Blog

  • ದೊಡ್ಡಬಳ್ಳಾಪುರ ನಗರಸಭೆ ಮೇಲೆ ಲೋಕಾಯುಕ್ತ ದಾಳಿ : ದಾಖಲೆಗಳನ್ನು ಪರಿಶೀಲಿಸುತ್ತಿರುವ ಅಧಿಕಾರಿಗಳು

    ದೊಡ್ಡಬಳ್ಳಾಪುರ : ದೊಡ್ಡಬಳ್ಳಾಪುರ ನಗರಸಭೆ ಕಾರ್ಯಾಲಯದ ಮೇಲೆ ಇಂದು ಮಧ್ಯಾಹ್ನ ಲೋಕಾಯುಕ್ತ ಅಧಿಕಾರಿಗಳ ತಂಡ ದಾಳಿ ನಡೆಸಿದೆ

     

     

    ಸಾರ್ವಜನಿಕರ ದೂರಿನ ಹಿನ್ನಲೆ ದೊಡ್ಡಬಳ್ಳಾಪುರ ನಗರಸಭೆ ಮೇಲೆ ಲೋಕಾಯುಕ್ತ ಎಸ್ ಪಿ ಪವನ್ ನೆಜ್ಜುರ್ ನೇತೃತ್ವದಲ್ಲಿ ದಾಳಿ ನೆಡೆಸಿರುವ ಅಧಿಕಾರಿಗಳು ನಗರಸಭೆ ಪೌರಾಯುಕ್ತ ಕಾರ್ತಿಕೇಶ್ವರ್ ಕಚೇರಿಯ ಕಡತಗಳನ್ನು ಪರಿಶೀಲನೆ ಮಾಡುತ್ತಿದ್ದಾರೆ.

     

    ಸದ್ಯ ದಾಖಲೆಗಳ ಪರಿಶೀಲನೆ ಮತ್ತು ಸಿಬ್ಬಂದಿಗಳ ವಿಚಾರಣೆಯನ್ನ ನಡೆಸುತ್ತಿದ್ದಾರೆ, ಮೂಲಗಳ ಪ್ರಕಾರ ಸಾರ್ವಜನಿಕರೊಬ್ಬರ ದೂರಿನ ಹಿನ್ನಲೆ ಲೋಕಾಯಕ್ತ ದಾಳಿ ನಡೆದಿದೆ ಎನ್ನಲಾಗಿದೆ.

     

     

    ದೊಡ್ಡಬಳ್ಳಾಪುರ ನಗರಸಭೆಯಲ್ಲಿ ಇತ್ತೀಚಿಗೆ ಹಲವಾರು ಲಂಚ ಪ್ರಕರಣಗಳು ಸಾಮಾಜಿಕ ಜಾಲತಾಣಗಳ ಮೂಲಕ ಬಹಳ ಸದ್ದು ಮಾಡಿತ್ತು ಅಲ್ಲದೇ ಇ-ಖಾತಾ ಅಂದೋಲನ ನೆಡೆಯುತ್ತಿರುವ ಹಿನ್ನಲೆ ಇ-ಖಾತೆ ಮಾಡಿಕೊಡುವಲ್ಲಿ ಲಂಚ ತೆಗೆದುಕೊಳ್ಳಲಾಗುತ್ತಿದೆ ಎಂಬ ಮಾತುಗಳು ಸಾಮಾಜಿಕ ವಲಯದಲ್ಲಿ ಕೇಳಿಬಂದಿದ್ದವು ಇದಕ್ಕೆ ಸಂಬಂಧಪಟ್ಟಂತೆ ಹಲವಾರು ಸಂಘಟನೆಗಳು ಪ್ರತಿಭಟನೆ ಮಾಡಿದ್ದೂ, ದಾಳಿಯ ಹಿನ್ನೆಲೆ ಏನೆಂಬುದು ಸಾರ್ವಜನಿಕರಲ್ಲಿ ಕುತೂಹಲ ಮೂಡಿಸದೆ.

  • ಮಕ್ಕಳ ಸರ್ವತೋಮುಖ ಅಭಿವೃದ್ಧಿಗಾಗಿ ಗುರುತ್ವ ಅಕಾಡೆಮಿ ಸದಾ ಶ್ರಮಿಸುತ್ತಿದೆ – ಶ್ರೀನಿವಾಸ್

    ದೊಡ್ಡಬಳ್ಳಾಪುರ : ನಗರದ ಗಾಂಧಿ ವೃತ್ತದ ಬಳಿ ಇರುವ ಗುರುತ್ವ ಅಕಾಡೆಮಿಯಲ್ಲಿ ತರಬೇತಿ ಪಡೆದು ಸೈನಿಕ್ ಮತ್ತು ಜವಾಹರ ನವೋದಯ ವಿದ್ಯಾಸಂಸ್ಥೆಗಳಿಗೆ 4 ಪ್ರತಿಭಾನ್ವಿತ ವಿದ್ಯಾರ್ಥಿಗಳು ಆಯ್ಕೆಯಾಗಿದ್ದು,ಆಯ್ಕೆಯಾದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಸಂಸ್ಥೆವತಿಯಿಂದ ಹಮ್ಮಿಕೊಳ್ಳಲಾಗಿತ್ತು.

