Blog

  • ಡಾ: ಮಹೇಶ್ ಜೋಶಿಯವರಿಗೆ ಶಾಕ್ ಕೊಟ್ಟ ರಾಜ್ಯ ಸರ್ಕಾರ : ನೀಡಿದ್ದ ಎಲ್ಲಾ ಸೌಲಭ್ಯಗಳು ವಾಪಾಸ್ ಪಡೆಯುವಂತೆ ಆದೇಶ

    ನಾಡೋಜ ಡಾ: ಮಹೇಶ್ ಜೋಶಿಯವರಿಗೆ ರಾಜ್ಯ ಸರ್ಕಾರ ನೀಡಿದ್ದ ಎಲ್ಲಾ ಸೌಲಭ್ಯಗಳನ್ನು ಹಿಂಪಡೆದಿದೆ

    Ad

    ಹೌದು , ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರು, ರಾಜ್ಯ ಸಚಿವ ಸ್ಥಾನಮಾನ ಹಾಗೂ ರಾಜ್ಯ ಸಚಿವರ ದರ್ಜೆನೀಡಿದ್ದ ರಾಜ್ಯ ಸರ್ಕಾರ ತಕ್ಷಣದಿಂದ ಜಾರಿಗೆ ಬರುವಂತೆ ಅದೇಶಿಸಿ ಎಲ್ಲಾ ಸೌಲಭ್ಯಗಳನ್ನು ಹಿಂಪಡೆದಿದೆ.

     

    ದಿನಾಂಕ: 05.01.2023 ರಲ್ಲಿ ನೀಡಲಾಗಿದ್ದ ರಾಜ್ಯ ಸಚಿವ ಸ್ಥಾನಮಾನ ಹಾಗೂ ರಾಜ್ಯ ಸಚಿವರ ದರ್ಜೆಗೆ ಅನ್ವಯಿಸುವ ಎಲ್ಲಾ ಸೌಲಭ್ಯಗಳನ್ನು ಹಿಂಪಡೆಯುವ ಕುರಿತು ಸರ್ಕಾರದ ಅಧೀನ ಕಾರ್ಯದರ್ಶಿ ಆದೇಶ ಹೊರಡಿಸಿದ್ದಾರೆ.

     

  • ಮೆಟ್ರಿಕ್ ನಂತರ ವಿದ್ಯಾರ್ಥಿನಿಲಯದ ಪ್ರವೇಶಾತಿಗೆ ಆನ್ಲೈನ್ ಮೂಲಕ ಅರ್ಜಿ ಆಹ್ವಾನ

    2025-26ನೇ ಸಾಲಿನಲ್ಲಿಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮೆಟ್ರಿಕ್ ನಂತರ ವಿದ್ಯಾರ್ಥಿನಿಲಯಗಳಲ್ಲಿ (ಪಿ.ಯು.ಸಿ. ಐ.ಟಿ.ಐ, ಡಿಪ್ಲೋಮೋ ಹಾಗೂ ಪ್ರಥಮ ವರ್ಷದ ಪದವಿ ಮಟ್ಟದ ವಿದ್ಯಾರ್ಥಿಗಳಿಗೆ) ಖಾಲಿಯಿರುವ ಸೀಟುಗಳಿಗೆ ಪ್ರವೇಶಾತಿ ಪಡೆಯಲು ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

    ಅರ್ಹ ವಿದ್ಯಾರ್ಥಿಗಳು https://shp.karnataka.gov.in ವೆಬ್ಸೈಟ್ ಮೂಲಕ ಅರ್ಜಿಯನ್ನು ಸಲ್ಲಿಸಬೇಕು. ಜೂನ್ 28 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿರುತ್ತದೆ.

     

    ವಿದ್ಯಾರ್ಥಿನಿಲಯಗಳಲ್ಲಿ ಶೇ.75ರಷ್ಟು ಸ್ಥಾನಗಳನ್ನು ಅಲ್ಪಸಂಖ್ಯಾತರ ಜನಾಂಗದ ವಿದ್ಯಾರ್ಥಿಗಳು (ಮುಸ್ಲಿಂ, ಜೈನ್, ಕ್ರಿಶ್ಚಿಯನ್, ಬೌದ್ದ, ಸಿಖ್, ಪಾರ್ಸಿ) ಮತ್ತು ಶೇ.25ರಷ್ಟು ಸ್ಥಾನಗಳನ್ನು ಹಿಂದುಳಿದ ವರ್ಗಗಳ, ಪ.ಜಾ/ಪ.ಪಂಗಡ ವಿದ್ಯಾರ್ಥಿಗಳಿಗೆ ನೀಡಲಾಗುವುದು.

    Ad

    ಹೆಚ್ಚಿನ ಮಾಹಿತಿಗಾಗಿ ಅಲ್ಪಸಂಖ್ಯಾತರ ಸಹಾಯವಾಣಿ ಸಂಖ್ಯೆ:8277799990 ಸಂಪರ್ಕಿಸಬಹುದು ಹಾಗೂ ನಿಲಯಪಾಲಕರು ಅಲ್ಪಸಂಖ್ಯಾತರ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿನಿಲಯ ವಿಶ್ವನಾಥಪುರ, ದೇವನಹಳ್ಳಿ ತಾಲ್ಲೂಕು. ಶ್ರೀ ತಿಪ್ಪೇಸ್ವಾಮಿ ಎನ್. 9731017483. ಅಲ್ಪಸಂಖ್ಯಾತರ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿನಿಲಯ ದಂಡುಪಾಳ್ಯ, ಹೊಸಕೋಟೆ ತಾಲ್ಲೂಕು. ಶ್ರೀ.ನರೇಂದ್ರ 9742998287. ಅಲ್ಪಸಂಖ್ಯಾತರ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿನಿಲಯ ಕಂಟನಕುಂಟೆ, ದೊಡ್ಡಬಳ್ಳಾಪುರ ತಾಲ್ಲೂಕು. ಶ್ರೀಮತಿ ರಾಧಾಮಣಿ 9886400832.ಅಲ್ಪಸಂಖ್ಯಾತರ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿನಿಲಯ ಜಯನಗರ, ನೆಲಮಂಗಲ ತಾಲ್ಲೂಕು. ಶ್ರೀ ಕೃಷ್ಣ ಎಂ ಆರ್ 8317403213 ಗೆ ಸಂಪರ್ಕಿಸಬಹುದಾಗಿದೆ ಎಂದು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

  • ಚುನಾವಣೆಯಲ್ಲಿ ಗೆಲುವು ಸೋಲು ಸರ್ವೇ ಸಾಮಾನ್ಯ : MPCS ಅಧ್ಯಕ್ಷರ ತೀರ್ಮಾನವನ್ನು ನಾವು ಸ್ವಾಗತಿಸುತ್ತೇವೆ – ಜಿ. ಲಕ್ಷ್ಮೀಪತಿ

    ದೊಡ್ಡಬಳ್ಳಾಪುರ : ಬಮೂಲ್ ನಿರ್ದೇಶಕ ಸ್ಥಾನಕ್ಕೆ ನೆಡೆದ ಚುನಾವಣೆಯಲ್ಲಿ ಎಂ ಪಿ ಸಿ ಎಸ್ ಅಧ್ಯಕ್ಷರು ನೀಡಿರುವ ತೀರ್ಪುನ್ನು ಕಾಂಗ್ರೆಸ್ ಪಕ್ಷವು ಒಪ್ಪಿಕೊಂಡಿದೆ, ಆದರೆ ಚುನಾವಣೆಯಲ್ಲಿ ಗೆಲುವು ಸಾಧಿಸಿರುವ ಅಭ್ಯರ್ಥಿ ತಾಲ್ಲೂಕಿನಲ್ಲಿ 10ವರ್ಷಗಳ ಸುದೀರ್ಘ ಆಡಳಿತ ನೆಡೆಸಿರುವ ಮಾಜಿ ಶಾಸಕರ ವಿರುದ್ಧ ಏಕವಚನದಲ್ಲಿ ಮಾತನಾಡುವುದು ಸರಿಯಲ್ಲ ಎಂದು ಕೆ ಪಿ ಸಿ ಸಿ ಸದಸ್ಯ ಜಿ. ಲಕ್ಷ್ಮೀಪತಿ ತಿಳಿಸಿದರು

     

    ನಗರದಲ್ಲಿ ಪ್ರವಾಸಿಮಂದಿರದಲ್ಲಿ ನೆಡೆದ ಸುದ್ದಿಗೊಷ್ಟಿಯಲ್ಲಿ ಮಾತನಾಡಿದ ಅವರು ಬಮೂಲ್ ಚುನಾವಣೆಯಲ್ಲಿ ಗೆಲುವು ಸಾಧಿಸಿರುವ ಅಭ್ಯರ್ಥಿ ಬಿ ಸಿ ಆನಂದ್ ಕುಮಾರ್ ಬೆಳ್ಳಿಗೆ ಸಭೆಯಲ್ಲಿ ಕೆ ಪಿ ಸಿ ಸಿ ಉಪಾಧ್ಯಕ್ಷರು ತಾಲ್ಲೂಕಿನ ನಿಕಟಪೂರ್ವ ಶಾಸಕ ಟಿ ವೆಂಕಟರಮಣಯ್ಯ ಅವರನ್ನು ಬೈತಾರೆ ಮಧ್ಯಾಹ್ನ ರಾಜ್ಯದ ಉಪಮುಖ್ಯಮಂತ್ರಿಗಳು ಹಾಗೂ ಕೆ ಪಿ ಸಿ ಸಿ ಅಧ್ಯಕ್ಷರಾದ ಡಿ ಕೆ ಶಿವಕುಮಾರ್ ಅವರಿಗೆ ಹಾರ ಕೊಡ್ತೆರೆ ಅವರು ಯಾವ ಪಕ್ಷದ ಬೆಂಬಲಿಗರು ಎಂಬುದನ್ನು ಸ್ಪಷ್ಟಪಡಿಸಿಕೊಳ್ಳಲಿ ಎಂದರು.

