Blog

  • ಪಳೆಯುಳಿಕೆ ಇಂಧನಕ್ಕೆ ಪರ್ಯಾಯವಾಗಿ ನವೀಕೃತ ಮತ್ತು ಜೈವಿಕ ಇಂಧನ ಬಳಕೆಗೆ ಸಚಿವ ಈಶ್ವರ ಖಂಡ್ರೆ ಕರೆ

    ಪರಿಸರ ಸ್ನೇಹಿಯಾದ ನವೀಕರಿಸಬಹುದಾದ ಮತ್ತು ಜೈವಿಕ ಇಂಧನ ಬಳಕೆಗೆ ಹೆಚ್ಚಿನ ಒತ್ತು ನೀಡುವ ಮೂಲಕ ಪರಿಸರ ಸಂರಕ್ಷಣೆಗೆ ನಾವೆಲ್ಲರೂ ಮುಂದಾಗಬೇಕಿದೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಹೇಳಿದರು.

     

    ನೆಲಮಂಗಲ ಬಳಿಯ ಕ್ಷೇಮವನದಲ್ಲಿಂದು ವಿಶ್ವ ಪರಿಸರ ದಿನದ ಅಂಗವಾಗಿ ಜೈವಿಕ ಇಂಧನ ಅಭಿವೃದ್ಧಿ ಮಂಡಳಿ ಸಹಯೋಗದಲ್ಲಿ ಆಯೋಜಿಸಿದ್ದ ವಿಶ್ವ ಪರಿಸರ ದಿನಾಚರಣೆಯನ್ನು ಸಸಿ ನೆಡುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು ಇಂದು ಜಗತ್ತಿನಾದ್ಯಂತ ಹಲವು ಸಭೆ, ಚರ್ಚಾಗೋಷ್ಠಿಗಳು ನಡೆಯುತ್ತಿದ್ದು, ಜಾಗತಿಕ ತಾಪಮಾನ ಏರಿಕೆ, ಹವಾಮಾನ ಬದಲಾವಣೆಯ ಬಗ್ಗೆ ಚಿಂತನ ಮಂಥನ ನಡೆಯುತ್ತಿದೆ. ಅಲ್ಲೆಲ್ಲಾ ವ್ಯಕ್ತವಾಗುವ ಪರಿಹಾರ ಮರ ಬೆಳೆಸುವುದು ಎಂದು ಎಲ್ಲರೂ ಅಭಿಪ್ರಾಯಪಟ್ಟಿದ್ದಾರೆ ಎಂದರು.

     

    ಪ್ರಕೃತಿ ನಮಗೆ ನೀಡಿರುವ ನೈಸರ್ಗಿಕ ಸಂಪನ್ಮೂಲವನ್ನು ವಿವೇಚನಾತ್ಮಕವಾಗಿ ಮತ್ತು ಹಿತಮಿತವಾಗಿ ಬಳಸಿದರೆ ಮಾತ್ರ ಮನುಷ್ಯ ಉಳಿಯಲು ಸಾಧ್ಯ ಎಂದ ಅವರು, ಜೀವನವೂ ಇರಬೇಕು, ಜೀವನೋಪಾಯವೂ ಇರಬೇಕು, ಅದೇ ರೀತಿ ಸುಸ್ಥಿರ ಅಭಿವೃದ್ಧಿಯೂ ಆಗಬೇಕು, ಪ್ರಕೃತಿಯೂ ಉಳಿಯಬೇಕು ಆ ರೀತಿ ನಾವು ಬದುಕುವುದನ್ನು ಕಲಿಯಬೇಕು ಎಂದರು.

     

    ಬೆಂಗಳೂರು ಒಂದು ಕಾಲದಲ್ಲಿ ಉದ್ಯಾನ ನಗರಿ ಆಗಿತ್ತು, ನಿವೃತ್ತರ ಸ್ವರ್ಗವಾಗಿತ್ತು. ಇಂದು ಕಾಂಕ್ರೀಟ್ ಕಾಡಾಗುತ್ತಿದೆ. ನೀರಿನ ಸಮಸ್ಯೆ ಎದುರಾಗುತ್ತಿದೆ. ಉಸಿರಾಡುವ ಗಾಳಿಯೂ ವಿಷವಾಗುತ್ತದೆ. ಒಂದೂವರೆ ಕೋಟಿಗೂ ಹೆಚ್ಚು ವಾಹನಗಳಿದ್ದು ಅವುಗಳಿಂದ ಹೊರಹೊಮ್ಮುವ ಇಂಗಾಲದ ಡೈ ಆಕ್ಸೈಡ್ ನಿಂದ ತಾಪಮಾನ ಏರಿಕೆ ಆಗುತ್ತಿದೆ. ಹೀಗಾಗಿ ಪ್ರಕೃತಿ ಪರಿಸರ ಉಳಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದರು.

     

    ಜೈವಿಕ ಇಂಧನ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಸುಧೀಂದ್ರ ಮಾತನಾಡಿ ಇಲ್ಲಿ ನೆಡಲಾಗುತ್ತಿರುವ ಪ್ರತಿಯೊಂದು ಸಸಿಯೂ ಬೆಳೆದು ಮರವಾಗುವಂತೆ ನೋಡಿಕೊಳ್ಳುವ ಜವಾಬ್ದಾರಿಯನ್ನು ವಹಿಸಿಕೊಂಡಿದ್ದು, ಇದೇ ರೀತಿ ಎಲ್ಲರೂ ಗಮನ ಹರಿಸಿದರೆ ಹಸಿರು ರಾಜ್ಯದ ಕನಸು ನನಸಾಗುತ್ತದೆ ಎಂದರು.

     

    ಕಾರ್ಯಕ್ರಮದಲ್ಲಿ ಜೈವಿಕ ಇಂಧನ ಅಭಿವೃದ್ಧಿ ಮಂಡಳಿಯ ವ್ಯವಸ್ಥಾಪಕ ನಿರ್ದೇಶಕರಾದ ಶಿವ ಶಂಕರ್, ಪ್ರಕೃತಿ ಪೌಂಡೇಶನ್ ಸ್ಥಾಪಕರಾದ ಲೋಕೇಶ್ ಗೌಡ, ಪ್ರಕೃತಿ ಪ್ರಸನ್ನ, ಡಿ.ಎಫ್.ಒ ಲೋಹಿತ್ ಹಾಗೂ ಸ್ಥಳೀಯ ಪ್ರತಿನಿಧಿಗಳು ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.

  • ಮಾವಿಗೆ ಬೆಂಬೆಲ ಬೆಲೆ ನಿಗದಿಗೆ ಆಹಾರ ಸಚಿವ:- ಕೆಹೆಚ್.ಮುನಿಯಪ್ಪ ಮನವಿ

    ಬೆಂಗಳೂರು: ಮಾನ್ಯ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವರಾದ ಕೆಹೆಚ್.ಮುನಿಯಪ್ಪ ರವರು ಇಂದು ನಡೆದ ಸಚಿವ ಸಂಪುಟದ ಸಭೆಯಲ್ಲಿ ಮಾವಿಗೆ ಬೆಂಬಲ ಬೆಲೆ ಷೋಷಣೆ ಮಾಡಲು ಸರ್ಕಾರಕ್ಕೆ ಒತ್ತಾಯಿಸಿದರು.

