ.

    ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನೆಡೆದಿದೆ.

     

  • ಜಿಲ್ಲಾಡಳಿತ ಭವನದ ಆವರಣದಲ್ಲೇ ನೇಣಿಗೆ ಶರಣಾದ ವ್ಯಕ್ತಿ : ಡೆತ್ ನೋಟ್ ಅಲ್ಲಿ ಸಂಸದ ಡಾ.ಕೆ ಸುಧಾಕರ್ ಹೆಸರನ್ನು ಉಲ್ಲೇಖ

    ಜಿಲ್ಲಾಡಳಿತ ಭವನದ ಆವರಣದಲ್ಲೇ ವ್ಯಕ್ತಿಯೊಬ್ಬರು ನೇಣು ಬಿಗಿದು ಜೀವ ತೆಗೆದುಕೊಂಡಿರುವ ಘಟನೆ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

     

    ಈ ಸ್ಥಿತಿಗೆ ಮೂವರು ಕಾರಣ ಎಂದು ಡೆತ್ ನೋಟ್ ಬರೆದಿಟ್ಟು ಸಂಸದ ಡಾ.ಕೆ ಸುಧಾಕರ್ ಹೆಸರನ್ನು ಉಲ್ಲೇಖ ಮಾಡಿ ಆರೋಪಿಸಿ ನೇಣಿಗೆ ಶರಣಾಗಿದ್ದಾರೆ. ಚಿಕ್ಕಬಳ್ಳಾಪುರ ನಗರದ ಭಾಪೂಜಿನಗರ ನಿವಾಸಿ ಬಾಬು (30) ಎನ್ನುವರು ನೇಣು ಬಿಗಿದುಕೊಂಡು ಜೀವ ಕಳೆದುಕೊಂಡ ವ್ಯಕ್ತಿಯಾಗಿದ್ದು . ಇವರು ಜಿಲ್ಲಾ ಪಂಚಾಯತಿಯ ಮುಖ್ಯ ಲೆಕ್ಕಾಧಿಕಾರಿಗೆ ಚಾಲಕನಾಗಿ ಕೆಲಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.

    ನಾನು ಈ ಸ್ಥಿತಿಗೆ ಬರಲು ಸಂಸದ ಡಾ.ಕೆ.ಸುಧಾಕರ್, ಲೆಕ್ಕ ಪರಿಶೋಧಕ ಮಂಜುನಾಥ್ ಹಾಗೂ ಎನ್​ಎನ್​ಆರ್​ ಟ್ರಾವೆಲ್ಸ್ ನಾಗೇಶ್ ಕಾರಣ ಅಂತ ಪತ್ರದಲ್ಲಿ ಉಲ್ಲೇಖ ಮಾಡಲಾಗಿದೆ. ಸರ್ಕಾರಿ ಕೆಲಸ ಕೊಡಿಸುವುದಾಗಿ ನಂಬಿಸಿ ಹಣ ಪಡೆದು ಮೋಸ ಮಾಡಿದ್ದಾರೆ ಅಂತ ಆರೋಪ ಮಾಡಲಾಗಿದೆ.

     

    ಸಂಸದ ಡಾ.ಕೆ ಸುಧಾಕರ್, ಲೆಕ್ಕ ಪರಿಶೋಧಕ ಮಂಜುನಾಥ್ ಹಾಗೂ ನಾಗೇಶ್​ ಅವರ ಮೇಲೆ ವಂಚನೆ ಆರೋಪ ಮಾಡಲಾಗಿದೆ.

  • ದೊಡ್ಡಬಳ್ಳಾಪುರ ಸಾರ್ವಜನಿಕ ಆಸ್ಪತ್ರೆ : ತಾಯಿ ಮಗು ಸಾ*ವು : ಪ್ರಕರಣ ಕುರಿತು ಜಿಲ್ಲಾ ವೈದ್ಯಾಧಿಕಾರಿಗಳು ಹೇಳಿದ್ದೇನು…???

    ದೊಡ್ಡಬಳ್ಳಾಪುರ: ತಾಲೂಕಿನ ಸಾರ್ವಜನಿಕ ಆಸ್ಪತ್ರೆಯಲ್ಲಿ  ಆಗಸ್ಟ್ 6 ರಂದು  ಗರ್ಭಿಣಿ ಸುಷ್ಮಾ ಮಹೇಶ್ ( 24ವರ್ಷ)  ಸಾವನ್ನಪ್ಪಿದ್ದು ಈ ಘಟನೆ ಸಂಬಂಧ   ದೊಡ್ಡಬಳ್ಳಾಪುರ ಸಾರ್ವಜನಿಕ ಆಸ್ಪತ್ರೆಗೆ ಜಿಲ್ಲಾ ವೈದ್ಯಾಧಿಕಾರಿ  ಕೃಷ್ಣ ಲಕ್ಕಾ ರೆಡ್ಡಿ ಅವರು ಭೇಟಿ ನೀಡಿ ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ್ದಾರೆ.

