Blog

  • ದೊಡ್ಡಬಳ್ಳಾಪುರ : ಕರಗ ಮಹೋತ್ಸವ ವಿಶೇಷ : 25 ವರ್ಷಗಳ ಅನ್ನದಾಸೋಹ ಕಾರ್ಯಕ್ರಮಕ್ಕೆ ಗಣ್ಯರಿಂದ ಚಾಲನೆ

    ದೊಡ್ಡಬಳ್ಳಾಪುರ : ತಾಲೂಕಿನ ಇತಿಹಾಸ ಪ್ರಸಿದ್ಧ ಕರಗ ಮಹೋತ್ಸವದ ಅಂಗವಾಗಿ ಖಾಸಗಿ ಬಸ್ಸುಗಳ ಮಾಲೀಕರು ಹಾಗೂ ಕಾರ್ಮಿಕರ ಸಂಘದ ವತಿಯಿಂದ ಅನ್ನದಾಸೋಹ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

     

    ಕಳೆದ 25 ವರ್ಷಗಳಿಂದ ಕರಗ ಮಹೋತ್ಸವಕ್ಕೆ ಆಗಮಿಸುವ ಸಾರ್ವಜನಿಕರಿಗೆ ಉಚಿತ ಆಹಾರ ವಿತರಣೆ ಮಾಡುವ ಕಾರ್ಯವನ್ನು ಖಾಸಗಿ ಬಸ್ಸುಗಳ ಮಾಲೀಕರು ಹಾಗೂ ಕಾರ್ಮಿಕ ಸಂಘದ ವತಿಯಿಂದ ಆಯೋಜನೆ ಮಾಡಲಾಗುತ್ತಿದ್ದು, ಈ ಬಾರಿಯ ಕಾರ್ಯಕ್ರಮಕ್ಕೆ ನಗರಸಭೆ ಪೌರಾಯುಕ್ತ ಕಾರ್ತಿಕೇಶ್ವರ್ , ನಗರಸಭೆ ಉಪಾಧ್ಯಕ್ಷ ಎಂ ಮಲ್ಲೇಶ್ , ಹಾಗೂ ಸ್ಥಾಯಿ ಸಮಿತಿಯ ಅಧ್ಯಕ್ಷರಾದ ರವಿಕುಮಾರ್ ಸೇರಿದಂತೆ ಹಲವು ಗಣ್ಯರು ಚಾಲನೆ ನೀಡಿದರು.

    ಈ ಕುರಿತು ನಗರಸಭೆ ಪೌರಾಯುಕ್ತ ಕಾರ್ತಿಕೇಶ್ವರ್ ಮಾತನಾಡಿ ನಗರಸಭೆ ವತಿಯಿಂದ ನೀರಿನ ವ್ಯವಸ್ಥೆ ಮಾಡಲಾಗಿದೆ ಅಲ್ಲದೆ ಸ್ವಚ್ಛತಾ ಕಾರ್ಯಕ್ಕೆ ವಿಶೇಷವಾಗಿ ಸಿಬ್ಬಂದಿಯನ್ನು ನೇಮಿಸಲಾಗಿದೆ, ನಗರಸಭಾ ವ್ಯಾಪ್ತಿಯಲ್ಲಿ ಸಾರ್ವಜನಿಕರಿಗೆ ಅನುಕೂಲವಾಗುವಂತಹ ಕಾರ್ಯಗಳು ಮತ್ತಷ್ಟು ಹೆಚ್ಚಾಗಲಿ ಎಂದರು

    ಸಂಘದ ಪ್ರಧಾನ ಕಾರ್ಯದರ್ಶಿ ಆರ್, ಚನ್ನಾವೀರಪ್ಪ ಮಾತನಾಡಿ ಕಳೆದ 25 ವರ್ಷಗಳಿಂದ ನಿರಂತರವಾಗಿ ಪ್ರತಿ ಕರಗ ಮಹೋತ್ಸವಕ್ಕೂ ಅನ್ನ ಸಂಪರ್ಪಣೆ ಕಾರ್ಯಕ್ರಮವನ್ನು ನಮ್ಮ ಸಂಘದ ವತಿಯಿಂದ ಸ್ಥಳೀಯ ವರ್ತಕರು ಏಜೆಂಟರು ಹಾಗೂ ಕಾರ್ಮಿಕರ ಸಹಕಾರದೊಂದಿಗೆ ಸುಗಮವಾಗಿ ನಡೆಸಿಕೊಂಡು ಬರುತ್ತಿದ್ದೇವೆ, ಅಂತೆಯೇ ಈ ವರ್ಷವೂ ವಿಶೇಷವಾಗಿ ಅನ್ನದಾಸೋಹ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ ಎಂದರು.

     

     

    ಸಂಘದ ಅಧ್ಯಕ್ಷ ಗೋವಿಂದರಾಜು ಮಾತನಾಡಿ ಹಲವು ಬಗೆಯ ಉಪಹಾರಗಳನ್ನು ಕರಗ ಮಹೋತ್ಸವಕ್ಕೆ ಆಗಮಿಸುವ ಸಾರ್ವಜನಿಕರಿಗೆ ವಿತರಣೆ ಮಾಡಲಾಗುತ್ತದೆ, ಸುತ್ತಮುತ್ತಲಿನ ಗ್ರಾಮಸ್ಥರಿಗೆ ಈ ಅನ್ನದಾಸೋಹ ಕಾರ್ಯಕ್ರಮವು ಅನುಕೂಲವಾಗಲಿದೆ, ಇಂದು ಮಧ್ಯಾಹ್ನ 12:00ಗೆ ಪ್ರಾರಂಭವಾಗುವ ಅನ್ನದಾಸೋಹ ಕಾರ್ಯಕ್ರಮವು ರಾತ್ರಿಯಿಡಿ ನಿಲ್ಲದೆ ನಾಳೆಯೂ ಸಹ ನಡೆಯಲಿದೆ, ಸುಮಾರು 50 ಸಾವಿರಕ್ಕೂ ಅಧಿಕ ಸಾರ್ವಜನಿಕರಿಗೆ ಆಹಾರ ವಿತರಣೆ ಮಾಡಲಾಗುತ್ತದೆ , ಈ ಬಾರಿಯ ಅನ್ನಸಂತರ್ಪಣೆಗೆ 25 ಕ್ವಿಂಟಲ್ ದವಸ ಧಾನ್ಯಗಳನ್ನು ಬಳಕೆ ಮಾಡುವ ಅಂದಾಜು ಮಾಡಲಾಗಿದೆ ಎಂದರು

     

    ಕಾರ್ಯಕ್ರಮದ ಪ್ರಮುಖರಾದ ಪ್ರಶಾಂತ್ ಕುಮಾರ್ ಮಾತನಾಡಿ ಸ್ಥಳೀಯವಾಗಿ ಬಸ್ ಮಾಲೀಕರು ಹಾಗೂ ವರ್ತಕರಿಂದ ವಿಶೇಷ ಕಾರ್ಯಕ್ರಮವನ್ನು ರೂಪಿಸುವ ಆಲೋಚನೆ ಮಾಡಿದಾಗ ಕರಗ ಮಹೋತ್ಸವದ ಸಂದರ್ಭದಲ್ಲಿ ಅನ್ನ ದಾಸೋಹ ಮಾಡುವುದು ಉತ್ತಮ ಎಂಬ ನಿರ್ಧಾರದೊಂದಿಗೆ 2000 ಇಸವಿಯಿಂದ ಇಲ್ಲಿಯವರೆಗೂ ಪ್ರತಿವರ್ಷ ಕರಗ ಮಹೋತ್ಸವದಂದು ಅನ್ನದಾಸೋಹ ಕಾರ್ಯಕ್ರಮ ನಡೆಸಿಕೊಂಡು ಬರುತ್ತಿದ್ದೇವೆ, ರಾತ್ರಿಯ ಸಮಯದಲ್ಲಿ ಕರಗ ವೀಕ್ಷಣೆ ಮಾಡಲು ಬರುವ ಸಾರ್ವಜನಿಕರಿಗೆ ಇದು ಅತ್ಯಂತ ಅನುಕೂಲವಾಗಿದೆ ಎಂದರು .

    ಈ ಸಂದರ್ಭದಲ್ಲಿ ಸಂಘದ ಖಜಾಂಚಿ ಚಂದ್ರಶೇಖರ್, DN ಹನುಮಂತಪ್ಪ, ರಾಜ್ ಶೇಖರ್, ಬಸವರಾಜು ಸೇರಿದಂತೆ ಹಲವು ಗಣ್ಯರು ಹಾಜರಿದ್ದರು.

  • ” ಆಪರೇಷನ್ ಸಿಂಧೂರ್ ” ದಲ್ಲಿ ವೀರ ಮರಣ ಹೊಂದಿದ ವೀರ ಯೋಧರಿಗೆ ಶ್ರದ್ಧಾಂಜಲಿ ಅರ್ಪಿಸಿದ ಕನ್ನಡ ಜಾಗೃತಿ ವೇದಿಕೆ

    ದೊಡ್ಡಬಳ್ಳಾಪುರ : ಕನ್ನಡ ಜಾಗೃತಿ ವೇದಿಕೆ ತಾಲೂಕು ಮತ್ತು ಜಿಲ್ಲಾ ಘಟಕದ ವತಿಯಿಂದ ಆಪರೇಷನ್ ಸಿಂಧೂರ ದಲ್ಲಿ ವೀರ ಮರಣ ಹೊಂದಿದ ವೀರ ಯೋಧರಿಗೆ ಸಿದ್ದಲಿಂಗಯ್ಯ ಸರ್ಕಲ್ ವೃತ್ತದಲ್ಲಿ ದೀಪ ಹಚ್ಚುವ ಮುಖಾಂತರ ಶ್ರದ್ಧಾಂಜಲಿ/ ಮೌನಚರಣೆ ಅರ್ಪಿಸಲಾಯಿತು..