     

    ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನ ಮಾವಿನ ಹಣ್ಣಿಗೆ ಏಷ್ಯಾ ಖಂಡದಲ್ಲೇ ಅತಿ ಹೆಚ್ಚು ಪ್ರಸಿದ್ದಿ ಯಾಗಿದ್ದು ರೈತರು ನಿರ್ದಿಷ್ಟ ಬೆಲೆ ಇಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದಾರೆ ಈಗಾಗಲೇ ನೆರೆಯ ಆಂದ್ರ ಪ್ರದೇಶ ಸರ್ಕಾರವು ನಮ್ಮ ತೋತಾಪುರಿ ಮಾವಿನ ಹಣ್ಣಿನ ಮಾರಾಟಕ್ಕೆ ನಿರ್ಬಂಧವಿದಿಸಿದ್ದು ಮಾವಿಗೆ ಬೆಲೆ ಇಲ್ಲದೆ ರೈತರು ಕಂಗಾಲಾಗಿದ್ದಾರೆ.

     

    ಈಗಾಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ರವರು ಆಂದ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ರವರಿಗೆ ಪತ್ರ ಬರೆದಿದ್ದಾರೆ ನಮ್ಮ ಸರ್ಕಾರವು ರೈತರ ಪರವಾಗಿದ್ದು ರೈತರು ಬೆಲೆದ ಬೆಲೆಗೆ ಸಹಕಾರಿಯಾಗಲು ಬೆಂಬೆಲ ಬೆಲೆಯನ್ನು ನಿಗದಿಪಡಿಸಲು ಮುಖ್ಯಮಂತ್ರಿಗಳಿಗೆ ಒತ್ತಾಯಿಸಿದರು.

     

    ಈ ಸಂದರ್ಭದಲ್ಲಿ ಕೋಲಾರ ಜಿಲ್ಲಾ ಉಸ್ತುವಾರಿ ಸಚಿವರಾದ ಬೈರತಿ ಸುರೇಶ್ ,ಚಿಕ್ಕಬಳ್ಳಾಪುರ ಉಸ್ತುವಾರಿ ಸಚಿವರಾದ ಎಂ.ಸಿ ಸುಧಾಕರ್ ಹಾಗೂ ಕಂದಾಯ ಸಚಿವರಾದ ಕೃಷ್ಣ ಬೈರೇಗೌಡರವರು ದ್ವನಿಗೂಡಿಸಿದರು.

  • ಎಂ. ಎ. ಬಿ. ಎಲ್. ಪ್ರೌಢಶಾಲೆಯಲ್ಲಿ ಶಾಲಾ ಸಂಸತ್ ಚುನಾವಣೆ

    ಮಕ್ಕಳ ಹಕ್ಕುಗಳಿಗೆ ಧ್ವನಿಯಾಗಲು ಶಾಲಾ ಸಂಸತ್ ಸಹಕಾರಿ ಆಗಲಿದೆ ಎಂದು ಎಂ.ಎ.ಬಿ.ಎಲ್ ವಿದ್ಯಾಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿ.ಪಿ.ಪ್ರಿಯಾಂಕ ತಿಳಿಸಿದರು.

     

    ದೊಡ್ಡಬಳ್ಳಾಪುರ ನಗರದ ಎಂ.ಎ.ಬಿ.ಎಲ್ ಪ್ರೌಢಶಾಲೆಯಲ್ಲಿ ನಡೆದ ಶಾಲಾ ಸಂಸತ್ ಚುನಾವಣೆಯ ಪ್ರಕ್ರಿಯೆಯನ್ನು ಉದ್ಘಾಟಿಸಿ ಮಾತನಾಡಿದ ಅವರು ಇಂದಿನ ಮಕ್ಕಳೇ ನಾಳಿನ ನಾಯಕರು. ಆದ್ದರಿಂದ ಮಕ್ಕಳಲ್ಲಿ ನಾಯಕತ್ವ ಗುಣ ಮತ್ತು ಜವಾಬ್ದಾರಿ ನಿರ್ವಹಣಾ ಸಾಮರ್ಥ್ಯವನ್ನು ಬೆಳೆಸುವುದು ಅಗತ್ಯವಾಗಿದೆ. ನಾಯಕತ್ವ ಗುಣಗಳನ್ನು ಬೆಳೆಸುವಲ್ಲಿ ಶಾಲಾ ಸಂಸತ್ತು ಪ್ರಮುಖ ಪಾತ್ರ ವಹಿಸುತ್ತದೆ ಎಂದರು.

    ಶಾಲಾ ನಿರ್ವಹಣೆಯಲ್ಲಿ ಮಕ್ಕಳನ್ನು ಪಾಲುದಾರರನ್ನಾಗಿ ಮಾಡುವುದು ಶಾಲಾ ಸಂಸತ್ ವ್ಯವಸ್ಥೆಯ ಮುಖ್ಯ ಉದ್ದೇಶವಾಗಿದೆ. ಶಾಲಾ ಆಡಳಿತದಲ್ಲಿ ಮಕ್ಕಳನ್ನು ತೊಡಗಿಸಿಕೊಳ್ಳುವ ಮೂಲಕ ವಿದ್ಯಾರ್ಥಿಗಳಲ್ಲಿ ನಾಯಕತ್ವ ಮತ್ತು ಜವಾಬ್ದಾರಿಯ ನಿರ್ವಹಣೆಯ ಸರ್ಮಥವಾಗಿ ನಡೆಸಲು ಅನುಕೂಲವಾಗುತ್ತದೆ ಎಂದರು.

     

    ಎಂ.ಎ.ಬಿ.ಎಲ್ ಪ್ರೌಢಶಾಲೆಯ ಶ ಮುಖ್ಯಶಿಕ್ಷಕ ಜಿ. ಸುರೇಶ್ ಮಾತನಾಡಿ, ಮಕ್ಕಳಲ್ಲಿ ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಬೆಳೆಸುವುದು ಶಿಕ್ಷಣದ ಮೌಲ್ಯವಾಗಿದೆ. ವಿದ್ಯಾರ್ಥಿಗಳಲ್ಲಿ ಉತ್ತಮ ಮೌಲ್ಯಗಳನ್ನು ವೃದ್ದಿಸಲ್ಲಿ ಶಾಲಾ ಸಂಸತ್ತು ಮಹತ್ವದ ಪಾತ್ರ ವಹಿಸುತ್ತದೆ. ವಿದ್ಯಾರ್ಥಿಗಳಲ್ಲಿ ಶಾಲಾ ಕಲಿಕೆಯ ಜೊತೆಗೆ ಪ್ರಜಾಪ್ರಭುತ್ವದ ಮೂಲಾಂಶಗಳನ್ನು ಬೆಳೆಸಿದರೆ ಭವಿಷ್ಯದಲ್ಲಿ ಉತ್ತಮ ನಾಯಕರನ್ನು ದೇಶಕ್ಕೆ ಕಾಣಿಕೆಯಾಗಿ ನೀಡಬಹುದು. ಶಾಲೆಯ ಪ್ರತಿಯೊಂದು ಚಟುವಟಿಕೆ ಮತ್ತು ಕಾರ್ಯಕ್ರಮಗಳಲ್ಲಿ ಮಕ್ಕಳ ಭಾಗವಹಿಸುವಿಕೆ ಅತ್ಯಂತ ಮಹತ್ವದ್ದು.ಮಕ್ಕಳಲ್ಲಿ ಐಕ್ಯತೆ, ಒಗ್ಗಟ್ಟು, ಸೋದರತ್ವ ಭಾವನೆ ಬೆಳಸಲು ಶಾಲಾ ಸಂಸತ್ತು ಸಹಕಾರಿ ಎಂದರು.