     

    ಈ ಕುರಿತು ಮಾತನಾಡಿರುವ ಅವರು  37 ವಾರಗಳ ಗರ್ಭಿಣಿ ಸುಷ್ಮಾ ರವರು ಆಗಸ್ಟ್ 5ರಂದು  ಆಸ್ಪತ್ರೆಗೆ ಬಂದಿದ್ದು, ಆಸ್ಪತ್ರೆಗೆ ಬಂದ ಸಂದರ್ಭದಲ್ಲಿ ವೈದ್ಯರು ಪರೀಕ್ಷೆ ನಡೆಸಿದಾಗ ಸುಷ್ಮಾ ರವರ ರಕ್ತದೊತ್ತಡ ( BP) 140 / 90 ಇದ್ದು ವೈದ್ಯರು ಚಿಕಿತ್ಸೆ ನೀಡಿ ಸ್ವಲ್ಪ ಸಮಯದ ನಂತರ ಮತ್ತೆ ಪರೀಕ್ಷೆ ನಡೆಸಿದಾಗ 120/80 ಆಗಿ ಬಿ ಪಿ ನಾರ್ಮಲ್ ಬಂದಿದ್ದು ಎಸ್ಪೆಕ್ಟೆಡ್ ಡೇಟ್ ಆಫ್ ಡೆಲಿವರಿ ( EDD) ಗೆ ಇನ್ನು ಸಮಯವಿದ್ದ ಕಾರಣ ಗರ್ಭಿಣಿ ಸುಷ್ಮಾ ರನ್ನು ಮನೆಗೆ ಕಳಿಸಲಾಗಿದೆ ಎಂದು ತಿಳಿದ್ದಾರೆ.

     

    ಯಾವುದೇ ತಾಯಿ ಮತ್ತು ಮಗು ಮರಣ ಹೊಂದಿದ ಸಂದರ್ಭದಲ್ಲಿ ಮೆಟರ್ನಲ್ ಡೆತ್ ಎಂದು ಪ್ರಕರಣ ದಾಖಲಿಸಿಕೊಂಡು ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸಂಪೂರ್ಣ ತನಿಖೆ ಆಗುತ್ತದೆ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ ಈ ಪ್ರಕರಣವನ್ನು ಹಾಗೆಯೇ ತನಿಖೆಗೆ ಒಳಪಡಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.

    ತಾಲ್ಲೂಕಿನ ಸಾರ್ವಜನಿಕ ಆಸ್ಪತ್ರೆಯಲ್ಲಿ 13 ವೈದ್ಯರಿದ್ದು ದಿನದ 24 ಗಂಟೆಗಳು ಕೂಡ ವೈದ್ಯರು ಲಭ್ಯವಿರುತ್ತಾರೆ. ಸಮಾಜಕ್ಕೆ ತಪ್ಪು ಸಂದೇಶ ಹೋಗುವುದು ಬೇಡ ಸದಾ ವೈದ್ಯರು ಕಾರ್ಯಪ್ರವೃತ್ತರಾಗಿರುತ್ತಾರೆ. ಇಂದು ಮುಂಜಾನೆ ಮೃತ ಸುಷ್ಮಾ ರವರು ಆಸ್ಪತ್ರೆಗೆ ಬಂದಾಗ ಡಾ. ಶರ್ಮಿಳಾ ಹೆಗ್ಗಡೆ ಅವರು ತಪಾಸಣೆ ನಡೆಸಿದ್ದಾರೆ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯರು ಇರುವುದಿಲ್ಲ ಎನ್ನುವುದು ಕೇವಲ ಆರೋಪವಷ್ಟೇ ಈ ಕುರಿತು ತನಿಖೆ ನಡೆಸಲಾಗುವುದು ಎಂದಿದ್ದಾರೆ.

     

    ವೈದ್ಯರ ನಿರ್ಲಕ್ಷ್ಯದಿಂದಲೇ ತಾಯಿ ಮತ್ತು ಮಗು ಸಾವಾಗಿದೆ ಎನ್ನುವ ಆರೋಪವಿದೆ ಈ ಕುರಿತು ಸೂಕ್ತ ತನಿಖೆ ನಡೆಸಲಾಗುವುದು. ತಾಯಿ ಮತ್ತು ಮಗು ಆಸ್ಪತ್ರೆಗೆ ಬರುವ ಮುಂಚೆಯೇ ಸಾವನ್ನಪ್ಪಿದ್ದರು (ಬ್ರಾಂಡೆಡ್) ಎನ್ನುವ ಮಾಹಿತಿ ಲಭ್ಯವಾಗಿದೆ ಆದರೂ ಈ ಕುರಿತು ಸಂಪೂರ್ಣ ರೀತಿಯಲ್ಲಿ ಪಾರದರ್ಶಕವಾಗಿ ತರೀಕೆರಳಿಸಲಾಗುವುದು ತಪ್ಪಿತಸ್ಥ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.