    ಕಾರ್ಯಕ್ರಮದಲ್ಲಿ ಮೊದಲಿಗೆ ಮೌನಚರಣೆ ಶ್ರದ್ದಾಂಜಲಿ. ದೀಪ ಬೆಳಗು ಮುಖಾಂತರ ಗೌರವ ಸಲ್ಲಿಸಲಾಯಿತು

    ಕನ್ನಡ ಜಾಗೃತಿ ವೇದಿಕೆಯ ಜಿಲ್ಲಾಧ್ಯಕ್ಷರಾದ ನಾಗರಾಜ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು ,ದೇಶಕ್ಕೆ ರೈತ ಎಷ್ಟು ಮುಖ್ಯವೋ ಸೈನಿಕರು ಕೂಡ ಅಷ್ಟೇ ಮುಖ್ಯವಾಗಿರಾಗಿರುತ್ತಾರೆ,ದೇಶಕ್ಕೆ ರೈತ ಬೆನ್ನೆಲುಬು ಆದರೆ ದೇಶಕ್ಕೆ ಸೈನಿಕರು ಕಣ್ಣುಗಳಂತೆ ನಮ್ಮನ್ನು ಸದಾ ಕಾಯುತ್ತಾರೆ ಅವರಿಗೆ ನಾವು ಸದಾ ಚಿರಋಣಿ ಎಂದರು.

     

    ಮೊನ್ನೆ ಪಾಲ್ಗಾಮ್ ನಲ್ಲಿ ನಡೆದ ಹೀನ ಕೃತ್ಯವನ್ನು ನಾವು ಖಂಡಿಸುತ್ತೇವೆ. ಅದಕ್ಕೆ ಉತ್ತರವಾಗಿ ನಮ್ಮ ದೇಶದ ಹೆಮ್ಮೆಯ ಪ್ರಧಾನಿಗಳಾದ ನರೇಂದ್ರ ಮೋದಿಜಿ ಅವರು ಸೈನ್ಯದ ಮುಖಾಂತರ ಪಾಕಿಸ್ತಾನಕ್ಕೆ ಸರಿಯಾದ ಉತ್ತರವನ್ನು ನೀಡಿದ್ದಾರೆ. ಭಾರತೀಯ ನಾರಿಯರ ಸಿಂಧೂರದ ಮಹತ್ವ ಹಾಗೂ ಶಕ್ತಿ ಏನೆಂಬುದನ್ನು ತಿಳಿಸಿದ್ದಾರೆ ಎಂದರು.

    ಅಲ್ಲದೆ ನಮ್ಮ ದೇಶದಲ್ಲಿ ಹೆಣ್ಣಿಗೆ ತನ್ನದೇ ವಿಶೇಷ ಸ್ಥಾನವನ್ನು ನೀಡಿ ಗೌರವಿಸುತ್ತೇವೆ, ನಮ್ಮ ನಾಡಿನ ಹಲವಾರು ವೀರ ವನಿತೆಯರಾದ ಕಿತ್ತೂರಾಣಿ ಚೆನ್ನಮ್ಮ, ರಾಣಿ ಅಬ್ಬಕ್ಕ, ಜಾನ್ಸಿ ರಾಣಿ ಲಕ್ಷ್ಮೀಬಾಯಿ, ಸಾವಿತ್ರಿಬಾಯಿ ಪುಲೆ, ಫಾತಿಮಾ ಬೇಗ0, ಸರೋಜಿನಿ ನಾಯ್ಡು ಸೇರಿದಂತೆ ಹಲವಾರು ಮಹಿಳೆಯರು ಸಾಕ್ಷಿಯಾಗಿದ್ದಾರೆ. ಈಗಿನ ಯುವ ಸಮುದಾಯ ಸಮಾಜ ದೇಶಕ್ಕೆ ಧಕ್ಕೆಯಾದಾಗ ಸ್ವಯಂ ಪ್ರೇರಿತವಾಗಿ ದೇಶ ಸೇವೆಗೆ ಮುಂದಾಗಬೇಕು ದೇಶದ ಭದ್ರತೆಗೆ ಸಹಕರಿಸಬೇಕು ಎಂದರು.

     

     

     

     

    ನಂತರ ಕನ್ನಡ ಜಾಗೃತ ವೇದಿಕೆಯ ರಾಜ್ಯ ಸಂಘಟನಾ ಕಾರ್ಯದರ್ಶಿ ಅಗ್ನಿ ವೆಂಕಟೇಶ್ ಮಾತನಾಡಿ ಭಾರತ ದೇಶ ವಿಶ್ವಮಟ್ಟದಲ್ಲಿ ಮಟ್ಟದಲ್ಲಿ ಬೆಳೆಯುತ್ತಿರುವುದು ಪಾಕಿಸ್ತಾನಕ್ಕೆ ಸಹಿಸಲಾಗುತ್ತಿಲ್ಲ,ಅಲ್ಲದೆ ನಮ್ಮ ದೇಶದಲ್ಲಿ ಹಿಂದೂ,ಮುಸ್ಲಿಂ, ಅಣ್ಣ ತಮ್ಮಂದಿರಂತೆ ಇರುವುದು ಅವರಿಗೆ ಸಹಿಸಲಾಗುತ್ತಿಲ್ಲ,, ದೇಶದಲ್ಲಿ ವಿಷ ಬೀಜಗಳನ್ನು ಬಿತ್ತಿ, ದೇಶವನ್ನು ಹಾಳು ಮಾಡುವ ಕೆಲಸವನ್ನು ಈ ಉಗ್ರಗಾಮಿಗಳು ಮಾಡುತ್ತಿದ್ದಾರೆ,, ಅಲ್ಲದೆ ನಾಗರೀಕರನ ಗುರಿಯಾಗಿರಿಸಿ ಹೀನಾಯ ಕೃತ್ಯಗಳನ್ನು ಮಾಡುತ್ತಿರುವುದನ್ನು ನಾವು ಖಂಡಿಸುತ್ತೇವೆ ಎಂದು ತಿಳಿಸಿದರು.

    ಕನ್ನಡ ಜಾಗೃತಿ ವೇದಿಕೆಯ ತಾಲ್ಲೂಕು ಅಧ್ಯಕ್ಷ ಸಿ.ಶಶಿಧರ್ ನಮ್ಮ ದೇಶ ಸರ್ವಜನಾಂಗದ ಶಾಂತಿಯ ತೋಟವಿದ್ದಂತೆ ನಾವುಗಳು ಎಲ್ಲರನ್ನು ಗೌರವಿಸುತ್ತೇವೆ ಆದರೆ ನಮ್ಮ ದೇಶವನ್ನು ಹಾಳು ಮಾಡುವ ಇಂತಹ ಉಗ್ರಗಾಮಿಗಳನ್ನು ಬೆಳೆಸುತ್ತಿರುವ ಪಾಕಿಸ್ತಾನಕ್ಕೆ ಯುದ್ಧದ ಮುಖಾಂತರ ತಕ್ಕ ಉತ್ತರ ನೀಡಬೇಕಾಗಿದೆ ಎಂದು ತಿಳಿಸಿದರು..

     

    ಕನ್ನಡ ಸಾಹಿತ್ಯ ಪರಿಷತ್ತಿನ ಕೋಶಾಧ್ಯಕ್ಷ ಸಿ ಸುರೇಶ್ ಮಾತನಾಡಿ ಪಾಲ್ಗಾಮ್ ನಲ್ಲಿ ನಡೆದ ಕೃತ್ಯಕ್ಕೆ ನಮ್ಮ ಪ್ರಧಾನಿಗಳು ಆಪರೇಷನ್ ಸಿಂಧೂರ ಎಂಬ ಹೆಸರಿನಡಿಯಲ್ಲಿ ಸುಮಾರು ಭಯತ್ಪಾದಕ ನೆಲೆಗಳನ್ನು ಗುರುತಿಸಿ ಅವರಿಗೆ ತಕ್ಕ ಶಿಕ್ಷೆಯನ್ನು ನೀಡಿದ್ದಾರೆ, ವಿಶ್ವಕ್ಕೆ ಭಾರತ ಶಕ್ತಿ ತಿಳಿಯುವಾಗೆ ಮಾಡಿದ್ದಾರೆ ಪ್ರಧಾನಿ ನರೇಂದ್ರ ಮೋದಿಯವರ ಜೊತೆ ದೇಶದ subhadratrಎಂದು ತಿಳಿಸಿದರು.

    ಕಾರ್ಯಕ್ರಮದಲ್ಲಿಕನ್ನಡ ಜಾಗೃತಿ ವೇದಿಕೆಯ ರಾಜ್ಯ ಸಂಘಟನಾ ಕಾರ್ಯದರ್ಶಿ ಅಗ್ನಿ ವೆಂಕಟೇಶ್, ಜಿಲ್ಲಾಧ್ಯಕ್ಷರಾದ ಎಂ.ನಾಗರಾಜು , ತಾಲೂಕು ಅಧ್ಯಕ್ಷರಾದ ಶಶಿಧರ, ತಾಲೂಕು ಉಪಾಧ್ಯಕ್ಷರಾದ ಶಿವಪ್ರಸಾದ್, ಕಾರ್ಯದರ್ಶಿ ಮಹದೇವ್, ಕಾರ್ಮಿಕ ಘಟಕದ ಅಧ್ಯಕ್ಷರಾದ ಗುರುಪ್ರಸಾದ್, ಜಿಲ್ಲಾ ಕಾರ್ಮಿಕ ಘಟಕದ ಉಪಾಧ್ಯಕ್ಷರಾದ ಸುರೇಶ್ ಸಿಂಗಂ, ಶಿವಕುಮಾರ ಸ್ವಾಮಿ,ವೆಂಕಟೇಶ್, ಕನ್ನಡ ಸಾಹಿತ್ಯ ಪರಿಷತ್ತಿನ ಕೋಶ ಅಧ್ಯಕ್ಷರಾದ ಸಿ.ಸುರೇಶ್, ಸಂಘಟನಾ ಕಾರ್ಯದರ್ಶಿ ಮಂಜುನಾಥ್ ನಿಜಗಲ್, ಅನ್ನ ದಾಸೋಹಿ ಮಲ್ಲೇಶ, ತಾಲೂಕು ಸಂಚಾಲಕರಾದ ಬಾಬು, ಪ್ರಸಾದ್, ಸಂಘಟನೆ ಕಾರ್ಯದರ್ಶಿ ರಜತ್, ಸತೀಶ್, ಉಮೇಶ್ ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ದೇಶಾಭಿಮಾನಿಗಳು ಭಾಗವಹಿಸಿದ್ದರು.