     

     

    ನವೋದಯ ವಿದ್ಯಾಸಂಸ್ಥೆಗೆ ಅನನ್ಯ ಎಚ್‌.ಎಸ್ ಹಾಗೂ ಹರ್ಷಿತ್.ವಿ ಇಬ್ಬರು ವಿದ್ಯಾರ್ಥಿಗಳು ಆಯ್ಕೆಯಾದರೆ, ಸೈನಿಕ್ ಶಾಲೆಗೆ ಹರಿಪ್ರಿಯ ಹಾಗೂ ತೇಜಸ್ ರೆಡ್ಡಿ ಪಿ.ಎನ್ ಆಯ್ಕೆಯಾಗಿದ್ದಾರೆ.

     

    ಸೈನಿಕ್ ಮತ್ತು ಜವಾಹರ ನವೋದಯ ವಿದ್ಯಾಸಂಸ್ಥೆಗಳಿಗೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಗುರುತ್ವ ಅಕಾಡೆಮಿ ವತಿಯಿಂದ ಪ್ರತಿಭಾ ಪುರಸ್ಕಾರ ವಿತರಣಾ ಕಾರ್ಯಕ್ರಮ ಆಯೋಜನೆ ಮಾಡಲಾಗಿದ್ದು

     

    ಸಂಸ್ಥೆಯ ಮುಖ್ಯಸ್ಥ ಶ್ರೀನಿವಾಸ್ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ವಿತರಣೆ ಮಾಡಿ ಮಾತನಾಡಿದರು ಗುರುತ್ವ ಅಕಾಡೆಮಿ ಪ್ರಾರಂಭದಿಂದ ಇಲ್ಲಿಯವರೆಗೆ ಸುಮಾರು 150 ಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತರಬೇತಿ ಪಡೆದಿದ್ದಾರೆ. ಕಳೆದ ವರ್ಷ ಇಬ್ಬರು ಮಕ್ಕಳು ಆಯ್ಕೆಯಾಗಿದ್ದರು. ಈ ವರ್ಷ ನಾಲ್ವರು ವಿದ್ಯಾರ್ಥಿಗಳು ಸೈನಿಕ್ ಮತ್ತು ಜವಾಹರ ನವೋದಯ ವಿದ್ಯಾಸಂಸ್ಥೆಗಳಿಗೆ ಆಯ್ಕೆಯಾಗಿದ್ದಾರೆ ಎಂದರು.

     

    ಗುರುತ್ವ ಅಕಾಡೆಮಿಯಲ್ಲಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡುತ್ತಿದ್ದು. ಮಕ್ಕಳಿಗೆ ಅರ್ಥವಾಗುವ ರೀತಿ, ಮಕ್ಕಳ ಬೌದ್ಧಿಕ ಗುಣಮಟ್ಟಕ್ಕೆ ಅನುಗುಣವಾಗಿ ತರಬೇತಿ ನೀಡಲಾಗುತ್ತದೆ. ಶಿಕ್ಷಣ ಅನ್ನೋದು ಮಕ್ಕಳಿಗೆ ಹೊರೆ ಆಗಬಾರದು, ಮಕ್ಕಳು ಶಿಕ್ಷಣವನ್ನು ಇಷ್ಟಪಟ್ಟು ಪಡೆಯಬೇಕು. ಆ ನಿಟ್ಟಿನಲ್ಲಿ ಮಕ್ಕಳಿಗೆ ವಿದ್ಯಾಭ್ಯಾಸ ಕಲಿಸಬೇಕು ಎಂದರು.

     

    ನಂತರ ನವೋದಯ ವಿದ್ಯಾಸಂಸ್ಥೆಗೆ ಆಯ್ಕೆಯಾದ ವಿದ್ಯಾರ್ಥಿಗಳು ಮಾತನಾಡಿ, ಗುರುತ್ವ ಅಕಾಡೆಮಿಯಲ್ಲಿ ಶಿಕ್ಷಣಕ್ಕೆ ಸಂಬಂಧಪಟ್ಟಂತೆ ಉತ್ತಮ ತರಬೇತಿ ನೀಡಲಾಗುತ್ತಿದೆ. ಇಲ್ಲಿ ನಾನು ತರಬೇತಿ ಪಡೆದಿದ್ದರಿಂದ ನವೋದಯ ಶಾಲೆಗೆ ಆಯ್ಕೆಯಾಗಿದ್ದಾನೆ. ಇಂಗ್ಲಿಷ್, ಹಿಂದಿ ಭಾಷೆ ಕಲಿಸಿ ಭಾಷಾ ಜ್ಞಾನ ವೃದ್ಧಿ ಮಾಡುತ್ತಿದ್ದಾರೆ. ಈ ಅಕಾಡೆಮಿಯಲ್ಲಿ ನಾನು ಸಾಕಷ್ಟು ಕಲಿತಿದ್ದೇನೆ ಎಂದರು.

     

    ಈ ವೇಳೆ ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣದ ರಾಜಘಟ್ಟ ರವಿ,ಆರ್. ಎಲ್. ಜಾಲಪ್ಪ ಕಾಲೇಜಿನ ಪ್ರಾಂಶುಪಾಲರಾದ ವಿಜಯ ಕಾರ್ತಿಕ್ ಸೇರಿದಂತೆ ಪೋಷಕರು ಗಣ್ಯರು ಹಾಜರಿದ್ದರು.