    ಕಾರ್ಯಕ್ರಮದಲ್ಲಿ ಎಂ.ಎ.ಬಿ.ಎಲ್ ವಿದ್ಯಾಸಂಸ್ಥೆಯ ನಿರ್ದೇಶಕಿ ಎಂ. ಜಿ. ಪ್ರೀತಿ ಮತ್ತು ಶಾಲಾ ಶಿಕ್ಷಕರು, ಸಿಬ್ಬಂದಿ ಉಪಸ್ಥಿತರಿದ್ದರು. ಚುನಾವಣಾ ಪ್ರಕ್ರಿಯೆಯಲ್ಲಿ ಮಕ್ಕಳು ಸಂಭ್ರಮದಿಂದ ಪಾಲ್ಗೊಂಡರು. ಶಿಕ್ಷಕರು ಚುನಾವಣಾ ಅಧಿಕಾರಿಗಳಾಗಿ ಕಾರ್ಯ ನಿರ್ವಹಿಸಿದರು.

  • 60ಕ್ಕೂ ಹೆಚ್ಚು ರಾಷ್ಟ್ರೀಯ ಸ್ವಯಂ ಸೇವಾ ಸಂಘದ ಕಾರ್ಯಕರ್ತರಿಗೆ ಗೌರವ ಸನ್ಮಾನ

    ದೊಡ್ಡಬಳ್ಳಾಪುರ:ವಿಶ್ವಮಾನ್ಯ ಅಟಲ್ ಬಿಹಾರಿ ವಾಜಪೇಯಿ ಸನ್ಮಾನ ಸಮಿತಿ ವತಿಯಿಂದ ಹಿರಿಯ ಅಶಕ್ತ ಸಂಘ ಪರಿವಾರದ ಹಾಗೂ ಬಿಜೆಪಿ ಕಾರ್ಯಕರ್ತರಿಗೆ ಗೌರವ ಸನ್ಮಾನ ಸಮಾರಂಭವನ್ನು ನಗರದ ಕೆ. ಎಂ. ಹೆಚ್. ಕಾನ್ವೆಂಶನ್ ಹಾಲ್ ನಲ್ಲಿ ನಡೆಸಲಾಯಿತು.

    ಶ್ರೀ ಅಟಲ್ ಬಿಹಾರಿ ವಾಜಪೇಯಿ ರವರ ಸನ್ಮಾನ ಸಮಿತಿ ವತಿಯಿಂದ ಭಾರತೀಯ ಜನತಾ ಪಾರ್ಟಿ ಹಾಗೂ ರಾಷ್ಟ್ರೀಯ ಸ್ವಯಂ ಸೇವಾ ಸಂಘ ದಲ್ಲಿ 40-50 ವರ್ಷ ಗಳಿಂದ ಅಮೋಘ ಸೇವೆ ಸಲ್ಲಿಸಿದ 60ಕ್ಕೂ ಹೆಚ್ಚು ಕಾರ್ಯಕರ್ತರಿಗೆ ಬಿಜೆಪಿ ಹಿರಿಯ ಮುಖಂಡರಾದ ಕೆ ಎಂ ಹನುಮಂತರಾಯಪ್ಪ ರವರ ನೇತೃತ್ವ ದಲ್ಲಿ ಅಭಿನಂದಿಸಿ ತಲಾ 10.000/- ರೂಗಳ ಧನ ಸಹಾಯ ನೀಡಲಾಯಿತು.

     

    ಕಾರ್ಯಕ್ರಮದಲ್ಲಿ ಸಮಾರಂಭದ ಆಯೋಜಕರಾದ ಹಿರಿಯ ಬಿಜೆಪಿ ಮುಖಂಡ ಕೆ. ಎಂ. ಹನುಮಂತರಾಯಪ್ಪ, ಪುಷ್ಪಾoಡಜ ಶ್ರೀಗಳು, ಮಾಜಿ ಪುರಸಭಾ ಉಪಾಧ್ಯಕ್ಷ ಡಿ. ವಿ. ನಾರಾಯಣ ಶರ್ಮ ಎಂ. ಪಿ. ನಾಗರಾಜ್ ಎಸ್. ನಂಜಪ್ಪ , ಮಾಜಿ ನಗರಸಭಾಧ್ಯಕ್ಷ ರಾಜೇಂದ್ರ, ಪವಾಡ ಭಂಜಕ ಹುಲಿಕಲ್ ನಟರಾಜ್, ನಾ. ಮಲ್ಲಿಕಾರ್ಜುನ್, ಲಯನ್ಸ್ ಕ್ಲಬ್ ಅಧ್ಯಕ್ಷೆ ಮಂಗಳ ಗೌರಮ್ಮ ಪರ್ವತಯ್ಯ, ಬಮುಲ್ ನಿರ್ದೇಶಕ ಬಿ. ಸಿ. ಆನಂದ್, ಎ. ಪಿ. ಎಂ. ಸಿ. ಮಾಜಿ ಅಧ್ಯಕ್ಷ ತಿ. ರಂಗರಾಜು, ತಾಲೂಕು ಬಿಜೆಪಿ ಅಧ್ಯಕ್ಷ ನಾಗೇಶ್, ನಗರಸಭಾ ಸದಸ್ಯರಾದ ಬಂತಿ ವೆಂಕಟೇಶ್, ವತ್ಸಲಾ, ಕೆ. ಹೆಚ್. ರಂಗರಾಜ್, ವೆಂಕಟರಾಜ್, ನಾಗರಾಜ್, ಸೀತಾರಾಮು, ಟಿ. ಜಿ. ಮಂಜುನಾಥ್(LIC), ಕೆ. ವಿ. ರಾಜಣ್ಣ ಸೇರಿದಂತೆ ಹಲವಾರು ಬಿಜೆಪಿ ಮುಖಂಡರು ಭಾಗವಹಿಸಿದ್ದರು.

  • ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ(ವಿಮಾ) ಯೋಜನೆ : ರೈತರು ಬೆಳೆ ವಿಮೆಗೆ ನೋಂದಾಯಿಸಿ

    2025ರ ಮುಂಗಾರು ಹಂಗಾಮಿನ ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ(ವಿಮಾ) ಯೋಜನೆಯನ್ನು ಜಿಲ್ಲೆಯಲ್ಲಿ ಕೃಷಿ ಇಲಾಖೆಯಿಂದ ಅನುಷ್ಠಾನಗೊಳಿಸಲಾಗುತ್ತಿದ್ದು, ಪ್ರಕೃತಿ ವಿಕೋಪದಿಂದ ಬೆಳೆ ನಷ್ಟ ಸಂಭವಿಸಿದರೆ ರೈತರಿಗೆ ಪರಿಹಾರ ನೀಡುವ ಮೂಲಕ ಆರ್ಥಿಕ ಭದ್ರತೆ ಒದಗಿಸುವ ದೃಷ್ಟಿಯಿಂದ ವಿಮೆ ಯೋಜನೆ ಜಾರಿಗೆ ತರಲಾಗಿದೆ.

     

    ವಿಮೆ ಮಾಡಿದ ಕ್ಷೇತ್ರದಲ್ಲಿ ಮಳೆ ಅಭಾವದಿಂದ ಬಿತ್ತನೆ/ನಾಟಿ ವಿಫಲಗೊಂಡಲ್ಲಿ ವಿಮಾ ರಕ್ಷಣೆ ಒದಗಿಸುವುದು, ಹಾಲಿ ಇರುವ ಬೆಳೆಗಳಿಗೆ (ಬಿತ್ತನೆಯಿಂದ ಕಟಾವಿನ ಹಂತದವರೆಗೆ) ಬರ/ಶುಷ್ಕ ಪರಿಸ್ಥಿತಿ, ನೆರೆ/ಪ್ರವಾಹಗಳಿಂದ ಬೆಳೆ ಮುಳಗಡೆ, ಗುಡುಗು ಮಿಂಚುಗಳಿಂದ ಉಂಟಾಗುವ ಬೆಂಕಿ ಅವಘಡ, ಭೂಕುಸಿತ, ಬಿರುಗಾಳಿ, ಚಂಡಮಾರುತ ಸಹಿತ ಮಳೆ, ಅಕಾಲಿಕ ಮಳೆಯಿಂದ ನಷ್ಟ ಸಂಭವಿಸಿದಲ್ಲಿ ಸಮಗ್ರ ವಿಮಾ ಭದ್ರತೆಯನ್ನು ಒದಗಿಸುವುದು ಹಾಗೂ ಕಟಾವಿನ ನಂತರ ಬೆಳೆಯನ್ನು ಜಮೀನಿನಲ್ಲಿ ಒಣಗಲು ಬಿಟ್ಟ ಸಂದರ್ಭದಲ್ಲಿ (14 ದಿನಗಳವರೆಗೆ) ಆಲಿಕಲ್ಲು ಮಳೆ, ಚಂಡಮಾರುತ ಸಹಿತ ಮಳೆ ಹಾಗೂ ಅಕಾಲಿಕ ಮಳೆಯಿಂದ ಬೆಳೆ ನಷ್ಟವಾದರೆ ನಷ್ಟ ಪರಿಹಾರವನ್ನು ಒದಗಿಸುವುದ ವಿಮೆಯ ಉದ್ದೇಶವಾಗಿದೆ.

     

    ಜಿಲ್ಲೆಯಲ್ಲಿ ಮುಖ್ಯ ಬೆಳೆಯಾಗಿ ರಾಗಿ (ಮಳೆಯಾಶ್ರಿತ ಮತ್ತು ನೀರಾವರಿ) ಹಾಗೂ ಭತ್ತ (ನೀರಾವರಿ), ಮುಸುಕಿನಜೋಳ (ಮಳೆಯಾಶ್ರಿತ ಮತ್ತು ನೀರಾವರಿ), ತೊಗರಿ (ಮಳೆಯಾಶ್ರಿತ ಹಾಗೂ ನೀರಾವರಿ), ನೆಲಗಡಲೆ (ಮಳೆಯಾಶ್ರಿತ) ಹುರುಳಿ (ಮಳೆಯಾಶ್ರಿತ) ಮತ್ತು ಟೊಮ್ಯಾಟೋ ಬೆಳೆಗಳನ್ನು ಇತೆರೆ ಬೆಳೆಗಳಾಗಿ ಅಧಿಸೂಚಿಸಲಾಗಿದೆ.

     

    ಆಯಾ ತಾಲ್ಲೂಕಿನಲ್ಲಿ ಮುಖ್ಯ ಬೆಳೆಗಳಿಗೆ ಗ್ರಾಮ ಪಂಚಾಯತ್/ ನಗರ ಸ್ಥಳೀಯ ಸಂಸ್ಥೆಗಳನ್ನು ವಿಮಾ ಘಟಕವಾಗಿ ಹಾಗೂ ಇತರೆ ಬೆಳೆಗಳಿಗೆ ಹೋಬಳಿಯನ್ನು ವಿಮಾ ಘಟಕವಾಗಿ ಪರಿಗಣಿಸಲಾಗಿದೆ.

     

    ಟೊಮ್ಯಾಟೋ ಮತ್ತು ತೊಗರಿ ಬೆಳೆಗೆ ಜುಲೈ 15, ನೆಲಗಡಲೆ ಬೆಳೆಗೆ ಜುಲೈ 31 ಮತ್ತು ಉಳಿದಂತೆ ರಾಗಿ, ಭತ್ತ, ಮುಸುಕಿನ ಜೋಳ ಮತ್ತು ಹುರುಳಿ ಬೆಳೆಗಳಿಗೆ ಆಗಸ್ಟ್ 16 ರವರೆಗೆ ವಿಮೆಗೆ ನೋಂದಾಯಿಸಲು ಕೊನೆಯ ದಿನಾಂಕವಾಗಿದೆ.

    ರೈತರು ವಿಮೆಗೆ ನೋಂದಾಯಿಸಿಕೊಳ್ಳಲು ಹತ್ತಿರದ ಗ್ರಾಮ ಒನ್, ಸಾಮಾನ್ಯ ಸೇವಾ ಕೇಂದ್ರ, ಕರ್ನಾಟಕ ಒನ್ ಅಥವಾ ಬ್ಯಾಂಕ್ ಗಳಲ್ಲಿ ವಿಮಾ ಪ್ರಸ್ತಾವನೆ, ಪಹಣಿ, ಚಾಲ್ತಿ ಬ್ಯಾಂಕ್ ಪಾಸ್ ಪುಸ್ತಕ, ಮೊಬೈಲ್ ಸಂಖ್ಯೆ ಮತ್ತು ಆಧಾರ್ ಸಂಖ್ಯೆಯೊಂದಿಗೆ ಪ್ರೀಮಿಯಂ ಪಾವತಿಸಿ ವಿಮೆಗೆ ನೋಂದಾಯಿಸುವುದು.

