Blog

  • “ಪೂರ್ವಾರಾಧನೆ” “ಮಧ್ಯಾರಾಧನೆ” “ಉತ್ತರರಾಧನೆ” ಮೂಲಕ ನೆಡೆಯಲಿದೆ “354” ಶ್ರೀಗುರುರಾಘವೇಂದ್ರ ಸ್ವಾಮಿಗಳ ಆರಾಧನಾ ಮಹೋತ್ಸವ – ಜಿ. ಗುರುರಾಜಚಾರ್

    ದೊಡ್ಡಬಳ್ಳಾಪುರ : ಬಾಶೆಟ್ಟಿಹಳ್ಳಿ ವಿಜಯನಗರದಲ್ಲಿ ಶ್ರೀ ಕ್ಷೇತ್ರ ರಾಯರ ಮಠದಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳ “ಆರಾಧನಾ ಮಹೋತ್ಸವ”ವನ್ನು ಶ್ರೀ ಹರಿವಾಯು ಗುರುಗಳ ಪ್ರೇರಣಾನುಸಾರ ಶ್ರಾವಣ ಮಾಸ ಕೃಷ್ಣಪಕ್ಷ ಪ್ರಥಮ, ದ್ವಿತೀಯ, ತೃತೀಯ ದಿನಗಳಂದು ನೆರವೇರಿಸಲಾಗುವುದು ಎಂದು ಶ್ರೀ ಮಠದ ಪ್ರಧಾನ ಅರ್ಚಕರಾದ ಶ್ರೀ ಜಿ. ಗುರುರಾಜಚಾರ್ ತಿಳಿಸಿದ್ದಾರೆ

    354″ ಶ್ರೀಗುರುರಾಘವೇಂದ್ರ ಸ್ವಾಮಿಗಳ ಆರಾಧನಾ ಮಹೋತ್ಸವವನ್ನು ಆಗಸ್ಟ್10,11,ಮತ್ತು 12 ರಂದು ನೆರವೇರಿಸಲಿದ್ದು ಕಾರ್ಯಕ್ರಮವು“ಪೂರ್ವಾರಾಧನೆ” “ಮಧ್ಯಾರಾಧನೆ” “ಉತ್ತರರಾಧನೆ” ಮೂಲಕ ನೆಡೆಯಲಿದೆ.

    ಈ ಕುರಿತು ಮಾಹಿತಿ ನೀಡಿರುವ ಅವರು ಆಗಸ್ಟ್ 10 ರಂದು ಪೂರ್ವಾರಾಧನೆಯಲ್ಲಿ ಬೆಳಿಗ್ಗೆ 6.00 ಗಂಟೆಗೆ ಸುಪ್ರಭಾತ ಸೇವೆ, ನಿರ್ಮಾಲ್ಯ ವಿಸರ್ಜನೆ, 7.30ಕ್ಕೆ ಪಂಚಾಮೃತ ಅಭಿಷೇಕ, ಪಾದಪೂಜೆ, ಅರ್ಚನೆ ಅಲಂಕಾರ, ಶ್ರೀ ರಾಘವೇಂದ್ರ ಸ್ವಾಮಿಗಳ ಅಷ್ಟೋತ್ತರ, ಸ್ತೋತ್ರ,ಮಧ್ಯಾಹ್ನ 12.30ಕ್ಕೆ ಮಹಾಮಂಗಳಾರತಿ ಮತ್ತು ತೀರ್ಥ ಪ್ರಸಾದ ವಿನಿಯೋಗ ಬೆಳಿಗ್ಗೆ ಮತ್ತು ಸಂಜೆ “ಭಜನೆ ಕಾರ್ಯಕ್ರಮ” ಮತ್ತು ಮಹಾಮಂಗಳಾರತಿ ನೆಡೆಯಲಿದೆ.

    2ನೇ ದಿನ ಮಧ್ಯಾರಾಧನೆಯ ವಿಶೇಷ ವಾಗಿ ಬೆಳಿಗ್ಗೆ 6.00 ಗಂಟೆಗೆ ಸುಪ್ರಭಾತ ಸೇವೆ, ನಿರ್ಮಾಲ್ಯ ವಿಸರ್ಜನೆ, 7.30ಕ್ಕೆ ಪಂಚಾಮೃತ ಅಭಿಷೇಕ, ಪಾದಪೂಜೆ, ಅರ್ಚನೆ ಅಲಂಕಾರ, ಶ್ರೀ ರಾಘವೇಂದ್ರ ಸ್ವಾಮಿಗಳ ಅಷ್ಟೋತ್ತರ, ಸ್ತೋತ್ರ ಬೆಳಿಗ್ಗೆ 9 ಕ್ಕೆ ಶ್ರೀ ರಮಾ ತ್ರಿವಿಕ್ರಮ ಭಜನಾ ಮಂಡಳಿಯವರಿಂದ “ಭಜನೆ ಮತ್ತು ವಾದ್ಯಗೋಷ್ಠಿ” “ಚಂಡೇವಾದ್ಯ” ಬೆಳಿಗ್ಗೆ 9.30ಕ್ಕೆ ರಾಜಬೀದಿಯಲ್ಲಿ “ರಥೋತ್ಸವ” ಕಾರ್ಯಕ್ರಮ ಮಧ್ಯಾಹ್ನ 12.30ಕ್ಕೆ ಮಹಾಮಂಗಳಾರತಿ ಮತ್ತು ತೀರ್ಥ ಪ್ರಸಾದ ವಿನಿಯೋಗ ನೆಡೆಯಲಿದೆ.

    ಹಾಗೂ 3ನೇ ದಿನದ ಉತ್ತರರಾಧನೆ ಅಂಗವಾಗಿ ಬೆಳಿಗ್ಗೆ 6.00 ಗಂಟೆಗೆ ಸುಪ್ರಭಾತ ಸೇವೆ, ನಿರ್ಮಾಲ್ಯ ವಿಸರ್ಜನೆ, 7.30ಕ್ಕೆ ಪಂಚಾಮೃತ ಅಭಿಷೇಕ, ಪಾದಪೂಜೆ, ಅರ್ಚನೆ ಅಲಂಕಾರ, ಶ್ರೀ ರಾಘವೇಂದ್ರ ಸ್ವಾಮಿಗಳ ಅಷ್ಟೋತ್ತರ, ಸ್ತೋತ್ರ,ಮಧ್ಯಾಹ್ನ 12.30ಕ್ಕೆ ಮಹಾಮಂಗಳಾರತಿ ಮತ್ತು ತೀರ್ಥ ಪ್ರಸಾದ ವಿನಿಯೋಗ ಸಂಜೆ “ಭಜನೆ ಕಾರ್ಯಕ್ರಮ” ಮತ್ತು ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ ಕಾರ್ಯಕ್ರಮಗಳು ನೆಡೆಯಲಿವೆ ಎಂದು ಈ ಎಲ್ಲಾ ಕಾರ್ಯಕ್ರಮಗಳಿಗೆ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶ್ರೀ ಗುರುರಾಘವೇಂದ್ರ ಸಾರ್ವಭೌಮರ ಅನುಗ್ರಹಕ್ಕೆ ಪಾತ್ರರಾಗಬೇಕೆಂದು ವಿನಂತಿ ಮಾಡಿದ್ದಾರೆ.

    ಜೊತೆಗೆ ಆಗಸ್ಟ್ 16ರಂದು “ಶ್ರೀ ಕೃಷ್ಣ ಜನ್ಮಾಷ್ಟಮಿ” ಅಂಗವಾಗಿ ಶ್ರೀ ಕೃಷ್ಣನಿಗೆ ಸಂಜೆ 7-00 ರಿಂದ 9-30ರವರೆಗೆ ವಿಶೇಷ ಪೂಜೆ, ಮಹಾಮಂಗಳಾರತಿ ಮತ್ತು ತೀರ್ಥಪ್ರಸಾದ ವಿನಿಯೋಗ ನೆಡೆಯಲಿದೆ 

     

    ದಾನಿಗಳು ಶ್ರೀ ರಾಯರ ಪೂಜಾ ಕೈಂಕರ್ಯಗಳಿಗೆ ಸೇವೆ ಸಲ್ಲಿಸಲು ಇಚ್ಛೆಸುವ ದಾನಿಗಳು ಪ್ರಧಾನ ಅರ್ಚಕರಾದ ಶ್ರೀ ಜಿ. ಗುರುರಾಜಚಾರ್ (9535981175) ಅವರನ್ನು ಸಂಪರ್ಕಿಸಲು ಕೋರಿದೆ

     

     

  • ಕಲೆ ಮತ್ತು ಸಂಗೀತ ತರಬೇತಿಯು ವಿದ್ಯಾರ್ಥಿಗಳಲ್ಲಿ ಸೃಜನಾತ್ಮಕ, ಕಲ್ಪನಾತ್ಮಕ, ಭಾವನಾತ್ಮಕ ಚಿಂತನೆಗಳ ಅಭಿವ್ಯಕ್ತಿಗೊಳಿಸುತ್ತದೆ – ಡಾ.ದೇವನಹಳ್ಳಿ ದೇವರಾಜು

    ದೊಡ್ಡಬಳ್ಳಾಪುರ : ವಿದ್ಯಾರ್ಥಿಗಳಿಗೆ ಸಂಗೀತವು ಶೈಕ್ಷಣಿಕ ಸಾಧನೆ, ಆರೋಗ್ಯ, ಏಕಾಗ್ರತೆ ಮತ್ತು ಸ್ಮರಣಶಕ್ತಿಯನ್ನು ಸುಧಾರಿಸಲು ಸಹಕಾರಿ ಆಗುತ್ತದೆ ಎಂದು ಕಲಾವಿದ ಡಾ.ದೇವನಹಳ್ಳಿ ದೇವರಾಜು ತಿಳಿಸಿದರು.

     

    ನಗರದ ಡಾ.ಬಿ.ಆರ್.ಅಂಬೇಡ್ಕರ್  ಸರ್ಕಾರಿ ಮೆಟ್ರಿಕ್ ನಂತರದ ವಿದ್ಯಾರ್ಥಿನಿಲಯದಲ್ಲಿ ಬೆಂಗಳೂರು ಗ್ರಾಮಾಂತರ  ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಸಮಾಜ ಕಲ್ಯಾಣ ಇಲಾಖೆ ಸಹಯೋಗದೊಂದಿಗೆ  ಆರು ತಿಂಗಳ ಕಾಲ ವಿದ್ಯಾರ್ಥಿಗಳಿಗೆ  ಸುಗಮ ಸಂಗೀತ ತರಬೇತಿ  ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಸಂಗೀತವು ಬಲವಾದ ಚಿಕಿತ್ಸಾ ಸಾಧನವಾಗಿದೆ. ಯುವಜನತೆಗೆ  ಸುಗಮಸಂಗೀತ,  ಜನಪದ ಸಂಗೀತ,  ರಂಗ ಸಂಗೀತ ಮುಂತಾದವುಗಳನ್ನು ಪರಿಚಯಿಸುವುದರ ಜೊತೆಗೆ ತರಬೇತಿಯನ್ನು ನೀಡುವುದರಿಂದ ಅವರ ವ್ಯಕ್ತಿತ್ವ ವಿಕಸನಕ್ಕೆ ಪ್ರಯೋಜನಕಾರಿ ಆಗುತ್ತದೆ ಎಂದರು.