  • ಬಮೂಲ್ ಚುನಾವಣೆ : ಕಾಂಗ್ರೆಸ್ ಜೆಡಿಎಸ್ ಗೆ ಬಿಜೆಪಿ ಟಕ್ಕರ್. ಹುಸ್ಕೂರು ಆನಂದ್ ವಿರುದ್ಧ ಬಿ.ಸಿ ಆನಂದ್ ಕುಮಾರ್ ಭರ್ಜರಿ ಗೆಲುವು. ಹಾಲು ಉತ್ಪಾದಕರಿಗೆ ಗೆಲುವು ಅರ್ಪಣೆ.

    ದೊಡ್ಡಬಳ್ಳಾಪುರ:ಬೆಂಗಳೂರು ಸಹಕಾರ ಹಾಲು ಒಕ್ಕೂಟ (ಬಮೂಲ್) ಆಡಳಿತ ಮಂಡಳಿ ನಿರ್ದೇಶಕರ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಬಿ ಸಿ ಆನಂದ ಕುಮಾರ್ 156 ಮತಗಳನ್ನು ಪಡೆಯುವ ಮೂಲಕ ಭರ್ಜರಿ ಗೆಲುವು ಸಾಧಿಸಿದ್ದಾರೆ.

    ಕಾಂಗ್ರೆಸ್ ಬೆಂಬಲಿತ ಜೆಡಿಎಸ್ ಅಭ್ಯರ್ಥಿ ಹುಸ್ಕೂರು ಟಿ ಆನಂದ್‌ 40 ಮತಗಳನ್ನು ಪಡೆದಿದ್ದಾರೆ.ಎನ್ ಡಿ ಎ ಬೆಂಬಲಿತ ಅಭ್ಯರ್ಥಿ ಬಿ ಸಿ ಆನಂದ್ ಕುಮಾರ್ 156 ಮತಗಳನ್ನು ಪಡೆಯುವ ಮೂಲಕ ಕಾಂಗ್ರೆಸ್ ಜೆಡಿಎಸ್ ಮೈತ್ರಿ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ್ದಾರೆ.

    ಇಂದು ಬೆಂಗಳೂರು ಡೇರಿ ವೃತ್ತ ಸಮೀಪ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಆವರಣದಲ್ಲಿ ಇಂದು ಬೆಳಿಗ್ಗೆ 9-00 ಗಂಟೆಯಿಂದ ಸಂಜೆ 4-00 ಗಂಟೆಯವರೆಗೆ ಮತದಾನ ನಡೆದಿದ್ದು ಹುಸ್ಕೂರು ಆನಂದ್ ವಿರುದ್ಧ ಬಿಸಿ ಆನಂದ್ ಕುಮಾರ್ ಜಯಸಾಧಿಸಿದ್ದಾರೆ

     

    ಅಭಿಮಾನಿಗಳು ಪಟಾಕಿ ಸಿಡಿಸಿ ಸಿಹಿ ಹಂಚುವ ಮೂಲಕ ಸಂಭ್ರಮಾಚರಣೆ ಮಾಡಿದ್ದಾರೆ.

     

    ಫಲಿತಾಂಶದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಸ್ಥಳೀಯ ಮುಖಂಡರು ಹಾಗೂ ಸ್ಥಳೀಯ ಶಾಸಕರ ಬೆಂಬಲ ಹಾಗೂ ಹಾಲು ಉತ್ಪಾದಕ ಸಂಘಗಳ ಅಭಿವೃದ್ಧಿ ಬಯಸಿ ನೀಡಿದ ಮತಗಳಿಂದ ಈ ಯಶಸ್ಸು ಲಭಿಸಿದೆ. ಈ ಚುನಾವಣೆಯು ಬಹಳ ಕಷ್ಟಕರವಾಗಿತ್ತು ಕಾರಣ ಈ ಚುನಾವಣೆಯಲ್ಲಿ ಹಿತ ಶತ್ರುಗಳ ನಡುವೆ ಮತ ಪಡೆಯುವ ಸವಾಲು ನನಗೆ ಎದುರಾಗಿತ್ತು , ಆರು ವರ್ಷಗಳ ನಿರಂತರವಾಗಿ ನಾನು ಮಾಡಿದ ಪ್ರಾಮಾಣಿಕ ಅಭಿವೃದ್ಧಿ ಪರ ಸೇವೆ ನನ್ನನ್ನು ಇಂದು ಜಯಶೀಲನಾಗಿ ಮಾಡಿದೆ, ಈ ಚುನಾವಣೆಯಲ್ಲಿ ನನ್ನನ್ನು ಸೋಲಿಸಬೇಕೆಂದು ನನ್ನ ವಿರುದ್ಧ ಹಲವಾರು ಕುತಂತ್ರಗಳನ್ನು ಮಾಡಿದರೂ ದೇವರ ಆಶೀರ್ವಾದ,ಮತದಾರರ ಆಶೀರ್ವಾದ ನಾನು 156 ಮತಗಳನ್ನು ಪಡೆಯುವ ಮೂಲಕ ಬಹು ಅಂತರದಿಂದ ಜಯಶೀಲನಾಗಿದ್ದೇನೆ , ನನ್ನ ಕಾರ್ಯ ವೈಕರಿ ಹಾಗೂ ಸೇವೆಯನ್ನು ಮುಂದೆಯೂ ಉತ್ತಮ ಸೇವೆ ಸಲ್ಲಿಸಲಿ ಎಂದು ನನಗೆ ಮತದಾನ ಮಾಡಿರುವ ತಾಲೂಕಿನ ಎಲ್ಲಾ ಡೈರಿ ಅಧ್ಯಕ್ಷರಿಗೆ ನಾನು ಆಭಾರಿಯಾಗಿದ್ದೇನೆ ಎಂದರು.