     

     

     

     

     

     

  • ಮೂಲಭೂತ ಸೌಕರ್ಯಗಳಿಂದ ವಂಚನೆಗೆ ಒಳಗಾದ ರೋಜಿಪುರ ಒಂದನೇ ಮುಖ್ಯರಸ್ತೆ : ಈ ಪ್ರದೇಶ ಯಾರಿಗೆ ಒಳಪಡುತ್ತದೆ ಎಂಬುದೇ ದೊಡ್ಡ ಯಕ್ಷಪ್ರಶ್ನೆ…??

    Doddaballapura : ರೋಜಿಪುರ ಒಂದನೇ ಮುಖ್ಯರಸ್ತೆಯ ಮೂಲಭೂತ ಸೌಕರ್ಯಗಳನ್ನು ನೋಡಿಕೊಳ್ಳುವವರಿಲ್ಲದಂತಾಗಿದೆ, ರಸ್ತೆ,ಚರಂಡಿ, ದಾರಿದೀಪ, ಸ್ವಚ್ಛತೆ ಇಲ್ಲದೆ ಜನ ಸ್ಥಳೀಯ ಜನಪ್ರತಿನಿಧಿಗಳು ಯಾರಿಗೂ ತಿಳಿಯದೆ ಪರದಾಡುವ ಪರಿಸ್ಥಿತಿ ಎದುರಾಗಿದೆ.

    ಹೌದು ನಗರದ ರೋಜಿಪುರ ವಾರ್ಡ್ ನ 1ನೇ ಮುಖ್ಯರಸ್ತೆಯಲ್ಲಿ ಸುಮಾರು 30ಕ್ಕೂ ಅಧಿಕ ಕುಟುಂಬಗಳು ಜೀವನ ಸಾಗಿಸುತ್ತಿದ್ದು, ಮತ ಪಡೆಯಲು ಬಂದ ಜನಪ್ರತಿನಿಧಿಗಳು ಸಮಸ್ಯೆ ಬಗೆಹರಿಸಲು ಬರಲಿಲ್ಲ ನಮಗೆ ಸರಿಯಾದ ಚರಂಡಿ ವ್ಯವಸ್ಥೆ ಇಲ್ಲ ಮಳೆ ಬಂದಾಗಲಂತೂ ಚರಂಡಿ ಮಿಶ್ರಿತ ಕಲುಷಿತ ನೀರು ಮನೆಗೆ ನುಗ್ಗುತ್ತವೆ ನಮ್ಮ ಸಮಸ್ಯೆ ಯಾರ ಬಳಿ ಹೇಳಿಕೊಳ್ಳುವುದು ಎಂದು ತಿಳಿಯುತ್ತಿಲ್ಲ, ನಮ್ಮ ಸಮಸ್ಯೆ ಹೇಳಿಕೊಂಡರೆ ರೋಜಿಪುರ ವಾರ್ಡ್ ನ ನಗರಸಭೆ ಸದಸ್ಯರು ಈ ಪ್ರದೇಶ ನನ್ನ ಭಾಗಕ್ಕೆ ಬರುವುದಿಲ್ಲ ಎನ್ನುತ್ತಾರೆ ಅಂತೆಯೇ ವಿನಾಯಕನಗರ ವಾರ್ಡಿನ ನಗರಸಭಾ ಸದಸ್ಯರು ಈ ಪ್ರದೇಶದ ಭಾಗಕ್ಕೆ ಬರುವುದಿಲ್ಲ ಎನ್ನುತ್ತಾರೆ ನಮಗೆ ಜನಪ್ರತಿನಿಧಿ ಯಾರು ಎಂಬುದು ತಿಳಿಯುತ್ತಿಲ್ಲ ಎಂದು ಆರೋಪಿಸುತ್ತಿದ್ದಾರೆ.