  • ಇ -ಖಾತಾ ಅಭಿಯಾನದಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದೇವೆ – ಸುಮಿತ್ರಾ ಆನಂದ್

    ದೊಡ್ಡಬಳ್ಳಾಪುರ ನಗರಸಭೆಯು ಕಳೆದ ವರ್ಷಗಳಲ್ಲಿ ಶೇಕಡಾ 85ರಿಂದ 90 ರಷ್ಟು ಇದ್ದ ತೆರಿಗೆ ವಸೂಲಾತಿ ಕಳೆದ 9 ತಿಂಗಳ ಅವಧಿಯಲ್ಲಿ ಶೇಕಡಾ 100ರಷ್ಟು ಮಾಡಲಾಗಿದೆ.ಅಲ್ಲದೇ ಇ -ಖಾತಾ ಅಭಿಯಾನದಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದೇವೆ ಎಂದು ನಗರ ಸಭೆ ಅಧ್ಯಕ್ಷರಾದ ಸುಮಿತ್ರಾ ಆನಂದ್ ತಿಳಿಸಿದರು.

    ದೊಡ್ಡಬಳ್ಳಾಪುರ ನಗರ ಸಭೆ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ನಾನು ಅಧಿಕಾರಕ್ಕೆ ಬಂದು 9 ತಿಂಗಳು ಕಳೆದಿವೆ ಈ ಅವಧಿಯಲ್ಲಿ ಕೈಗೊಂಡಿರುವ ಯೋಜನೆ ಹಾಗೂ ಕಾರ್ಯಕ್ರಮ, ಕಾರ್ಯವೈಖರಿಗಳ ಬಗ್ಗೆ ಮಾಹಿತಿ ನೀಡುವ ಸಲುವಾಗಿ ಈ ಸುದ್ದಿಗೋಷ್ಠಿ ಕರೆಯಲಾಗಿದ್ದು, ಪ್ರಸ್ತುತ ಶೇಕಡಾ 100ರಷ್ಟು ತೆರಿಗೆ ವಸೂಲಾತಿಮಾಡುವ ಮೂಲಕ ನಗರಸಭೆಗೆ ಆದಾಯ ಹೆಚ್ಚಿಸಲಾಗಿದೆ , ನಗರದ ಅಭಿವೃದ್ಧಿಗಾಗಿ ಪ್ರತಿ ವಾರ್ಡಿಗೂ 10ಲಕ್ಷಗಳ ಅನುದಾನ ನೀಡಲಾಗಿದೆ, ಅಲ್ಲದೇ ಇ -ಖಾತಾ ಅಭಿಯಾನವನ್ನು ಉತ್ತಮ ರೀತಿಯಲ್ಲಿ ಅನುಷ್ಠಾನ ಮಾಡುವ ಸಲುವಾಗಿ ನಗರದ 31 ವಾರ್ಡ್ ಗಳಲ್ಲೂ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಿ ಅತಿಹೆಚ್ಚು ಇ ಖಾತೆ ಮಾಡಿಸುವ ಮೂಲಕ ಜಿಲ್ಲೇಯಲ್ಲೇ ಮೊದಲ ಸ್ಥಾನದಲ್ಲಿ ನಾವಿದ್ದೇವೆ ಎಂಬುದೇ ಹೆಮ್ಮೆಯ ವಿಷಯ ಎಂದರು

     

     

    ನಗರಸಭೆ ಉಪಾಧ್ಯಕ್ಷರಾದ ಎಂ ಮಲ್ಲೇಶ್ ಮಾತನಾಡಿ ನಗರದಲ್ಲಿ ಪ್ರಮುಖವಾಗಿ ಕಸ ವಿಲೇವಾರಿ ಸಮಸ್ಯೆ ಇದ್ದು ಈ ಸಮಸ್ಯೆಗೆ ಪರಿಹಾರವಾಗಿ ಚಿಕ್ಕಬಳ್ಳಾಪುರದ ಒಂದು NGO ಸಂಸ್ಥೆಯು ನಮ್ಮೊಂದಿಗೆ ಕೈ ಜೋಡಿಸಿದ್ದು ಹಸಿಕಸ ವನ್ನು ರೈತರ ಹೊಲಗಳಿಗೆ ನೀಡಲಾಗುತ್ತಿದೆ, ಸುಮಾರು 50 ರೈತರಿಗೆ ಹಸಿಕಸವನ್ನು ನೀಡಲಾಗುತ್ತಿದ್ದೂ ನಗರಸಭೆಗೆ ಸಾಕಷ್ಟು ಸಹಕಾರಿಯಾಗಿದೆ. ನಗರದ ಎಲ್ ಐ ಸಿ ಕಚೇರಿ ಪಕ್ಕದಲ್ಲಿ 1ಕೋಟಿ ವೆಚ್ಚದಲ್ಲಿ ವಾಣಿಜ್ಯ ಮಳಿಗೆ ನಿರ್ಮಾಣವಾಗುತ್ತಿದೆ. ಅಲ್ಲದೇ ಕೆರೆ ಅಭಿವೃದ್ಧಿ,

     

     

    ಸ್ಥಾಯಿಸಮಿತಿ ಅಧ್ಯಕ್ಷರಾದ ರವಿ ಕುಮಾರ್ ಮಾತನಾಡಿ ನಗರದಲ್ಲಿ ಕಟ್ಟುವ ನೂತನ ಕಟ್ಟಡಗಳ ಶುಲ್ಕ ವಸೂಲಾತಿ 26ಲಕ್ಷ ಆಗಿದ್ದು, ಅಧಿಕೃತ ಕಟ್ಟಡಗಳ ನಿರ್ಮಾಣಕ್ಕೆ ನಗರಸಭೆಯಿಂದ ನೋಟಿಸ್ ನೀಡುವ ಮೂಲಕ ಕಾನೂನು ಕ್ರಮಕ್ಕೆ ಮುಂದಾಗುತ್ತಿದ್ದೇವೆ, 26 ಸಾವಿರ ಅಧಿಕೃತ ಖಾತೆ ಇದ್ದು ಸುಮಾರು 6000 ಖಾತೆಗಳನ್ನು ಲೋಕಾಯುಕ್ತಗೆ ನೀಡುವ ಮೂಲಕ ರದ್ದುಗೊಳಿಸಿದ್ದೇವೆ, ಬೆಂಗಳೂರು ಗ್ರಾಮಾಂತರಜಿಲ್ಲೆ ಯ ದೊಡ್ಡಬಳ್ಳಾಪುರ ವ್ಯಾಪ್ತಿಯಲ್ಲಿ ನಮ್ಮ ನಗರಸಭೆ ವತಿಯಿಂದ 2800 ಖಾತೆ ಮಾಡಲಾಗಿದೆ, ಖಾತಾ ಮಾಡುವ ಪ್ರಕ್ರಿಯೆ ನಿಧಾನವಾಗಿದೆ ,ಒಂದೇ ಬಾರಿ 3000 ಕ್ಕೂ ಅಧಿಕ ಅರ್ಜಿಗಳು ಬಂದ ಕಾರಣ ಖಾತಾ ಪ್ರಕ್ರಿಯೆ ಸಮಯ ತೆಗೆದುಕೊಂಡಿದೆ.ಪೌರಾಕಾರ್ಮಿಕರಿಗೆ ಸರ್ಕಾರಿ ಸವಲತ್ತು ಹೊರತು ಪಡಿಸಿ ಹಲವು ಪೂರಕ ಕಾರ್ಯಕ್ರಮಗಳನ್ನು ಕಲ್ಪಿಸುವ ಮೂಲಕ ಪೌರಾಕಾರ್ಮಿಕರ ಅಭಿರುದ್ದಿಗೆ ಶ್ರಮಿಸಲಾಗುತ್ತಿದೆ ಎಂದರು.

  • ದೊಡ್ಡಬಳ್ಳಾಪುರ: ವಿವಿಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ರೌಡಿಶೀಟರ್ ಗಳ ಪರೇಡ್

    ಇತ್ತೀಚಿಗೆ ರಾಜ್ಯಾದ್ಯಂತ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆ, ಅದರಲ್ಲೂ ರೌಡಿಶೀಟರ್ ಗಳು ಹೆಚ್ಚಾಗಿ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿ ಸಮಾಜದ ಶಾಂತಿ ಸುವ್ಯವಸ್ಥೆಗೆ ಧಕ್ಕೆ ತರುತ್ತಿರುವ ಹಿನ್ನೆಲೆ ಇಂದು ದೊಡ್ಡಬಳ್ಳಾಪುರ ಡಿವೈಎಸ್ ಪಿ ಉಪವಿಭಾಗದಲ್ಲಿ ರೌಡಿ ಪರೇಡ್ ನಡೆಸಲಾಯಿತು.

    ಇಂದು ನಗರದ ಡಿವೈಎಸ್ ಪಿ ಕಚೇರಿ ಆವರಣದಲ್ಲಿ ಎಎಸ್ ಪಿ-2(ಅಪರಾಧ ವಿಭಾಗ) ಕೆ.ಎಸ್ ನಾಗರಾಜ್ ಅವರ ನೇತೃತ್ವದಲ್ಲಿ ದೊಡ್ಡಬಳ್ಳಾಪುರ ಡಿವೈಎಸ್ಪಿ ಉಪವಿಭಾಗಕ್ಕೆ ಒಳಪಡುವ ದೊಡ್ಡಬಳ್ಳಾಪುರ ಗ್ರಾಮಾಂತರ, ದೊಡ್ಡಬಳ್ಳಾಪುರ ನಗರ, ಹೊಸಹಳ್ಳಿ, ದೊಡ್ಡಬೆಳವಂಗಲ, ವಿಜಯಪುರ,‌ ವಿಶ್ವನಾಥಪುರ, ಚೆನ್ನರಾಯಪಟ್ಟಣ, ರಾಜಾನುಕುಂಟೆ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ವಿವಿಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ರೌಡಿಶೀಟರ್ ಗಳ ಪರೇಡ್ ಹಮ್ಮಿಕೊಳ್ಳಲಾಗಿತ್ತು.