     

     

    ಕಲೆ ಮತ್ತು ಸಂಗೀತ ತರಬೇತಿಯು ವಿದ್ಯಾರ್ಥಿಗಳಲ್ಲಿ ಸೃಜನಾತ್ಮಕ, ಕಲ್ಪನಾತ್ಮಕ, ಭಾವನಾತ್ಮಕ ಚಿಂತನೆಗಳ ಅಭಿವ್ಯಕ್ತಿಗೊಳಿಸುತ್ತದೆ. ಶಿಕ್ಷಣ ಎಂದರೆ ಕೇವಲ ಪಠ್ಯಪುಸ್ತಕಗಳು, ಪರೀಕ್ಷೆಗಳು ಮತ್ತು ಉತ್ತಮ ಅಂಕಗಳನ್ನು ಪಡೆಯುವ ಉದ್ದೇಶಕ್ಕೆ ಸೀಮಿತವಾಗಬಾರದು. ವಿದ್ಯಾರ್ಥಿಗಳ ಮುಂದಿನ ಜೀವನದ ಯಶಸ್ಸಿಗಾಗಿ ವಿವಿಧ ಕೌಶಲ್ಯ ಮತ್ತು ಜ್ಞಾನವನ್ನು ಹೊಂದುವ ಸಾಮರ್ಥ್ಯವನ್ನು ಕಲಿಸಬೇಕೆಂದರು.

     

    ಬೆಂಗಳೂರು ಗ್ರಾಮಾಂತರ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರವಿಕುಮಾರ್ ಮಾತನಾಡಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು  ಕಲಾವಿದರನ್ನು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರೋತ್ಸಾಹಿಸಲು ಹಲವು ಯೋಜನೆಗಳನ್ನು ರೂಪಿಸಿದೆ. ವಿದ್ಯಾರ್ಥಿಗಳು ಮತ್ತು ಯುವಜನರಿಗಾಗಿ ಚಿಗುರು, ಯುವಸೌರಭ, ಸಾಂಸ್ಕೃತಿಕ ಸೌರಭ, ಸುಗ್ಗಿಹುಗ್ಗಿ, ಮತ್ತು ಮಹಿಳಾ ಸಾಂಸ್ಕೃತಿಕ ಉತ್ಸವ ಮುಂತಾದ ಕಾರ್ಯಕ್ರಮಗಳನ್ನು ಆಯೋಜಿಸುತ್ತದೆ. ಪ್ರಸ್ತುತ ಸಮಾಜ ಕಲ್ಯಾಣ ಇಲಾಖೆಯ ವಿದ್ಯಾರ್ಥಿನಿಲಯದ ವಿದ್ಯಾರ್ಥಿಗಳಿಗೆ ಸುಗಮ ಸಂಗೀತ ತರಬೇತಿ ನೀಡಲಾಗುತ್ತದೆ ಎಂದರು.

     

    ಕಾರ್ಯಕ್ರಮದಲ್ಲಿ ಸುಗಮ ಸಂಗೀತ ಕಲಾವಿದ ಅರುಣ್ ವಿಚಿ, ದೊಡ್ಡಬಳ್ಳಾಪುರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಪಿ.ಗೋವಿಂದರಾಜು, ಡಾ.ಬಿ.ಆರ್.ಅಂಬೇಡ್ಕರ್  ಸರ್ಕಾರಿ ಮೆಟ್ರಿಕ್ ನಂತರದ ವಿದ್ಯಾರ್ಥಿನಿಲಯದ ಮೇಲ್ವಿಚಾರಕಿ ರಾಧಮಣಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಿಬ್ಬಂದಿ ಹಾಗೂ ವಿದ್ಯಾರ್ಥಿನಿಯರು ಭಾಗವಹಿಸಿದ್ದರು.

  • ಸ್ಥಳೀಯ ಸಮಸ್ಯೆಗಳನ್ನು ಪರಿಹರಿಸುವಂತೆ ಆಗ್ರಹಿಸಿ ನಗರಸಭೆ ಮುಂಬಾಗ ಪ್ರತಿಭಟನೆಗೆ ಮುಂದಾದ ಪ್ರಬುದ್ಧ ಕರ್ನಾಟಕ ಭೀಮ ಸೇನೆ

    ದೊಡ್ಡಬಳ್ಳಾಪುರ : ನಗರದಲ್ಲಿ ಕಾನೂನುಬಾಹಿರವಾಗಿ ಸ್ಥಾಪಿತವಾಗಿರುವ ಬಾರ್ ಅಂಡ್ ರೆಸ್ಟೋರೆಂಟ್ ಗಳ ಪರವಾನಗಿ ರದ್ದುಗೊಳಿಸುವಂತೆ, ರಾಜೀವ್ ಗಾಂಧಿ ಆಶ್ರಯ ಯೋಜನೆ ಅಡಿಯಲ್ಲಿ ನಿರ್ಗತಿಕರಿಗೆ ಹಂಚಿಕೆ ಮಾಡಲಾದ ಅಶ್ರಯ ಮನೆಗಳಲ್ಲಿ ಕೆಲವು ಬಲಾಢ್ಯರು ದಾಖಲಾತಿ ಇಲ್ಲದೆ ವಾಸಿಸುತ್ತಿದ್ದು ಅಂತವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಹಾಗೂ ಸಾರ್ವಜನಿಕರಿಗೆ ತೊಂದರೆ ಉಂಟು ಮಾಡಿದ ನಗರಸಭೆ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ದೊಡ್ಡಬಳ್ಳಾಪುರದ ನಗರಸಭೆಯ ಮುಂದೆ ಪ್ರಬುದ್ಧ ಕರ್ನಾಟಕ ಭೀಮ ಸೇನೆ ಪ್ರತಿಭಟನೆ ನಡೆಸಿತು.

     

     

    ಈ ಕುರಿತು ಸಂಘಟನೆಯ ರಾಜ್ಯಾಧ್ಯಕ್ಷ ಯು ಮುನಿರಾಜು ನಗರಸಭೆ ಪೌರಾಯುಕ್ತರಾದ ಕಾರ್ತಿಕೇಶ್ವರ್ ಅವರಿಗೆ ಮನವಿ ಸಲ್ಲಿಸಿದರು 

    ದೊಡ್ಡಬಳ್ಳಾಪುರ ನಗರಸಭೆ ವ್ಯಾಪ್ತಿಯ ರಾಜೀವ್ ಗಾಂಧಿ ಬಡಾವಣೆಯಲ್ಲಿ 2002ರಲ್ಲಿ ಅಶ್ರಯ ಯೋಜನೆಯಡಿ ಬಡವರು, ನಿರ್ಗತಿಕರು ಮತ್ತು ದಲಿತರಿಗೆ ನಿವೇಶಗಳ ಹಂಚಿಕೆ ಮಾಡಲಾಗಿದೆ, ಸುಮಾರು 50ಕ್ಕೂ ಹೆಚ್ಚು ಮನೆಗಳು ಇಲ್ಲಿನ ಸ್ಥಳೀಯ ಮುಖಂಡರೆಂದು ಕರೆಸಿಕೊಳ್ಳುವರ ವಶದಲ್ಲಿವೆ, ಅಕ್ರಮವಾಗಿ ವಾಸವಾಗಿರುವ ನಿವಾಸಿಗಳ ಮನೆಗಳನ್ನ ಖಾಲಿ ಮಾಡಿಸಿ, ಅಸಲಿ ಹಕ್ಕುಪತ್ರ ವಾರಸುದಾರರಿಗೆ ಅಶ್ರಯ ಮನೆಗಳನ್ನ ನೀಡುವಂತೆ ಪ್ರಬುದ್ಧ ಭೀಮ ಸೇನೆ ಒತ್ತಾಯಿಸಿದೆ.

     

    ಮಾಧ್ಯಮದೊಂದಿಗೆ ಮಾತನಾಡಿದ ರಾಜ್ಯಾಧ್ಯಕ್ಷರಾದ ಯು.ಮುನಿರಾಜು, ರಾಜೀವ್ ಗಾಂಧಿ ಬಡಾವಣೆಯಲ್ಲಿನ ಸ್ಥಳೀಯ ಕೆಲವು ಮುಖಂಡರು ಅಕ್ರಮವಾಗಿ ಮನೆಗಳ ಬೀಗ ಹೊಡೆದು ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ, ಅಕ್ರಮವಾಗಿ ದಾಖಲೆಗಳನ್ನ ಸೃಷ್ಠಿಸಿ ಅಸಲಿ ಹಕ್ಕುದಾರರಿಗೆ ವಂಚನೆ ಮಾಡಿದ್ದಾರೆ, ಹಕ್ಕುಪತ್ರದ ವಾರಸುದಾರರು ಮನೆಗಳ ಬಳಿ ಬಂದರೆ ದಬ್ಬಾಳಿಕೆ ದೌರ್ಜನ್ಯ ನಡೆಸಿ ಅಲ್ಲಿಂದ ಓಡಿಸುತ್ತಾರೆ, ಪೌರಾಯುಕ್ತರು ಪ್ರತಿ ಮನೆಗೂ ಭೇಟಿ ನೀಡಿ ದಾಖಲೆಗಳನ್ನ ಪರಿಶೀಲನೆ ಮಾಡಬೇಕು, ನಕಲಿ ವಾಸಿಗಳನ್ನ ಪತ್ತೆ ಮಾಡಿ ಅಸಲಿ ಹಕ್ಕುಪತ್ರ ಇರುವ ಜನರಿಗೆ ಮನೆಗಳನ್ನ ನೀಡುವಂತೆ ಒತ್ತಾಯಿಸಿದರು.

     

    ನಗರಸಭೆಯ ಎಸ್ ಡಿಎ ನೌಕರ ನಕಲಿ ದಾಖಲೆ ಸೃಷ್ಠಿಸಿ ಅಂಜಾದ್ ಖಾನ್ ರವರಿಗೆ ವಂಚನೆ ಮಾಡಿದ್ದಾರೆ ಎಂದು ಆರೋಪಿಸಿದ ಅವರು, ಅವರ ವಿರುದ್ಧ ಕಾನೂನು ಕ್ರಮ ಜರುಗಿಸ ಬೇಕು, ಅವರು ನೀಡಿರುವ ಅಂಕಪಟ್ಟಿ ನಕಲಿಯಾಗಿದ್ದು, ಅದನ್ನು ಪರಿಶೀಲನೆ ಮಾಡಬೇಕೆಂದು ಒತ್ತಾಯಿಸಿದರು.