    ತಾಲೂಕಿನ ಜನಪ್ರಿಯ ಶಾಸಕರಾದ ಧೀರಜ್ ಮುನಿರಾಜು ರವರು ಈ ಚುನಾವಣೆಯ ಸಾರಥ್ಯವಹಿಸಿ ಚುನಾವಣೆಯಲ್ಲಿ ಗೆಲುವು ಸಾಧಿಸಲು ಕಾರಣಕರ್ತರಾಗಿದ್ದಾರೆ ಅಲ್ಲದೇ ಮುಖಂಡರಾದ ತಿ. ರಂಗರಾಜು, ಅಂಜನ್ ಗೌಡ ಸೇರಿದಂತೆ ನನ್ನ ಆತ್ಮೀಯರು ಹಾಗೂ ಗೆಳೆಯರ ಬಳಗದ ನಿರಂತರ ಪರಿಶ್ರಮ ಇಂದಿನ ಗೆಲುವಿಗೆ ಪ್ರಮುಖ ಕಾರಣವಾಗಿದೆ ಎಂದರು.

  • ಬಮೂಲ್ ಚುನಾವಣೆ : ಕಾಂಗ್ರೆಸ್ ಜೆಡಿಎಸ್ ಗೆ ಸೆಡ್ಡು ಹೊಡೆದ ಎನ್‌ಡಿಎ : ಹುಸ್ಕೂರು ಆನಂದ್ ವಿರುದ್ಧ ಬಿ.ಸಿ. ಆನಂದ್ ಕುಮಾರ್ ಭರ್ಜರಿ ಗೆಲುವು

    ದೊಡ್ಡಬಳ್ಳಾಪುರ:ಬೆಂಗಳೂರು ಸಹಕಾರ ಹಾಲು ಒಕ್ಕೂಟ (ಬಮೂಲ್) ಆಡಳಿತ ಮಂಡಳಿ ನಿರ್ದೇಶಕರ ಚುನಾವಣೆಯಲ್ಲಿ ಎನ್ ಡಿ ಎ ಅಭ್ಯರ್ಥಿ ಬಿ ಸಿ ಅನಂದ ಕುಮಾರ್ 156 ಮತಗಳನ್ನು ಪಡೆಯುವ ಮೂಲಕ ಭರ್ಜರಿ ಗೆಲುವು ಸಾಧಿಸಿದ್ದಾರೆ.

     

     

    ಕಾಂಗ್ರೆಸ್ ಬೆಂಬಲಿತ ಜೆಡಿಎಸ್ ಅಭ್ಯರ್ಥಿ ಹುಸ್ಕೂರು ಆನಂದ್‌ 43ಮತಗಳನ್ನು ಪಡೆದಿದ್ದು ಎನ್ ಡಿ ಎ ಬೆಂಬಲಿತ ಅಭ್ಯರ್ಥಿ ಬಿ ಸಿ ಆನಂದ್ ಕುಮಾರ್ 156 ಮತಗಳನ್ನು ಪಡೆಯುವ ಮೂಲಕ ಕಾಂಗ್ರೆಸ್ ಜೆಡಿಎಸ್ ಮೈತ್ರಿ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ್ದಾರೆ.

     

     

    ಕೆಲ ಗೊಂದಲಗಳಿದ್ದ ಕಾರಣ ದೊಡ್ಡಬಳ್ಳಾಪುರ ಮತ ಕ್ಷೇತ್ರದ ಎಣಿಕೆಯನ್ನು ನ್ಯಾಯಾಲಯದ ತೀರ್ಪಿನ ಬಳಕ ನಡೆಸಲಾಗುವುದು ಎಂದು ತಿಳಿಸಲಾಗಿತ್ತು,ದೊಡ್ಡಬಳ್ಳಾಪುರ ನಿರ್ದೇಶಕರ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿತ ಹುಸ್ಕೂರು ಆನಂದ್‌ ಮತ್ತು ಬಿಜೆಪಿ ಬೆಂಬಲಿತ ಬಿಸಿ ಆನಂದ್‌ ಕುಮಾ‌ರ್ ಅವರ ನಡುವೆ ಜಿದ್ದಾಜಿದ್ದಿ ಸ್ಪರ್ಧೆ ನಡೆದಿತ್ತು.

     

     

    ಇಂದು ಬೆಂಗಳೂರು ಡೇರಿ ವೃತ್ತ ಸಮೀಪ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಆವರಣದಲ್ಲಿ ಇಂದು ಬೆಳಿಗ್ಗೆ 9-00 ಗಂಟೆಯಿಂದ ಸಂಜೆ 4-00 ಗಂಟೆಯವರೆಗೆ ಮತದಾನ ನಡೆದಿದ್ದು ಹುಸ್ಕೂರು ಆನಂದ್ ವಿರುದ್ಧ ಬಿಸಿ ಆನಂದ್ ಕುಮಾರ್ ಜಯಸಾಧಿಸಿದ್ದಾರೆ

     

    ಅಭಿಮಾನಿಗಳು ಪಟಾಕಿ ಸಿಡಿಸಿ ಸಿಹಿ ಹಂಚುವ ಮೂಲಕ ಸಂಭ್ರಮಾಚರಣೆ ಮಾಡಿದ್ದಾರೆ.