     

     

    ರೌಡಿ ಪರೇಡ್ ನಡೆಸಿ ಮಾಧ್ಯಮದವರೊಂದಿಗೆ ಎಎಸ್ ಪಿ-2(ಅಪರಾಧ ವಿಭಾಗ) ಕೆ.ಎಸ್ ನಾಗರಾಜ್ ಮಾತನಾಡಿ, ದೊಡ್ಡಬಳ್ಳಾಪುರ ಡಿವೈಎಸ್ಪಿ ಉಪವಿಭಾಗದಲ್ಲಿ‌ ಸುಮಾರು 248 ರೌಡಿ‌ಶೀಟರ್ ಗಳು ಇದ್ದಾರೆ. ಅದರಲ್ಲಿ ಇಂದು ನಡೆದ ರೌಡಿ ಪರೇಡ್ ನಲ್ಲಿ 118 ಮಂದಿ ಹಾಜರಾಗಿದ್ದರು. ಇನ್ನು ಕೆಲವರು ಗೈರಾಗಿದ್ದಾರೆ. ಹಲವರಿಗೆ ಅನಾರೋಗ್ಯ ಕಾರಣದಿಂದ ಬಂದಿಲ್ಲ, ಮತ್ತೆ ಕೆಲವರು ಜೈಲಿನಲ್ಲಿದ್ದಾರೆ. ಇದರಲ್ಲಿ 25 ಜನ‌ ಕೊಲೆ ಆರೋಪಿಗಳಿದ್ದಾರೆ ಎಂದರು.

    ಉದ್ದೇಶ ಪೂರ್ವಕವಾಗಿ ಕಾನೂನಿನ ಭಯವಿಲ್ಲದೇ ಜನಸಾಮಾನ್ಯರಿಗೆ ತೊಂದರೆ ನೀಡುವವರನ್ನು ರೌಡಿಪಟ್ಟಿಗೆ ಸೇರಿಸಲಾಗಿದೆ. ಕೆಲವರಿಗೆ ತಾನು ಮಾಡಿರುವ ತಪ್ಪು ಅರಿವಿಗೆ ಬಂದಿದ್ದು, ಮತ್ತೆ ಕೆಲವರಿಗೆ ಇನ್ನೂ ತಿಳುವಳಿಕೆ ಬರದೇ ಪುನರಾರ್ವತಿತವಾಗಿ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿ ಸಮಾಜದ ಶಾಂತಿ ಸುವ್ಯವಸ್ಥೆಗೆ ಧಕ್ಕೆ ತರುತ್ತಿದ್ದಾರೆ. ಅಂತವರಿಗೆ ಮತ್ತಷ್ಟು ಕಾನೂನಿನ ಕಠಿಣ ಶಿಕ್ಷೆ ವಿಧಿಸಲಾಗುವುದು. ಗಡಿಪಾರು ಸಹ ಮಾಡಲಾಗುವುದು ಎಂದು ಅವರು ತಿಳಿಸಿದರು.

    ರೌಡಿ ಶೀಟರ್‌ಗಳು ಯಾವುದೇ ಕಾರಣಕ್ಕೂ ಸಮಾಜಘಾತುಕ ಕೃತ್ಯಗಳಲ್ಲಿ ಪಾಲ್ಗೊಳ್ಳಬಾರದು. ಅಂತಹ ಕೃತ್ಯಗಳಿಗೂ ಸಹ ಕುಮ್ಮಕ್ಕು ನೀಡಬಾರದು. ಒಂದು ವೇಳೆ ತಪ್ಪು ಮಾಡಿದ್ದು ಕಂಡುಬಂದರೆ ತಕ್ಕ ಶಿಕ್ಷೆ ನೀಡಲಾಗುವುದು ಎಂದು ಖಡಕ್‌ ಎಚ್ಚರಿಕೆ ನೀಡಿದರು‌ ಅಲ್ಲದೇ ರೌಡಿ‌ ಶೀಟರ್ ಓಪನ್ ಮಾಡೋದಕ್ಕೆ ಕೇವಲ ಒಂದು ಗಂಟೆ ಸಾಕು, ಆದರೆ, ರೌಡಿ ಪಟ್ಟಿಯಿಂದ ಹೆಸರು ತೆಗೆಯುವುದಕ್ಕೆ ಹಲವು ವರ್ಷಗಳೇ ಬೇಕಾಗುತ್ತದೆ. ಆದ್ದರಿಂದ ಯಾರೂ ಸಹ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಬಾರದು ಎಂದರು.

     

    ಯಾವ ಅಪರಾಧದಲ್ಲಿ ಭಾಗಿಯಾಗದೇ ಸನ್ನಡತೆಯಿಂದ ಜೀವನ ಸಾಗಿಸುತ್ತಿರುವ ಹಾಗೂ 60 ವರ್ಷ ಮೇಲ್ಪಟ್ಟವರ ರೌಡಿಶೀಟರ್ ಗಳ ಚಲನವಲನ ಗಮನಿಸಿ ರೌಡಿ ಪಟ್ಟಿಯಿಂದ ಹೆಸರು ತೆಗೆಯಲಾಗುವುದು.ನಿರಂತರ ಹತ್ತು ವರ್ಷ ಸಮಾಜದಲ್ಲಿ ಯಾರ ನೆಮ್ಮದಿಗೂ ಧಕ್ಕೆ ತರದಂತೆ ಜೀವನ ನಡೆಸಬೇಕು. ದೂರುಗಳೂ ಬರದಂತೆ ಇರಬೇಕು. ಹಾಗೆ ಮಾಡಿದರೆ ಮಾತ್ರ ರೌಡಿಶೀಟರ್‌ನಿಂದ ತೆರವು ಮಾಡುತ್ತೇವೆ ಎಂದು ಹೇಳಿದರು.

    ಪೊಲೀಸ್ ಠಾಣೆವಾರು ರೌಡಿಶೀಟರ್‌ಗಳ ಸಂಖ್ಯೆ

    1.ದೊಡ್ಡಬಳ್ಳಾಪುರ ಗ್ರಾಮಾಂತರ- 52

    2.ದೊಡ್ಡಬಳ್ಳಾಪುರ ನಗರ- 51

    3.ಹೊಸಹಳ್ಳಿ- 10

    4.ದೊಡ್ಡಬೆಳವಂಗಲ- 25

    5.ವಿಜಯಪುರ- 30

    6.ವಿಶ್ವನಾಥಪುರ- 22

    7.ಚೆನ್ನರಾಯಪಟ್ಟಣ- 11

    8.ರಾಜಾನುಕುಂಟೆ- 47

    ಈ ವೇಳೆ ಡಿವೈಎಸ್ಪಿ ರವಿ.ಪಿ, ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಸಾದಿಕ್ ಪಾಷಾ, ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಅಮರೇಶ್ ಗೌಡ, ಹೊಸಹಳ್ಳಿ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ರಾವ್ ಗಣೇಶ್, ದೊಡ್ಡಬೆಳವಂಗಲ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಕಲ್ಲಪ್ಪ ಶ‌ಂಕರಪ್ಪ ಖರಾತ್ ಸೇರಿದಂತೆ ವಿಜಯಪುರ, ವಿಶ್ವನಾಥಪುರ, ಚೆನ್ನರಾಯಪಟ್ಟಣ, ರಾಜಾನುಕುಂಟೆ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಗಳು‌ ಹಾಗೂ‌ ಸಿಬ್ಬಂದಿ ಭಾಗಿಯಾಗಿದ್ದರು.

  • ವೀರಾಪುರದ ದ್ವಾರಬಾಗಿಲು ಕಾಮಗಾರಿಗೆ ಭೂಮಿ ಪೂಜೆ : ಸಮುದಾಯ ಭವನ ಉದ್ಘಾಟಿಸಿ ಶುಭ ಹಾರೈಸಿದ ಶಾಸಕ ಧೀರಜ್ ಮುನಿರಾಜು

    ದೊಡ್ಡಬಳ್ಳಾಪುರ : ತಾಲ್ಲೂಕಿನ ಬಾಶೆಟ್ಟಿಹಳ್ಳಿ ರಸ್ತೆಯಿಂದ ವೀರಾಪುರ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಮಾರ್ಗದಲ್ಲಿ ಊರಿನ ದ್ವಾರ ಬಾಗಿಲು ನಿರ್ಮಾಣಕ್ಕೆ ಭೂಮಿ ಪೂಜೆ ಮತ್ತು ವೀರಾಪುರ ಗ್ರಾಮಕ್ಕೆ 2025-26 ನೇ ಸಾಲಿನ ಮ್ಯಾಕ್‌ ಏರೋ ಕಾಂಪೋನೆಂಟ್ಸ್‌ ಕಾರ್ಖಾನೆಯ ಸಿ.ಎಸ್.‌ ಆರ್.‌ ಯೋಜನೆಯಡಿ ನಿರ್ಮಿಸಲಾದ ಸಮುದಾಯ ಭವನವನ್ನು ಶನಿವಾರ ಶಾಸಕ ಧೀರಜ್ ಮುನಿರಾಜು ಉದ್ಘಾಟಿಸಿದರು.

    ಬಳಿಕ ಮಾತನಾಡಿದ ಅವರು ಬೃಹತ್ ಕಂಪನಿಗಳು ಸ್ಥಳೀಯವಾಗಿ ಸಾರ್ವಜನಿಕ ಉಪಯೋಗಿ ಕಾರ್ಯಗಳಿಗೆ ಸಹಕಾರ ನೀಡುವುದರಿಂದ ಕಂಪನಿ ಮತ್ತು ಸ್ಥಳೀಯರೊಂದಿಗೆ ಉತ್ತಮ ಸಂಬಂಧ ವೃದ್ಧಿಯಾಗುತ್ತದೆ. ಈ ಮೂಲಕ ಆಯಾ ಪಂಚಾಯತಿಗಳ ಅಭಿವೃದ್ಧಿಗೂ ಸಹಕಾರಿಯಾಗಲಿದೆ. ಮ್ಯಾಕ್‌ ಏರೋ ಕಾಂಪೋನೆಂಟ್ಸ್‌ ಕಂಪನಿಯ ಸಹಕಾರದಿಂದ ಸುಸಜ್ಜಿತ ಕಟ್ಟಡ ನಿರ್ಮಾಣವಾಗಿರುವುದರಿಂದ ಇಲ್ಲಿನ ಸಾವಿರಾರು ಜನರಿಗೆ ಶುಭಸಮಾರಂಭಗಳಿಗೆ ಅನುಕೂಲವಾಗಲಿದೆ ಎಂದರು.