    ನಮ್ಮ ವಾಟ್ಸ್ ಆಪ್ ಗ್ರೂಪ್ ಸೇರಲು ಈ ಲಿಂಕ್ ಬಳಸಿ https://chat.whatsapp.com/If9mzU5oyvwJoAt1aZdd19?mode=ac_t

     

    ಪ್ರತಿಭಟನೆಯಲ್ಲಿ ರಾಜ್ಯ ಗೌರವ ಅಧ್ಯಕ್ಷ ವಿ.ನಾಗರಾಜು, ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಚನ್ನಿಗರಾಯಪ್ಪ, ಬೆಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷ ಎ.ಮಂಜುನಾಥ್, ದೊಡ್ಡಬಳ್ಳಾಪುರ ತಾಲೂಕು ಅಧ್ಯಕ್ಷ ಶಿವಕುಮಾರ್, ಬೆಂಗಳೂರು ಗ್ರಾಮಾಂತರ ಕಾರ್ಯಾಧ್ಯಕ್ಷ ರಘುಕುಮಾರ್, ದೇವನಹಳ್ಳಿ ತಾಲೂಕು ಅಧ್ಯಕ್ಷ ಕುಮಾರ್, ರಾಜ್ಯ ಸಂಘಟನಾ ಕಾರ್ಯದರ್ಶಿ ಶಶಿಕುಮಾರ್, ಬೆಂಗಳೂರು ಗ್ರಾಮಾಂತರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಾಲಿಗೆ ವೆಂಕಟೇಶ್, ರಾಜ್ಯ ಕಾರ್ಯದರ್ಶಿ ಮಹೇಶ್.ಎಂಡಿ, ಅಲ್ಪ ಸಂಖ್ಯಾತ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಮೊಕದ್ದರ್, ದೇವನಹಳ್ಳಿ ಮಹಿಳಾ ಘಟಕ ಅಧ್ಯಕ್ಷ ಸುಜಾತ, ಸೇರಿದಂತೆ ಮುಖಂಡರಾದ ಮಹಮ್ಮದ್ ಪೈಜುಲ್ಲಾ, ಜಬೀವುಲ್ಲಾ, ಅಂಜಾದ್ ಪಾಷಾ, ರವಿಕುಮಾರ್ ಇದ್ದರು

  • ದೊಡ್ಡಬಳ್ಳಾಪುರ ತಾಲೂಕಿಗೆ ಜಿಲ್ಲಾ ಆಸ್ಪತ್ರೆ ಯಾವುದೇ ಕಾರಣಕ್ಕೂ ಕೈ ತಪ್ಪಲ್ಲ – ಶಾಸಕ ಧೀರಜ್ ಮುನಿರಾಜು

    ದೊಡ್ಡಬಳ್ಳಾಪುರ : ತಾಲೂಕಿನಲ್ಲಿ ದ್ವೇಷ ರಾಜಕಾರಣ ಪ್ರಾರಂಭವಾಗಿದೆ ಇದಕ್ಕೆ ತಾಜಾ ಉದಾಹರಣೆಯಂತೆ ತಾಲೂಕಿಗೆ ಮಂಜೂರಾಗಿದ್ದ ಜಿಲ್ಲಾ ಆಸ್ಪತ್ರೆಯನ್ನು ವರ್ಗಾವಣೆ ಮಾಡಲಾಗಿದೆ ಎಂಬ ಆರೋಪಗಳು ತಾಲೂಕಿನ ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿದ್ದು

     

    ಈ ಕುರಿತು ಪತ್ರಕರ್ತರ ಪ್ರಶ್ನೆಗೆ ಶಾಸಕ ಧೀರಜ್ ಮುನಿರಾಜು ಪ್ರತಿಕ್ರಿಯೆ ನೀಡಿದ್ದಾರೆ , ಯಾವುದೇ ಕಾರಣಕ್ಕೂ ತಾಲೂಕಿಗೆ ಮಂಜೂರಾಗಿರುವ ಜಿಲ್ಲಾ ಆಸ್ಪತ್ರೆ ಕೈ ತಪ್ಪಲ್ಲ , ತಾಲೂಕಿನಲ್ಲಿ ಜಿಲ್ಲಾಸ್ಪತ್ರೆ ಬೇಕು ಎನ್ನುವುದಕ್ಕೆ ನಮ್ಮಲ್ಲಿ ಸಾಕಷ್ಟು ಅಂಶಗಳಿವೆ ಈ ಕುರಿತಂತೆ ಇದೇ ತಿಂಗಳು 11ರಂದು ನಡೆಯುವ ಸದನದಲ್ಲಿ ದಾಖಲೆಗಳ ಸಮೇತ ಸವಿಸ್ತಾರವಾಗಿ ಸಂಬಂಧಪಟ್ಟ  ಆರೋಗ್ಯ ಮಂತ್ರಿಗಳಿಗೆ ಮನವರಿಕೆ ಮಾಡಿಕೊಡಲಿದ್ದೇನೆ.

     

    ತಾಲೂಕಿನ ಸಾರ್ವಜನಿಕರ ಹಿತಾಸಕ್ತಿ ಕಾಪಾಡುವುದು ನನ್ನ ಆದ್ಯ ಕರ್ತವ್ಯ ನನ್ನನ್ನು ನಂಬಿ ತಾಲೂಕಿನ ಜನತೆ ಆಶೀರ್ವಾದ ಮಾಡಿದ್ದಾರೆ , ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ  ತಾಲೂಕಿನ ಜನರ ಧ್ವನಿಯಾಗಿ ಸದರದಲ್ಲಿ ತಾಲೂಕಿನ ಸಮಸ್ಯೆಗಳ ಬಗ್ಗೆ  ಮಾತನಾಡುತ್ತೇನೆ. ತಾಲ್ಲೂಕಿನಲ್ಲಿ ಅವರ ಸೇವೆಗೆಂದು ಜಿಲ್ಲಾಸ್ಪತ್ರೆ ಕರ್ತವ್ಯ ನಿರ್ವಹಿಸುವಂತೆ ಮಾಡಿಯೇ ತೀರುತ್ತೇನೆ ಎಂದರು.

     

    ಜಿಲ್ಲಾಸ್ಪತ್ರೆ ತಾಲೂಕಿಗೆ ತರಬೇಕೆಂಬ ಮುಖ್ಯ ಉದ್ದೇಶದಿಂದ ಪ್ರಧಾನ ಮಂತ್ರಿ ಅಭಿಮ್( ABHIM) (ಪ್ರಧಾನ ಮಂತ್ರಿ ಆಯುಷ್ಮಾನ್ ಭಾರತ್ ಹೆಲ್ತ್ ಮಿಷನ್ ) ಯೋಜನೆ ಅಡಿಯಲ್ಲಿ ಕ್ರಿಟಿಕಲ್ ಕೇರ್ ಯೂನಿಟ್ (CCU ) ನಿರ್ಮಾಣಕ್ಕೆ ಮುಂದಾಗಿದ್ದೇವೆ, ಕಾರಣ ಕ್ರಿಟಿಕಲ್ ಕೇರ್ ಯೂನಿಟ್ ಗಳು ಜಿಲ್ಲಾಸ್ಪತ್ರೆಯಲ್ಲಿ ಇರಬೇಕೆಂಬ ನಿಯಮವಿದೆ ಅಂತೇಯೇ ಪ್ರಧಾನ ಮಂತ್ರಿ ಅಭಿಮ್( ABHIM) ಯೋಜನೆ ಅಡಿಯಲ್ಲಿ ಜಿಲ್ಲಾಸ್ಪತ್ರೆ ಜಾಗದಲ್ಲಿ ಸಿಸಿಯು ನಿರ್ಮಾಣ ಮಾಡುವುದರಿಂದ ಜಿಲ್ಲಾಸ್ಪತ್ರೆಯನ್ನು ಯಾವುದೇ ಕಾರಣಕ್ಕೂ ಸ್ಥಳಾಂತರಿಸಲು ಸಾಧ್ಯವಾಗುವುದಿಲ್ಲ ಹಾಗಾಗಿ ಕ್ರಿಟಿಕಲ್ ಕೇರ್ ಯೂನಿಟ್ ಅನ್ನು ನಿರ್ಮಾಣ ಮಾಡುವ ಸಲುವಾಗಿ ಕೇಂದ್ರದ ಅನುದಾನಕ್ಕೆ ಮುಂದಾಗಿದ್ದೇವೆ ಎಂದರು.

     

    ತಾಲೂಕಿನ ಜನತೆಯಲ್ಲಿ ಗೊಂದಲ ಬೇಡ ತಾಯಿ ಮತ್ತು ಮಗು ಆಸ್ಪತ್ರೆ ( ತಾಲ್ಲೂಕು ಆಸ್ಪತ್ರೆ ) ಬೇರೆ ಜಿಲ್ಲಾಸ್ಪತ್ರೆ ಬೇರೆ ತಾಲೂಕಿನಾದ್ಯಂತ ಹರಿದಾಡುತ್ತಿರುವ ಗಾಳಿ ಸುದ್ದಿಗೆ ಕಿವಿಗೊಡಬೇಡಿ ಜಿಲ್ಲಾ ಆಸ್ಪತ್ರೆ ಕೈ ತಪ್ಪಿಲ್ಲ , ನಮ್ಮ ತಾಲೂಕಿಗೆ ಜಿಲ್ಲಾ ಆಸ್ಪತ್ರೆ ಬರುವುದು ಖಂಡಿತಾ ಎಂದು ತಿಳಿಸಿದ್ದಾರೆ

  • ಸರ್ಕಾರಿ ಭೂಮಿ ಉಳಿಸಲು ವಕೀಲರಾದ ಆರ್ ಪ್ರತಾಪ್ ನೇತೃತ್ವದಲ್ಲಿ ಹೋರಾಟ : ಆಶ್ರಯ ಯೋಜನೆಗೆ 8 ಎಕರೆ ಭೂಮಿ ಮಂಜೂರು : ಯಶಸ್ವಿ ಕಾರ್ಯಕ್ರಮದ ಮೂಲಕ ಸಂತಸ ಹಂಚಿಕೊಂಡ ಗುಂಜೂರು ಗ್ರಾಮಸ್ಥರು