     

     

     

  • ಬಮೂಲ್ ಚುನಾವಣೆ: ಮತ ಏನಿಕೆ ಪ್ರಾರಂಭ : ಫಲಿತಾಂಶಕ್ಕಾಗಿ ಕಾದು ನಿಂತಿರುವ ಮುಖಂಡರು

    ದೊಡ್ಡಬಳ್ಳಾಪುರ:ಬೆಂಗಳೂರು ಸಹಕಾರ ಹಾಲು ಒಕ್ಕೂಟ (ಬಮೂಲ್) ಆಡಳಿತ ಮಂಡಳಿ ನಿರ್ದೇಶಕರ ಚುನಾವಣೆಯಲ್ಲಿ ಕೆಲ ಗೊಂದಲಗಳಿದ್ದ ಕಾರಣ ದೊಡ್ಡಬಳ್ಳಾಪುರ ಮತ ಕ್ಷೇತ್ರದ ಎಣಿಕೆಯನ್ನು ನ್ಯಾಯಾಲಯದ ತೀರ್ಪಿನ ಬಳಕ ನಡೆಸಲಾಗುವುದು ಎಂದು ತಿಳಿಸಲಾಗಿತ್ತು

     

    ಆದರೆ ಇದೀಗ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಬಂದು ಮತ ಎಣಿಕೆ ಮಾಡಲು ಮುಂದಾಗಿ, ಅಭ್ಯರ್ಥಿಗಳು, ಏಜೆಂಟ್‌ಗಳನ್ನು ಮತ್ತೆ ಬರುವಂತೆ ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ, ಈ ಹಿನ್ನೆಲೆಯಲ್ಲಿ ಪಕ್ಷದ ಕಾರ್ಯಕರ್ತರು ಹಿಂತಿರುಗುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

     

    ಅತಿ ಕುತೂಹಲ ಮೂಡಿಸಿದ್ದ  ಬಮೂಲ್ ನಿರ್ದೇಶಕರ  ಚುನಾವಣೆ ಯಲ್ಲಿ ವಿಜಯಮಾಲೆ ಯಾರ ಪಾಲು ಎಂಬುದು ಕಾದುನೋಡಬೇಕಾಗಿದೆ.

     

     

  • ಬಮೂಲ್ ಚುನಾವಣೆ : ದೊಡ್ಡಬಳ್ಳಾಪುರ ಫಲಿತಾಂಶಕ್ಕೆ ಕೋರ್ಟ್ ತಡೆ ಕಾರಣವೇನು…??? ಸುದ್ದಿ ನೋಡಿ

    ದೊಡ್ಡಬಳ್ಳಾಪುರ:ಬೆಂಗಳೂರು ಸಹಕಾರ ಹಾಲು ಒಕ್ಕೂಟ (ಬಮೂಲ್) ಆಡಳಿತ ಮಂಡಳಿ ನಿರ್ದೇಶಕರ ಚುನಾವಣೆಯ ಶಾಂತಿಯುತ ಮುಕ್ತಾಯವಾಗಿದ್ದು, ದೊಡ್ಡಬಳ್ಳಾಪುರ ಮತ ಕ್ಷೇತ್ರದ ಎಣಿಕೆಗೆ ಕೋರ್ಟ್ ತಡೆಯಾಜ್ಞೆ ನೀಡಿದೆ ಎಂದು ಮೂಲಗಳು ತಿಳಿಸಿವೆ.

     

    ಜೆಡಿಎಸ್ ಬೆಂಬಲಿತ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಹುಸ್ಕೂರು ಆನಂದ್ ರವರು ತನ್ನ ಸ್ವರ್ಧೆಯ ಅನರ್ಹತೆ ಪ್ರಶ್ನಸಿ ಹೈಕೋರ್ಟ್ ಮೊರೆ ಹೋಗಿ ಮಧ್ಯಂತರ ಆದೇಶ ಪಡೆದು ಕಣಕ್ಕಿಳಿದಿದ್ದರು. ಆದರೆ ಈಗ ಈ ಪ್ರಕರಣದ ತೀರ್ಪು ಬರುವವರೆಗೂ ಎಣಿಕೆಗೆ ಕೋರ್ಟ್ ತಡೆಯಾಜ್ಞೆ ನೀಡಿದೆ.

     

     

  • ಪಕ್ಷ ನಿಷ್ಠೆ ಮರೆತ ಕೆಲ ಸ್ವಪಕ್ಷಿಯಾರಿಂದಲೇ ಹುಸ್ಕೂರ್ ಆನಂದ್ ರನ್ನು ಸೋಲಿಸುವ ಪ್ರಯತ್ನ ನೆಡೆಯುತ್ತಿದೆಯೇ …..????

    ಈಗಾಗಲೇ ಬಮೂಲ್ ನಿರ್ದೇಶಕ ಸ್ಥಾನದ ಚುನಾವಣೆ ರಂಗೇರಿದ್ದು ಕಣದಲ್ಲಿ ಎನ್ ಡಿ ಎ ಅಭ್ಯರ್ಥಿಯಾಗಿ ಬಿ. ಸಿ. ಆನಂದ್ ಕುಮಾರ್ ಹಾಗೂ ಕಾಂಗ್ರೆಸ್ ಬೆಂಬಲಿತ ಜೆಡಿಎಸ್ ಅಭ್ಯರ್ಥಿ ಹುಸ್ಕೂರು ಟಿ ಆನಂದ್ ಕಣದಲ್ಲಿ ಇದ್ದಾರೆ. ಗೆಲುವು ಸಾಧಿಸಲು ಬೇಕಿರುವ ಎಲ್ಲಾ ತಂತ್ರಗಾರಿಕೆಯನ್ನು 3 ಪಕ್ಷಗಳು ಮಾಡುತ್ತಿದೆ.