     

    ರೈತರು ಅಂದಾಜು ಅಥವಾ ಅಪೇಕ್ಷಿತ ಬೆಳೆ ಬಿತ್ತನೆ ಆಧಾರದ ಮೇಲೆ ಬಿತ್ತನೆ ಪೂರ್ವದಲ್ಲಿ ವಿಮೆಗೆ ನೋಂದಾಯಿಸಿಕೊಳ್ಳಬಹುದು, ಬಿತ್ತನೆ ದೃಢೀಕರಣದ ಅವಶ್ಯಕತೆ ಇರುವುದಿಲ್ಲ. ಬೆಳೆ ವಿಮೆಗೆ ನೋಂದಾಯಿಸಿದ ನಂತರ ಬೇರೆ ಬೆಳೆ ಬಿತ್ತನೆ ಮಾಡಿದ್ದಲ್ಲಿ ಯೋಜನೆಯಲ್ಲಿ ಭಾಗವಹಿಸಲು ನಿಗಧಿಪಡಿಸಿದ ಅವಧಿಯೊಳಗೆ ತಾವು ನೋಂದಾಯಿಸಿದ ಕೇಂದ್ರಗಳಿಗೆ ತೆರಳಿ ಬಿತ್ತನೆ ದೃಢೀಕರಣ ಪತ್ರ ನೀಡಿ ವಿಮೆ ಮಾಡಿಸಿದ ಬೆಲೆಯನ್ನು ಬದಲಾಯಿಸಬಹುದು.

     

    ಆಸಕ್ತ ರೈತರು ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ತಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರಗಳು, ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಅಥವಾ ವಿಮಾ ಸಂಸ್ಥೆಯ ಪ್ರತಿನಿಧಿಯನ್ನು ಸಂಪರ್ಕಿಸಬಹುದಾಗಿದೆ.

     

    ಅಗ್ರಿಕಲ್ಚರ್ ಇನ್ಸೂರೆನ್ಸ್ ಕಂಪನಿ ಆಫ್ ಇಂಡಿಯಾ ಲಿ., ವಿಮಾ ಸೌಲಭ್ಯ ನೀಡುವ ಸಂಸ್ಥೆಯಾಗಿದ್ದು ಟೋಲ್ ಫ್ರೀ ನಂ-1800 425 0505 ಸಂಖ್ಯೆಗೆ ಸಂಪರ್ಕಿಸಬಹುದು.

     

    ವಿಮಾ ಸಂಸ್ಥೆಯ ಜಿಲ್ಲಾ ಮಟ್ಟದ ಪ್ರತಿನಿಧಿಗಳು ಮತ್ತು ಸಂಯೋಜಕರುಗಳಾದ ಅಮೋಘ ವರ್ಷ ಆನಂದ್ ಜಿಲ್ಲಾ ಪ್ರತಿನಿಧಿ ದೂ.ಸಂಖ್ಯೆ:8904088274, ತಾಲ್ಲೂಕು ಮಟ್ಟದ ಪ್ರತಿನಿಧಿಗಳಾದಚಿರಂಜನ್ ಅರ್.ಎಂ(ದೇವನಹಳ್ಳಿ)ದೂ,ಸಂಖ್ಯೆ:9606173802,ನಿಶ್ಚಿತಾ.ಎಂ(ದೊಡ್ಡಬಳ್ಳಾಪುರ)ದೂ,ಸಂಖ್ಯೆ:8497818723,ಗುರು ಕಿರಣ್ಆರ್(ಹೊಸಕೋಟೆ)ದೂ,ಸಂಖ್ಯೆ:6362667097,ಸಾಗರ್ ಸಿ.ಜೆ(ನೆಲಮಂಗಲ)ದೂ,ಸಂಖ್ಯೆ:8217377255, ಯಶವಂತ ದೂ,ಸಂಖ್ಯೆ:9902545564 ಹಾಗೂ ಅಜಯ್ ವಿರೂಪಾಕ್ಷ ಕಸರ್ ದೂ,ಸಂಖ್ಯೆ:9902944507,ಇವರುಗಳನ್ನು ಸಂಪರ್ಕಿಬಹುದಾಗಿದೆ ಎಂದು ಜಿಲ್ಲೆಯ ಜಂಟಿ ಕೃಷಿ ನಿರ್ದೇಶಕರಾದ ಬಿ.ಜಿ ಕಲಾವತಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

  • ಜೂನ್ 16 ರಿಂದ ಜುಲೈ 31ರವರೆಗೆ ಡೈಯೇರಿಯಾ ತಡೆಗಟ್ಟುವಿಕೆ ಅಭಿಯಾನ

    ಜಿಲ್ಲೆಯಲ್ಲಿ ಅತಿಸಾರದಿಂದ ಮಕ್ಕಳ ಮರಣವನ್ನು ಶೂನ್ಯಕ್ಕೆ ತರುವುದನ್ನು ಗುರಿಯಾಗಿಸಿ ಡೈಯೇರಿಯಾ ತಡೆಗಟ್ಟುವಿಕೆ ಅಭಿಯಾನ -2025 ಅನ್ನು ಜೂನ್ 16 ರಿಂದ ಜುಲೈ 31 ರವರೆಗೆ ಜಿಲ್ಲೆಯಾದ್ಯಂತ ಹಮ್ಮಿಕೊಳ್ಳಲಾಗಿದ್ದು ಗರ್ಭಿಣಿ, ಬಾಣಂತಿಯರು, ಮಕ್ಕಳು ಹಾಗೂ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಮೂಲಕ ಮಕ್ಕಳ ಆರೋಗ್ಯ ರಕ್ಷಣೆಗೆ ಮೊದಲ ಆದ್ಯತೆ ನೀಡಿ ಎಂದು ಆರೋಗ್ಯ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಎ.ಬಿ ಬಸವರಾಜು ಅವರು ಸೂಚಿಸಿದರು.

     

    ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಜಿಲ್ಲಾ ಮಟ್ಟದ ಲಸಿಕಾ ಕಾರ್ಯಪಡೆ ಸಭೆ ಹಾಗೂ ಪಿ.ಸಿ ಮತ್ತು ಪಿ.ಎನ್.ಡಿ.ಟಿ ಸಭೆಯ ಅಧ್ಯಕ್ಷತೆ ವಹಿಸಿ

     

    Stop Diarrhoea Campaign -2025 ಐ.ಇ.ಸಿ ಚಟುವಟಿಕೆಗಳಿಗೆ ಸಂಬಂಧಿಸಿದ ಪೋಸ್ಟರ್ ಬಿಡುಗಡೆಗೊಳಿಸಿ ಮಾತನಾಡಿದ ಅವರು ಅತಿಸಾರ ಪೀಡಿತ ಮಕ್ಕಳಿಗೆ ತುರ್ತು ಆರೈಕೆ ಮತ್ತು ಸೂಕ್ತ ಚಿಕಿತ್ಸೆ ನೀಡಿ ಜೊತೆಗೆ ಜನಸಾಮಾನ್ಯರಲ್ಲಿ, ವಿಶೇಷವಾಗಿ ಪೋಷಕರು ಮತ್ತು ಮಕ್ಕಳಲ್ಲಿ, ಪರಿಸರ ನೈರ್ಮಲ್ಯ, ಕೈ ತೊಳೆಯುವ ಸರಿಯಾದ ವಿಧಾನ, ಓ.ಆರ್.ಎಸ್. ತಯಾರಿಕೆ ಹಾಗೂ ವೈಯಕ್ತಿಕ ಶುಚಿತ್ವದ ಕುರಿತು ಅರಿವು ಮೂಡಿಸಿ ಎಂದರು.