    ದೊಡ್ಡಬಳ್ಳಾಪುರ : ಸರ್ಕಾರಿ ಭೂಮಿಯನ್ನು ಅಕ್ರಮವಾಗಿ ವಾಮ ಮಾರ್ಗದಲ್ಲಿ ಎಷ್ಟೋ ಬಲಾಡ್ಯರು ಅಕ್ರಮವಾಗಿ ದಾಖಲೆ ಸೃಷ್ಟಿಸಿ ತಮ್ಮದೆಂದು ಸ್ಥಳೀಯ ರೈತರಿಗೆ ಸೇರಬೇಕಿದ್ದ ಭೂಮಿಯನ್ನು ಕಬಳಿಸಲು ಮುಂದಾಗಿದ್ದರು ಆದರೆ ಗುಂಜೂರು ಗ್ರಾಮದ ಗ್ರಾಮಸ್ಥರು ವಕೀಲರಾದ ಆರ್ ಪ್ರತಾಪ್ ನೇತೃತ್ವದಲ್ಲಿ ಅಂತಹ ಭೂಗಳ್ಳರ ವಿರುದ್ಧ ಹೋರಾಟ ನೆಡೆಸಿ ಇಂದು ಅಶ್ರಯ ಯೋಜನೆಗಾಗಿ 8 ಎಕರೆ ಜಾಗವನ್ನು ಮಂಜೂರು ಮಾಡಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ದೊಡ್ಡಬಳ್ಳಾಪುರ ತಾಲೂಕಿನ ಘಾಟಿ ಸುಬ್ರಹ್ಮಣ್ಯ ಕರ್ನಾಟಕ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾಗಿದೆ ಈ ಕ್ಷೇತ್ರಕ್ಕೆ ಪ್ರತಿದಿನ ಸಾವಿರಾರು ಭಕ್ತರು ಕ್ಷೇತ್ರಕ್ಕೆ ಭೇಟಿ ನೀಡಿತ್ತಾರೆ ಅಲ್ಲದೆ ಇಲ್ಲಿನ ಭೂಮಿಗೆ ಬಂಗಾರದ ಬೆಲೆ ಬಂದಿದ್ದು ದೇವಸ್ಥಾನದ ಪ್ರಖ್ಯಾತಿಯನ್ನೇ ಬಂಡವಾಳ ಮಾಡಿಕೊಂಡಿರುವ ಭೂಗಳ್ಳರು ಕ್ಷೇತ್ರದ ಸುತ್ತಮುತ್ತಲಿನ ಸರ್ಕಾರಿ ಜಾಗಗಳನ್ನು ಹಂತ ಹಂತವಾಗಿ ಕಬಳಿಸ ಲು ಮುಂದಾಗಿದ್ದಾರೆ.

    ಘಾಟಿ ಗ್ರಾಮ ಪಂಚಾಯಿತಿ ಸುತ್ತಮುತ್ತಲಿನ ಗ್ರಾಮಗಳಾದ ಗುಂಜೂರು, ಮೇಲಿನಜೂಗಹಳ್ಳಿ, ಕೆಳಗಿನಜೂಗಹಳ್ಳಿ, ಮಾಕಳಿಯಲ್ಲಿ ನೂರಾರು ಎಕರೆ ಸರ್ಕಾರಿ ಜಾಗವಿದೆ, ದಶಕದಿಂದ ರೈತರು ಈ ಜಾಗದಲ್ಲಿ ಸಾಗುವಳಿ ಮಾಡಿಕೊಂಡು ಭೂ ಮಂಜೂರಾತಿಗೆ ಅರ್ಜಿ ಹಾಕಿ ಕಾಯುತ್ತಿದ್ದಾರೆ. ಆದರೆ ಇದೇ ಜಾಗ ಕ್ಷಣ ಮಾತ್ರದಲ್ಲಿ ಭೂಗಳ್ಳರ ಪಾಲಾಗುತ್ತಿದೆ. ಗುಂಜೂರು ಗ್ರಾಮದ ಸರ್ವೆ ನಂಬರ್ 33ರಲ್ಲಿ 120 ಎಕರೆ ಜಾಗವಿದ್ದು,ಕಾಲ ಕ್ರಮೇಣವಾಗಿ ಸಾಕಷ್ಟು ಭೂಮಿ ಸ್ಥಳೀಯರಿಗೆಲ್ಲದೆ ಬಲಾಡ್ಯರ ಪಾಲಾಗಿದೆ ಎಂಬುದು ಸ್ಥಳೀಯರವಾದ, ಗ್ರಾಮಸ್ಥರ ನಿವೇಶನದ ಜಾಗವನ್ನು ರೆಸಾರ್ಟ್, ಮಸಾಜ್ ಪಾರ್ಲರ್ , ಬಾರ್ ಅಂಡ್ ರೆಸ್ಟೋರೆಂಟ್ಗಳಿಗೆ ಕಬಳಿಕೆ ಮಾಡಲಾಗುತ್ತಿದೆ, ಅಂತಹವರ ವಿರುದ್ಧ ಸತತ 3 ವರ್ಷ ಹೋರಾಟ ಮಾಡಿದ ಗುಂಜೂರು ಗ್ರಾಮಸ್ಥರು 8 ಎಕರೆ ಜಾಗವನ್ನ ಅಶ್ರಯ ಯೋಜನೆಗಾಗಿ ಮಂಜೂರು ಮಾಡಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ಹೋರಾಟದ ನೇತೃತ್ವವನ್ನ ಸ್ಥಳೀಯ ಮುಖಂಡರು ಹಾಗೂ ಖ್ಯಾತ ವಕೀಲರಾದ ಆರ್.ಪ್ರತಾಪ್ ವಹಿಸಿಕೊಂಡು ಹಲವಾರು ಸಚಿವರನ್ನು ಒಳಗೊಂಡಂತೆ ಸಂಬಂಧಪಟ್ಟ ಅಧಿಕಾರಿಗಳನ್ನು ಭೇಟಿ ಮಾಡಿ ಸರ್ಕಾರಿ ಜಾಗವನ್ನ ಉಳಿಸಿದ್ದಾರೆ, ನಿವೇಶನ ಹಂಚಿಕೆ ಮಾಡಲು 8 ಎಕರೆ ಜಾಗವನ್ನ ಮಂಜೂರು ಮಾಡಿಸಿದ್ದಾರೆ, ಅವರ ಹೋರಾಟಕ್ಕೆ ಗ್ರಾಮಸ್ಥರು ಹೂಮಾಲೆ ಹಾಕುವ ಮೂಲಕ ಅಭಿನಂದಿಸಿದರು.

    ಗುಂಜೂರು ಗ್ರಾಮದ ಸರ್ವೇ ನಂಬರ್ 33 ರಲ್ಲಿ 8 ಎಕ್ಕರೆ ಜಮೀನು ಆಶ್ರಯ ಯೋಜನೆಗೆ ಮಂಜೂರು ಆಗಿರುವ ಪ್ರಯುಕ್ತ ಆಶ್ರಯ ಯೋಜನೆಯ ಯಶಸ್ವೀ ಕಾರ್ಯಕ್ರಮವನ್ನು ಮಾಕಳಿ ಗುಂಜೂರು ಬಳಿ ಆಯೋಜನೆ ಮಾಡಲಾಗಿತ್ತು.

     

    ಕಾರ್ಯಕ್ರಮದ ನಂತರ ಮಾಧ್ಯಮಗಳೊಂದಿಗೆ ವಕೀಲರಾದ ಆರ್ ಪ್ರತಾಪ್ ಮಾತನಾಡಿ ಗುಂಜೂರು ಸರ್ವೆ ನಂಬರ್ 33 ರಲ್ಲಿ 120 ಎಕರೆ ಸರ್ಕಾರಿ ಜಾಗವಿದೆ, ಈಗಾಗಲೇ 68 ಎಕರೆ ಮಂಜೂರಾತಿಯಾಗಿದೆ, ಇನ್ನುಳಿದೆ 50ಕ್ಕೂ ಹೆಚ್ಚು ಎಕರೆ ಜಾಗವನ್ನ ಭೂಗಳ್ಳರು ಕಬಳಿಸಿದ್ದಾರೆ, ಇವರ ವಿರುದ್ಧ ಲೋಕಾಯುಕ್ತ ಮತ್ತು ಎಸಿ ಕೋರ್ಟ್ ನಲ್ಲಿ ಕೇಸ್ ಹಾಕಲಾಗಿದ್ದು, ಮುಂದಿನ ದಿನಗಳಲ್ಲಿ ಈ ಜಾಗವನ್ನ ಸ್ಥಳೀಯರ ಅನುಕೂಲಕ್ಕಾಗಿ ಬಳಕೆಯಾಗುವಂತೆ ಮಾಡಲಾಗುವುದು ಎಂದರು.

     

    ಹಲವಾರು ಅಡ್ಡಿ ಆತಂಕಗಳು ಎದುರಾದರೂ ಛಲ ಬಿಡದೆ ಸ್ಥಳೀಯ ಗ್ರಾಮಸ್ಥರ ಬೆಂಬಲದೊಂದಿಗೆ ನಿರಂತರ ಹೋರಾಟದ ಫಲವಾಗಿ ಎಂಟು ಎಕ್ಕರೆ ಪ್ರದೇಶವನ್ನು ಅರ್ಹ ಫಲಾನುಭವಿಗಳಿಗೆ ಆಶ್ರಯ ಯೋಜನೆ ಅಡಿ ನಿವೇಶನ ಕಲ್ಪಿಸಲು ಸರ್ಕಾರದ ಅನುಮೋದನೆ ದೊರೆತಿದೆ ಅಲ್ಲದೆ ಎರಡು ಎಕರೆ ಪ್ರದೇಶವನ್ನು ಸ್ಮಶಾನ ಜಾಗವನ್ನಾಗಿ ಗುರುತಿಸಲಾಗಿದೆ ಎಂದು ತಿಳಿಸಿದರು.

     

    ಗ್ರಾಮ ಪಂಚಾಯತ್ ಸದಸ್ಯರಾದ ಕೃಷ್ಣಪ್ಪ(ಕಿಟ್ಟಿ) ಮಾತನಾಡಿ, ಇಲ್ಲಿನ ವಿದ್ಯಾವಂತ ಯುವಕರು ದುಡಿಯಲು ಬೆಂಗಳೂರಿಗೆ ಹೋಗುತ್ತಾರೆ, ಕೋಟಿ ಕೋಟಿ ಹಣ ಕೊಟ್ಟು ಬೆಂಗಳೂರಿನಲ್ಲಿ ಅಸ್ತಿ ಮಾಡಲು ಸಾಧ್ಯವಿಲ್ಲ, ಇಲ್ಲಿನ ಜಾಗವನ್ನ ಬೆಂಗಳೂರಿನ ಬಲಾಢ್ಯರು ಕಬಳಿಸುವ ಮೂಲಕ ಸ್ಥಳೀಯರಿಗೆ ಜಾಗ ಇಲ್ಲದಂತೆ ಮಾಡುತ್ತಿದ್ದಾರೆ, ಇವರ ವಿರುದ್ಧ ಹೋರಾಟ ಮಾಡಲು ಪ್ರತಾಪ್ ಅಂತ ಯುವಕರು ಬೇಕಾಗಿದ್ದಾರೆ.