     

     

    ಆದರೆ ಜೆಡಿಎಸ್ ಪಕ್ಷ ನಿಷ್ಠೆ ಮರೆತ ಕೆಲ ಮುಖಂಡರು,ನಾಯಕರು ಬಿಜೆಪಿ ಬೆಂಬಲಿತ ಅಭ್ಯರ್ಥಿ ಪರ ಕೆಲಸ ಮಾಡಲು ಮುಂದಾಗಿರುವುದು ಶೋಚನಿಯ ಸಂಗತಿಯಾಗಿದೆ ಎಂದು ದೇವನಹಳ್ಳಿ ಜೆಡಿಎಸ್ ಪಕ್ಷದ ವಕ್ತರ ಹಳ್ಳಿ ರೈತ ಅಂಬರೀಷ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

     

    ಈ ಕುರಿತು ಮಾತನಾಡಿದ ಅವರು ಕಾಂಗ್ರೆಸ್ ಪಕ್ಷವು ಬೇಷರತ್ತಾಗಿ ಜೆಡಿಎಸ್ ಅಭ್ಯರ್ಥಿಗೆ ಬೆಂಬಲ ಸೂಚಿಸಿದೆ, ಆದರೆ ತೂಬಗೆರೆ ಹೋಬಳಿ ಹಾಗೂ ತಾಲ್ಲೂಕಿನ ಕೆಲ ಜೆಡಿಎಸ್ ಮುಖಂಡರು ಪಕ್ಷ ನಿಷ್ಠೆ ಮರೆತು ಬಿಜೆಪಿ ಪಕ್ಷದ ಅಭ್ಯರ್ಥಿ ಪರ ಪ್ರಚಾರ ಹಾಗೂ ಮಾತಯಾಚನೆ ಮಾಡುತ್ತಿರುವುದು ಪಕ್ಷದ ನಿಷ್ಠಾವಂತ ಕಾರ್ಯಕರ್ತರಿಗೆ ನೋವುಂಟುಮಾಡಿದೆ ಎಂದರು.

    ಮಾಜಿ ಬಮೂಲ್ ನಿರ್ದೇಶಕರಾದ ದಿ. ಅಪ್ಪಯ್ಯಣ್ಣ ನವರು ಜೇವಿತ ಕಾಲದಲ್ಲಿ ಜೆಡಿಎಸ್ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಿ ಬಮೂಲ್ ನಿರ್ದೇಶಕರನ್ನಾಗಿ ಮಾಡಬೇಕೆಂಬ ಆಶಯ ವ್ಯಕ್ತ ಪಡಿಸಿದ್ದರು, ಅವರ ಆಸೆಯಂತೆ ನಾವೆಲ್ಲರೂ ನಮ್ಮ ಪಕ್ಷದ ಅಭ್ಯರ್ಥಿ ಹುಸ್ಕೂರ್ ಆನಂದ್ ರವರನ್ನು ಗೆಲ್ಲಿಸುವ ಪಣ ತೊಟ್ಟು ಕೆಲಸ ನಿರ್ವಹಿಸುತ್ತಿದ್ದೇವೆ. ಆದರೆ ಪಕ್ಷದ ಕೆಲ ಪ್ರಮುಖರು ಪಕ್ಷದಲ್ಲೇ ಇದ್ದು ಪಕ್ಷ ವಿರೋಧಿ ಚಟುವಟಿಕೆಗೆ ಮುಂದಾಗಿರುವುದು ಗಮನಕ್ಕೆ ಬಂದಿದೆ, ಈ ಕುರಿತು ಪಕ್ಷದ ಮಾನ್ಯ ಜಿಲ್ಲಾಧ್ಯಕ್ಷರು ಹಾಗೂ ತಾಲ್ಲೂಕಿನ ಮುಖಂಡರು ಶೀಘ್ರ ಗಮನ ಹರಿಸಿ ಪಕ್ಷ ವಿರೋಧಿ ಚಟುವಟಿಕೆ ಮಾಡುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕಿದೆ ಎಂದು ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.

     

    ಅಲ್ಲದೇ ನಮ್ಮ ನಾಯಕರಾದ ದಿ. ಅಪ್ಪಯ್ಯಣ್ಣನವರ ಆಸೆ ಪೂರೈಸಲು ಇದೊಂದು ಉತ್ತಮ ಅವಕಾಶವಾಗಿದ್ದು, ಜೆಡಿಎಸ್ ಪಕ್ಷದ ಬಂದುಗಳು ಈ ಸಮಯದಲ್ಲಿ ಪಕ್ಷ ನಿಷ್ಠೆ ಮರೆತುಹೋಗದೆ ಜೆಡಿಎಸ್ ಪರ ಶ್ರಮಿಸುವ ಮೂಲಕ ಗೆಲುವಿಗೆ ಕಾರಣರಾಗಬೇಕೆಂದು ಮನವಿ ಮಾಡಿದ್ದಾರೆ.

    ಇದೆಲ್ಲವನ್ನು ಗಮನಿಸುತ್ತಿದ್ದಾರೆ ಜೆಡಿಎಸ್ ಅಭ್ಯರ್ಥಿ ಹುಸ್ಕೂರ್ ಆನಂದ್ ರವರನ್ನು ಸೋಲಿಸಲು ಸ್ವಪಾಕ್ಷಿಯಾರಿಂದಲೇ ಹುನ್ನಾರ ನೆಡೆಯುತ್ತಿದೆಯೇ ಎಂಬ ಸಂದೇಹ ಸಾಮಾನ್ಯವಾಗಿ ಸಾಮಾಜಿಕವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.