    ನಗರದ ಮಧ್ಯ ಭಾಗದಲ್ಲಿರುವ ರೋಜಿಪುರ ಹಾಗೂ ವಿನಾಯಕ ನಗರ ಗಡಿಯಲ್ಲಿ ಬರುವ ಈ 1ನೇ ಮುಖ್ಯರಸ್ತೆಯು ಎರಡು ಭಾಗಗಳಿಗೆ ಸೇರದೆ ಅನಾಥವಾಗಿದೆ ಎಂದರೆ ತಪ್ಪಾಗಲಾರದು , ನಗರಸಭೆಯ ಅಧಿಕಾರಿಗಳು ನಮ್ಮ ನಗರದಲ್ಲಿ ಯಾವುದೇ ಸಮಸ್ಯೆ ಇಲ್ಲ ಎಂದು ಹೇಳುತ್ತಾರೆ ಆದರೆ ಒಮ್ಮೆ ಈ ಪ್ರದೇಶಕ್ಕೆ ಬಂದು ನೋಡಲಿ ಸರಿಯಾದ ಚರಂಡಿ ವ್ಯವಸ್ಥೆ ಇಲ್ಲ, ದಾರಿ ದೀಪಗಳಿಲ್ಲ, ರಸ್ತೆಯಂತೂ ಮೊದಲೇ ಸರಿ ಇಲ್ಲ ಎನ್ನುತ್ತಾರೆ ಸ್ಥಳೀಯ ಸಾರ್ವಜನಿಕರು.

     

    ನಗರಸಭೆ ವ್ಯಾಪ್ತಿಯ ವಿನಾಯಕನಗರ ಹಾಗೂ ರೋಜಿಪುರ ವಾರ್ಡ್ ಗಳ ಜನಪ್ರತಿನಿಧಿಗಳು ಒಮ್ಮೆ ಒಮ್ಮತಕ್ಕೆ ಬಂದು ಯಾರಾದರೂ ಸರಿ ನಮ್ಮ ಸಮಸ್ಯೆ ಬಗೆಹರಿಸಲಿ ಎಂಬುದೇ ಸ್ಥಳೀಯರ ಆಶಯ.

    ವಿನಾಯಕ ನಗರ ವಾರ್ಡ್ನ ನಗರಸಭಾ ಸದಸ್ಯರಾದ ನಾಗರತ್ನಮ್ಮ ಕೃಷ್ಣಮೂರ್ತಿ ಈ ಕುರಿತು ಪ್ರತಿಕ್ರಿಯೆ ನೀಡಿ ಸದರಿ ಪ್ರದೇಶವು ನಮಗೆ ಬರುವುದಿಲ್ಲ ರೋಜಿಪುರ ಒಂದನೇ ಮುಖ್ಯರಸ್ತೆ ಎಂದು ಬೋರ್ಡ್ ಇರುವ ಪ್ರದೇಶವು ರೋಜಿಪುರ ವಾರ್ಡ್ ಗೆ ಸೇರಿದ್ದು , ನಾವು ನಗರಸಭೆ ಅಧಿಕಾರಿಗಳು ಕೊಟ್ಟಿರುವಂತಹ ನಕ್ಷೆಯನ್ನು ಆಧರಿಸಿ ಸೇವಾ ಸೌಲಭ್ಯಗಳನ್ನು ಒದಗಿಸುತ್ತೇವೆ ನಮಗೆ ನೀಡಿರುವ ನಕ್ಷೆ ಪ್ರಕಾರ ಸದರಿ ಪ್ರದೇಶವು ನಮ್ಮ ವ್ಯಾಪ್ತಿಗೆ ಒಳಪಡುವುದಿಲ್ಲ , ಆ ಪ್ರದೇಶ ವಾರ್ಡ್ ನಂಬರ್ 26 ರೋಜಿಪುರಕ್ಕೆ ಸೇರಿದ್ದು ಎಂದಿದ್ದಾರೆ.

     

    ನಗರಸಭಾ ಅಧಿಕಾರಿಗಳು , ಪೌರಾಯುಕ್ತರು, ನಗರಸಭಾ ಸದಸ್ಯರು ಯಾರಾದರೂ ಸರಿ ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ ಶೀಘ್ರವಾಗಿ ಸಾರ್ವಜನಿಕರಿಗೆ ಮೂಲಭೂತ ಸೌಕರ್ಯ ಒದಗಿಸಲಿ ಎಂಬುವುದೇ (ವಿಜಯ ಮಿತ್ರ )ನಮ್ಮ ಆಶಯ .