     

    ಆರೋಗ್ಯ ದೃಷ್ಟಿಯಿಂದ ಗರ್ಭಿಣಿ ಹಾಗೂ ಮಕ್ಕಳಿಗೆ ಕಾಲಕಾಲಕ್ಕೆ ನೀಡುವ ಲಸಿಕೆಗಳು ಪಡೆಯುತ್ತಿದ್ದಾರಾ ಎಂಬುದರ ಬಗ್ಗೆ ಗಮನ ಹರಿಸಿ, ಅಂಗನವಾಡಿ, ಆಶಾ ಕಾರ್ಯಕರ್ತೆಯರು ಗರ್ಭಿಣಿ, ಬಾಣಂತಿಯರ ಮನೆ ಮನೆಗೆ ಭೇಟಿ ನೀಡಿ ಲಸಿಕೆ ಬಗ್ಗೆ ಅರಿವು ಮೂಡಿಸಿ ಶಿಶು ಹಾರೈಕೆ ಮತ್ತು ಗರ್ಭಿಣಿ, ಬಾಣಂತಿಯರ ಹಾರೈಕೆಯಲ್ಲಿ ನಿರತರಾಗಿ ಎಂದರು.

     

    ಮಳೆಗಾಲ ಪ್ರಾರಂಭ ಆಗುತ್ತಿದ್ದು ಈ ಸಂದರ್ಭದಲ್ಲಿ ತೊಟ್ಟಿ, ಚರಂಡಿ ಹಾಗೂ ಇನ್ನಿತರ ಘನ ತ್ಯಾಜ್ಯಗಳಲ್ಲಿ ನೀರು ಶೇಖರಣೆ ಯಾಗಿ ಸೊಳ್ಳೆಗಳು ಉತ್ಪತ್ತಿಗೊಂಡು ಡೆಂಗ್ಯೂ, ಮಲೇರಿಯಾ, ಚಿಕನ್ ಗುನ್ಯ ನಂತಹ ರೋಗಗಳು ಕಂಡು ಬರುವ ಸಂಭವ ಹೆಚ್ಚಿದ್ದು ರೋಗವನ್ನು ನಿಯಂತ್ರಿಸಲು ಮುಂಜಾಗ್ರತಾವಾಗಿ ಕ್ರಮ ಕೈಗೊಂಡು, ಸೊಳ್ಳೆ ಉತ್ಪತ್ತಿ ತಾಣಗಳಾದ ತೆರೆದ ತೊಟ್ಟಿ, ಮೇಲ್ಚಾವಣಿ ಇಲ್ಲದ ತೊಟ್ಟಿಗಳು ಕಿರು ನೀರು ಸರಬರಾಜು ಮಾಡುವಂತಹ ತೊಟ್ಟಿಗಳನ್ನು ಭದ್ರವಾದ ಮುಚ್ಚಳ ಅಥವಾ ಬಟ್ಟೆಯನ್ನು ಮುಚ್ಚಬೇಕು.

     

    ಶಾಲೆ, ಅಂಗನವಾಡಿ ಕೇಂದ್ರಗಳಲ್ಲಿ ತೆರೆದ ತೊಟ್ಟಿ ಗಳಿದ್ದಲ್ಲಿ ಮುಂಜಾಗ್ರತಾ ಕ್ರಮವಾಗಿ ಅವುಗಳ ಮೇಲ್ಭಾಗವನ್ನು ಮುಚ್ಚಬೇಕು. ಕೊರೋನ, ಡೆಂಗ್ಯೂ, ಚಿಕನ್ ಗುನ್ಯಾ ನಂತಹ ರೋಗಗಳ ಬಗ್ಗೆ ಮುನ್ನೆಚರಿಕೆ ಕ್ರಮ ವಹಿಸಿ ಸಾರ್ವಜನಿಕರಲ್ಲಿ ಅರಿವು ಮೂಡಿಸಿ ಎಂದರು.

     

    ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಲಕ್ಕ ಕೃಷ್ಣ ರೆಡ್ಡಿ, ಜಿಲ್ಲಾ ಆರ್.ಸಿ.ಎಚ್ ಅಧಿಕಾರಿ ಡಾ.ಸೀಮಾ ರುದ್ರಪ್ಪ ಮಹಾಬಳೆ, ಕುಷ್ಠರೋಗ ನಿರ್ಮೂಲನಾ ಅಧಿಕಾರಿ ಡಾ.ನಾಗೇಶ್ ಸೇರಿದಂತೆ ಜಿಲ್ಲಾ ಮತ್ತು ತಾಲ್ಲೂಕು ಆರೋಗ್ಯ ಅಧಿಕಾರಿಗಳು, ವೈದ್ಯಾಧಿಕಾರಿಗಳು, ಸಿಬ್ಬಂದಿ ಉಪಸ್ಥಿತರಿದ್ದರು.

  • ನಾಳೆ (ಜು. 19)ಚಿಕ್ಕಬಳ್ಳಾಪುರದ ನಂದಿ ಗಿರಿಧಾಮದಲ್ಲಿ ನೆಡೆಯಬೇಕಿದ್ದ ಸಭೆ ವಿಧಾನಸೌಧಕ್ಕೆ ಶಿಫ್ಟ್

    2025ನೇ ಸಾಲಿನ 13ನೇ ಸಚಿವ ಸಂಪುಟದ ಸಭೆಯ ಸ್ಥಳವನ್ನು ದಿಡೀರ್ ಬದಲಾವಣೆ ಮಾಡಲಾಗಿದೆ.

     

     

    ದಿನಾಂಕ: 19-06-2025, ಗುರುವಾರ ಮಧ್ಯಾಹ್ನ 12:00 ಗಂಟೆಗೆ ಚಿಕ್ಕಬಳ್ಳಾಪುರದ ನಂದಿ ಗಿರಿಧಾಮದಲ್ಲಿ ನಡೆಸಲು ಉದ್ದೇಶಿಸಲಾಗಿದ್ದ, ಸಚಿವ ಸಂಪುಟ ಸಭೆಯನ್ನು ಬೆಂಗಳೂರಿನ ವಿಧಾನಸೌಧದ ಸಚಿವ ಸಂಪುಟ ಸಭಾ ಮಂದಿರಕ್ಕೆ ಸ್ಥಳಾಂತರಿಸಲಾಗಿದೆ.