     

    ನೂತನ ಬಮೂಲ್ ನಿರ್ದೇಶಕ ಬಿ ಸಿ ಆನಂದ್ ಕುಮಾರ್ ಹಿರಿಯರ ಕುರಿತು ಸೌಜನ್ಯವಾಗಿ ಮಾತನಾಡಲಿ ಚುನಾವಣೆಗಳಲ್ಲಿ ಗೆಲುವು ಸೋಲು ಸರ್ವೇ ಸಾಮಾನ್ಯ ಅದನ್ನು ಜಯಗಳಿಸಿರುವ ಅಭ್ಯರ್ಥಿ ಅರಿತುಕೊಳ್ಳಬೇಕು ಎಂದರು.

     

    ಬಿಜೆಪಿ ಪಕ್ಷದ ಛಲವಾದಿ ನಾರಾಯಣ ಸ್ವಾಮಿ ಸಚಿವ ಪ್ರಿಯಾಂಕಾ ಖರ್ಗೆ ಅವರನ್ನು ನಾಯಿ ಎಂದು ಸಂಭೋದನೆ ಮಾಡುವುದು ಖಂಡನೀಯ ಅವರು ಈ ಕೂಡಲೇ ಬೇಷರತ್ತಾಗಿ ಸಾಮೂಹಿಕ ಕ್ಷಮೆಯಾಚಿಸಬೇಕು ಎಂದು ಅಗ್ರಹಿಸಿದರು.

     

    ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೈರೇಗೌಡ ಮಾತನಾಡಿ ಕೇಂದ್ರೀಯ ಸಂಸ್ಥೆಗಳಾದ ಸಿಬಿಐ ಇ ಡಿ, ಐ ಟಿ ಇಲಾಖೆಗಳನ್ನು ಕೇಂದ್ರ ಸರ್ಕಾರ ದುರ್ಬಳಕ್ಕೆ ಮಾಡಿಕೊಳ್ಳುತ್ತಿರುವ ಕುರಿತು ಸುಪ್ರೀಂ ಕೋರ್ಟ್ ಚಿಮರಿ ಹಾಕಿದೆ ಅಲ್ಲದೇ ರಾಜ್ಯದಲ್ಲಿ ಕಾಂಗ್ರೆಸ್ ಜನಪ್ರಿಯತೆ ಸಹಿಸದ ಬಿಜೆಪಿ ಈ ಕೃತ್ಯಕ್ಕೆ ಛಲವಾದಿ ನಾರಾಯಣ ಸ್ವಾಮಿ ಅವರನ್ನು ಬಳಸಿಕೊಳ್ಳುತ್ತಿದೆ ಎಂದು ಆರೋಪಿಸಿದರು.

     

    ಕಸಬಾ ಎಸ್‌ಸಿ ಎಸ್ಪಿ ಬ್ಲಾಕ್ ಕಾಂಗ್ರೆಸ್‌ ಅಧ್ಯಕ್ಷ ಕೆಂಪಣ್ಣ ಮಾತನಾಡಿ, ಛಲವಾದಿ ನಾರಾಯಣಸ್ವಾಮಿ ಅವರು ಪ್ರಿಯಾಂಕ್ ಖರ್ಗೆಯವರನ್ನು ನಾಯಿಗೆ ಹೋಲಿಸಿರುವುದು ಸರಿಯಲ್ಲ, ರಾಜಕಾರಣದಲ್ಲಿ ಯಾರೂ ಶಾಶ್ವತವಲ್ಲ ಅವರ ಕುಟುಂಬದೊಂದಿಗೆ ಇದ್ದು, ಬೆಳೆದು ಇಂದು ಕೋಮುವಾದಿ ಬಿಜೆಪಿ ಪಕ್ಷಗದೊಂದಿಗೆ ಸೇರಿ ಅವರ ತಾಳಕ್ಕೆ ತಕ್ಕಂತೆ ಕುಣಿದು ನಾಯಿಗೆ ಹೋಲಿಕೆ ಮಾಡಿರುವುದು ಖಂಡನೀಯ, ಛಲವಾದಿ ನಾರಾಯಣಸ್ವಾಮಿ ಅವರು ಕೂಡಲೆ ಕ್ಷಮೆ ಕೋರಬೇಕು ಎಂದು ಒತ್ತಾಯಿಸಿದರು.

     

    ನಗರ ಎಸ್‌ಸಿ ಘಟಕದ ಅಧ್ಯಕ್ಷ ಮುನಿರಾಜ್ ಅವರು ಮಾತನಾಡಿ ಬಿಜೆಪಿ ನಾಯಕರನ್ನು ಮೆಚ್ಚಿಸುವ ಒಂದೇ ಕಾರಣಕ್ಕೆ ಕಾಂಗ್ರೆಸ್‌ ಮುಖಂಡರಾದ ಪ್ರಿಯಾಂಕ್ ಖರ್ಗೆಯವರನ್ನು ಅವಾಚ್ಯ ಶಬ್ದಗಳಿಂದ ನಿಂದನೇ ಮಾಡಿರುವುದು ಖಂಡನೀಯ, ಕೂಡಲೇ ಛಲವಾದಿ ನಾರಾಯಣಸ್ವಾಮಿ ಕ್ಷಮೆ ಕೋರಬೇಕು ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ನಿಮ್ಮ ಕಾರ್ಯಕ್ರಮಗಳಿಗೆ ಅಡ್ಡಿಪಡಿಸಿ ಮುಖಕ್ಕೆ ಮಸಿ ಬಳಿಯ ಬೇಕಾಗುತ್ತದೆ ಎಂದು ಆಕ್ರೋಶ ಹೊರಹಾಕಿದರು.

    ಇನ್ನು ರಾಜಕಾರಣದಲ್ಲಿ ಇದುವರೆಗೂ ಒಂದೇ ಒಂದು ಕಪ್ಪು ಚುಕ್ಕೆ ಇಲ್ಲದೇ ಬೆಳೆದ ರಾಜಕಾರಣಿ ಗೃಹ ಸಚಿವ ಜಿ.ಪರಮೇಶ್ವರ್ ಅವರ ಒಡೆತನದ ಸಂಸ್ಥೆಗಳ ಮೇಲೆ ಇಡಿ ದಾಳಿ ನಡೆಸುತ್ತಿರುವುದುನ್ನು ನಮ್ಮ ಪಕ್ಷ ಖಂಡಿಸುತ್ತದೆ. ಇದೇ ರೀತಿ ಮುಂದುವರೆದರೇ ಮುಂದಿನ ದಿನಗಳಲ್ಲಿ ಬಿಜೆಪಿಗೆ ಬುದ್ದಿ ಕಲಿಸುವ ಕೆಲಸ ಮಾಡಲಾಗುವುದು ಎಂದರು.

     

     

    ನಗರಸಭಾ ಸದಸ್ಯರಾದ ಶಿವಣ್ಣ ಮಾತನಾಡಿ, ಪ್ರಿಯಾಂಕ್ ಖರ್ಗೆಯವರ ಏಳಿಗೆಯನ್ನು ಸಹಿಸದೇ ಛಲವಾದಿ ನಾರಾಯಣಸ್ವಾಮಿ ನಾಯಿಗೆ ಹೋಲಿಕೆ ಮಾಡಿರುವುದು ಸರಿಯಲ್ಲ. ವಿಧಾನ ಪರಿಷತ್ ನ ವಿರೋಧ ಪಕ್ಷದ ನಾಯಕ ಸ್ಥಾನ ಪಡೆದುಕೊಂಡಿರಿವುದು ಪ್ರಿಯಾಂಕ್ ಖರ್ಗೆಯನ್ನ ಟಾರ್ಗೆಟ್ ಮಾಡಿ ಖಂಡಸೋಕೆ ಎಂಬಂತೆ ನಡೆದುಕೊಳ್ಳುತ್ತಿದ್ದಾರೆ ಇದನ್ನು ಕಾಂಗ್ರೆಸ್‌ ಪಕ್ಷ ಖಂಡಿಸುತ್ತದೆ ಎಂದರು.

    ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭೈರೇಗೌಡ, ನಗರ ಬ್ಲಾಕ್ ಅಧ್ಯಕ್ಷ ಅಪ್ಪಿ ವೆಂಕಟೇಶ್‌, ಕಂಟನಕುಂಟೆ ಕೃಷ್ಣಮೂರ್ತಿ,ದಲಿತ ಮುಖಂಡ ಟಿ.ಮಂಜುನಾಥ್, ಶ್ರೀನಿವಾಸ್ ಮಂಜುನಾಥ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

     

     

     

     

  • ಪರಿಸರದ ಮೇಲೆ ನಿಲ್ಲದ ಕೆಮಿಕಲ್ ದಾಳಿ : ಬೆಸೆಂಟ್ ಪಾರ್ಕ್ ಪಕ್ಕದಲ್ಲಿ ಕೆಮಿಕಲ್ ನೀರು ಪತ್ತೆ

    ದೊಡ್ಡಬಳ್ಳಾಪುರ : ನಗರದ ಹೊರವಲಯದ ಬೆಸೆಂಟ್ ಪಾರ್ಕ್ ಪಕ್ಕದ ರಸ್ತೆಯಲ್ಲಿ ಕೆಮಿಕಲ್ ನೀರು ಸುರಿದು ಪರಾರಿಯಾಗಿದ್ದಾರೆ.

    ಹೌದು ಕೆಮಿಕಲ್ ಯುಕ್ತ ನೀರು ರಸ್ತೆ ಬದಿ ಬಿಡಲಾಗಿದೆ ಎಂಬ ಸುದ್ದಿ ತಿಳಿಯುತ್ತಲೇ ಸ್ಥಳಕ್ಕೆ ಧಾವಿಸಿದ ಅರ್ಕಾವತಿ ನದಿ ಹೋರಾಟ ಸಮಿತಿ ಹೋರಾಟಗಾರರು ಮಾಲಿನ್ಯ ನಿಯಂತ್ರಣ ಅಧಿಕಾರಿಗಳು ಮತ್ತು ಬಾಶೆಟ್ಟಿಹಳ್ಳಿ ಪಂಚಾಯಿತಿ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಸಿದರು, ಸ್ಥಳಕ್ಕೆ ಬಂದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಹೋರಾಟಗಾರರು ಕೆಮಿಕಲ್ ನೀರು ಸುರಿದು ಪರಾರಿಯಾಗಿರುವರನ್ನು ಪತ್ತೆ ಮಾಡಿ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸಿದರು ಒತ್ತಾಯಕ್ಕೆ ಮಣಿದ ಅಧಿಕಾರಿಗಳು ಕಲುಷಿತ ನೀರನ್ನು ಪರಿಶೀಲಿಸಲು ಮುಂದಾಗಿದ್ದಾರೆ.

     

     

    ಬೆಂಗಳೂರು ನಗರಕ್ಕೆ ಹತ್ತಿರವಿರುವ ದೊಡ್ಡಬಳ್ಳಾಪುರ ತಾಲ್ಲೂಕು ಕಸ ತಂದು ಸುರಿಯುವ ಡಪ್ಪಿಂಗ್ ಯಾರ್ಡ್ ಆಗಿದೆ, ಬಿಬಿಎಂಪಿ ಕಸದ ರಾಶಿಗಳು ತಾಲೂಕಿನಲ್ಲಿ ಕೊಳೆಯುತ್ತಿರುವ ಸಂದರ್ಭದಲ್ಲಿ ಕೈಗಾರಿಕೆಗಳ ಮಾಲೀಕರು ನಿರ್ಜನ ಪ್ರದೇಶದಲ್ಲಿ ಕೆಮಿಕಲ್ ತ್ಯಾಜ್ಯ ನೀರನ್ನು ಬಿಟ್ಟು ಪರಾರಿಯಾಗುತ್ತಿದ್ದಾರೆ.ಮೊನ್ನೆ ಗುಂಡಮಗೆರೆ ಅರಣ್ಯ ಪ್ರದೇಶದಲ್ಲಿ ಕೆಮಿಕಲ್ ನೀರು ಬಿಟ್ಟಿದ್ದ ದುಶ್ಕರ್ಮಿಗಳು ಇಂದು ಬೆಸೆಂಟ್ ಪಾರ್ಕ್ ಪಕ್ಕದ ರಸ್ತೆಯಲ್ಲಿ ಕೆಮಿಕಲ್ ನೀರು ಸುರಿದು ಪರಾರಿಯಾಗಿದ್ದಾರೆ.

    ಘಟನೆಗೆ ಸಂಬಂಧಿಸಿದಂತೆ ಸ್ಥಳೀಯ ಮುಖಂಡರಾದ ವಾಸು ಮಾತನಾಡಿ ಬೆಸೆಂಟ್ ಪಾರ್ಕ್ ಸ್ಥಳದಿಂದ ಪಕ್ಕದಲ್ಲೇ ಇರುವ ಓಬದೇನಹಳ್ಳಿ ಕೈಗಾರಿಕಾ ಪ್ರದೇಶಕ್ಕೆ ರಸ್ತೆ ಸಂಪರ್ಕ ಇದ್ದು, ರಸ್ತೆಯಲ್ಲಿ ಬೀದಿ ದೀಪಗಳಿಲ್ಲ, ಇದರ ಲಾಭ ಪಡೆದ ದುಶ್ಕರ್ಮಿಗಳು ರಾತ್ರಿ ವೇಳೆ ಜನರು ಓಡಾಟ ಇಲ್ಲದ ಸಮಯದಲ್ಲಿ ಟ್ಯಾಂಕರ್ ನಲ್ಲಿ ಕೆಮಿಕಲ್ ನೀರು ತಂದು ಸುರಿದು ಹೋಗುತ್ತಿದ್ದಾರೆ.ಕಳೆದ 20 ದಿನಗಳಿಂದ ಕೆಮಿಕಲ್ ನೀರು ಸುರಿಯಲಾಗುತ್ತಿದೆ, ಕೆಮಿಕಲ್ ಮಿಶ್ರಿತ ನೀರಿನಿಂದಾಗಿ ಸ್ಥಳದಲ್ಲಿ ಗಿಡಗಳು ಸುಟ್ಟು ಹೋಗಿದೆ, ಸ್ಥಳದಲ್ಲಿ ನಿಂತುಕೊಳ್ಳುವುದಕ್ಕೂ ಸಾಧ್ಯವಾಗದ ಕೆಟ್ಟ ವಾಸನೆ ಇದೆ. ಸ್ಥಳಕ್ಕೆ ಬಂದ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಡಿಸೇಲ್ ನೀರೆಂದು ಹೇಳಿ ಅಸಡ್ಡೆಯ ಮಾತುಗಳನ್ನಾಡುತ್ತಾರೆ. ಈ ಹಿಂದೆ ಮಳೆ ಬಂದಾಗ ಕೆಮಿಕಲ್ ತ್ಯಾಜ್ಯ ನೀರು ಕೆರೆಗೆ ಸೇರಿದ ಪರಿಣಾಮ ಮೀನುಗಳು ಸೇರಿದಂತೆ ಜಾನುವಾರುಗಳು ಸಾವನ್ನಪ್ಪಿದವು, ಇಂತಹ ವಿಷಕಾರಿ ನೀರು ಬಿಡುತ್ತಿರುವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳ ಬೇಕೆಂದು ಆಗ್ರಹಿಸಿದರು.

     

    ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿ ಸಿಬ್ಬಂದಿ ಉಮಾಶಂಕರ್ ಮಾತನಾಡಿ, ಸ್ಥಳಕ್ಕೆ ಬಂದು ಪರಿಶೀಲನೆ ಮಾಡಿದ್ದಾಗ ಕೆಮಿಕಲ್ ನೀರೆಂದು ತಿಳಿದು ಬಂದಿದೆ, ಇದರ ಸ್ಯಾಂಪಲ್ ಸಂಗ್ರಹಿಸಲಾಗಿದ್ದು ಪ್ರಯೋಗಾಲಯಕ್ಕೆ ಕಳಿಸಲಾಗುವುದು, ಬರುವ ವರದಿ ಆಧಾರದ ಮೇಲೆ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು, ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಸಿಸಿ ಕ್ಯಾಮಾರಗಳನ್ನ ಅಳವಡಿಸಲಾಗುವುದು, ತ್ಯಾಜ್ಯ ವಸ್ತುಗಳನ್ನ ಬೇಕಾಬಿಟ್ಟಿ ಎಲ್ಲೆಂದರಲ್ಲಿ ಎಸೆದರೆ ಅವರ ವಿರುದ್ಧ ಕ್ರಮ ತೆಗೆದುಕೊಳ್ಳುವುದ್ದಾಗಿ ಹೇಳಿದರು.