     

    ಹಿರಿಯ ಮುಖಂಡ ತಿ.ರಂಗರಾಜಣ್ಣ ಮಾತನಾಡಿ ಗ್ರಾಮಗಳ ಅಭಿವೃದ್ಧಿಗೆ ದೊಡ್ಡ ದೊಡ್ಡ ಕಂಪನಿಗಳು ಸಿ.ಎಸ್.ಆರ್ ನಿಧಿಯಡಿ ಹಣವನ್ನು ಮೀಸಲಿಟ್ಟು ಮೂಲಭೂತ ಸೌಕರ್ಯಗಳಿಗೆ ಬಳಕೆ ಮಾಡುತ್ತಿರುವುದರಿಂದ ಅನೇಕ ಯೋಜನೆಗಳು ಸಾಧ್ಯವಾಗಿದೆ ಎಂದರು.

     

    ಕಾರ್ಯಕ್ರಮದಲ್ಲಿ ಹಿರಿಯ ಮುಖಂಡರಾದ ರಂಗರಾಜು, ಬಿಸಿ ಆನಂದ್, ಕೃಷ್ಣಪ್ಪ, ಮಜರಾಹೊಸಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷೆ ಲೀಲಮ್ಮ ಪಿಳ್ಳೇಗೌಡ, ಸದಸ್ಯರಾದ ವಿಜಯಕುಮಾರ್, ಶಿವಕುಮಾರ, ವಿಮಲಾ, ಪಿಳ್ಳಾಂಜಿನಪ್ಪ, ಸಂದೇಶ್, ಮ್ಯಾಕ್‌ ಏರೋ ಕಾಂಪೋನೆಂಟ್ಸ್‌ ಕಾರ್ಖಾನೆಯ ಅಧಿಕಾರಿಗಳು ಇದ್ದರು.

  • ದೊಡ್ಡಬಳ್ಳಾಪುರ : ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಪ್ರೊ.ಜಿ.ಎಸ್.ಸಿದ್ದಲಿಂಗಯ್ಯ  ನುಡಿನಮನ ಕಾರ್ಯಕ್ರಮ

    ಪ್ರೊ.ಜಿ.ಎಸ್.ಸಿದ್ದಲಿಂಗಯ್ಯ ಅವರು  ಕನ್ನಡ ಸಾಹಿತ್ಯ ಪರಿಷತ್ತಿನ   ಅಧ್ಯಕ್ಷರಾಗಿದ್ದ ಅವಧಿಯಲ್ಲಿ  ಪರಿಷತ್ತು  ಸರ್ವತೋಮುಖ ಬೆಳವಣಿಗೆ ಆಯಿತು ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಗೌರವ ಕಾರ್ಯದರ್ಶಿ ಪ್ರೊ.ರವಿಕಿರಣ್ ತಿಳಿಸಿದರು.

     

    ಅವರು  ದೊಡ್ಡಬಳ್ಳಾಪುರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ  ಡಾ.ರಾಜ್ ಕುಮಾರ್‌ ಕಲಾಮಂದಿರ ಆವರಣದಲ್ಲಿ ನಡೆದ  ಪ್ರೊ.ಜಿ.ಎಸ್.ಸಿದ್ದಲಿಂಗಯ್ಯ  ನುಡಿನಮನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.  ಪ್ರೊ.ಜಿ.ಎಸ್.ಸಿದ್ದಲಿಂಗಯ್ಯ ಅವರು   ಕಸಾಪ  ಅಧ್ಯಕ್ಷರಾಗಿದ್ದ ಅವಧಿಯಲ್ಲಿ  ಪರಿಷತ್ತು ಧ್ವಜ ರೂಪಗೊಂಡಿತು.  ನಾಡಗೀತೆ  ಹಾಡುವ ಅವಧಿಗೆ ಬಗ್ಗೆ  ಹೆಚ್ಚು ಮಾಡಿದ್ದರು.   ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕ್ರಮಗಳು  ಜಿಲ್ಲಾ ಮತ್ತು ತಾಲ್ಲೂಕು ಮಟ್ಟದಲ್ಲಿ,  ಅಖಿಲ ಭಾರತ ಕನ್ನಡ   ಸಾಹಿತ್ಯ ಸಮ್ಮೇಳನ,  ಪುಸ್ತಕ ಪ್ರಕಟಣೆ ಯಶಸ್ವಿಯಾಗಿ ನಡೆದವು ಎಂದರು.

     

    ಕನ್ನಡ ಸಾಹಿತ್ಯ ಪರಿಷತ್ತು ಕಸಬಾ ಹೋಬಳಿ ಘಟಕದ ಕೋಶಾಧ್ಯಕ್ಷ ಜಿ.ಸುರೇಶ್ ಮಾತನಾಡಿ,  ತುಮಕೂರು ಜಿಲ್ಲೆಯ ಬೆಳ್ಳಾವೆಯಲ್ಲಿ  ಜನಿಸಿದ ಪ್ರೊ.ಜಿ.ಎಸ್.ಸಿದ್ದಲಿಂಗಯ್ಯ ಅವರು  ಕನ್ನಡದ ಪ್ರಾಧ್ಯಾಪಕರಾಗಿ, ಕಾಲೇಜು ಪ್ರಾಂಶುಪಾಲರಾಗಿ, ಕಾಲೇಜು ಶಿಕ್ಷಣ ಇಲಾಖೆಯಲ್ಲಿ ನಿರ್ದೇಶಕರಾಗಿ, ಹಂಪಿ ವಿಶ್ವವಿದ್ಯಾನಿಲಯದಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿದ್ದರು. ಬೆಂಗಳೂರು, ಮೈಸೂರು, ಕರ್ನಾಟಕ, ಕಲಬುರಗಿ ಮತ್ತು ಮಂಗಳೂರು ವಿಶ್ವವಿದ್ಯಾಲಯಗಳ ಅಕಾಡೆಮಿಕ್ ಕೌನ್ಸಿಲ್, ಸೆನೆಟ್ ಮತ್ತು ಸಿಂಡಿಕೇಟ್ ಸದಸ್ಯರಾಗಿ ಸೇವೆ ಸಲ್ಲಿಸಿದರು ಎಂದರು.

     

    ದೊಡ್ಡಬಳ್ಳಾಪುರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಮಾಜಿ ಅಧ್ಯಕ್ಷ ಡಿ.ಶ್ರೀಕಾಂತ್ ಮಾತನಾಡಿ,   ಪ್ರೊ.ಜಿ.ಎಸ್.ಸಿದ್ದಲಿಂಗಯ್ಯ  ಅವರು  ಕವಿ, ವಿಮರ್ಶಕ, ಸಂಶೋಧಕ, ಅನುವಾದಕರಾಗಿ ಹಲವಾರು ಅಮೂಲ್ಯ ಕೃತಿಗಳನ್ನು ಕನ್ನಡ ಸಾಹಿತ್ಯಕ್ಕೆ ನೀಡಿದ್ದಾರೆ. ಅವರ  ಸಾಧನೆಗಾಗಿ ರಾಜ್ಯೋತ್ಸವ ಪ್ರಶಸ್ತಿ, ಕಾವ್ಯಾನಂದ ಪ್ರಶಸ್ತಿ,  ವಚನ ಸಾಹಿತ್ಯಶ್ರೀ ಪ್ರಶಸ್ತಿ, ಕೆಂಪೇಗೌಡ ಪ್ರಶಸ್ತಿ,  ಬಸವಶ್ರೀ ಪ್ರಶಸ್ತಿ,  ಮಾಸ್ತಿ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದಾರೆ ಎಂದರು..

     

    ಕಾರ್ಯಕ್ರಮದಲ್ಲಿ ದೊಡ್ಡಬಳ್ಳಾಪುರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಪಿ.ಗೋವಿಂದರಾಜು,  ಗೌರವ ಕಾರ್ಯದರ್ಶಿ ಎ.ಜಯರಾಮ್, ಕೋಶಾಧ್ಯಕ್ಷ ಸಾ.ಲ.ಕಮಲನಾಥ್, ಪ್ರತಿನಿಧಿ ನಾಗರತ್ನಮ್ಮ, ಸಾಮಾಜಿಕ ಕಾರ್ಯಕರ್ತ ಕೃಷ್ಣಪ್ರಸಾದ್, ಡಾ.ಬಿ.ಆರ್.ಅಂಬೇಡ್ಕರ್  ವಿದ್ಯಾರ್ಥಿನಿಲಯದ ಮೇಲ್ವಿಚಾರಕ ಅಣ್ಣಯ್ಯ, ಇಸ್ತೂರು  ಕೋದಂಡರಾಮ ಭಜನಾ ಮಂಡಲಿ  ಕಾರ್ಯದರ್ಶಿ ರಂಗಸ್ವಾಮಯ್ಯ,  ನಿವೃತ್ತ ಮುಖ್ಯಶಿಕ್ಷಕ ಕೆ.ವಿ.ವೆಂಕಟೇಶರೆಡ್ಡಿ,  ಸಹಶಿಕ್ಷಕರುಗಳಾದ ಕೋದಂಡರಾಮ್, ತಿಮ್ಮಯ್ಯ, ವೆಂಕಟೇಶ್, ಶ್ರೀನಿವಾಸ್ ಮುಂತಾದವರು ಭಾಗವಹಿಸಿದ್ದರು

  • KSRTC ಬಸ್ ಅಪಘಾತ : ತಪ್ಪಿದ ಭಾರಿ ಅನಾಹುತ : ಅಪಘಾತಕ್ಕೆ ಸರ್ವಿಸ್ ರಸ್ತೆ ಇಲ್ಲದಿರುವುದೇ ಕಾರಣ ಎಂದ ಗ್ರಾಮಸ್ಥರು

    ದೊಡ್ಡಬಳ್ಳಾಪುರ: ರಾಷ್ಟ್ರೀಯ ಹೆದ್ದಾರಿ 648ರಲ್ಲಿ ಕೆಎಸ್ ಆರ್ ಟಿಸಿ ಬಸ್ ಟೈರ್ ಸ್ಪೋಟಗೊಂಡು, ನಿಯಂತ್ರಣ ತಪ್ಪಿದ ಬಸ್ ರಸ್ತೆಯ ತಡೆಗೋಡೆಗೆ ಗುದ್ದಿದೆ,ಬಸ್ನಲ್ಲಿ 30ಕ್ಕೂ ಹೆಚ್ಚು ಪ್ರಯಾಣಿಕರು ಪ್ರಯಾಣಿಸುತ್ತಿದ್ದೂ ಚಾಲಕನ ಸಮಯ ಪ್ರಜ್ಞೆಯಿಂದ ಸದ್ಯ ಪ್ರಯಾಣಿಕರು ಪ್ರಾಣಪಾಯದಿಂದ ಪಾರಾಗಿದ್ದಾರೆ.