     

    ಹೌದು ಈಗಾಗಲೇ ಸಭೆ ನೆಡೆಸಲು ತಯಾರಿ ನೆಡೆಸಿದ್ದ ನಂದಿ ಗಿರಿಧಾಮದ ಸ್ಥಳವನ್ನು ವಿಧಾನಸೌಧದ ಸೌಧಕ್ಕೆ ಸ್ಥಳಾಂತರಿಸಲಾಗಿದೆ ಎಂದುಸರ್ಕಾರದ ಅಪರ ಕಾರ್ಯದರ್ಶಿ (ಸಚಿವ ಸಂಪುಟ) ಆರ್. ಚಂದ್ರಶೇಖರ್ ಆದೇಶ ಹೊರಡಿಸಿದ್ದಾರೆ.

     

    ಮುಂದಿನ ಸಭೆಯ ಕಾರ್ಯಸೂಚಿಯನ್ನು ಪ್ರತ್ಯೇಕವಾಗಿ ಕಳುಹಿಸಲಾಗುವುದು ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

  • ನಾಳೆ (ಜು. 19)ಚಿಕ್ಕಬಳ್ಳಾಪುರದ ನಂದಿ ಗಿರಿಧಾಮದಲ್ಲಿ ನೆಡೆಯಬೇಕಿದ್ದ ಸಭೆ ವಿಧಾನಸೌಧಕ್ಕೆ ಶಿಫ್ಟ್

    2025ನೇ ಸಾಲಿನ 13ನೇ ಸಚಿವ ಸಂಪುಟದ ಸಭೆಯ ಸ್ಥಳವನ್ನು ದಿಡೀರ್ ಬದಲಾವಣೆ ಮಾಡಲಾಗಿದೆ.

     

     

    ದಿನಾಂಕ: 19-06-2025, ಗುರುವಾರ ಮಧ್ಯಾಹ್ನ 12:00 ಗಂಟೆಗೆ ಚಿಕ್ಕಬಳ್ಳಾಪುರದ ನಂದಿ ಗಿರಿಧಾಮದಲ್ಲಿ ನಡೆಸಲು ಉದ್ದೇಶಿಸಲಾಗಿದ್ದ, ಸಚಿವ ಸಂಪುಟ ಸಭೆಯನ್ನು ಬೆಂಗಳೂರಿನ ವಿಧಾನಸೌಧದ ಸಚಿವ ಸಂಪುಟ ಸಭಾ ಮಂದಿರಕ್ಕೆ ಸ್ಥಳಾಂತರಿಸಲಾಗಿದೆ.

     

    ಹೌದು ಈಗಾಗಲೇ ಸಭೆ ನೆಡೆಸಲು ತಯಾರಿ ನೆಡೆಸಿದ್ದ ನಂದಿ ಗಿರಿಧಾಮದ ಸ್ಥಳವನ್ನು ವಿಧಾನಸೌಧದ ಸೌಧಕ್ಕೆ ಸ್ಥಳಾಂತರಿಸಲಾಗಿದೆ ಎಂದು ಸರ್ಕಾರದ ಅಪರ ಕಾರ್ಯದರ್ಶಿ (ಸಚಿವ ಸಂಪುಟ) ಆರ್. ಚಂದ್ರಶೇಖರ್ ಆದೇಶ ಹೊರಡಿಸಿದ್ದಾರೆ.

     

    ಮುಂದಿನ ಸಭೆಯ ಕಾರ್ಯಸೂಚಿಯನ್ನು ಪ್ರತ್ಯೇಕವಾಗಿ ಕಳುಹಿಸಲಾಗುವುದು ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

  • ಕರ್ನಾಟಕ ರಾಜ್ಯ ಆಮೇಚೂರ್ ಯೋಗ ಸ್ಪೋರ್ಟ್ಸ್ ಅಸೋಸಿಯೇಷನ್‌ ಕಾರ್ಯದರ್ಶಿಯಾಗಿ ಎ.ನಟರಾಜ್‌ ಆಯ್ಕೆ

    ದೊಡ್ಡಬಳ್ಳಾಪುರ: ಕರ್ನಾಟಕ ರಾಜ್ಯ ಅಮೆಚೂರ್ ಯೋಗ ಸ್ಪೋರ್ಟ್ಸ್ ಅಸೋಸಿಯೇಷನ್‌ ಕಾರ್ಯದರ್ಶಿಯಾಗಿ ದೊಡ್ಡಬಳ್ಳಾಪುರ ನಿಸರ್ಗ ಯೋಗ ಕೇಂದ್ರದ ಎ.ನಟರಾಜ್‌ರನ್ನು ಆಯ್ಕೆ ಮಾಡಲಾಗಿದೆ.

     

    ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ನಡೆದ ರಾಜ್ಯ ಯೋಗ ಚಾಂಪಿಯನ್‌ಷಿಪ್ ವೇಳೆ ನಟರಾಜ್‌ ಅವರನ್ನು ಸನ್ಮಾನಿಸಲಾಯಿತು.

     

    ಕಳೆದ 3 ದಶಕಗಳಿಂದ ಯೋಗಾಸನ ತರಬೇತಿ, ಯೋಗ ಸ್ಪರ್ಧೆ ಆಯೋಜನೆ, ಯೋಗ ಕ್ರೀಡೆಯ ಉತ್ತೇಜನ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದು, ನಗರ ದಲ್ಲಿ ಯೋಗ ಕ್ರೀಡೆಯ ಅಭ್ಯುದಯಕ್ಕೆ ಶ್ರಮಿಸಿದ್ದ ನಟರಾಜ್ ರವರನ್ನು ಯೋಗ ಸ್ಪೋರ್ಟ್ಸ್ ಅಸೋಸಿಯೇಷನ್‌ ಕಾರ್ಯದರ್ಶಿಯಾಗಿ ಆಯ್ಕೆ ಮಾಡಿದೆ.

     

     

     

     

  • ರಾಜ್ಯ ಯೋಗ ಚಾಂಪಿಯನ್ ಷಿಪ್ ಸ್ಪರ್ಧೆಯಲ್ಲಿ ನಿಸರ್ಗ ಯೋಗ ಕೇಂದ್ರದ ಪಟುಗಳಿಂದ ಅದ್ಬುತ ಸಾಧನೆ

    ಕರ್ನಾಟಕ ರಾಜ್ಯ ಯೋಗಾಸನ ಕ್ರೀಡಾ ಚಂಪಿಯನ್‌ಷಿಪ್,2025 ರಲ್ಲಿ ನಡೆದ ಯೋಗಾ ಚಾಂಪಿಯನ್ ಶಿಪ್ ಪಂದ್ಯದಲ್ಲಿ ದೊಡ್ಡಬಳ್ಳಾಪುರದ ನಿಸರ್ಗ ಯೋಗ ಕೇಂದ್ರ ಯೋಗಪಟುಗಳು ಅತಿ ಹೆಚ್ವು ಬಹುಮಾನಗಳನ್ನು ಗೆಲ್ಲುವ ಮೂಲಕ ಅದ್ಬುತ ಸಾಧನೆ ಮಾಡಿದ್ದಾರೆ‌.