     

  • ರಾಜ್ಯದಲ್ಲಿ ಹೊಸದಾಗಿ ಖಾತೆ ತೆರೆದ KRS : ನಿವರಗಿ ಗ್ರಾಮ ಪಂಚಾಯಿತಿಯ ಉಪಚುನಾವಣೆಯಲ್ಲಿ KRS ಪಕ್ಷದ ಸೇನಾನಿ ಶ್ವೇತಾ ಮಹಾಂತೇಶ್ ಗೆಲುವು – ಬಿ ಶಿವಶಂಕರ್

    ನಿವರಗಿ ಗ್ರಾಮ ಪಂಚಾಯತಿಯ ಉಪಚುನಾವಣೆಯಲ್ಲಿ ಕರ್ನಾಟಕ ರಾಷ್ಟ್ರಪಕ್ಷದ ಅಭ್ಯರ್ಥಿ ಶ್ವೇತಾ ಮಹಾಂತೇಶ್ ನಿವರಗಿ ಗೆದ್ದಿದ್ದಾರೆ.

     

    ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಕೆ ಆರ್ ಎಸ್ ಪಕ್ಷದ ಅಭ್ಯರ್ಥಿ ಸ್ಪರ್ದಿಸಿ ಜಯಗಳಿಸಿದ್ದಾರೆ ಹೌದು ವಿಜಯಪುರ ಜಿಲ್ಲೆಯ ಚಡಚಣ ತಾಲ್ಲೂಕಿನ ನಿವರಗಿ ಗ್ರಾಮ ಪಂಚಾಯಿತಿಯ ಉಪಚುನಾವಣೆಯಲ್ಲಿ KRS ಪಕ್ಷದ ಸೇನಾನಿ ಶ್ವೇತಾ ಮಹಾಂತೇಶ್ ಗೆದ್ದಿದ್ದು ಗಣ್ಯರು ಶುಭಕೋರಿದ್ದಾರೆ.

     

    ಈ ಕುರಿತು ಬೆಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷ ಬಿ. ಶಿವಶಂಕರ್ ಮಾತನಾಡಿ ನಿವರಗಿ ಗ್ರಾಮದ ಶ್ವೇತಾರವರು KRS ಪಕ್ಷದ ತತ್ವಸಿದ್ಧಾಂತಗಳನ್ನು ಎತ್ತಿಹಿಡಿಯುವ ಮೂಲಕ ಸ್ಥಳೀಯವಾಗಿ ಗ್ರಾಮಸ್ಥರಲ್ಲಿ ಜಾಗೃತಿ ಮೂಡಿಸುವ ಮೂಲಕ ರಾಜ್ಯದಲ್ಲಿ ಮೊದಲ ಗೆಲುವು ಸಾಧಿಸಿದ್ದಾರೆ.

     

    ಭ್ರಷ್ಟಾಚಾರ ಮುಕ್ತ ಸಮಾಜದ ನಿರ್ಮಾಣಕ್ಕೆ ಇದೊಂದು ಮುನ್ನುಡಿಯಾಗಿದೆ ನಮ್ಮ ಕೆ ಆರ್ ಎಸ್ ಪಕ್ಷವು ಹಂತ ಹಂತವಾಗಿ ಗ್ರಾಮ, ತಾಲ್ಲೂಕು ಹಾಗೂ ಜಿಲ್ಲಾ ಪಂಚಾಯತಿ ಸೇರಿದಂತೆ ಹಲವು ಚುನಾವಣೆಗಳಲ್ಲಿ ಗೆಲುವು ಸಲ್ಲಿಸುವ ಮೂಲಕ ಮಾದರಿ ಸಮಾಜದ ನಿರ್ಮಾಣಕ್ಕೆ ಮುಂದಾಗುತ್ತೇವೆ ಎಂದರು.

     

     

    ನಮ್ಮ ಪಕ್ಷದಿಂದ ಗೆಲುವು ಸಾಧಿಸಿ, ಮಾದರಿ ಗ್ರಾಮ ಪಂಚಾಯಿತಿ ಸದಸ್ಯೆಯಾಗಿ ಕಾರ್ಯನಿರ್ವಹಿಸಲು ಸಿದ್ದರಾಗಿರುವ ಶ್ವೇತಾ ಮಹಾಂತೇಶ್ ರವರಿಗೆ ಶುಭವಾಗಲಿ ಹಾಗೂ ಮುಂದಿನ ದಿನಗಳಲ್ಲಿ ಅವರು ತಾಲ್ಲೂಕು/ಜಿಲ್ಲಾ ಪಂಚಾಯಿತಿ ಮತ್ತು ವಿಧಾನಸಭಾ ಚುನಾವಣೆಗಳಲ್ಲಿ ಗೆಲುವು ಸಾಧಿಸುವಂತಾಗಲಿ ರಾಜ್ಯದ್ದಲ್ಲಿ ಮಾದರಿ ಜನಪ್ರತಿನಿಧಿ ಎಂದು ಹೆಸರು ಪಡೆಯಲಿ ಅವರ ಪರವಾಗಿ ಚುನಾವಣಾ ಪ್ರಚಾರ ಕೈಗೊಂಡ ಪಕ್ಷದ ಎಲ್ಲಾ ಸೈನಿಕರಿಗೂ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದರು.

    ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಬಿ ಶಿವಶಂಕರ್ , ಜಿಲ್ಲಾ ಸಮಿತಿಯ ಕಾರ್ಮಿಕ ಘಟಕದ ಅಧ್ಯಕ್ಷರಾದ ಮಾರುತಿ,ಜಿಲ್ಲಾ ಕಾರ್ಮಿಕ ಘಟಕದ ಪ್ರಧಾನ ಕಾರ್ಯದರ್ಶಿ ಬಿ ಎಲ್ ರಾಮ್, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ರಂಜಿತಾ, ತಾಲ್ಲೂಕು ಉಸ್ತುವಾರಿ ಎಚ್. ಎನ್.ವೇಣು, ಶ್ರೀನಿವಾಸ್, ವೆಂಕಟೇಶ್, ಸೇರಿದಂತೆ ಹಲವು ಪ್ರಮುಖರು ಹಾಜರಿದ್ದರು.

  • ಮಜರಾಹೊಸಹಳ್ಳಿ ಗ್ರಾಮಪಂಚಾಯಿತಿಯ ನೂತನ ಸಾರಥಿಯಾಗಿ ತಿಪ್ಪಾಪುರ ಮಾರಪ್ಪ ಆಯ್ಕೆ

    ದೊಡ್ಡಬಳ್ಳಾಪುರ : ಮಜರಾಹೊಸಹಳ್ಳಿ ಗ್ರಾಮಪಂಚಾಯಿತಿಯ ನೂತನ ಪ್ರಭಾರ ಅಧ್ಯಕ್ಷರಾಗಿ ಮಾರಪ್ಪನವರುಅಧಿಕಾರ ಸ್ವೀಕರಿಸಿದರು.

     

    ತಾಲೂಕಿನ ಮಜರಾಹೊಸಹಳ್ಳಿ ಗ್ರಾಮ ಪಂಚಾಯಿತಿ 17 ಸದಸ್ಯರ ಬಲ ಹೊಂದಿದ್ದು, ಸರ್ವ ಸದಸ್ಯರ ಒಮ್ಮತದಿಂದ ಅವಿರೋಧವಾಗಿ ಮಾರಪ್ಪನವರನ್ನು ನೂತನ ಪ್ರಭಾರ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ .

     

    ನೂತನ ಅಧ್ಯಕ್ಷರಿಗೆ ಸದಸ್ಯರು ಮತ್ತು ಸ್ಥಳೀಯ ಮುಖಂಡರು ಮಾಲಾರ್ಪಣೆ ಮಾಡಿ ಸಿಹಿ ಹಚ್ಚುವ ಮೂಲಕ ಸಂಭ್ರಮಿಸಿದರು.

     

    ನೂತನ ಅಧ್ಯಕ್ಷ ಮಾರಪ್ಪ ಮಾತನಾಡಿ ನಮ್ಮ ಪಂಚಾಯತಿಯ ಸರ್ವ ಸದಸ್ಯರು ಯಾವುದೇ ಪಕ್ಷ ಬೇದವಿಲ್ಲದೆ ಅವಿರೋಧವಾಗಿ ನನ್ನನ್ನು ಪ್ರಭಾರ ಹಂಗಾಮಿ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದಾರೆ ಎಲ್ಲರಿಗೂ ಅಭಿನಂದನೆಗಳನ್ನು ಸಲ್ಲಿಸುತ್ತೇನೆ, ನನಗೆ ವಹಿಸಿರುವ ಜವಾಬ್ದಾರಿಯನ್ನು ಯಾವುದೇ ಪಕ್ಷಭೇದ ಮಾಡದೆ ಪಂಚಾಯತಿಯ ಸರ್ವತೋಮುಖ ಅಭಿವೃದ್ಧಿಗೆ ನಿಷ್ಠೆಯಿಂದ ಶ್ರಮಿಸುತ್ತೇನೆ ಎಂದರು.