  • ದೊಡ್ಡಬಳ್ಳಾಪುರ : ಸಾರ್ವಜನಿಕ ಆಸ್ಪತ್ರೆ ಕೀಮೋಥೆರಪಿ ಘಟಕಕ್ಕೆ ಚಾಲನೆ

    ಈ ಮೊದಲು ಕೀಮೋಥೆರಪಿ ಚಿಕಿತ್ಸೆಗೆ ಬೆಂಗಳೂರಿಗೆ ತೆರಳಬೇಕಾಗಿತ್ತು. ಇದು ರೋಗಿಗಳ ಪಾಲಿಗೆ ಕಷ್ಟಸಾಧ್ಯವಾಗಿತ್ತು,ಬಡ ಕ್ಯಾನ್ಸರ್ ರೋಗಿಗಳಿಗೆ ಚಿಕಿತ್ಸೆ ದೊರೆಯದ ಕಾರಣ, ಅಕಾಲಿಕ ಮರಣಕ್ಕೆ ತುತ್ತಾಗುತ್ತಿದ್ದರು ಈ ಬಾರಿ ಜಿಲ್ಲೆ ಹಾಗೂ ತಾಲ್ಲೂಕಿನಲ್ಲಿ ಸಕಲ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸಲು ಸರ್ಕಾರವು ಪ್ರಯತ್ನಿಸಿದೆ ಎಂದು ದೊಡ್ಡಬಳ್ಳಾಪುರ ಸಾರ್ವಜನಿಕ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ರಮೇಶ್ ತಿಳಿಸಿದರು.

     

    ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಡೇ ಕೇರ್ ಕೀಮೋಥೆರಪಿ ಕೇಂದ್ರವನ್ನು ತಾಲೂಕು ಆರೋಗ್ಯಾಧಿಕಾರಿ ಡಾ.ಶಾರದಾ ನಾಗನಾಥ್,ಮುಖ್ಯ ಆಡಳಿತಾಧಿಕಾರಿ ಡಾ.ರಮೇಶ್ ಉದ್ಘಾಟಿಸಿ ಮಾತನಾಡಿದ ಅವರು ನಮ್ಮ ಆಸ್ಪತ್ರೆಯಲ್ಲಿ ನೂತನವಾಗಿ ಕೀಮೋಥೆರಪಿ ಕೇಂದ್ರಗಳನ್ನು ತೆರೆಯಲಾಗಿದ್ದು,ಕ್ಯಾನ್ಸರ್ ಖಾಯಿಲೆ ಬಂದವರು ಧೃತಿಗೆಡಬೇಕಾದ ಅಗತ್ಯವಿಲ್ಲ. ಪ್ರತಿಯೊಬ್ಬರು ವಾರ್ಷಿಕ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು, ಇದರಿಂದ ರೋಗಗಳನ್ನು ಮುಂಚಿತವಾಗಿ ಪತ್ತೆಹಚ್ಚಲು ಅನುಕೂಲವಾಗುತ್ತದೆ.ಜೀವನ ಶೈಲಿ ಮತ್ತು ಆಹಾರ ಪದ್ಧತಿಯ ಬಗ್ಗೆ ಗಮನ ಹರಿಸಿ ಎಂದರು.

     

    ನಮ್ಮ ಸರ್ಕಾರಿ ಆಸ್ಪತ್ರೆಗಳಲ್ಲಿ ಹೆಚ್ಚು ಅನುಭವ ಮತ್ತು ಪರಿಣಿತಿ ಇರುವ ವೈದ್ಯರಿದ್ದಾರೆ. ಅಲ್ಲದೇ ಜನಸಾಮಾನ್ಯರಿಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ಖಾಯಿಲೆ ವಾಸಿಯಾಗುತ್ತದೆ ಎಂಬುದು ಅರಿವಿಗೆ ಬಂದಿದೆ. ಕೀಮೋಥೆರಪಿ ಬಡವರಿಗೆ ಅನುಕೂಲ ಆಗಲಿ ಎಂದು ರಾಜ್ಯ ಸರ್ಕಾರ ಈ ಕೇಂದ್ರಗಳನ್ನು ಓಪನ್ ಮಾಡಿದೆ ಇದರ ಅನುಕೂಲವನ್ನು ಸಾರ್ವಜನಿಕರು ಸದ್ಭಾಳಕೆ ಮಾಡಿಕೊಳ್ಳುವ ಮೂಲಕ ಪಡೆಯಲಿ ಎಂದರು.

    ಈ ವೇಳೆ ಡಾ.ನಿರಂಜನ್, ಡಾ.ಸುಷ್ಮಾ ಗೌಡ, ಡಾ.ಮಂಜುನಾಥ್, ಬೆಂಗಳೂರು ಗ್ರಾಮಾಂತರ ಜಿಲ್ಲಾ ಸರ್ವೇಕ್ಷಣಾಧಿಕಾರಿ ಹೇಮಾವತಿ ಸೇರಿದಂತೆ ಹಲವು ವೈದ್ಯರು ಹಾಗೂ ಸಿಬ್ಬಂದಿವರ್ಗ ಹಾಜರಿದ್ದರು.