    ದೊಡ್ಡಬಳ್ಳಾಪುರ ತಾಲೂಕಿನ ಮೆಣಸಿಗೇಟ್ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಘಟನೆ ಸಂಭವಿಸಿದ್ದು,ಸೂಲಿಕುಂಟೆ-ದೊಡ್ಡಬಳ್ಳಾಪುರ ಮಾರ್ಗದ ಬಸ್ ದೊಡ್ಡಬಳ್ಳಾಪುರ ನಗರಕ್ಕೆ ಬರುವ ವೇಳೆ ಈ ಅವಘಡ ಸಂಭವಿಸಿದೆ. ಚಾಲಕ ಮುನಿಶ್ಯಾಮಪ್ಪ ರವರ ಸಮಯ ಪ್ರಜ್ಞೆಯಿಂದ ಬಸ್ಸಿನಲ್ಲಿದ್ದ 30ಕ್ಕೂ ಹೆಚ್ಚು ಪ್ರಯಾಣಿಕರ ಪ್ರಾಣ ಉಳಿದಿದೆ,

    ಈ ಕುರಿತು ಸ್ಥಳೀಯ ಕೆಸ್ತೂರು ಪಂಚಾಯಿತಿ ಮಾಜಿ ಅಧ್ಯಕ್ಷ ರಮೇಶ್ ಮಾತನಾಡಿ ಈ ಅಪಘಾತಗಳಿಗೆ ಟೋಲ್ ಸಿಬ್ಬಂದಿ ಹಾಗೂ ರಾಷ್ಟೀಯ ಹೆದ್ದಾರಿ ಪ್ರಾಧಿಕಾರವೇ ಹೊಣೆಯಾಗುತ್ತದೆ ಕಾರಣ ಸ್ಥಳೀಯವಾಗಿ ಭೂಮಿಯಿದ್ದರು ಸರ್ವಿಸ್ ರಸ್ತೆ ನಿರ್ಮಾಣ ಮಾಡಲು ಮೀನಾ- ಮೇಷ ಎಣಿಸುತ್ತಿದೆ, ಈ ಕುರಿತು ಹಲವು ಬಾರಿ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯಾಜನವಾಗಿಲ್ಲ ಇನ್ನಾದರೂ ರಸ್ತೆ ಪ್ರಾಧಿಕಾರ ಎಚ್ಚೆದ್ದು ಸ್ಥಳೀಯವಾಗಿ ಸರ್ವಿಸ್ ರಸ್ತೆ ಹಾಗೂ ಮೇಲ್ಸೇತುವೆ ನಿರ್ಮಿಸಿ ಸಾರ್ವಜನಿಕರ ಜೀವ ಉಳಿಸಬೇಕಿದೆ ಇಲ್ಲವಾದಲ್ಲಿ ಹೈವೇ ಬಂದ್ ಮಾಡುವ ಮೂಲಕ ಉಗ್ರ ಹೋರಾಟ ಕೈಗೊಳ್ಳಲಾಗುವುದು ಎಂದರು

    ಸ್ಥಳೀಯ ಗ್ರಾಮಸ್ಥರಾದ ಅನ್ನಪೂರ್ಣ ಮಾತನಾಡಿ ಈ ರಸ್ತೆ ನಿರ್ಮಾಣವಾದ ಸಂದರ್ಭದಿಂದಲೂ ನಿರಂತರ ಅಪಘಾತಗಳು ನೆಡೆಯುತ್ತಲೇ ಇವೆ ಆದರೂ ಸ್ಥಳೀಯ ಟೋಲ್ ಸಿಬ್ಬಂದಿಗಳು ಹಾಗೂ ಸಂಬಂಧಪಟ್ಟ ರಸ್ತೆ ಪ್ರಾಧಿಕಾರ ಯಾವುದೇ ಸಂಬಂಧವಿಲ್ಲದೇ ವರ್ಥಿಸುತ್ತಿದೆ, ಕಳೆದೆ ಎರಡು ದಿನಗಳ ಹಿಂದೆ ನಾನು ಇದೆ ರಸ್ತೆಯಲ್ಲಿ ಅಪಘಾತಕ್ಕಿಡಾಗಿದ್ದು, ಈ ರಸ್ತೆಯಿಂದ ಸ್ಥಳೀಯ ಸುತ್ತ ಮುತ್ತಲಿನ ಹಲವು ಹಳ್ಳಿಗಳ ರೈತರು, ಗ್ರಾಮಸ್ಥರು ತೊಂದರೆ ಅನುಭವಿಸುತ್ತಿದ್ದೇವೆ, ರಸ್ತೆ ಬಂದ್ ಮಾಡದೇ ನಮಗೆ ಬೇರೆ ದಾರಿ ಇಲ್ಲ, ಕೂಡಲೇ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಕೂಡಲೇ ಕ್ರಮ ಕೈಗೊಳ್ಳಬೇಕು ನಮ್ಮ ಸಮಸ್ಯೆಗೆ ಶೀಘ್ರ ಪರಿಹಾರ ಕಲ್ಪಿಸಬೇಕಿದೆ ಎಂದು ಒತ್ತಾಯಿಸಿದರು.

    KSRTC ಬಸ್ ಗಳ ಕಳಪೆ ಗುಣಮಟ್ಟದ ನಿರ್ವಹಣೆ ಅಪಘಾತಕ್ಕೆ ಕಾರಣವಾಯಿತೇ….???

     

    ಹೌದು ಬಸ್ಸಿನ ಟೈರ್ ಗಳಲ್ಲಿ ಮರು ಬಳಕೆ ಮಾಡಿರುವ ಟೈರ್ ಗಳನ್ನು ಬಳಸಲಾಗುತ್ತದೆ ಇದೇ ಇಂದಿನ ಬಸ್ಸಿನ ಟೈರ್ ಸ್ಪೋಟಗೂಳ್ಳಲು ಕಾರಣ ಎಂಬುದು ಸ್ಥಳೀಯ ಪ್ರತ್ಯಕ್ಷದರ್ಶಿಗಳ ವಾದವಾಗಿದೆ. ಟೈರ್ ಸ್ಪೋಟಗೊಂಡ ತಕ್ಷಣವೇ ಚಾಲಕ ತಡೆಗೋಡೆಯ ಕಡೇ ಬಸ್ ಚಲಿಸಿದ್ದು , ತಡೆಗೋಡೆಯಿಂದ ಬಸ್ ನಿಯಂತ್ರಣಕ್ಕೆ ಬಂದಿದೆ, ಒಂದು ವೇಳೆ ತಡೆಗೋಡೆ ಇಲ್ಲದಿದ್ದಲ್ಲಿ ಬಸ್ ಹಳ್ಳಕ್ಕೆ ಬಿಳುತ್ತಿತ್ತು,ಹಾಗೆ ಪಕ್ಕದಲ್ಲಿ ಇದ್ದ ವಿದ್ಯುತ್ ತಂತಿಗೆ ತಾಗುವ ಸಂಭವವಿತ್ತು, ಚಾಲಕನ ಸಮಯ ಪ್ರಜ್ಞೆಗೆ ಸಾರ್ವಜನಿಕರು ಪ್ರಶಂಸೆಮಾಡಿದ್ದು, ಶೀಘ್ರವಾಗಿ ಸರ್ವಿಸ್ ರಸ್ತೆ ನಿರ್ಮಿಸುವಂತೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

  • ಕಲ್ಯಾಣಪಥ ಪ್ರಗತಿಪಥ ರಸ್ತೆ ನಿರ್ಮಾಣದಲ್ಲಿ ಗುಣಮಟ್ಟ ಕಾಪಾಡಲು ಸಚಿವ ಪ್ರಿಯಾಂಕ್‌ ಖರ್ಗೆ ಅವರಿಂದ ಎಂಜನಿಯರುಗಳಿಗೆ ನಿರ್ದೇಶನ

    ಬೆಂಗಳೂರು:- ಶಾಲೆಗಳು, ಆಸ್ಪತ್ರೆಗಳು, ವಾಣಿಜ್ಯ ಸಂಸ್ಥೆಗಳು. ಕೈಗಾರಿಕೆಗಳಿಗೆ ಗ್ರಾಮಗಳಿಂದ ಸಂಪರ್ಕ ಕಲ್ಪಿಸುವ ಕಲ್ಯಾಣಪಥ ಹಾಗೂ ಪ್ರಗತಿಪಥ ಸರ್ಕಾರದ ಮಹತ್ತರ ಯೋಜನೆಗಳಾಗಿದ್ದು, ಗ್ರಾಮೀಣ ಬದುಕಿನ ಶೈಕ್ಷಣಿಕ ಹಾಗೂ ಆರ್ಥಿಕ ಅಭಿವೃದ್ಧಿಗೆ ಪೂರಕವಾಗಬಲ್ಲ ಈ ರಸ್ತೆಗಳನ್ನು ಗುಣಮಟ್ಟದಿಂದ ನಿರ್ಮಾಣ ಮಾಡಬೇಕೆಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್‌ ಖರ್ಗೆ ಪಂಚಾಯತ್‌ ರಾಜ್‌ ಇಲಾಖೆಯ ಎಂಜನಿಯರುಗಳಿಗೆ ಸೂಚನೆ ನೀಡಿದರು.

    ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆದ ಪಂಚಾಯತ್‌ ರಾಜ್‌ ಎಂಜನಿಯರಿಂಗ್‌ ಇಲಾಖೆ ಹಾಗೂ ಕರ್ನಾಟಕ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ಪ್ರಮುಕ ಯೋಜನೆಗಳ ಪ್ರಗತಿಯನ್ನು ಪರಿಶೀಲಿಸಿ, ರಾಜ್ಯದ ಎಲ್ಲ ಜಿಲ್ಲೆಗಳಿಂದ ಆಗಮಿಸಿದ್ದ ಎಂಜನಿಯರುಗಳನ್ನು ಉದ್ದೇಶಿಸಿ ಮಾತನಾಡಿದರು ಕಲ್ಯಾಣಪಥ ಯೋಜನೆಗಾಗಿ ಸರ್ಕಾರ ಈ ಬಾರಿಯ ಆಯವ್ಯದಲ್ಲಿ 1000 ಕೋಟಿ ರೂ ಅನುದಾನ ನೀಡಿದ್ದು, ಕಲ್ಯಾಣ ಕರ್ನಾಟಕ ಭಾಗದ ರಸ್ತೆಗಳ ಅಭಿವೃದ್ಧಿಗಾಗಿ ಸರ್ಕಾರ ಇಷ್ಟು ದೊಡ್ಡ ಮೊತ್ತದ ಆರ್ಥಿಕ ನೆರವನ್ನು ಮೊದಲ ಬಾರಿಗೆ ಒದಗಿಸಿದೆ, ಸರ್ಕಾರ ನೀಡಿರುವ ಅನುದಾನದಿಂದ ಉತ್ತಮ ಗುಣಮಟ್ಟದ ರಸ್ತೆಗಳನ್ನು ನಿರ್ಮಾಣ ಮಾಡುವ ಹೊಣೆಗಾರಿಕೆ ಎಂಜನಿಯರುಗಳ ಮೇಲಿದೆ, ಯಾವುದೇ ಲೋಪವಿಲ್ಲದಂತೆ ದೀರ್ಘಕಾಲ ಬಾಳಿಕೆ ಬರುವಂತೆ ರಸ್ತೆಗಳನ್ನು ನಿರ್ಮಾಣ ಮಾಡಬೇಕೆಂದು ಸಚಿವ ಪ್ರಿಯಾಂಕ್‌ ಖರ್ಗೆ ನಿರ್ದೇಶನ ನೀಡಿದರು.

     

    ಪ್ರಗತಿಪಥ ಯೋಜನೆಗಾಗಿ ಸರ್ಕಾರ 5200 ಕೋಟಿ ಅನುದಾನ ಒದಗಿಸಿದ್ದು, ಕೇಂದ್ರ ಸರ್ಕಾರದ ಆರ್ಥಿಕ ವ್ಯವಹಾರಗಳ ಇಲಾಖೆಯು ಅನುಮೋದನೆ ನೀಡಲು ಏಷ್ಯನ್‌ ಡೆವಲೆಪ್‌ಮೆಂಟ್‌ ಬ್ಯಾಂಕಿಗೆ ಸೂಚನೆ ನೀಡಿದೆ, ಬ್ಯಾಂಕಿನ ತಂಡವು ಈಗಾಗಲೆ ರಾಜ್ಯಕ್ಕೆ ಭೇಟಿ ನೀಡಿ ಪರಿಶೀಲಿಸಿದೆ, ಈ ನಡುವೆ ಇಲಾಖೆಯು ರಸ್ತೆಗಳ ಪೂರ್ಣ ಯೋಜನಾ ವರದಿಯನ್ನು ಸಿದ್ಧಪಡಿಸುತ್ತಿದೆ ಎಂದು ಸಬೆಯಲ್ಲಿ ಸಚಿವರಿಗೆ ಮಾಹಿತಿ ನೀಡಲಾಯಿತು.

     

    ಪಂಚಾಯತ್‌ ರಾಜ್‌ ಎಂಜನಿಯರಿಂಗ್‌ ಇಲಾಖೆ ನಿರ್ಮಾಣ ಕಾಮಗಾರಿಗಳ ವಿನಃ ಬೇರಾವುದೆ ಸರಕು ಸರಬರಾಜಿನಂತಹ ಪ್ರಕ್ರಿಯೆಗಳಲ್ಲಿ ತೊಡಗಬಾರದು ಎಂದು ಕಟ್ಟುನಿಟ್ಟಾಗಿ ಸೂಚಿಸಿದ ಸಚಿವರು, ಹೊಸ ಸಂಶೋಧನೆಗಳ ಮೂಲಕ ಮತ್ತಷ್ಟು ಬಾಳಿಕೆ ಬರುವಂತಹ ಸಾಮಗ್ರಿಗಳನ್ನು ನಿರ್ಮಾಣದಲ್ಲಿ ಬಳಸುವ ಮೂಲಕ ಸುಧಾರಣೆಗಳನ್ನು ತರಬೇಕೆಂದು ಸಲಹೆ ಮಾಡಿದರು. ಎಂಜನಿಯರಿಂಗ್ ಕ್ಷೇತ್ರದ ಸುಧಾರಣೆಗಳಿಗಾಗಿ ಹಾಗೂ ಹೊಸ ತಂತ್ರಜ್ಞಾನಗಳ ಅಳವಡಿಕೆ ಮಾಡುವ ಸಂಬಂಧ ಹಿರಿಯ ಎಂಜನಿಯರ್ ಗಳು ಮತ್ತು ಉತ್ಸಾಹಿ ಕಿರಿಯ ಎಂಜನಿಯರ್‌ಗಳನ್ನು ಒಳಗೊಂಡ ಸಮಿತಿ ರಚಿಸಿ ವರದಿ ಪಡೆಯಲು ಸಚಿವರು ಸಲಹೆ ಮಾಡಿದರು.

     

    ಗ್ರಾಮಗಳ ಜಲಮೂಲಗಳನ್ನು ಸುಸ್ಥಿರಗೊಳಿಸುವ ಮತ್ತು ವಿದ್ಯುತ್‌ ಭದ್ರತೆ ನೀಡುವ ಹೊಸ ಪರಿಕಲ್ಪನೆ ಇಲಾಖೆ ಹೊಂದಿದ್ದು, ಗ್ರಾಮಗಳ ಕೆರೆಗಳು ಸೇರಿದಂತೆ ಜಲಮೂಲಗಳನ್ನು ಸಂರಕ್ಷಿಸುವ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವ ಮೂಲಕ ಹೊಸತನವನ್ನು ಅಳವಡಿಸಿಕೊಳ್ಳಲು ಸಚಿವರು ಎಂಜನಿಯರುಗಳಿಗೆ ತಿಳಿಸಿದರು.

    2022-23ನೆ ಸಾಲಿನಲ್ಲಿ ಅನುಮೋದನೆಯಾದ 27322 ಕಾಮಗಾರಿಗಳಲ್ಲಿ 22712 ಕಾಮಗಾರಿಗಳು ಪೂರ್ಣಗೊಂಡಿದ್ದು, 3100 ಕಾಮಗಾರಿಗಳು ಪ್ರಗತಿಯಲ್ಲಿವೆ; 2023-24ನೆ ಸಾಲಿನಲ್ಲಿ ಅನುಮೋದನೆಯಾದ 23338 ಕಾಮಗಾರಿಗಳ ಪೈಕಿ 15522 ಕಾಮಗಾರಿಗಳು ಪೂರ್ಣವಾಗಿವೆ, 5695 ಕಾಮಗಾರಿಗಳು ಪ್ರಗತಿಯಲ್ಲಿವೆ ಹಾಗೂ 2024-25ನೆ ಸಾಲಿನಲ್ಲಿ ಅನುಮೋದನೆಗೊಂಡ 25786 ಕಾಮಗಾರಿಗಳಲ್ಲಿ 11916 ಕಾಮಗಾರಿಗಳು ಪೂರ್ಣವಾಗಿದ್ದು 8013 ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದೂ ಸಭೆಯಲ್ಲಿ ಮಾಹಿತಿ ನೀಡಲಾಯಿತು. ಕಾಮಗಾರಿಗಳು ವಿಳಂಬವಾಗಿರುವ ಪ್ರಕರಣಗಳನ್ನು ಸಚಿವರು ಗಂಭೀರವಾಗಿ ಪರಿಗಣಿಸಿ, ಶಾಸಕರು ಹಾಗೂ ಸಂಸತ್‌ ಸದಸ್ಯರ ಜೊತೆ ಸಂಪರ್ಕದಲ್ಲಿದ್ದು, ಕಾಮಗಾರಿಗಳನ್ನು ಶೀಘ್ರ ಮುಗಿಸಲು ಬದ್ಧತೆ ಹೊಂದಬೇಕೆಂದು ಹೇಳಿದರು.

     

    ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಹಾಗೂ ಮಾಹಿತಿ ತಂತ್ರಜ್ಞಾನ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಅಂಜುಂ ಪರವೇಜ್‌ ಹಾಗೂ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.

  • ಆಪರೇಷನ್ ಸಿಂಧೂರ; ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದ ಹೆಚ್.ಡಿ. ದೇವೇಗೌಡರು

    ಬೆಂಗಳೂರು: ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತಿಯಾಗಿ ಪಾಕಿಸ್ತಾನದಲ್ಲಿರುವ ಭಯೋತ್ಪಾದಕ ಶಿಬಿರಗಳ ಮೇಲೆ ಆಪರೇಷನ್ ಸಿಂಧೂರ ಹೆಸರಿನಲ್ಲಿ ಮಿಲಿಟರಿ ಕಾರ್ಯಾಚರಣೆ ನಡೆಸಿರುವ ಭಾರತ ಸರ್ಕಾರದ ಕ್ರಮವನ್ನು ಮಾಜಿ ಪ್ರಧಾನಿಗಳಾದ ಹೆಚ್.ಡಿ. ದೇವೇಗೌಡರು ಮುಕ್ತಕಂಠದಿಂದ ಸ್ವಾಗತಿಸಿದ್ದಾರೆ.

     

    ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಗುರುವಾರ ಪತ್ರ ಬರೆದಿರುವ ದೇವೇಗೌಡರು; ಮೇ 7ರಂದು ಪಹಲ್ಗಾಮ್ ನಲ್ಲಿ ನಡೆದಿರುವ ಭಯೋತ್ಪಾದಕ ದಾಳಿಗೆ ಭಾರತದ ಪ್ರಬುದ್ಧ ಮತ್ತು ಸಂಯಮದ ಮಿಲಿಟರಿ ಪ್ರತಿಕ್ರಿಯೆಯನ್ನು ನೀಡಿದೆ. ಈ ಹಿನ್ನೆಲೆಯಲ್ಲಿ ನಾನು ನಿಮ್ಮನ್ನು ಅಭಿನಂದಿಸುತ್ತೇನೆ ಎಂದು ತಿಳಿಸಿದ್ದಾರೆ.