     

     

    ಈ ಹಿಂದೆ ನಾನು ಗ್ರಾಮ ಪಂಚಾಯತಿ ಸದಸ್ಯನಾಗಿ, ಪಂಚಾಯತಿಯ ಉಪಾಧ್ಯಕ್ಷನಾಗಿ ಕರ್ತವ್ಯ ನಿರ್ವಹಿಸಿದ್ದು ಹಳೆಯ ಅನುಭವಗಳು ಪ್ರಸ್ತುತ ಅಧ್ಯಕ್ಷರಾಗಿ ಕರ್ತವ್ಯ ನಿರ್ವಹಿಸಲು ಮತ್ತಷ್ಟು ಶಕ್ತಿ ತುಂಬಲಿವೆ, ನಮ್ಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಾಕಷ್ಟು ಕಾರ್ಖಾನೆಗಳಿದ್ದು , ಸ್ಥಳೀಯ ಕಾರ್ಖಾನೆಗಳಿಂದ ನಮಗೆ ಲಾಭಕ್ಕಿಂತ ನಷ್ಟವೇ ಹೆಚ್ಚು ಪ್ರಮುಖವಾಗಿ ಪರಿಸರ ಮಾಲಿನ್ಯ, ಜಲ ಮೂಲಗಳ ಮಾಲಿನ್ಯ ನಿರಂತರ ಕಾಡುತ್ತಿರುವ ಸಮಸ್ಯೆಯಾಗಿದೆ , ಈ ಕುರಿತು ಗ್ರಾಮ ಮಟ್ಟದಿಂದ ರಾಜ್ಯಮಟ್ಟದವರೆಗೂ ನಾವು ನಿರಂತರ ಹೋರಾಟ ನಡೆಸುತ್ತಿದ್ದೇವೆ, ಪ್ರಸ್ತುತ ಪರಿಸ್ಥಿತಿಯಲ್ಲಿ ನಮ್ಮ ದೊಡ್ಡತುಮಕೂರು ಪಂಚಾಯತಿ ಹಾಗೂ ಮಜರಾಹೊಸಹಳ್ಳಿ ವ್ಯಾಪ್ತಿಯ ಗ್ರಾಮಗಳಿಗೆ ಅರಳು ಮಲ್ಲಿಗೆ ಪಂಚಾಯಿತಿ ವ್ಯಾಪ್ತಿಯಿಂದ ಶುದ್ಧ ಕುಡಿಯುವ ನೀರು ಪೂರೈಕೆ ಮಾಡುವ ಕಾಮಗಾರಿ ಚಾಲ್ತಿಯಲ್ಲಿದ್ದು, ಸ್ಥಳೀಯ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವುದೇ ಮೊದಲ ಆದ್ಯತೆ ಆಗಿದೆ ಎಂದರು.

     

    ನೂತನ ಅಧ್ಯಕ್ಷರಿಗೆ ಸ್ಥಳೀಯ ಮುಖಂಡರಾದ ತಿ.ರಂಗರಾಜು, ಬಮೂಲ್ ನಿರ್ದೇಶಕ ಬಿ ಸಿ ಆನಂದ್ ಕುಮಾರ್, ಸ್ಥಳೀಯ ಮುಖಂಡರಾದ ಬಿ ಎಚ್ ಕೆಂಪಣ್ಣ, ಕಾಂಗ್ರೆಸ್ ಮುಖಂಡರಾದ ಆದಿತ್ಯ ನಾಗೇಶ್ , ಮುಖಂಡರಾದ ಸಂದೇಶ್ ಸೇರಿದಂತೆ ಹಲವು ಗಣ್ಯರು ಶುಭಕೋರಿದ್ದಾರೆ

     

  • ಯುವಕರು ಬಿ ಎಸ್ ಪಿ ಕಾರ್ಯಗಾರಗಳಲ್ಲಿ ಭಾಗವಹಿಸಿ ಮಾಹಿತಿ ಪಡೆದು ತಮ್ಮ ಗ್ರಾಮಗಳಲ್ಲಿ ಅರಿವು ಮೂಡಿಸಿ – ಅಶೋಕ್ ಚಕ್ರವರ್ತಿ

    ದೊಡ್ಡಬಳ್ಳಾಪುರ : ಪಕ್ಷ ಬಲವರ್ಧನೆಗೊಳಿಸುವ ಮೂಲಕ ಜನರ ಮನೆ, ಮನಸ್ಸು, ಮತಗಳನ್ನು ಪರಿವರ್ತನೆ ಮಾಡುವ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದು, ಮುಂದಿನ ದಿನಗಳಲ್ಲಿ ಬಹುಜನ ಸಮಾಜ ಪಕ್ಷದ ವತಿಯಿಂದ ಸ್ವತಂತ್ರವಾಗಿ ಚುನಾವಣೆಯಲ್ಲಿ ಸ್ಪರ್ಧಿಸಿ ಜಯಗಳಿಸಲು ಇಂದಿನಿಂದ ತಯಾರಿ ಮಾಡಲಾಗುತ್ತಿದೆ ಎಂದು ಬಹುಜನ ಸಮಾಜ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಎಚ್ ನರಸಿಂಹಯ್ಯ ತಿಳಿಸಿದರು.

    ನಗರದ ಪ್ರವಾಸಿ ಮಂದಿರದಲ್ಲಿ ನಡೆದ ಜಿಲ್ಲಾ ಕಾರ್ಯಕರ್ತರ ಕಾರ್ಯಾಗಾರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಜಿಲ್ಲಾ ಕಾರ್ಯಕರ್ತರ ಕಾರ್ಯಗಾರ ನಡೆಸಿದ್ದೇವೆ, ಈ ಕಾರ್ಯಕ್ರಮದಲ್ಲಿ ನಾಲ್ಕು ತಾಲೂಕಿನ ಪದಾಧಿಕಾರಿಗಳು ಕಾರ್ಯಕರ್ತರು ಭಾಗಿಯಾಗಿದ್ದಾರೆ, ಇಂದು 17 ಹೋಬಳಿಗಳ 101 ಗ್ರಾಮ ಪಂಚಾಯಿತಿಯ ಕಾರ್ಯಕರ್ತರಿಗೆ ಪಕ್ಷದ ಮಾರ್ಗಸೂಚಿಗಳನ್ನು ನೀಡಲಾಗಿದೆ . ಜೂನ್ 22ರಂದು ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಇಬ್ಬರನ್ನು ಆಯ್ಕೆ ಮಾಡಿ ಅವರಿಗೆ ವಿಶೇಷವಾಗಿ ಬಹುಜನ ಸಮಾಜ ಪಕ್ಷದ ವತಿಯಿಂದ ಕಾರ್ಯಗಾರ ಏರ್ಪಡಿಸಿ ಪಕ್ಷದ ಕಾರ್ಯ ಚಟುವಟಿಕೆಗಳ ಬಗ್ಗೆ ತರಬೇತಿ ನೀಡಲಾಗುವುದು ಎಂದರು.

    ಪ್ರಸ್ತುತ ತಾಲೂಕು ಕಚೇರಿ ಹಾಗೂ ಇತರೆ ಸರ್ಕಾರಿ ಕಚೇರಿಗಳಲ್ಲಿ ಸಾರ್ವಜನಿಕರಿಗೆ ಸೇವಾ ಸೌಲಭ್ಯಗಳು ಸೂಕ್ತ ರೀತಿ ದೊರೆಯುತ್ತಿಲ್ಲ , ಅಧಿಕಾರಿಗಳು ರಾಜಕಾರಣಿಗಳ ಜೊತೆ ಕೈಜೋಡಿಸಿ ಸಾರ್ವಜನಿಕರ ಸೇವೆ ಮಾಡುವುದನ್ನು ಮರೆತಿದ್ದಾರೆ ಅಧಿಕಾರಿಗಳ ಈ ವರ್ತನೆಯನ್ನು ಬಹುಜನ ಸಮಾಜ ಪಕ್ಷವು ಸಾರ್ವಜನಿಕವಾಗಿ ಖಂಡಿಸುತ್ತದೆ ಎಂದರು.