  • ಶೀಘ್ರ ಆಂತರಿಕ ಸಲಹಾ ಸಮಿತಿಯನ್ನು ರಚಿಸಿ : ಆಸ್ಪತ್ರೆಯ ಲೋಪ ದೋಷಗಳನ್ನು ಸರಿಪಡಿಸಿಕೊಳ್ಳಿ – ಚಿದಾನಂದ್

    ದೊಡ್ಡಬಳ್ಳಾಪುರ : ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಗರ್ಭಿಣಿ ಸ್ತ್ರೀಯರಿಗೆ ಸೂಕ್ತ ಚಿಕಿತ್ಸೆ ಸಿಗುತ್ತಿಲ್ಲ, ಆಸ್ಪತ್ರೆಯಲ್ಲಿ ವೈದ್ಯರು ಸಿಬ್ಬಂದಿಗಳ ಕೊರತೆಯ ಜೊತೆಗೆ ಸೂಕ್ತ ಸೌಲಭ್ಯಗಳು ಸಿಗುತ್ತಿಲ್ಲ ಈ ಕೂಡಲೇ ಲೋಪ ದೋಷಗಳು ಸರಿಪಡಿಸಲು ಆಂತರಿಕ ಸಲಹಾ ಸಮಿತಿಯನ್ನು ರಚಿಸಿ ಸಮಸ್ಯೆಗಳನ್ನು ಇತ್ಯರ್ಥಪಡಿಸಿ ಎಂದು ಒತ್ತಾಯಿಸಿ ಮೂಲಕ ಯುವ ಸಂಚಲನ ತಂಡದ ಪ್ರಮುಖರು ಜಿಲ್ಲಾ ವೈದ್ಯಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

     

    ಆಗಸ್ಟ್ 6 ರಂದು ವೈದ್ಯರ ನಿರ್ಲಕ್ಷದಿಂದ ತಾಯಿ ಮತ್ತು ಮಗು ಸಾವನಪ್ಪಿದ್ದಾರೆ ಎಂಬ ಸುದ್ದಿ ಹಿನ್ನೆಲೆಯಲ್ಲಿ ಯುವ ಸಂಚಲನ ತಂಡವು ಜಿಲ್ಲಾ ವೈದ್ಯಾಧಿಕಾರಿ ಭೇಟಿ ಮಾಡಿ ಹಲವು ಆರೋಪಗಳುಳ್ಳ ಮನವಿ ಪತ್ರವನ್ನು ಸಲ್ಲಿಸಿದೆ .

     

    ಈ ಕುರಿತು ಯುವ ಸಂಚಲನ ತಂಡದ ಪ್ರಮುಖರಾದ ಚಿದಾನಂದಮೂರ್ತಿ ವಿಜಯ ಮಿತ್ರ ವೆಬ್ ನ್ಯೂಸ್ ಜೊತೆಗೆ ಮಾತನಾಡಿ ನಮ್ಮ ತಾಲ್ಲೂಕಿನ ಸಾರ್ವಜನಿಕ ಆಸ್ಪತ್ರೆಗೆ ಹೆರಿಗೆಗಾಗಿ ಬರುವ ಗರ್ಭಿಣಿ ಸ್ತ್ರೀಯರಿಗೆ ಆತ್ಮಸ್ಥೈರ್ಯ ತುಂಬಿ ಹೆರಿಗೆ ಮಾಡಬೇಕಾದ ವೈದ್ಯರು, ಸಿಬ್ಬಂದಿ ವರ್ಗ ಆಸ್ಪತ್ರೆಯಲ್ಲಿ ಸೂಕ್ತ ಶಸ್ತ್ರಚಿಕಿತ್ಸೆಗಳ ಲಭ್ಯವಿಲ್ಲ , ಸ್ಕ್ಯಾನಿಂಗ್ ಲಭ್ಯವಿಲ್ಲ, ಔಷಧಿಗಳು ಲಭ್ಯವಿಲ್ಲ, ಎಂದು ಹೇಳುವ ಮೂಲಕ ಸಾಮಾನ್ಯ ಚಿಕಿತ್ಸೆಗಳನ್ನು ನಿರ್ವಹಿಸುವಲ್ಲಿ ನಿರ್ಲಕ್ಷ್ಯ ವಹಿಸುತ್ತಿದ್ದಾರೆ, ಚಿಕಿತ್ಸೆ ನೀಡಬೇಕಾದ ವೈದ್ಯರೇ ಭ್ರಷ್ಟಾಚಾರಕ್ಕೆ ಒಳಗಾಗಿ ರೋಗಿಗಳ ಸಂಬಂಧಿಕರ ಬಳಿ ಇಲ್ಲಸಲ್ಲದ ನಾನಾ ಕಾರಣಗಳನ್ನು ಹೇಳಿ ಪರೋಕ್ಷವಾಗಿ ಹತ್ತು ಇಪ್ಪತ್ತು ಸಾವಿರ ರೂಪಾಯಿಗಳ ವರೆಗೆ ಹಣ ಕೇಳಿ ಪಡೆಯುವ ಅಭ್ಯಾಸವಾಗಿದೆ. ನಾರ್ಮಲ್ ಹೆರಿಗೆ ಒಂದು ಮೊತ್ತ, ಎಷ್ಟೋ ಚಿಕಿತ್ಸೆಗೆ ಒಂದು ಮೊತ್ತ ಎಂಬ ಮಾತು ಸಾಮಾಜಿಕ ವಲಯಗಳಲ್ಲಿ ಗಟ್ಟಿಯಾಗಿ ಕೇಳಿ ಬರುತ್ತಿದೆ ಎಂದು ಆರೋಪಿಸಿದ್ದಾರೆ.