     

     

    ಕರ್ನಾಟಕ ರಾಜ್ಯ ಅಮೆಚ್ಯೂರ್ ಯೋಗ ಸ್ಪೋರ್ಟ್ಸ್ ಅಸೋಸಿಯೇಷನ್ ಮತ್ತು ಶಿವಮೊಗ್ಗ ಜಿಲ್ಲಾ ಯೋಗಾಸನ ಕ್ರೀಡಾ ಸಂಸ್ಥೆ ಮತ್ತು ಗುರುಕುಲಮ್ ಯೋಗ ವಿದ್ಯಾ ಶಾಲಾ ಆಶ್ರಯದಲ್ಲಿ ಸಾಗರದ ಈಡಿಗರ ಸಮೂದಾಯ ಭವನದಲ್ಲಿ ನಡೆದ ಯೋಗಾ ಸ್ಪರ್ದೆಯಲ್ಲಿ ನಿಸರ್ಗ ಯೋಗ ಕೇಂದ್ರದ ಯೋಗಪಟುಗಳು ಭಾಗವಹಿಸಿ 8ರಿಂದ10ನೇ ವರ್ಷದ ಬಾಲಕರ ವಿಭಾಗದಲ್ಲಿ ಆರ್ಯ ತೃತೀಯ ಸ್ಥಾನ,ಕೆ.ಆರ್.ಭುವನ್ 5 ಸ್ಥಾನ,8 ರಿಂದ10 ವರ್ಷದ ಬಾಲಕೀಯರ ವಿಭಾಗದಲ್ಲಿ ಸಾನ್ವಿ ಎಂ.ರಾಜು 6ನೇ ಸ್ಥಾನ, 10ರಿಂದ12ನೇ ವರ್ಷದ ಬಾಲಕರ ವಿಭಾಗದಲ್ಲಿ ಹಿತೇಶ್‌.ಎ ಪ್ರಥಮ ಸ್ಥಾನ,ನೀರಜ್.ಎಲ್ ದ್ವಿತೀಯ ಸ್ಥಾನ,10ರಿಂದ12ನೇ ವರ್ಷದ ಬಾಲಕೀಯರ ವಿಭಾಗದಲ್ಲಿ ಎಸ್.ಅಪೂರ್ವ ದ್ವಿತೀಯ ಸ್ಥಾನ,ಯಶಸ್ವಿನಿ.ಟಿ. ತೃತೀಯ ಸ್ಥಾನ, ಅಖಿಲ.ಎಮ್ 6ನೇ ಸ್ಥಾನ,12ರಿಂದ14 ಬಾಲಕರ ವಿಭಾಗದಲ್ಲಿ ವೇದಿಕ್ ಶೆಟ್ಟಿ.ಜೆ.ಸಿ ದ್ವಿತೀಯ ಸ್ಥಾನ, 12ರಿಂದ14 ಬಾಲಕೀಯರ ವಿಭಾಗದಲ್ಲಿ ಹಿತಶ್ರೀ ಕೆ.ಎಂ ಪ್ರಥಮ ಸ್ಥಾನ,ಗೌತಮಿ.ಹೆಚ್,ಆರ್. 4ನೇ ಸ್ಥಾನ,14ರಿಂದ16 ವರ್ಷದ ಬಾಲಕರ ವಿಭಾಗದಲ್ಲಿ ಶಶಾಂಕ್.ಪಿ.ಎಸ್ ದ್ವಿತೀಯ ಸ್ಥಾನ, ಕೆ.ಎನ್.ವಿಶ್ವನಾಥ್ 5ನೆ ಸ್ಥಾನ, 14ರಿಂದ16 ವರ್ಷದ ಬಾಲಕೀಯರ ವಿಭಾಗದಲ್ಲಿ ಅರ್ಪಿತ.ಆರ್ ತೃತೀಯ ಸ್ಥಾನ, 16ರಿಂದ18 ವರ್ಷದ ಯುವಕರ ವಿಭಾದಲ್ಲಿ ಜೇಷ್ಠ.ಎಸ್. ದ್ವಿತೀಯ ಸ್ಥಾನ,16ರಿಂದ18 ವರ್ಷದ ಯುವತಿಯರು ಎಂ.ಆರ್.ಜಾಹ್ನವಿ ದ್ವಿತೀಯ ಸ್ಥಾನ, 18ರಿಂದ 21 ವರ್ಶದ ಯುವಕರ ವಿಭಾಗದಲ್ಲಿ ಕೆ.ವಿನಯ್ ಕುಮಾರ್ ಪ್ರಥಮ ಸ್ಥಾನ, 18ರಿಂದ21 ವರ್ಷದ ಯುವತಿಯರ ವಿಭಾಗದಲ್ಲಿ ಸುಧಾ 4ನೇ ಸ್ಥಾನ,21ರಿಂದ 25 ವರ್ಷದ ಯುವಕರ ವಿಭಾಗದಲ್ಲಿ ವರಪ್ರಸಾದ್.ವಿ ದ್ವಿತೀಯ ಸ್ಥಾನ,21ರಿಂದ25 ವರ್ಷದ ಯುವತಿಯರ ವಿಭಾಗದಲ್ಲಿ ಗಾನಶ್ರೀ.ಎ ದ್ವಿತೀಯ ಸ್ಥಾನವನ್ನು ಪಡೆದು 3 ಚಿನ್ನ, 7 ಬೆಳ್ಳಿ, 3 ಕಂಚು ಒಟ್ಟು 20 ಯೋಗ ಪಟುಗಳು ಬಹುಮಾನವನ್ನು ಪಡೆದಿದ್ದಾರೆ.

    ಬೆಂಗಳೂರು ಗ್ರಾಮಾಂತರ ಜಿಲ್ಲಾ ಅಮೆಚೂರ್ ಯೋಗ ಸಂಸ್ಥೆಯ ಅಧ್ಯಕ್ಷರಾದ ಪ್ರೊಫೆಸರ್ ಎಮ್.ಜಿ.ಅಮರ್‌ನಾಥ್ ನಿಸರ್ಗ ಯೋಗ ಕೇಂದ್ರದ ಕಾರ್ಯದರ್ಶಿ ಯೋಗ ನಟರಾಜ್.ಎ ಮತ್ತು ಖಜಾಂಚಿ ಶ್ಯಾಮಸುಂದರ್.ಕೆ.ಆರ್ ಹಾಗೂ ನಿಸರ್ಗ ಯೋಗ ಕೇಂದ್ರದ ಪದಾಧಿಕಾರಿಗಳು,ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರು ಸಾದನೆ ಮಾಡಿದ ಯೋಗಾ ಪಟುಗಳನ್ನು ಅಭಿನಂದಿಸಿದ್ದಾರೆ.