    ಬಿ ಎಸ್ ಪಿ ರಾಜ್ಯ ಸಂಯೋಜಕ ಅಶೋಕ್ ಚಕ್ರವರ್ತಿ ಮಾತನಾಡಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಎಲ್ಲಾ ಯೋಜನೆಗಳು ಸಮಾಜದಲ್ಲಿ ಶೋಷಿತ ಸಮುದಾಯಗಳಿಗೆ ತಲುಪುತ್ತಿಲ್ಲ, ವೇದಿಕೆ ಮೇಲೆ ಭಾಷಣ ಮಾಡುವ ರಾಜಕೀಯ ನಾಯಕರು ಶೋಷಿತ ಸಮುದಾಯಗಳನ್ನು ಮರೆಯುವುದು ವಿಪರ್ಯಾಸವೇ ಸರಿ. ಸಮಾಜದಲ್ಲಿ ನಿರುದ್ಯೋಗ, ಭ್ರಷ್ಟಾಚಾರ ಹೆಚ್ಚಾಗಿದೆ, ಮತಗಳನ್ನು ಪಡೆಯುವಾಗ ಕೊಡುವ ಭರವಸೆಗಳನ್ನು ರಾಜಕಾರಣಿಗಳು ಬೇಗನೆ ಮರೆಯುತ್ತಾರೆ ಮತಗಳ ಬೆಲೆ ಏನೆಂಬುದು ಅವರಿಗೆ ಅರಿವಿಲ್ಲ ಮತದಾನದ ವಿಶೇಷತೆ ಮತ್ತು ಅದರ ಶಕ್ತಿ ಕುರಿತಾಗಿ ಬಹುಜನ ಸಮಾಜ ಪಕ್ಷವು ಪ್ರತಿ ಗ್ರಾಮಕ್ಕೂ ಭೇಟಿ ನೀಡಿ ಪ್ರತಿ ಮತದಾರರಿಗೂ ತಿಳಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ರೂಪಿಸಲಿದೆ ಎಂದರು.

    ಅಕ್ಕ ಮಾಯಾವತಿಯವರ ಆಶಯದಂತೆ ಸದಾ ಶೋಷಿತರ ಬಲವಾಗಿ ನಿಂತಿರುವ ಬಹುಜನ ಸಮಾಜ ಪಕ್ಷವು ದಲಿತ ಸಮುದಾಯಗಳ ಮೇಲೆ ನಡೆಯುವ ದೌರ್ಜನ್ಯಗಳ ವಿರುದ್ಧ ಸದಾ ಧ್ವನಿಯಾಗಲಿದೆ.ಅಲ್ಲದೇ ಸ್ಥಳಿಯವಾಗಿ ಯುವ ಸಮುದಾಯ ನಮ್ಮ ಕಾರ್ಯಗಾರಗಳಲ್ಲಿ ಭಾಗವಹಿಸಿ ಮಾಹಿತಿ ಪಡೆದು ತಮ್ಮ ಗ್ರಾಮಗಳಲ್ಲಿ ಅರಿವು ಮೂಡಿಸುವ ಕಾರ್ಯಕ್ಕೆ ಮುಂದಾಗಬೇಕಿದೆ ಎಂದರು .

    ಕಾರ್ಯಕ್ರಮದಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ ಸಿ ಹನುಮಂತ ರಾಯಪ್ಪ, ರಾಜ್ಯ ಕಾರ್ಯದರ್ಶಿ ಬಂಗಾರಪ್ಪ, ಜಿಲ್ಲಾ ಉಪಾಧ್ಯಕ್ಷರಾದ ದೊಡ್ಡಯ್ಯ, ಹೊಸಕೋಟೆ ತಾಲೂಕು ಅಧ್ಯಕ್ಷರಾದ ಬಾಲರಾಮಚಂದ್ರ, ದೊಡ್ಡಬಳ್ಳಾಪುರ ತಾಲೂಕು ಅಧ್ಯಕ್ಷರಾದ ಪಿಳ್ಳಪ್ಪ, ನೆಲಮಂಗಲ ತಾಲೂಕು ಅಧ್ಯಕ್ಷ ಮೂರ್ತಿ, ದೇವನಹಳ್ಳಿ ತಾಲೂಕು ಅಧ್ಯಕ್ಷ ಎಂ ಡಿ ರಾಮಾಂಜಿನಪ್ಪ, ದೊಡ್ಡಬಳ್ಳಾಪುರ ತಾಲೂಕು ಉಸ್ತುವಾರಿ ಆರ್ ಸೋಮಶೇಖರ್, ಹೊಸಕೋಟೆ ತಾಲೂಕು ಉಸ್ತುವಾರಿ ನಾರಾಯಣ ಸ್ವಾಮಿ , ದೇವನಹಳ್ಳಿ ತಾಲೂಕು ಉಸ್ತುವಾರಿ ನಂಜಪ್ಪ, ನೆಲಮಂಗಲ ತಾಲೂಕು ಉಸ್ತುವಾರಿ ಗಂಗಾಧರಪ್ಪ, ಮಹಿಳಾ ಕಾರ್ಯದರ್ಶಿಗಳಾದ ನೆಲಮಂಗಲ ಸೌಭಾಗ್ಯ, ತೂಬಗೆರೆ ನಾಗಮಣಿ, ವಿಜಯಲಕ್ಷ್ಮಿ, ಹೇಮಾವತಿ, ಸುವರ್ಣಮ್ಮ ದೊಡ್ಡಬಳ್ಳಾಪುರ ಸೇರಿದಂತೆ ಹಲವರು ಹಾಜರಿದ್ದರು.

  • ಕರ್ನಾಟಕದ ಶಕ್ತಿ ಕೇಂದ್ರ ವಿಧಾನಸೌಧಕ್ಕೆ ಹೋಗಲು ನೀವೂ ಬಯಸಿದ್ದೀರಾ… ಹಾಗಾದರೆ ನಿಮಗಾಗಿ ಈ ನ್ಯೂಸ್…

    ಕರ್ನಾಟಕದ ಶಕ್ತಿ ಕೇಂದ್ರ, ಪ್ರಜಾಪ್ರಭುತ್ವದ ಸಂಕೇತ ಎನಿಸಿಕೊಂಡಿರುವ ವಿಧಾನಸೌಧಕ್ಕೆ ಸಾರ್ವಜನಿಕರ ಪ್ರವೇಶಕ್ಕೆ ಮುಕ್ತವಾಗಿದೆ.

     

    ಹೌದು ರಾಜ್ಯ ಸರ್ಕಾರ ಐತಿಹಾಸಿಕ ಕಟ್ಟಡದ ಮಹತ್ವವನ್ನು ಪರಿಚಯಿಸುವ ನಿಟ್ಟಿನಲ್ಲಿ ʼವಿಧಾನಸೌಧ ಮಾರ್ಗದರ್ಶಿ ನಡಿಗೆʼ ಆರಂಭಿಸಲಾಗಿದೆ.

     

    ಪ್ರತಿ 2ನೇ ಮತ್ತು 4ನೇ ಶನಿವಾರ ಹಾಗೂ ಎಲ್ಲಾ ಭಾನುವಾರ ಬೆಳಗ್ಗೆ 8ರಿಂದ ಸಂಜೆ 5ರವರೆಗೆ ಸಾರ್ವಜನಿಕರ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದ್ದು . 16 ವರ್ಷ ಕೆಳಗಿನ ಮಕ್ಕಳಿಗೆ ಉಚಿತ ಪ್ರವೇಶವಿರಲಿದೆ , 16 ವರ್ಷ ಮೇಲ್ಪಟ್ಟವರಿಗೆ 50 ರೂ. ಶುಲ್ಕ ನಿಗದಿ ಮಾಡಲಾಗಿದೆ. ದಿನಕ್ಕೆ 300 ಪ್ರೇಕ್ಷಕರಿಗೆ ಮಾತ್ರ ಪ್ರವೇಶ ಅವಕಾಶ ದೊರೆಯಲಿದೆ.

    ಅಧಿಕೃತ ಕೆಎಸ್‌ಟಿಡಿಸಿ ವೆಬ್‌ಸೈಟ್‌ ಅಥವಾ ದೃಢೀಕೃತ ಟಿಕೆಟ್‌ ಸೇವಾ ಪೂರೈಕೆದಾರರ ವೇದಿಕೆಯಲ್ಲಿ ಟಿಕೆಟ್‌ ಬುಕ್ಕಿಂಗ್‌ ಕಡ್ಡಾಯವಾಗಿದ್ದು. ಸ್ಥಳದಲ್ಲಿ ಬುಕ್ಕಿಂಗ್‌ ಮಾಡಲು ಬಯಸುವವರು ಗೇಟ್‌ -3ರಲ್ಲಿರುವ ಕೆಎಸ್‌ಟಿಡಿಸಿ ಕೌಂಟರ್‌ನಲ್ಲಿ ಟಿಕೆಟ್‌ ಲಭ್ಯತೆ ಇದ್ದರೆ ಪ್ರವೇಶಕ್ಕೆ ಅವಕಾಶ ನೀಡಲಾಗುವುದು ಎಂದು ಮೂಲಗಳು ತಿಳಿಸವೆ.