     

    ಅಶ್ರಯ ಯೋಜನೆಗಾಗಿ 8 ಎಕರೆ ಜಮೀನು ಮಂಜೂರು ಮಾಡಿಸುವಲ್ಲಿ ನಾವು ಯಶಸ್ವಿಯಾಗಿದ್ದೇವೆ. ಆದರೆ, ನಮ್ಮ ಮುಂದಿರುವ ಸವಾಲು ಅರ್ಹ ಫಲಾನುಭವಿಗಳಿಗೆ ನಿವೇಶನ ಹಂಚಿಕೆ ಮಾಡುವುದು, ಈಗಾಗಲೇ ನಿವೇಶನ ಹಂಚಿಕೆಗಾಗಿ 500ಕ್ಕೂ ಹೆಚ್ಚು ಅರ್ಜಿಗಳು ಬಂದಿದ್ದು. ಅರ್ಹರಿಗೆ ನಿವೇಶನ ಹಂಚಿಕೆಯಾಗ ಬೇಕಾದರೆ ವಿದ್ಯಾವಂತ ಮತ್ತು ಪ್ರಮಾಣಿಕ ಯುವಕರನ್ನ ಚುನಾವಣೆಯಲ್ಲಿ ಗೆಲ್ಲಿಸುವ ಕೆಲಸ ಮಾಡಿ ಎಂದರು.

    ರೈತ ಮುಖಂಡರಾದ ವಾಸು ಮಾತನಾಡಿ ಪ್ರಸ್ತುತ ಕಾಲಮಾನದಲ್ಲಿ ರೈತರ ಭೂಮಿ ಉಳಿಸುವುದೇ  ದೊಡ್ಡ ಸವಾಲಾಗಿ ಪರಿಣಮಿಸಿದೆ  ರಿಯಲ್ ಎಸ್ಟೇಟ್ ಉದ್ಯಮ  ವ್ಯವಸಾಯ ಮಾಡಿ ಜೀವನ ಸಾಗಿಸುವ ರೈತನ ಜೀವನವನ್ನು ಹಾಳು ಮಾಡುತ್ತಿದೆ. ಇದರ ಭಾಗವಾಗಿ  ಘಾಟಿ ಸುಬ್ರಮಣ್ಯ ಸುತ್ತಮುತ್ತಲಿನ ಪ್ರದೇಶವನ್ನು  ಬ್ರೋಕರ್ ಗಳ ಹಾವಳಿಯಿಂದ  ತಪ್ಪಿಸುವುದು ಕಷ್ಟ ಸಾಧ್ಯವಾಗಿದೆ  ಫಲವತ್ತಾದ ಭೂಮಿಯನ್ನು  ಸರ್ಕಾರಿ ಗೋಮಾಳಗಳನ್ನು  ಹೇಗಾದರೂ ಮಾಡಿ  ಮಾರಾಟ ಮಾಡಲಾಗುತ್ತಿದೆ. ರೈತರ ಜೀವನಕ್ಕೆ ಆಧಾರವಾಗಿರುವ  ಭೂಮಿಯನ್ನು ಕಸಿದುಕೊಂಡರೆ  ಅವರ ವೃತ್ತಿಯನ್ನ ಕಸಿದುಕೊಂಡಂತೆ ಸ್ಥಳೀಯ ರೈತರು  ಇದನ್ನು ಅರಿತು ತಮ್ಮ ಭೂಮಿಗಳನ್ನು ಮಾರಾಟ ಮಾಡದಂತೆ  ಬ್ರೋಕರ್ ಗಳ ಹಾವಳಿಯಿಂದ ತಪ್ಪಿಸಿಕೊಳ್ಳಬೇಕಿದೆ ಎಂದರು .

    ಗುಂಜೂರು ಸರ್ವೇ ನಂಬರ್  33ರಲ್ಲಿ  ಈಗಾಗಲೇ ಸಾಕಷ್ಟು ಭೂಮಿಯನ್ನು ಬಲಾಢ್ಯರು ಕಬಳಿಸಿದ್ದು , ಯುವ ಮುಖಂಡ ಆರ್ ಪ್ರತಾಪ್ ರವರು  ನಿರಂತರ ಹೋರಾಟ ಮಾಡುವ ಮೂಲಕ  ಇಂದು ಆಶ್ರಯ ಯೋಜನೆಗೆ  8 ಎಕ್ಕರೆ ಪ್ರದೇಶವನ್ನು  ಮಂಜೂರು ಮಾಡಿಸಿದ್ದಾರೆ. ಇಂತಹ ಯುವ ಉತ್ಸಾಹಿ ನಾಯಕರಿಗೆ  ಶಕ್ತಿ ತುಂಬುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂದರು.

    ಈ ಸಂದರ್ಭದಲ್ಲಿ ತೂಬಗೆರೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಸುರೇಶ್, ಪಂಚಾಯತ್ ಸದಸ್ಯರಾದ ಮುನಿಕೃಷ್ಣಪ್ಪ, ನಾರಾಯಣಸ್ವಾಮಿ, ವಾಸು, ಮುಖಂಡರಾದ ಉದಯ್ ಆರಾಧ್ಯ, ಅಂಬರೀಷ್ ಇದ್ದರು

     

     

     

     

     

     

  • ಒಳಮೀಸಲಾತಿ ಹೋರಾಟ : ಅರೆಬೆತ್ತಲೆ ಪ್ರತಿಭಟನೆ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ : ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಮಾದಿಗ ಸಮುದಾಯ

    ಬೆಂಗಳೂರು ಗ್ರಾಮಾಂತರ ಜಿಲ್ಲೆ( ಬೀರಸಂದ್ರ) ವಿಜಯ ಮಿತ್ರ ಸುದ್ದಿ :: ಜನಸಂಖ್ಯೆ ಆಧಾರದ ಮೇಲೆ ಒಳ ಮೀಸಲಾತಿ ನೀಡುವಂತೆ ರಾಜ್ಯ ಸರ್ಕಾರಗಳಿಗೆ ಆದೇಶ ನೀಡಿ ಇಂದಿಗೆ ಒಂದು ವರ್ಷ ಕಳೆದಿದೆ ಆದರೆ ಈವರೆಗೂ ನಮ್ಮ ರಾಜ್ಯದಲ್ಲಿ ಯಾವುದೇ ಒಳ ಮೀಸಲಾತಿ ಘೋಷಣೆಯಾಗಿಲ್ಲ , ಆಗಸ್ಟ್ 15ರಂದು ಕರ್ನಾಟಕ ರಾಜ್ಯ ಸರ್ಕಾರಕ್ಕೆ ಅಂತಿಮ ಗಡುವು ನೀಡುತ್ತಿದ್ದು, ಒಳ ಮೀಸಲಾತಿ ಜಾರಿ ಮಾಡುವ ಮೂಲಕ ಮಾದಿಗ ಸಮುದಾಯದ ಅಭಿವೃದ್ಧಿಗೆ ಸರ್ಕಾರ ಸ್ಪಂದಿಸಬೇಕು , ಯಾವುದೇ ಹೆಚ್ಚಿನ ವಿಳಂಬಕ್ಕೆ ಆಸ್ಪದ ನೀಡದೆ ಸರ್ವೋಚ್ಚ ನ್ಯಾಯಾಲಯದ ತೀರ್ಪಿನ ಆಧಾರದ ಮೇಲೆ ಸಂಪೂರ್ಣವಾಗಿ ಪರಿಶಿಷ್ಟ ಜಾತಿಗಳಿಗೆ ಒಳ ಮೀಸಲಾತಿಯನ್ನು ಅನುಷ್ಠಾನಗೊಳಿಸಬೇಕು. ಒಂದು ವೇಳೆ ಸರ್ಕಾರವು ಈ ಗಡುವಿನೊಳಗೆ ನಮ್ಮ ಬೇಡಿಕೆಯನ್ನು ಈಡೇರಿಸಲು ವಿಫಲವಾದರೆ ನಮ್ಮ ಹಕ್ಕುಗಳಿಗಾಗಿ ಕರ್ನಾಟಕದಾದ್ಯಂತ ಇರುವ ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳು, ಕಾರ್ಮಿಕರು, ವಕೀಲರು, ಮಹಿಳೆಯರು ರಿದಂತೆ ಪ್ರತಿಯೊಬ್ಬರೂ ಒಗ್ಗೂಡಿ ರಾಜ್ಯಾದ್ಯಂತ ಹೋರಾಟವನ್ನು ರಾಜ್ಯಾದ್ಯಂತ ಎಲ್ಲಾ ಜಿಲ್ಲಾ ಕೇಂದ್ರ ಹಾಗೂ ತಾಲೂಕು ಕೇಂದ್ರಗಳಲ್ಲಿ ಉಗ್ರ ಹೋರಾಟ ಕೈಗೊಳ್ಳಲಾಗುವುದು ಎಂದು ಕರ್ನಾಟಕ ಮಾದಿಗ ಸಂಘಟನೆಗಳ ಒಕ್ಕೂಟದ ರಾಜ್ಯ ಕಾರ್ಯದರ್ಶಿ ಗುಳ್ಳಳ್ಳಿ ರಾಜಣ್ಣ ತಿಳಿಸಿದರು.

    ದೊಡ್ಡಬಳ್ಳಾಪುರ ತಾಲೂಕಿನಿಂದ ಮಾದಿಗ ಸಮುದಾಯದ ಮುಖಂಡರು ಅರೆಬೆತ್ತಲೆಯಾಗಿ ಬೈಕ್ ರ್ಯಾಲಿ ಮೂಲಕ ಜಿಲ್ಲಾಧಿಕಾರಿಗಳ ಕಚೇರಿ ತಲುಪಿದರು.

    ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗ ನಾಲ್ಕು ತಾಲೂಕುಗಳ ಮಾದಿಗ ಸಮುದಾಯದ ಪ್ರಮುಖರು ಅರೆಬೆತ್ತಲೆ ಪ್ರತಿಭಟನೆ ಹಮ್ಮಿಕೊಳ್ಳುವ ಮೂಲಕ ಒಳ ಮೀಸಲಾತಿ ಜಾರಿಗೊಳಿಸುವಂತೆ ಆಗ್ರಹಿಸಿದರು. ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು ಚುನಾವಣೆಗೂ ಮುನ್ನ ಒಳ ಮೀಸಲಾತಿ ನೀಡುವ ಭರವಸೆ ನೀಡಿದ್ದ ಸಿದ್ದರಾಮಯ್ಯನವರು ಈಗ ಯಾವುದೇ ನಿರ್ಣಯ ಕೈಗೊಳ್ಳದೆ ಇರುವುದು ಮಾದಿಗ ಸಮುದಾಯ ಕುರಿತು ಅವರ ಬದ್ಧತೆಯನ್ನು ತೋರುತ್ತದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನಾಲ್ಕು ತಾಲೂಕುಗಳ ಎಲ್ಲ ದಲಿತಪರ ಪ್ರಗತಿಪರ ಸಂಘಟನೆಗಳ ಸಹಯೋಗದೊಂದಿಗೆ ಮಾದಿಗ ಸಮುದಾಯದ ಎಲ್ಲಾ ಬಂಧುಗಳು ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗ ಇಂದು ಸಾಂಕೇತಿಕ ಪ್ರತಿಭಟನೆ ನಡೆಸಿದ್ದೇವೆ. ಸರ್ಕಾರಕ್ಕೆ ಆಗಸ್ಟ್ 15ರ ಗಡುವು ನೀಡುತ್ತಿದ್ದು ಮಾದಿಗ ಸಮುದಾಯಕ್ಕೆ ಒಳ ಮೀಸಲಾತಿ ಜಾರಿಗೊಳಿಸಿ ಸೂಕ್ತ ನ್ಯಾಯ ಕಲ್ಪಿಸದ ಪಕ್ಷದಲ್ಲಿ ಉಗ್ರ ಹೋರಾಟ ಕೈಗೊಳ್ಳುವುದು ಅಷ್ಟೇ ಅಲ್ಲದೆ ನಾವು ಪ್ರಾಣತ್ಯಾಗಕ್ಕೂ ಸಿದ್ಧ ಎಂದರು.

    ನಮಗೆ ಕಾಂಗ್ರೆಸ್ ಸರ್ಕಾರ ಕೊಡುತ್ತಿರುವ ಯಾವುದೇ ಭಾಗ್ಯಗಳು ಬೇಡ ನಮಗೆ ನಮ್ಮ ಹಕ್ಕು ಒಳ ಮೀಸಲಾತಿ ಕೊಟ್ಟರೆ ಸಾಕು, ಆರ್ಥಿಕವಾಗಿ ಸಾಮಾಜಿಕವಾಗಿ ಶೈಕ್ಷಣಿಕವಾಗಿ ನಮ್ಮ ಮಾದಿಗ ಸಮುದಾಯ ಹಿಂದುಳಿದಿದ್ದು ಒಳ ಮೀಸಲಾತಿ ಸಿಗುವ ಮೂಲಕ ನಮ್ಮ ಜನಾಂಗ ಸಾಕಷ್ಟು ಲಾಭ ಪಡೆಯಲಿದೆ ಸರ್ಕಾರ ಇದನ್ನು ಅರಿಯಬೇಕಿದೆ ನಮ್ಮ ಹಕ್ಕನ್ನು ನಮಗೆ ಕೊಡಿ ನಿಮ್ಮ ಪುಕ್ಕಟ್ಟೆ ಭಾಗ್ಯ ನಮಗೆ ಬೇಡ ಎಂದರು.

    ದಲಿತ ಸಂಘರ್ಷ ಸಮಿತಿಯ ಜಿಲ್ಲಾಧ್ಯಕ್ಷ ರಾಮ ಮೂರ್ತಿ ( ರಾಮು) ನೇರಳೆಘಟ್ಟ ಮಾತನಾಡಿ ಈಗಾಗಲೇ ಸಮೀಕ್ಷೆ ಸಂಪೂರ್ಣ ಮುಗಿದಿದೆ ಕರ್ನಾಟಕ ಸರ್ಕಾರ ಒಳ ಮೀಸಲಾತಿ ಜಾರಿಗೊಳಿಸದೇ ನಮ್ಮ ತಾಳ್ಮೆ ಪರೀಕ್ಷಿಸುತ್ತಿದೆ. ಇಂದು ಶಾಂತಿಯುತವಾಗಿ ಪ್ರತಿಭಟನೆ ಮಾಡುವ ಮೂಲಕ ನಮ್ಮ ಮನವಿಯನ್ನು ಜಿಲ್ಲಾಧಿಕಾರಿಗಳಿಗೆ ನೀಡಿದ್ದೇವೆ, ಇಂದಿನ ಪ್ರತಿಭಟನೆ ಕೇವಲ ಸಾಂಕೇತಿಕವಷ್ಟೇ ಸರ್ಕಾರ ಕೂಡಲೇ ನಮ್ಮ ಒಳ ಮೀಸಲಾತಿರ ಘೋಷಣೆ ಮಾಡಲಿ ಇಲ್ಲವಾದಲ್ಲಿ ಆಗಸ್ಟ್ 15 ನಂತರ ರಾಜ್ಯಾದ್ಯಂತ ಎಲ್ಲಾ ತಾಲೂಕು ಹಾಗೂ ಜಿಲ್ಲಾ ಕೇಂದ್ರಗಳಲ್ಲಿ ನಮ್ಮ ಸಮುದಾಯದ ವತಿಯಿಂದ ಉಗ್ರ ಹೋರಾಟ ರೂಪಿಸಲಾಗುವುದು ಎಂದರು.

     

    ನಾವು ಕೇಳುತ್ತಿರುವುದು ನಮ್ಮ ಹಕ್ಕು, ಜನಸಂಖ್ಯೆಯಲ್ಲಿ ಹೆಚ್ಚಾಗಿರುವ ನಮ್ಮಗೆ ಒಳ ಮೀಸಲಾತಿ, ಈ ಕೂಡಲೇ ಕಲ್ಪಿಸಬೇಕು , ಇನ್ನಾದರೂ ಮಾನ್ಯ ಮುಖ್ಯಮಂತ್ರಿ ಎಚ್ಚೆತ್ತು ದಲಿತ ಸಮುದಾಯಗಳಿಗೆ ಸುಪ್ರೀಂ ಕೋರ್ಟ್ ನೀಡಿರುವ ಆದೇಶದಂತೆ ಮೀಸಲಾತಿಯನ್ನು ರಾಜ್ಯದಲ್ಲಿ ಜಾರಿಗೊಳಿಸಬೇಕು ಎಂದರು.

     

    ದಲಿತ ಮುಖಂಡ ಟಿ ಡಿ ಮುನಿಯಪ್ಪ ಮಾತನಾಡಿ ಇದು ಕೇವಲ ಆರಂಭವಷ್ಟೇ ನಮ್ಮ ಒಳ ಮೀಸಲಾತಿಯನ್ನು ನಮಗೆ ಕೊಟ್ಟುಬಿಡಿ ಇಂದು ಕೇವಲ ನಾಲ್ಕು ತಾಲೂಕುಗಳ ಮಾದಿಗ ಸಮುದಾಯದ ಸಾವಿರಾರು ಜನರು ಪ್ರತಿಭಟನೆಗೆ ಮುಂದಾಗಿದ್ದೇವೆ . ಒಳ ಮೀಸಲಾತಿ ಜಾರಿಗೊಳಿಸದೆ ಹೋದಲ್ಲಿ ಆಗಸ್ಟ್ 15ರಂದು ರಾಜ್ಯಾದ್ಯಂತ ಕೋಟ್ಯಾಂತರ ಮಾದಿಗ ಸಮುದಾಯದ ಜನತೆ ಕಾಂಗ್ರೆಸ್ ಸರ್ಕಾರ ವಿರುದ್ಧ ಪ್ರತಿಭಟನೆಗೆ ಮುಂದಾಗಲಿದ್ದಾರೆ . ಸರ್ಕಾರವನ್ನು ಅಧಿಕಾರಕ್ಕೆ ತರುವ ಶಕ್ತಿ ಇರುವ ನಮಗೆ ಅದನ್ನು ಕೆಡವಿ ಮತ್ತೊಂದು ಸರ್ಕಾರ ಜಾರಿಗೆ ತರುವ ಶಕ್ತಿ ಕೂಡ ಇದೆ . ಮಾನ್ಯ ಮುಖ್ಯಮಂತ್ರಿಗಳು ಇದನ್ನು ಅರಿತು ಶೀಘ್ರ ಒಳ ಮೀಸಲಾತಿ ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.

     

     

    ಪ್ರತಿಭಟನೆಯಲ್ಲಿ ದಲಿತ ಮುಖಂಡರಾದ ತಳಗವಾರ ನಾಗರಾಜ್, ಕುಂಬಾರಪೇಟೆ ನಾರಾಯಣಪ್ಪ, ಹರ್ಷ ಹಾದ್ರಿಪುರ, ಕಾಂತರಾಜ್ ರಾಜಘಟ್ಟ, ನರಸಪ್ಪ ಗುಂಡುಮಗೆರೆ, ಗಂಗರಾಜು ನರಸಿಂಹನಹಳ್ಳಿ, ಕದಿರಪ್ಪ ಗಂಗಸಂದ್ರ, ಮುನಿಯಪ್ಪ ಕರೀಂಸೊಣ್ಣೆನಹಳ್ಳಿ, ಮುತ್ತುರಾಜ್ ಸುಲ್ಕುಂಟೆ, ಕೆ ವಿ ಮುನಿಯಪ್ಪ, ನರೇಂದ್ರ ಮಾಡೇಶ್ವರ, ಮಂಜುನಾಥ ನಾಯಕರಂಡಹಳ್ಳಿ, ಮೂರ್ತಿ ಮುತ್ತೂರು, ರವಿಕುಮಾರ್ ಹಾಲೇನಹಳ್ಳಿ, ಎಂಡಿ ನರಸಿಂಹಮೂರ್ತಿ, ಕನ್ನಡ ಪಕ್ಷ ವೆಂಕಟೇಶ್, ರಾಮಮೂರ್ತಿ( ರಾಾಮು ನೇರಳೆ ಘಟ್ಟ ), ಮೈಲಾರಪ್ಪ, ನರಸಿಂಹಮೂರ್ತಿ ದೊಡ್ಡಕುಕ್ಕನ ಹಳ್ಳಿ, ನಾಗರತ್ನಮ್ಮ ಮಲ್ಲೋಹಳ್ಳಿ, ಉಮಾದೇವಿ, ಮಹೇಂದ್ರ, ಜಾಲಗೆರೆ ಕೃಷ್ಣಪ್ಪ, ಜೇಮ್ಸ್, ನರಸಿಂಹಯ್ಯ, ಮುನಿರಾಜು ಸಿದ್ದನಾಯಕನಹಳ್ಳಿ, ಶ್ರೀರಾಮ್ ಮದುರೆ, ಗಜೇಂದ್ರ ಬೈಪ್ಪನಹಳ್ಳಿ ಸೇರಿದಂತೆ ಹಲವು ಪ್ರಮುಖರು ಹಾಜರಿದ್ದರು.