     

     

     

     

     

     

  • ದೊಡ್ಡಬಳ್ಳಾಪುರ ಅವ್ಯವಸ್ಥೆ : ಹೆಸರಿಗಷ್ಟೇ ಸೀಮಿತವಾದ ” ದಾರಿ ದೀಪಗಳು “

    ನಗರದ ಜೂನಿಯರ್ ಕಾಲೇಜು ಮುಂಭಾಗದ ರಸ್ತೆ ಯಿಂದ ತಾಲ್ಲೂಕು ಕಚೇರಿ ಮುಂಭಾಗದವರೆಗೂ ದಾರಿದೀಪಗಳ ಅವ್ಯವಸ್ಥೆ ಕಾರಣ ರಸ್ತೆಯು ಸಂಪೂರ್ಣ ಕತ್ತಲಿನಿಂದ ಆವರಿಸಿದೆ.

    ತಾಲ್ಲೂಕುದಂಡಾಧಿಕಾರಿಗಳ ಕಛೇರಿ ಮುಂಭಾಗವೇ ದಾರಿದೀಪಗಳು ಬೆಳಕು ನೀಡದೆ ಕೆಟ್ಟು ನಿಂತಿರುವುದು ಚರ್ಚೆಗೆ ಕಾರಣವಾಗಿದೆ, ರಸ್ತೆಯ ವಿದ್ಯುತ್ ಕಂಬಗಳು ಬೆಳಕು ನೀಡುವುದಕ್ಕಿಂತ ಕೆಟ್ಟು ನಿಂತಿರುವುದೇ ಹೆಚ್ಚು, ಈ ಕಂಬಗಳು ರಾಜಕೀಯ ಹಾಗೂ ಸಂಭ್ರಮಾಚರಣೆಯ ಬ್ಯಾನರ್ ಕಟ್ಟುವ ಪೋಲ್ ಗಳಾಗಿವೆ ಎಂಬುದು ಸಾರ್ವಜನಿಕರ ಆಕ್ರೋಶದ ಮಾತು.

     

    ಈ ರಸ್ತೆಗಳ ಕತ್ತಲಿನಲ್ಲಿ ಪಾದಚಾರಿಗಳು ಸಂಚರಿಸುವುದು ಕಷ್ಟ ಸಾಧ್ಯವಾಗಿದೆ, ತಾಲ್ಲೂಕು ಕಚೇರಿ ಮುಂಭಾಗದಲ್ಲಿ ರಸ್ತೆ ಹಾಗೂ ದಾರಿದೀಪಗಳ ಸಮಸ್ಯೆ ತಪ್ಪಿದ್ದಲ್ಲ, ಅಧಿಕಾರಿಗಳು ಇನ್ನಾದರೂ ಈ ಕುರಿತು ಗಮನಹರಿಸಿ ಶೀಘ್ರವಾಗಿ ದಾರಿದೀಪಗಳನ್ನು ಸರಿಪಡಿಸಲಿ ಎಂಬುದು ಸಾರ್ವಜನಿಕರ ಅಗ್ರಹವಾಗಿದೆ.

  • ಮರದಿಂದ ಬಿದ್ದು ಗಾಯಗೊಂಡಿದ್ದ ವ್ಯಕ್ತಿಗೆ 30,000 ರೂ ಕ್ರಿಟಿಕಲ್ ಫಂಡ್ ವಿತರಿಸಿದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ

    ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ದೊಡ್ಡಬಳ್ಳಾಪುರ ತಾಲೂಕು ಇವರ ವತಿಯಿಂದ ಮರದಿಂದ ಬಿದ್ದು ಗಂಬೀರ ಗಾಯಗೊಂಡಿದ್ದ ರಮೇಶ್ ರವರಿಗೆ 30,000 ರೂ ಕ್ರಿಟಿಕಲ್ ಫಂಡ್ ವಿತರಣೆ ಮಾಡಲಾಯಿತು.

     

     

    ತಾಲ್ಲೂಕಿನ ಮಧುರೆ ಹೋಬಳಿಯ ಮದಗೊಂಡನಹಳ್ಳಿ ಗ್ರಾಮದ ರಮೇಶ್ ಎಂಬುವರು ಮರದಿಂದ ಬಿದ್ದು ಗಂಬೀರ ಗಾಯಗೊಂಡಿದ್ದು,ಅವರ ಚಿಕಿತ್ಸೆಗಾಗಿ ಧರ್ಮಸ್ಥಳದ ಧರ್ಮಾಧಿಕಾರಿ ಮಂಜೂರು ಮಾಡಿರುವ 30,000 ರೂ ಕ್ರಿಟಿಕಲ್ ಫಂಡ್ ನ್ನು ಮಾನ್ಯ ಯೋಜನಾಧಿಕಾರಿ ಯವರಾದ ದಿನೇಶ್ ರವರು ಹಸ್ತಾಂತರಿಸಿದರು.

     

     

    ಈ ಸಮಯದಲ್ಲಿ ಯೋಜನೆಯ ವಲಯ ಮೇಲ್ವಿಚಾರಕರಾದ ಗಿರಿಜಾ, ಸೇವಾಪ್ರತಿನಿಧಿ ಜಯಮ್ಮ, ಒಕ್ಕೂಟದ ಅಧ್ಯಕ್ಷರಾದ ಮಂಜುಳ, ಆಶಾ ಕಾರ್ಯಕರ್ತೆ, ಸಂಘದ ಸದಸ್ಯರು ಉಪಸ್ಥಿತರಿದ್ದರು