     

  • ಪ್ರಾಮಾಣಿಕತೆ, ನ್ಯಾಯದ ಹೋರಾಟಕ್ಕೆ ಸಿಕ್ಕ ಗೆಲುವು – ಬಿ ಸಿ ಆನಂದ್ ಕುಮಾರ್

    ದೊಡ್ಡಬಳ್ಳಾಪುರ : ತಾಲ್ಲೂಕಿನ ಹಾಲು ಉತ್ಪಾದಕ ಸಂಘಗಳ ಅಧ್ಯಕ್ಷರು ಮತ್ತು ಎಲ್ಲಾ ಪಕ್ಷಗಳ ಮುಖಂಡರು ನನ್ನ ಹಿಂದಿನ ಆರು ವರ್ಷಗಳ ಪ್ರಾಮಾಣಿಕ ಮತ್ತು ನ್ಯಾಯಯುತ ಹೋರಾಟಕ್ಕೆ ಬೆಂಬಲ ಸೂಚಿಸಿ ಬಮುಲ್ ಚುನಾವಣೆಯಲ್ಲಿ ಅತ್ಯಧಿಕ ಮತಗಳಿಂದ ಜಯಗಳಿಸಲು ಕಾರಣಕರ್ತರಾಗಿದ್ದಾರೆ ಎಂದು ಬಮುಲ್ ನೂತನ ನಿರ್ದೇಶಕ ಬಿ.ಸಿ ಆನಂದ್ ಕುಮಾರ್ ತಿಳಿಸಿದರು.

    ನಗರದ ಬಮೂಲ್ ಶಿಬಿರ ಕಚೇರಿಯಲ್ಲಿ ಸೋಮವಾರ ಮತದಾರರಿಗೆ ಅಭಿನಂದನೆ ಸಲ್ಲಿಸಿ ಮಾತನಾಡಿದ ಅವರು ಸ್ಥಳೀಯ ಶಾಸಕ ಧೀರಜ್ ಮುನಿರಾಜು ಹಾಗೂ ತಾಲೂಕಿನ ಪ್ರಾಮಾಣಿಕ ಜೆಡಿಎಸ್ ಮುಖಂಡರು ಕಾರ್ಯಕರ್ತರು ಇಂದಿನ ಗೆಲುವಿಗೆ ಮುಖ್ಯ ಕಾರಣಕರ್ತರಾಗಿದ್ದಾರೆ ಎಂದರು.

     

    ಬಮೂಲ್ ನಿರ್ದೇಶಕರ ಚುನಾವಣೆ ರೈತಾಪಿ ವರ್ಗದ ಚುನಾವಣೆಯಾಗಿದ್ದು, ನನ್ನ ಮುಂದಿನ ಕಾರ್ಯಾವಧಿಯಲ್ಲಿ ಯಾವುದೇ ಪಕ್ಷಪಾತ ಮಾಡದೆ ಮತ್ತಷ್ಟು ಪ್ರಾಮಾಣಿಕತೆಯಿಂದ ಸೇವೆಯನ್ನು ತಾಲೂಕಿನ ಪ್ರತಿ ಹಾಲು ಉತ್ಪಾದಕ ಸಂಘಗಳಿಗೆ ಮಾಡುತ್ತೇನೆ. ಮುಖ್ಯವಾಗಿ ಟೆಟ್ರಾ ಪ್ಯಾಕ್ ಘಟಕಕ್ಕೆ ಚಾಲನೆ ನೀಡಲು ಶ್ರಮಿಸಲಾಗುವುದು ಎಂದರು.

     

    ಮಾಜಿ ಪ್ರಧಾನಿ ದೇವೇಗೌಡರು ರೈತರಿಗಾಗಿ ಕಟ್ಟಿರುವ ಜೆಡಿಎಸ್ ಪಕ್ಷದಲ್ಲಿ ಆಮಿಷಗಳಿಗೆ ಒಳಗಾಗುವ ಕೆಲ ಮುಖಂಡರಿದ್ದಾರೆ ಆದರೆ ಪಕ್ಷನಿಷ್ಠೆಯುಳ್ಳು ಮುಖಂಡರು ಹೆಚ್ಚಿನದಾಗಿದ್ದಾರೆ. ತಾಲೂಕಿನಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ನನ್ನನ್ನು ಘೋಷಿಸಿದ ಬಳಿಕ ಕೆಲ ಜೆಡಿಎಸ್ ಮುಖಂಡರು ನನ್ನ ವಿರುದ್ಧ ಕುತಂತ್ರ ಮಾಡಿದರು. ಈ ಚುನಾವಣೆ ಫಲಿತಾಂಶವು ಅಂತಹ ಕುತಂತ್ರಿಗಳಿಗೆ ತಕ್ಕ ಉತ್ತರ ಕೊಟ್ಟಿದೆ ಎಂದರು.ತಾಲ್ಲೂಕಿನ ಕಳೆದ ಹತ್ತು ವರ್ಷಗಳ ಕಾಲ ಸದೃಢ ಆಡಳಿತ ನಡೆಸಿದ್ದೇವೆ ಎಂದು ಹೇಳುವ ಕಾಂಗ್ರೆಸ್ ನಾಯಕರು ಪಕ್ಷದಿಂದ ಒಬ್ಬ ಅಭ್ಯರ್ಥಿಯನ್ನು ಹಾಕದೇ ಕುತಂತ್ರಕ್ಕೆ ಮುಂದಾಗಿದ್ದು ಅವರ ಶಕ್ತಿಯನ್ನು ತೋರಿಸುತ್ತದೆ ಎಂದರು.

  • ಕರ್ನಾಟಕ ಅಗ್ನಿವಂಶ ಕ್ಷತ್ರಿಯ ( ತಿಗಳರ ) ಗಜಕೇಸರಿ ಸೇನೆಯ ನೂತನ ಘಟಕ ಉದ್ಘಾಟನೆ

    ದೇವನಹಳ್ಳಿ: ಸಮುದಾಯದ ಉಳಿವಿಗಾಗಿ ಹಾಗೂ ಅಭಿವೃದ್ಧಿಗಾಗಿ ಕರ್ನಾಟಕ ಅಗ್ನಿವಂಶ ಕ್ಷತ್ರಿಯ ( ತಿಗಳರ ) ಗಜಕೇಸರಿ ಸೇನೆಯ (ರಿ.) ನೂತನವಾಗಿ ದೇವನಹಳ್ಳಿ ತಾಲ್ಲೂಕು ಘಟಕವನ್ನು ಉದ್ಘಾಟಿಸಿ ಶುಭ ಹಾರೈಸಿದ್ದೇವೆ ಎಂದು ಸಮುದಾಯದ ಹಿರಿಯ ಮುಖಂಡರಾದ ಜಗದೀಶ್ ತಿಳಿಸಿದರು

     

    ಅರದೇಶನಹಳ್ಳಿ ಹಾಗೂ ಬಸವನಪುರ ಗ್ರಾಮಗಳ ಜಂಟಿ ಸಹಕಾರದೊಂದಿಗೆ ತಿಗಳ ಸಮುದಾಯದ ಮುಖಂಡರು ಒಟ್ಟಾಗಿ ಕರ್ನಾಟಕ ಅಗ್ನಿವಂಶ ಕ್ಷತ್ರಿಯ ( ತಿಗಳರ ) ಗಜಕೇಸರಿ ಸೇನೆಯ ನೂತನ ಘಟಕವನ್ನು ಉದ್ಘಾಟಿಸಿ ಮಾತನಾಡಿದ ಅವರು ಸಮುದಾಯದ ಉಳಿವಿಗಾಗಿ ಯುವ ಸಮುದಾಯವು ನೂತನ ಕಾರ್ಯಕ್ಕೆ ಮುಂದಾಗಿದೆ ನಮ್ಮ ಸಮುದಾಯದ ಇತಿಹಾಸವನ್ನು ಅರಿತು, ಸಮಾಜಕ್ಕೆ ಉತ್ತಮ ಸೇವೆ ಸಲ್ಲಿಸುವ ಮೂಲಕ ಸಮುದಾಯಕ್ಕೆ ಮತ್ತಷ್ಟು ಉತ್ತಮ ಸ್ಥಾನ ಮಾನ ಸಿಗುವಂತೆ ಯುವ ಸಮುದಾಯವು ಶ್ರಮಿಸಲಿ ಎಂದು ಹಾರೈಸಿದರು.