     

     

  • ಪ್ರಥಮ್ ಮುಖಕ್ಕೆ ಮಸಿ ಬಳಿಯಲು ಯತ್ನಿಸಿದ ಘಟನೆ ನಟ ಪ್ರಥಮ್ ಏನಂತಾರೆ…??

    ಸಂವಿಧಾನ ಶಿಲ್ಪಿ ಡಾ. ಬಿ ಆರ್​ ಅಂಬೇಡ್ಕರ್​ ಮತ್ತು ಸಂವಿಧಾನದ ಬಗ್ಗೆ ನಟ ಪ್ರಥಮ್ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ಕರ್ನಾಟಕ ಭೀಮ್ ಸೇನೆಯ ಕಾರ್ಯಕರ್ತರು ನಟ ಪ್ರಥಮ್ ಮುಖಕ್ಕೆ ಮಸಿ ಬಳಿಯಲು ಯತ್ನಿಸಿದ ಘಟನೆ ಗುರುವಾರ ಸಂಜೆ ಇಲ್ಲಿನ ಗ್ರಾಮೀಣ ಪೊಲೀಸ್​ ಠಾಣೆ ಎದುರು ನಡೆದಿದೆ.

     

    ತನಗೆ ಜೀವ ಬೆದರಿಕೆ ಹಾಕಲಾಗಿದೆ ಎಂದು ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ನಟ ಪ್ರಥಮ್ ದೂರು ದಾಖಲು ಮಾಡಿದ್ದು, ಈ ಪ್ರಕರಣ ಸಂಬಂಧ ವಿಚಾರಣೆಗಾಗಿ ಪೊಲೀಸ್ ಠಾಣೆಗೆ ಆಗಮಿಸಿದ್ದರು. ಸ್ಥಳ ಮಹಜರ್ ಮತ್ತು ಹೇಳಿಕೆ ನೀಡಿ ವಾಪಸ್ ಹೋಗುವ ವೇಳೆ ಠಾಣೆಯ ಮುಂದೆ ಜಮಾಯಿಸಿದ ಕರ್ನಾಟಕ ಭೀಮ ಸೇನೆಯ ಕಾರ್ಯಕರ್ತರು ಪ್ರಥಮ್ ಅವರನ್ನು ತರಾಟೆಗೆ ತೆಗೆದುಕೊಂಡರು. ಆಗ ಪ್ರಥಮ್​ ತಮ್ಮ ಹೇಳಿಕೆ ಕುರಿತು ಸ್ಪಷ್ಟನೆ ನೀಡಲು ಮುಂದಾದರು. ಆದ್ರೆ ಅಷ್ಟರಲ್ಲಿ ಅವರ ಮುಖಕ್ಕೆ ಕಾರ್ಯಕರ್ತರೊಬ್ಬರು ಮಸಿ ಬಳಿಯಲು ಮುಂದಾದರು. ತಕ್ಷಣ ಪೊಲೀಸ್ ಮಧ್ಯೆ ಪ್ರವೇಶಿಸಿ ವಾತಾವರಣ ತಿಳಿಗೊಳಿಸಿದರು.

     

     

    ಜುಲೈ 29 ರಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ಮಾಧ್ಯಮಗಳಿಗೆ ಹೇಳಿಕೆ ನೀಡುವ ಸಮಯದಲ್ಲಿ ಪ್ರಥಮ್ ಅಂಬೇಡ್ಕರ್ ಮತ್ತು ಸಂವಿಧಾನದ ಬಗ್ಗೆ ಅವಹೇಳಕಾರಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿದ ಕರ್ನಾಟಕ ಭೀಮ ಸೇನೆ ಕಾರ್ಯಕರ್ತರು, ಪೊಲೀಸ್​ ಠಾಣೆಯ ಅವರಣದಲ್ಲಿಯೇ ಪ್ರಥಮ್​ ಅವರಿಗೆ ಮುತ್ತಿಗೆ ಹಾಕಿ ಕ್ಷಮೆ ಕೇಳುವಂತೆ ಪಟ್ಟುಹಿಡಿದರು.

     

    ಈ ಕುರಿತು ಖಾಸಗಿ ವಾಹಿನಿಯೊಂದಿಗೆ ಮಾತನಾಡಿರುವ ನಟ ಪ್ರಥಮ್ ನಾನು ಯಾವುದೇ ದುರುದ್ದೇಶ ಇಟ್ಟುಕೊಂಡು ಅಂಬೇಡ್ಕರ್ ಅವರ ವಿಚಾರವಾಗಿ ಮಾತನಾಡಿಲ್ಲ ಯಾವುದೇ ಅವಹೇಳನಕಾರಿ ಹೇಳಿಕೆ ನೀಡಿಲ್ಲ. ಕೇವಲ ನಾನು ಮಾತನಾಡಿರುವ ಕೆಲವು ತುಣುಕು ನೋಡಿ ಅಂಬೇಡ್ಕರ್ ಅಭಿಮಾನಿಗಳು ಈ ನಿರ್ಧಾರಕ್ಕೆ ಬರುವುದು ತಪ್ಪು ನಾನು ಮಾತಾಡಿರುವ ಸಂಪೂರ್ಣ ವಿಡಿಯೋ ನೋಡಿ ಆಗ ನನ್ನ ಮಾತಿನ ಅರ್ಥವಾಗುತ್ತದೆ. ನನ್ನ ಮಾತಿನಿಂದ ಅಂಬೇಡ್ಕರ್ ಅನುಯಾಯಿಗಳಿಗೆ ಬೇಸರವಾಗಿದ್ದರೆ ನಾನು ಬೇಷರತ್ ಕ್ಷಮೆ ಯಾಚಿಸುತ್ತೇನೆ . ಇನ್ನು ಮುಂದೆ ನಾನು ಸಿನಿಮಾರಂಗದಿಂದ ದೂರ ಉಳಿಯಲಿದ್ದೇನೆ ಎಂದು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ .

  • ಹೋಂ ಸ್ಟೆ ನಿರ್ಮಿಸಲು ಸಹಾಯ ಧನಕ್ಕೆ ಅರ್ಜಿ ಆಹ್ವಾನ

    ಕೇಂದ್ರ ಸರ್ಕಾರದ ಬುಡಕಟ್ಟು ವ್ಯವಹಾರದ ಸಚಿವಾಲಯದ ಧರ್ತಿ ಅಬಾ ಜನಜಾತೀಯ ಗ್ರಾಮ ಉತ್ಕರ್ಷ ಅಭಿಯಾನ ಯೋಜನೆಯಡಿಯಲ್ಲಿ ಆಯ್ಕೆಯಾಗಿರುವ 14 ಗ್ರಾಮಗಳಲ್ಲಿನ ಬುಡಕಟ್ಟು/ ಆದಿವಾಸಿ ಸಮುದಾಯದವರು ಹೋಂಸ್ಟೇ ನಿರ್ಮಿಸಲು ಸಹಾಯಧನಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.
    ಜಿಲ್ಲೆಯ ಸಾಸಲು ಗ್ರಾಮ ಪಂಚಾಯಿತಿಯ ಗುಮ್ಮನಹಳ್ಳಿ ಗ್ರಾಮ, ಹಣಬೆ ಗ್ರಾಮ ಪಂಚಾಯಿತಿಯ ಬೊಮ್ಮನಹಳ್ಳಿ ಗ್ರಾಮ, ಬಿಜ್ಜವಾರ ಗ್ರಾಮ ಪಂಚಾಯಿತಿಯ ಹೊಲೆರಹಳ್ಳಿ ಗ್ರಾಮ, ಗೊಡ್ಡುಮುದ್ದೇನಹಳ್ಳಿ ಗ್ರಾಮ ಪಂಚಾಯಿತಿಯ ವೆಂಕಟೇನಹಳ್ಳಿ ಗ್ರಾಮ, ಮಂಡಿಬೆಲೆ ಗ್ರಾಮ ಪಂಚಾಯಿತಿಯ ಚಿಕ್ಕ ತತ್ತಮಂಗಲ ಗ್ರಾಮ, ಕಾರಹಳ್ಳಿ ಗ್ರಾಮ ಪಂಚಾಯಿತಿಯ ಕೆಂಪತಿಮ್ಮನಹಳ್ಳಿ ಗ್ರಾಮ, ಅಥೇಶ್ವರ ಗ್ರಾಮ ಪಂಚಾಯಿತಿಯ ಯರ್ತಿಗಾನಹಳ್ಳಿ ಮತ್ತು ಭುವನಹಳ್ಳಿ ಗ್ರಾಮ, ಬೆಟ್ಟಕೋಟೆ ಗ್ರಾಮ ಪಂಚಾಯಿತಿಯ ರಾಯಸಂದ್ರ ಗ್ರಾಮ, ಯಲಿಯೂರು ಗ್ರಾಮ ಪಂಚಾಯಿತಿಯ ಮಟ್ಟಬರಳು ಮತ್ತು ಬೊಮ್ಮನಹಳ್ಳಿ ಗ್ರಾಮ, ನಲ್ಲೂರು ಗ್ರಾಮ ಪಂಚಾಯಿತಿಯ ಜೊನ್ನಹಳ್ಳಿ ಗ್ರಾಮ, ಕೋರಮಂಗಲ ಗ್ರಾಮ ಪಂಚಾಯಿತಿಯ ಕೊಂಡೇನಹಳ್ಳಿ ಗ್ರಾಮ ಮತ್ತು ದೊಡ್ಡನಳ್ಳಾಲ ಗ್ರಾಮ ಪಂಚಾಯಿತಿಯ ವಲಗೆರೆಪುರ ಈ ಗ್ರಾಮಗಳನ್ನು ಅಭಿವೃದ್ಧಿಪಡಿಸಿ ಬುಡಕಟ್ಟು ಸಮುದಾಯದ ಸಂಸ್ಕೃತಿ, ಪರಂಪರೆ ಮತ್ತು ನೈಸರ್ಗಿಕ ಸಂಪತ್ತನ್ನು ಪ್ರವಾಸಿಗರಿಗೆ ಪರಿಚಯಿಸಲು ಉದ್ದೇಶಿಸಲಾಗಿದೆ.
    ಹೋಂ ಸ್ಟೇ ನಿರ್ಮಿಸಲು ರೂ.5.00 ಲಕ್ಷ, ನವೀಕರಿಸಲು ರೂ.3.00 ಲಕ್ಷ ಸಹಾಯಧನ ಯೋಜನೆಯನ್ನು ಪ್ರವಾಸೋದ್ಯಮ ಇಲಾಖೆಯಿಂದ ನೀಡಲಾಗುತ್ತದೆ.
    ಅರ್ಹ ಆಸಕ್ತ ವ್ಯಕ್ತಿಗಳು ಆಗಸ್ಟ್ 11 ರೊಳಗೆ ಅರ್ಜಿ ನಮೂನೆಯನ್ನು ಜಿಲ್ಲಾ ಪ್ರವಾಸೋದ್ಯಮ ಕಛೇರಿಯಲ್ಲಿ ಪಡೆದು ಅವಶ್ಯಕ ದಾಖಲೆಗಳಾದ ಜಾತಿ ಪ್ರಮಾಣ ಪತ್ರ (ಪರಿಶಿಷ್ಟ ವರ್ಗ), ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್, ಮನೆಯ ದಾಖಲೆ, ಮನೆಯ ಪೋಟೋ, ಡಿಕ್ಲೇರೇಷನ್ ಫಾರ್ಮ್ , ಗ್ರಾಮ ಪಂಚಾಯಿತಿಯ ಎನ್.ಓ.ಸಿ, ಪೋಲೀಸ್ ಇಲಾಖೆಯ ಎನ್.ಓ.ಸಿ ದಾಖಲೆಗಳ ಜೆರಾಕ್ಸ್ ಪ್ರತಿಗಳೊಂದಿಗೆ ಸಹಾಯಕ ನಿರ್ದೇಶಕರ ಕಛೇರಿ, ಪ್ರವಾಸೋದ್ಯಮ ಇಲಾಖೆ,ನೆಲಮಹಡಿ 09, ಜಿಲ್ಲಾಡಳಿತ ಭವನ, ಬೀರಸಂದ್ರ ಗ್ರಾಮ, ದೇವನಹಳ್ಳಿ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ-562110 ಸಲ್ಲಿಸಬೇಕು.
  • ಡಾ.ಮಹಾಂತ ಶಿವಯೋಗಿಗಳ ಜನ್ಮ ದಿನಾಚರಣೆ ಅಂಗವಾಗಿ “ಆಗಸ್ಟ್ 01 ರಂದು “ವ್ಯಸನ ಮುಕ್ತ ದಿನಾಚರಣೆ

    ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ತಾಲ್ಲೂಕು ಆಡಳಿತ ದೇವನಹಳ್ಳಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ಹಾಗೂ ಮದ್ಯಪಾನ ಸಂಯಮ ಮಂಡಳಿ ಬೆಂಗಳೂರು ಇವರ ವತಿಯಿಂದ ಆಗಸ್ಟ್ 01(ಶುಕ್ರವಾರ) ರಂದು ಬೆಳಗ್ಗೆ 11 ಗಂಟೆಗೆ ಡಾ.ಮಹಾಂತ ಶಿವಯೋಗಿಗಳ ಜನ್ಮ ದಿನಾಚರಣೆ ಅಂಗವಾಗಿ “ವ್ಯಸನ ಮುಕ್ತ ದಿನಾಚರಣೆ” ಕಾರ್ಯಕ್ರಮವನ್ನು ದೇವನಹಳ್ಳಿ ತಾಲ್ಲೂಕಿನ ವಿಶ್ವನಾಥಪುರ ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆಯ ಸರ್.ಎಂ ವಿಶ್ವೇಶ್ವರಯ್ಯ ಸಭಾಂಗಣದಲ್ಲಿ ಆಯೋಜಿಸಲಾಗಿದೆ.
    ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿಗಳಾದ ಎ.ಬಿ ಬಸವರಾಜು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಕೆ.ಎನ್.ಅನುರಾಧ, ಜಿಲ್ಲಾ ಪೊಲೀಸ್ ಅಧೀಕ್ಷಕರು ಸಿ.ಕೆ.ಬಾಬಾ, ದೇವನಹಳ್ಳಿ ತಹಶೀಲ್ದಾರ್ ಅನಿಲ್ ಎಂ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಉಪನಿರ್ದೇಶಕರಾದ ಅಶೋಕ್ ಕುಮಾರ್ ಡಿ, ಜಿಲ್ಲಾ ಆರೋಗ್ಯಾಧಿಕಾರಿ ಲಕ್ಕಾ ಕೃಷ್ಣ ರೆಡ್ಡಿ, ಶಿಕ್ಷಣ ಇಲಾಖೆ ಉಪನಿರ್ದೇಶಕರಾದ ಬೈಲಾಂಜನಪ್ಪ ಸೇರಿದಂತೆ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲರಾದ ಯಶೋಧ ಎಂ.ವಿ, ಕರ್ನಾಟಕ ಪಬ್ಲಿಕ್ ಶಾಲೆಯ ಮುಖ್ಯೋಪಾಧ್ಯಾಯರಾದ ಬಿರಾದಾರ್ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು, ಶಾಲಾ ಕಾಲೇಜು ವಿದ್ಯಾರ್ಥಿಗಳು ಸಿಬ್ಬಂದಿ ಉಪಸ್ಥಿತರಿರುವರು.
    ಕಾರ್ಯಕ್ರಮದಲ್ಲಿ ವ್ಯಸನ ಮುಕ್ತ ಸಮಾಜ ನಿರ್ಮಾಣದಲ್ಲಿ ಯುವಕರ ಪಾತ್ರ ಕುರಿತು ವಿಚಾರ ಸಂಕಿರಣ ಇರಲಿದೆ.
  • ಈ ಬಾರಿಯ 79ನೇ ಸ್ವಾತಂತ್ರ್ಯ ದಿನಾಚರಣೆಯು ವಿಶೇಷತೆಯಿಂದ ಕೂಡಿರಲಿದೆ: ಜಿಲ್ಲಾಧಿಕಾರಿ ಎ.ಬಿ ಬಸವರಾಜು

    79 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಅರ್ಥಪೂರ್ಣವಾಗಿ, ವಿಜೃಂಭಣೆಯಿಂದ ಆಚರಿಸಲು ನಿರ್ಧರಿಸಲಾಗಿದ್ದು, ಹಲವು ವಿಶೇಷತೆಗಳಿಂದ ಕೂಡಿರಲಿದೆ ಎಂದು ಜಿಲ್ಲಾಧಿಕಾರಿ ಎ.ಬಿ ಬಸವರಾಜು ಅವರು ತಿಳಿಸಿದ್ದಾರೆ.
    ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ನಡೆದ 79 ನೇ ಸ್ವಾತಂತ್ರ್ಯ ದಿನಾಚರಣೆ ಆಚರಿಸುವ ಸಂಬಂಧ ಕರೆಯಲಾಗಿದ್ದ ಪೂರ್ವಭಾವಿ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.
    ಆಗಸ್ಟ್ 15 ರಂದು ಬೆಳಗ್ಗೆ 7 ಗಂಟೆಗೆ ಜಿಲ್ಲಾಡಳಿತ ಭವನದ ಆವರಣದಲ್ಲಿ ಧ್ವಜಾರೋಹಣ ನೆರವೇರಿಸಿದ ಬಳಿಕ, ಬೆಳಗ್ಗೆ 09 ಗಂಟೆಗೆ ದೇವನಹಳ್ಳಿ ಟೌನ್ ನಲ್ಲಿರುವ ಕ್ರೀಡಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಜಿಲ್ಲಾ ಮಟ್ಟದ ಕಾರ್ಯಕ್ರಮವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ ಎಂದರು.
    ಜಿಲ್ಲೆಯ ಎಲ್ಲಾ ಅಧಿಕಾರಿಗಳು, ಸಿಬ್ಬಂದಿಗಳು ಸಕ್ರಿಯವಾಗಿ ಪಾಲ್ಗೊಂಡು ವಿಜೃಂಭಣೆಯಿಂದ ಸ್ವಾತಂತ್ರ್ಯ ದಿನವನ್ನು ಆಚರಣೆ ಮಾಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವರು ತಿಳಿಸಿದ್ದಾರೆ. ಈ ಬಾರಿ ಹೊಸದಾಗಿ ನಮ್ಮ ಜಿಲ್ಲೆಯಲ್ಲಿ ಹೆಲಿಕಾಪ್ಟರ್ ಮೂಲಕ ತ್ರಿವರ್ಣ ಧ್ವಜದ ಮೇಲೆ (ಅಂದರೆ ಧ್ವಜಾರೋಹಣ ಸಮಯದಲ್ಲಿ) ಪುಷ್ಪವೃಷ್ಟಿ ಮಾಡಲಾಗುವುದು. ಕಾರ್ಯಕ್ರಮದಲ್ಲಿ ಪರೇಡ್, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲು ತೀರ್ಮಾನಿಸಲಾಗಿದೆ ಎಂದು ಹೇಳಿದರು.
    ಸ್ವಾತಂತ್ರ ದಿನಾಚರಣೆಗೂ ಹಿಂದಿನ ಮೂರು ದಿನಗಳು ಕ್ರೀಡಾಂಗಣದಲ್ಲಿ ಪೂರ್ವಾಭ್ಯಾಸ ಮಾಡುವ ಮಕ್ಕಳಿಗೆ, ಸಿಬ್ಬಂದಿಗಳಿಗೆ ಅಗತ್ಯ ಕುಡಿಯುವ ನೀರು, ಗುಣಮಟ್ಟದ ಆಹಾರ ನೀಡಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು. ದೇವನಹಳ್ಳಿ ಪ್ರವಾಸಿ ಮಂದಿರದಿಂದ ಕ್ರೀಡಾಂಗಣದವರೆಗೆ ರಸ್ತೆ ಬದಿಗಳಲ್ಲಿ ಒಂದು ಸಾವಿರಕ್ಕೂ ಅಧಿಕ ತ್ರಿವರ್ಣ ಧ್ವಜಗಳನ್ನು ಅಳವಡಿಸಲಾಗುವುದು. ಸುಮಾರು 300ಕ್ಕು ಅಧಿಕ ತ್ರಿವರ್ಣ ಬಣ್ಣದ ಬಲೂನ್ ಗಳನ್ನು ಹಾರಿ ಬಿಡಲಾಗುವುದು.
    ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ದೇವನಹಳ್ಳಿ ಟೌನ್ ನಲ್ಲಿ ಅನಗತ್ಯ ಪ್ಲೆಕ್ಸ್, ಬ್ಯಾನರ್ ಗಳನ್ನು ತೆರವುಗೊಳಿಸಿ ಎಂದು ಪುರಸಭೆ ಅಧಿಕಾರಿಗಳಿಗೆ ಸೂಚಿಸಿದರಲ್ಲದೇ ಕಾರ್ಯಕ್ರಮದಲ್ಲಿ ಪ್ಲಾಸ್ಟಿಕ್ ಉತ್ಪನ್ನಗಳನ್ನು ಬಳಸದಂತೆ ಆದೇಶಿಸಿದರು.