     

    ಅಲ್ಲದೆ ಬಾಣಂತಿಯರಿಗೆ ಕುಡಿಯುವ ಬಿಸಿನೀರು ವ್ಯವಸ್ಥೆ ಇಲ್ಲದಿರುವುದು ಒಂದು ಸಮಸ್ಯೆಯಾದರೆ, ಹೆರಿಗೆ ಬರುವ ಗರ್ಭಿಣಿಯರಿಗೆ ಧೈರ್ಯ ತುಂಬಿಸಿ ನಾರ್ಮಲ್ ಹೆರಿಗೆ ಮಾಡುವ ಬದಲಾಗಿ ಹೆಚ್ಚಾಗಿ ಶಸ್ತ್ರಚಿಕಿತ್ಸೆ ಮಾಡುತ್ತಿರುವುದರಿಂದ ಮಹಿಳೆಯರ ಆರೋಗ್ಯದ ಮೇಲೂ ಕೆಟ್ಟ ಪರಿಣಾಮ ಬೀರುತ್ತಿದೆ. ಇವು ಪ್ರಸೂತಿಯಲ್ಲಿ ವಿಭಾಗದ ಕೆಲವು ಪ್ರಮುಖ ಕಾರ್ಯ ಸಮಸ್ಯೆಗಳಾಗಿದ್ದು ಕೂಡಲೇ ಆಂತರಿಕ ಸಲಹಾ ಸಮಿತಿಯನ್ನು ರಚಿಸುವ ಮೂಲಕ ಆಸ್ಪತ್ರೆ ಸಮಸ್ಯೆಯನ್ನು ಬಗೆಹರಿಸುವಂತೆ ಮನವಿ ಮಾಡಿದ್ದೇವೆ ಎಂದು ತಿಳಿಸಿದ್ದಾರೆ.

  • ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರ ನಿರ್ಲಕ್ಷ್ಯ ಆರೋಪ : ಆಸ್ಪತ್ರೆಗೆ ಬಂದ ಗರ್ಭಿಣಿ ಸಾವು : ಮುಗಿಲುಮಟ್ಟಿದ ಕುಟುಂಬಸ್ಥರ ಆಕ್ರಂದನ

    ತುಂಬು ಗರ್ಭಿಣಿ ಸುಷ್ಮಾ ಮಹೇಶ್ ( 24ವರ್ಷ) ವೈದ್ಯರ ನಿರ್ಲಕ್ಷದಿಂದಾಗಿ ಸಾವನ್ನಪ್ಪಿರುವ ಘಟನೆ ದೊಡ್ಡಬಳ್ಳಾಪುರ ಸಾರ್ವಜನಿಕ ಆಸ್ಪತ್ರೆಯ ಸಂಭವಿಸಿದೆ.

     

    ಸಾರ್ವಜನಿಕ ಆಸ್ಪತ್ರೆ ವೈದ್ಯರ ನಿರ್ಲಕ್ಷದಿಂದಾಗಿ ಗರ್ಭಿಣಿ ಸುಷ್ಮಾ ಮಹೇಶ್ (24ವರ್ಷ) ಸಾವನಪ್ಪಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ .

     

    ಇನ್ನೇನು ಮನೆಗೆ ಹೊಸ ಅತಿಥಿ ಬರುತ್ತಾನೆ ಎಂದು ಕಾಯುತ್ತಿದ್ದ ಕುಟುಂಬಸ್ಥರು ತಾಯಿ ಮಗು ಇಬ್ಬರನ್ನು ಕಳೆದು ಕೊಂಡಿದ್ದಾರೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಆಸ್ಪತ್ರೆ ವೈದ್ಯರಿಗೆ ಇಡೀ ಶಾಪ ಹಾಕುತ್ತಿದ್ದಾರೆ.