    ಇನ್ನು ಮುಂದೆ ರಾಜ್ಯದ ಪ್ರತಿ ಹಳ್ಳಿ ಹಳ್ಳಿಯಲ್ಲಿ ನಮ್ಮ ಸಂಘಟನೆಯ ಗ್ರಾಮ, ಹೋಬಳಿ, ತಾಲ್ಲೂಕು, ಜಿಲ್ಲಾ ಘಟಕಗಳನ್ನು ಉದ್ಘಾಟನೆ ಮಾಡುವ ಮೂಲಕ ಸಮುದಾಯದ ಜನತೆಯಲ್ಲಿ ಜಾಗೃತಿ ಮೂಡಿಸಿ ಸಮುದಾಯದ ಅಭಿವೃದ್ಧಿಗೆ ನೂತನ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗುವುದು ಎಂದರು

    ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಮಧುಸೂದನ್ ಕೆ ಆರ್ ಮಾತನಾಡಿ ಹಿಂದುಳಿದ ನಮ್ಮ ಸಮುದಾಯವನ್ನು ಬಲಪಡಿಸಿ ಒಟ್ಟುಗೂಡಿಸುವ ಕಾರ್ಯವನ್ನು ಕರ್ನಾಟಕ ಅಗ್ನಿವಂಶ ಕ್ಷತ್ರಿಯ ( ತಿಗಳರ ) ಗಜಕೇಸರಿ ಸೇನೆ ಮಾಡುತ್ತಿದೆ. ಇಂದು ದೇವನಹಳ್ಳಿ ವ್ಯಾಪ್ತಿಯ ಆರದೇಶನಹಳ್ಳಿ ಹಾಗೂ ಬಸವನಪುರ ಗ್ರಾಮ ಶಾಖೆಯನ್ನು ಉದ್ಘಾಟಿಸುವ ಮೂಲಕ ಸಮುದಾಯದ ಅಭಿವೃದ್ಧಿ ಹಾಗೂ ಅರಿವು ಮೂಡಿಸುವ ಕಾರ್ಯಕ್ರಮಕ್ಕೆ ಸಂಕೇತಿಕವಾಗಿ ಚಾಲನೆ ನೀಡಲಾಗಿದೆ ಎಂದರು.

    ಸ್ಥಳೀಯ ಮುಖಂಡರಾದ ಸುಬ್ರಮಣಿ ಮಾತನಾಡಿ ಇಂದಿನ ಕಾರ್ಯಕ್ರಮ ವಿಶೇಷವಾಗಿದ್ದು ಸಮುದಾಯದ ಮುಖಂಡರು ಹಾಗೂ 18 ಗಡಿ ಯಜಮಾನರಾದ ಜಗದೀಶ್ ರವರು ನಮ್ಮ ಕಾರ್ಯಕ್ರಮಕ್ಕೆ ಆಗಮಿಸಿ ನೂತನ ಘಟಕದ ನಾಮಫಲಕ ಅನಾವರಣ ಮಾಡುವ ಮೂಲಕ ಶುಭ ಹಾರೈಸಿದ್ದಾರೆ, ದೇವನಹಳ್ಳಿ ತಾಲೂಕಿನಾದ್ಯಂತ ವಾಸವಿರುವ ಅಗ್ನಿವಂಶ ಕ್ಷತ್ರಿಯ (ತಿಗಳ) ಸಮುದಾಯವನ್ನು ಒಟ್ಟುಗೂಡಿಸುವ ಮುಖ್ಯ ಉದ್ದೇಶದೊಂದಿಗೆ ಈ ಸಂಘಟನೆಯನ್ನು ಉದ್ಘಾಟಿಸಿದ್ದೇವೆ, ಎಲ್ಲರೊಟ್ಟಿಗೆ ಬೆರೆತು ಎಲ್ಲರ ಸಲಹೆ ಸೂಚನೆಗಳನ್ನು ಪಡೆಯುತ್ತಾ ಹಿರಿಯರ ಮಾರ್ಗದರ್ಶನದೊಂದಿಗೆ ಸಮುದಾಯದ ಅಭಿವೃದ್ಧಿಗೆ ಶ್ರಮಿಸುವುದು ನಮ್ಮೆಲ್ಲರ ಉದ್ದೇಶವಾಗಿದೆ, ಮುಂದೆ ರಾಜ್ಯಾದ್ಯಂತ ಹಿರಿಯರ ಜೊತೆಗೂಡಿ ಸಂಘಟನೆ ಜೊತೆ ಜೊತೆಗೆ ಸಮುದಾಯದ ಅಭಿವೃದ್ಧಿಯನ್ನು ಮಾಡುತ್ತಾ ಜನರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮ, ಸಮುದಾಯದ ಇತಿಹಾಸ ಹಿನ್ನೆಲೆಯನ್ನು ತಿಳಿಸುವ ಕೆಲಸವನ್ನು ನಮ್ಮ ಯುವ ಸಮುದಾಯ ಮಾಡಲಿದೆ ಎಂದರು.

     

    ಸಂಘಟನೆಯ ರಾಜ್ಯಾಧ್ಯಕ್ಷ ಆರ್ ಉಮೇಶ್ ಮಾತನಾಡಿ ಸಮುದಾಯದ ಸರ್ವತೋಮುಖ ಅಭಿವೃದ್ಧಿಗಾಗಿ ಒಳಿತಿಗಾಗಿ ಕಟ್ಟಿದ ಸಂಘಟನೆ ಇದಾಗಿದ್ದು, ದೇವನಹಳ್ಳಿ ತಾಲ್ಲೂಕಿನ ಅರದೇಶನಹಳ್ಳಿ ಹಾಗೂ ಬಸವನಪುರ ಗ್ರಾಮದಲ್ಲಿ ಇಂದು ನಮ್ಮ ಸಂಘಟನೆಯ ನೂತನ ಘಟಕ ಉದ್ಘಾಟನೆಗೊಂಡಿರುವುದು ಸಂತಸದೊಂದಿಗೆ ನೂತನ ಪದಾಧಿಕಾರಿಗಳಿಗೆ ಶುಭವಾಗಲಿ ಎಂದು ಹಾರೈಸಿದರು

     

    ಕಾರ್ಯಕ್ರಮದಲ್ಲಿ ಸಮುದಾಯದ ಪ್ರಮುಖ ಯಜಮಾನರುಗಳಲ್ಲಿ ಒಬ್ಬರು 18 ಗಡಿ ಯಜಮಾನರಾದ ಜಗದೀಶ್, ನೆಲಮಂಗಲ ಯಜಮಾನ್ ಉಮೇಶ್, ಗಜಕೇಸರಿ ಸೇನೆಯ ರಾಜ್ಯಾಧ್ಯಕ್ಷ ಆರ್.ಉಮೇಶ್, ಪ್ರಧಾನ ಕಾರ್ಯದರ್ಶಿಗಳಾದ ಮಧುಸೂದನ್ ಕೆ ಆರ್, ನಿರ್ದೇಶಕರಾದ ಶರತ್, ನವೀನ್, ಮುಖಂಡರಾದ ಸುಬ್ರಮಣಿ ಅರದೇಶನ ಹಳ್ಳಿ , ನೂತನ ಘಟಕದ ಅಧ್ಯಕ್ಷ ಹನುಮಂತರಾಜು, ಉಪಾಧ್ಯಕ್ಷ ಬಿ.ಲಕ್ಷ್ಮಯ್ಯಾ ಬಸವನಪುರ , ಕಾರ್ಯಧ್ಯಕ್ಷ ಆರ್,ರಾಮಾಂಜಿನಯ್ಯ ಬಸವನಪುರ, ನಿರ್ದೇಶಕರಾದ  ಡಿ.ನಾಗೇಶ್ ಅರದೇಶನಹಳ್ಳಿ ,ಎಲ್.ಚಂದ್ರ ಅರದೇಶನಹಳ್ಳಿ , ವೈ.ಮಾರುತಿ ಅರದೇಶನಹಳ್ಳಿ , ಹೆಚ್. ಮಂಜುನಾಥ್ ಅರದೇಶನ ಹಳ್ಳಿ , ಬಸವರಾಜಪ್ಪ ಬಸವನ ಪುರ, ಎನ್.ಅರುಣ್ ಕುಮಾರ್ ಬಸವನಪುರ , ಪ್ರಕಾಶ್ ಬಸವನಪುರ ,ನಿವೃತ್ತ ಪೊಲೀಸ್ ಅಧಿಕಾರಿ ಗೋವಿಂದರಾಜು ಕೆಸ್ತೂರು, ಹಣಬೆ ಯಜಮಾನರಾದ ರವಿಕುಮಾರ್, ಖಾಸ್ ಬಾಗ್ ಮುದ್ರೆ ಜಯರಾಂ, ಮುತ್ತೂರಿನ ಆನಂದ್, ಹೆಜ್ಜಾಜಿಯ ನಟರಾಜು, ರಮೇಶ್, ಹಾಗೂ ದೇವನಹಳ್ಳಿ ತಾಲ್ಲೂಕಿನ ಅರದೇಶನಹಳ್ಳಿ, ಬಸವನಪುರ ಎರಡು ಗ್ರಾಮಗಳ ಮುಖಂಡರು ಹಾಜರಿದ್ದರು.