     

    ನೆನ್ನೆ ಆಸ್ಪತ್ರೆಗೆ ಬಂದಿದ್ದ ಸುಷ್ಮಾ ಮಹೇಶ್ರನ್ನು ಕೇವಲ ಒಂದು ಬಿಪಿ ಮಾತ್ರೆ ಕೊಟ್ಟು ಏನು ಆಗುವುದಿಲ್ಲ ಮನೆಗೆ ಹೋಗಿ ಎಂದು ಕಳಿಸಿದ್ದರು ನನಗೆ ನೋವು ತಡೆಯಲಾಗುತ್ತಿಲ್ಲ ನನ್ನನ್ನು ಅಡ್ಮಿಟ್ ಮಾಡಿಕೊಳ್ಳಿ ಎಂದು ಬೇಡಿಕೊಂಡರು ವೈದ್ಯರು ಏನು ಆಗುವುದಿಲ್ಲ ನೋವು ತಡೆಯಬೇಕು ಎಂದು ಹೇಳಿ ಕಳಿಸಿದ್ದರು, ಇಂದು ಮುಂಜಾನೆ ಸಮಯದಲ್ಲಿ ನೋವು ತಾಳಲಾರದೆ ಸುಷ್ಮಾ ರನ್ನು ನಾವು ಆಸ್ಪತ್ರೆಗೆ ಕರೆತಂದಾಗ ಯಾವುದೇ ವೈದ್ಯರು ಇರಲಿಲ್ಲ ಸರಿಯಾದ ಚಿಕಿತ್ಸೆ ನೀಡಿದ್ದರೆ ಸುಷ್ಮಾ ಮತ್ತು ಮಗು ಜೀವಂತವಾಗಿರುತ್ತಿದ್ದರು ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

     

    ಆಶಾ ಕಾರ್ಯಕರ್ತೆ ಪ್ರೇಮ ಕುಮಾರಿ ಮಾತನಾಡಿ ನೆನ್ನೆ ಆಸ್ಪತ್ರೆಗೆ ಬಂದಾಗ ಬಿ ಪಿ ಹೆಚ್ಚಾಗಿತ್ತು ಆಗ ವೈದ್ಯರು ಬಿಪಿ ಮಾತ್ರೆ ಕೊಟ್ಟು ಪುಷ್ಪರನ್ನು ಮನೆಗೆ ಕಳಿಸಿಕೊಟ್ಟಿದ್ದರು . ಇಂದು ಮುಂಜಾನೆ ಈ ಅವಘಡ ಸಂಭಾವಿಸಿದೆ ಎಂದಿದ್ದಾರೆ

     

    ಮೃತರ ಸಹೋದರ ಲೋಕೇಶ್ ಮಾತನಾಡಿ ನಿನ್ನೆ ನಾವು ಆಸ್ಪತ್ರೆಗೆ ಬಂದಾಗ ವೈದ್ಯರ ಬಳಿ ನನ್ನ ತಂಗಿಯನ್ನು ಅಡ್ಮಿಟ್ ಮಾಡಿಕೊಳ್ಳುವಂತೆ ಕೇಳಿಕೊಂಡಿದ್ದೆವು. ಆದರೆ ಏನು ಆಗುವುದಿಲ್ಲ ನೋವು ತಡೆಯಬೇಕು ಎಂದು ಹೇಳಿ ಮನೆಗೆ ಮರಳಿ ಕಳಿಸಿದ್ದರು ಇಲ್ಲಿ ಬರುವ ರೋಗಿಗಳಿಗೆ ವೈದ್ಯರಿಂದ ಸರಿಯಾದ ಸ್ಪಂದನೆ ಸಿಗುವುದಿಲ್ಲ , ವೈದ್ಯರ ನಿರ್ಲಕ್ಷದಿಂದಾಗಿ ಇಂದು ನನ್ನ ತಂಗಿ ಮತ್ತು ಮಗು ಸಾವನ್ನಪ್ಪಿದೆ , ನಿರ್ಲಕ್ಷ ತೋರುವ ವೈದ್ಯರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕಿದೆ ಎಂದು ಆಗ್ರಹಿಸಿದರು.

     

     

    ಸಮಾಜ ಸೇವಕರಾದ ಪುಟ್ಟರಾಜು ಗರ್ಭಿಣಿ ಸಾವನ್ನಪ್ಪಿ ಸುಮಾರು ಗಂಟೆಗಳು ಕಳೆದರೂ ಕೂಡ ಇದುವರೆಗೂ ಯಾರೊಬ್ಬ ವೈದ್ಯರು ಕೂಡ ಈ ಕುರಿತು ಮಾತನಾಡಲು ಬಂದಿಲ್ಲ , ಕುಟುಂಬಸ್ಥರು ಆಸ್ಪತ್ರೆ ಮುಂಭಾಗ ಗೋಳಾಡುತ್ತಿದ್ದರು ಆಸ್ಪತ್ರೆಯ ಯಾವುದೇ ಸಿಬ್ಬಂದಿ ಸ್ಪಂದಿಸುತ್ತಿಲ್ಲ , ಇದು ಹೆಸರಿಗಷ್ಟೇ ಸಾರ್ವಜನಿಕ ಆಸ್ಪತ್ರೆ , ಈ ರೀತಿಯ ವೈದ್ಯರ ನಿರ್ಲಕ್ಷದಿಂದಾಗಿಯೇ  ಸಾರ್ವಜನಿಕರು ಖಾಸಗಿ ಆಸ್ಪತ್ರೆ ಕಡೆ ಮುಖ ಮಾಡುತ್ತಿದ್ದಾರೆ. ಸರ್ಕಾರಿ ಆಸ್ಪತ್ರೆಯಲ್ಲಿ ಹೀಗಾದರೆ ಬಡ ರೋಗಿಗಳು ಎಲ್ಲಿಗೆ ಹೋಗಬೇಕು ಎಂದು ಪ್ರಶ್ನಿಸಿದ್ದಾರೆ.

     

    ಈಗಾಗಲೇ ತಾಲೂಕಿನ ತಾಯಿ ಮತ್ತು ಮಗು ಆಸ್ಪತ್ರೆಯನ್ನು ಜಿಲ್ಲಾ ಆಸ್ಪತ್ರೆ ಮಾಡಬೇಕೆಂಬ ಯೋಜನೆ ರೂಪಿಸಲಾಗಿದೆ ಎಂಬ ಮಾಹಿತಿ ಸಾರ್ವಜನಿಕ ವಲಯದಲ್ಲಿ ಹರಿದಾಡುತ್ತಿದ್ದು, ಇರುವ ತಾಯಿ ಮತ್ತು ಮಗು ಆಸ್ಪತ್ರೆಗೆ ವೈದ್ಯರ ಹಾಗೂ ಸಿಬ್ಬಂದಿಗಳ ಕೊರತೆ ಹೆಚ್ಚಾಗಿದೆ ಇಂತಹ ಸಂದರ್ಭದಲ್ಲಿ ಸಾರ್ವಜನಿಕ ಆಸ್ಪತ್ರೆಯನ್ನು ಜಿಲ್ಲಾ ಆಸ್ಪತ್ರೆ ಮಾಡಿದರೆ ಅಲ್ಪ ಸಿಬ್ಬಂದಿ ವರ್ಗವನ್ನು ಹೇಗೆ ನಿಭಾಯಿಸುತ್ತಾರೆ ಎಂದು ಸಾರ್ವಜನಿಕರು ಪ್ರಶ್ನಿಸಿದ್ದಾರೆ.

     

     

  • ಯುವ ನಟ ಸಂತೋಷ್ ಬಾಲರಾಜ್ (34) ನಿಧನ

    ಸ್ಯಾಂಡಲ್‌ವುಡ್‌ನ ಗಣಪ, ಕರಿಯ 2 ಖ್ಯಾತಿಯ ಯುವ ನಟ ಸಂತೋಷ್ ಬಾಲರಾಜ್ (34) ನಿಧನ ಹೊಂದಿದ್ದಾರೆ.

    ಹಿರಿಯ ನಿರ್ಮಾಪಕ ಆನೇಕಲ್ ಬಾಲರಾಜ್ ಅವರ ಪುತ್ರ ಸಂತೋಷ್ ಬಾಲರಾಜ್ ಕಳೆದ ತಿಂಗಳು ಜಾಂಡೀಸ್‌ನಿಂದಾಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದರು. ಮತ್ತೆ ಸಂತೋಷ್ ಅವರು ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿ, ತೀವ್ರ ನಿಗಾ ಘಟಕದಲ್ಲಿದ್ದರು.

     

    ಜಾಂಡೀಸ್ ಖಾಯಿಲೆಯಿಂದ ಬಳಲುತ್ತಿದ್ದರು ಗಂಭೀರ ಸ್ಥಿತಿಯಲ್ಲಿ ತಲುಪ್ಪಿದ್ದ ಅವರು ಕುಮಾರಸ್ವಾಮಿ ಲೇಔಟ್‌ನ ಸಾಗರ್ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.ಆ. 5ರಂದು (ಇಂದು)ಚಿಕೆತ್ಸೆ ಫಲಕಾರಿಯಾಗದೇ ಬೆಳಗ್ಗೆ 9.30ರ ಸುಮಾರಿಗೆ ಕುಮಾರಸ್ವಾಮಿ ಲೇಔಟ್‌ನ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

    ಕರಿಯಾ-2, ಕೆಂಪ, ಗಣಪ, ಬರ್ಕ್ಲಿ ಹಾಗೂ ಸತ್ಯ ಸಿನಿಮಾಗಳಲ್ಲಿ ಸಂತೋಷ್ ಬಾಲರಾಜ್ ನಾಯಕನಾಗಿ ನಟಿಸಿದ್ದರು.