     

     

    “ಸೌದಿ ಅರೇಬಿಯಾ ಭೇಟಿಯಲ್ಲಿದ್ದ ನೀವು ಭಯೋತ್ಪಾದಕ ದಾಳಿ ವಿಷಯ ಗೊತ್ತಾಗುತ್ತದ್ದಂತೆಯೇ ಭೇಟಿಯನ್ನು ಮೊಟಕುಗೊಳಿಸಿ ಕೂಡಲೇ ಸ್ವದೇಶಕ್ಕೆ ವಾಪಸ್ ಬಂದಿರಿ. ತಕ್ಷಣದಿಂದಲೇ ದೇಶದಲ್ಲಿ ಸೃಷ್ಟಿಯಾಗಿದ್ದ ಪರಿಸ್ಥಿತಿಯ ಮೇಲ್ವಿಚಾರಣೆ ನಡೆಸುವುದರ ಜೊತೆಗೆ, ವ್ಯೂಹಾತ್ಮಕ ಸಭೆಗಳನ್ನು ನಡೆಸಿ ಜಾಗತಿಕ ಬೆಂಬಲವನ್ನು ಸಜ್ಜುಗೊಳಿಸಲು ಮಹತ್ವದ ಪಾತ್ರ ವಹಿಸಿದಿರಿ. ಸಶಸ್ತ್ರ ಪಡೆಗಳಿಗೆ ಸ್ಫೂರ್ತಿ ನೀಡಲು ತಾವು ಮೊದಲ ದಿನದಿಂದಲೇ ನೀವು ತೆಗೆದುಕೊಂಡ ದೃಢ ನಿರ್ಧಾರದ ಕ್ರಮಗಳನ್ನು ನಾನು ಗಮನಿಸುತ್ತಿದ್ದೇನೆ. ನಂತರ ನೀವು ಎಲ್ಲಾ ತುರ್ತು ಪರಿಸ್ಥಿತಿಗಳ ಮೇಲ್ವಿಚಾರಣೆ ನಡೆಸಲು ಯುರೋಪ್ ಪ್ರವಾಸವನ್ನು ರದ್ದುಗೊಳಿಸಿದ್ದೀರಿ” ಎಂದು ಮಾಜಿ ಪ್ರಧಾನಿಗಳು ಮೋದಿ ಅವರ ಕಾರ್ಯವೈಖರಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಕಳೆದ ಎರಡು ವಾರಗಳಿಂದ ನೀವು ಬಹಳ ಒತ್ತಡ ಮತ್ತು ಸಂಯಮದಿಂದ ಕರ್ತವ್ಯ ನಿರ್ವಹಿಸುತ್ತಿದ್ದೀರಿ. ದೇವರು ನಿಮಗೆ ದುಷ್ಟರನ್ನು ಹತ್ತಿಕ್ಕುವ ಸರ್ವಶಕ್ತಿಯನ್ನು ನೀಡಲಿ. ದೇಶ ಎದುರಿಸುತ್ತಿರುವ ಎಲ್ಲಾ ಸಮಸ್ಯೆಗಳನ್ನೂ ನಿವಾರಿಸುವ ಶಕ್ತಿಯೂ ನಿಮಗೆ ಸಿಗಲಿ. ಕಠಿಣ ಸಂದರ್ಭದಲ್ಲಿ ದೇಶದ ನಾಯಕತ್ವ ವಹಿಸಿರುವ ನಿಮ್ಮ ಹೆಸರು ಇತಿಹಾಸದಲ್ಲಿ ಪ್ರಕಾಶಮಾನವಾಗಿ ದಾಖಲಾಗಲಿದೆ ಎಂದು ದೇವೇಗೌಡರು ಪ್ರಧಾನಿಗಳಿಗೆ ಪತ್ರದಲ್ಲಿ ಹೇಳಿದ್ದಾರೆ.

     

    ಆಧ್ಯಾತ್ಮಿಕ ಪ್ರಜ್ಞೆ, ಆಳವಾದ ಚಿಂತನೆ ಮತ್ತು ನಿರಂತರ ಪ್ರಾರ್ಥನೆ ಇಲ್ಲದೆ ಸಮತೋಲನ ಮತ್ತು ಸಮಚಿತ್ತತೆಯನ್ನು ಕಂಡುಕೊಳ್ಳುವುದು ಸುಲಭವಲ್ಲ ಎಂದು ನನಗೆ ತಿಳಿದಿದೆ. ಕಳೆದ ಕೆಲವು ದಿನಗಳಲ್ಲಿ ನೀವು ಎಲ್ಲವನ್ನೂ ಉತ್ತಮ ರೀತಿಯಲ್ಲಿ ಸಾಧಿಸಿದ್ದೀರಿ. ನಿಮ್ಮ ಇಚ್ಛಾಶಕ್ತಿಯನ್ನು ಸಶಕ್ತವಾಗಿ ಪ್ರದರ್ಶಿಸಿದ್ದೀರಿ. ಹಿಂದೆಯೂ ಹಲವಾರು ಸಂದರ್ಭಗಳಲ್ಲಿ ನಿಮ್ಮ ಈ ರೀತಿಯ ನಾಯಕತ್ವ ಗುಣ ಸ್ಪಷ್ಟವಾಗಿ ಗೋಚರಿಸಿದೆ ಎಂದು ಮಾಜಿ ಪ್ರಧಾನಿಗಳು ಪತ್ರದಲ್ಲಿ ತಿಳಿಸಿದ್ದಾರೆ.

     

    ಭಯೋತ್ಪಾದನೆಯಂತಹ ಅಧರ್ಮದ ವಿರುದ್ಧ ನಾವು ಈ ಧರ್ಮದ ಯುದ್ಧವನ್ನು ನಡೆಸುತ್ತಿರುವಾಗ ದೇವರು ನಿಮ್ಮ ಜೊತೆಯಲ್ಲಿಯೇ ಇರಲಿ. ನಮ್ಮ ಮಹಾನ್ ರಾಷ್ಟ್ರವನ್ನು ರಕ್ಷಿಸಲಿ ಎಂದು ನಾನು ಪ್ರಾರ್ಥಿಸುತ್ತೇನೆ. ಭಾರತವು ಶಾಂತಿಪ್ರಿಯ ರಾಷ್ಟ್ರವಾಗಿದೆ ಮತ್ತು ಯಾವಾಗಲೂ ಜಗತ್ತಿನಲ್ಲಿ ಸಕಾರಾತ್ಮಕತೆಯ ಬೆಳಕನ್ನು ಹರಡಿದೆ. ಆದರೆ ಯಾರಾದರೂ ರಾಷ್ಟದ ಶಾಂತಿಪ್ರಿಯತೆಯನ್ನೇ ನಮ್ಮ ದೌರ್ಬಲ್ಯವೆಂದು ನೋಡಿದರೆ, ನಾವು ಎಂತಹ ಸಮರ್ಥರು ಎಂಬುದನ್ನು ಅವರಿಗೆ ತೋರಿಸಿ ಕೊಟ್ಟಿದ್ದೀರಿ ಎಂದು ಮಾಜಿ ಪ್ರಧಾನಿಗಳು ಮೋದಿ ಅವರನ್ನು ಕೊಂಡಾಡಿದ್ದಾರೆ.

    ನಾವು ಎದುರಿಸುತ್ತಿರುವ ಸವಾಲುಗಳು ಖಂಡಿತವಾಗಿಯೂ ಇಲ್ಲಿಗೆ ಕೊನೆಗೊಳ್ಳದಿರಬಹುದು, ಆದರೆ ನಾವು ಒಂದು ರಾಷ್ಟ್ರವಾಗಿ ಒಗ್ಗಟ್ಟಿನಿಂದ ಇರುವುದರಲ್ಲಿ ಅಪಾರ ಸಮಾಧಾನವಿದೆ. ನಾವು ಒಟ್ಟಿಗೆ ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ ಹಾಗೂ ಒಂದು ರಾಷ್ಟ್ರವಾಗಿ ಮುನ್ನಡೆಯುತ್ತೇವೆ ಎಂದು ಮಾಜಿ ಪ್ರಧಾನಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

     

     

  • ಒತ್ತುವರಿ ತೆರವು ಮಾಡುವ ಮೂಲಕ ಸುಮಾರು 70 ಲಕ್ಷ ಮೌಲ್ಯದ ಜಾಗವನ್ನು ಸರ್ಕಾರದ ವಶಕ್ಕೆ ಪಡೆದ ಅಧಿಕಾರಿಗಳು

    ದೊಡ್ಡಬಳ್ಳಾಪುರ : ಸರ್ಕಾರಿ ಗೋಮಾಳ ಜಾಗವನ್ನ 5 ಮಂದಿ ಒತ್ತುವರಿ ಮಾಡಿದ್ರು, ಲೋಕಾಯುಕ್ತರ ಆದೇಶದ ಮೇರೆಗೆ ಕಾರ್ಯಾಚರಣೆ ನಡೆಸಿದ ಕಂದಾಯ ಇಲಾಖೆಯ ಅಧಿಕಾರಿಗಳು ಜೆಸಿಬಿ ಮೂಲಕ ತೆರವು ಕಾರ್ಯಾಚರಣೆ ನಡೆಸಿದ್ದಾರೆ, ಸುಮಾರು 70 ಲಕ್ಷ ಮೌಲ್ಯದ ಜಾಗವನ್ನು ಸರ್ಕಾರದ ವಶಕ್ಕೆ ಪಡೆದಿದ್ದಾರೆ.

    ದೊಡ್ಡಬಳ್ಳಾಪುರ ತಾಲೂಕು ಕಾರನಾಳ ಗ್ರಾಮದ ಸರ್ವೆ ನಂಬರ್ 49ರಲ್ಲಿ 1 ಎಕರೆ 10 ಗುಂಟೆ ಸರ್ಕಾರಿ ಗೋಮಾಳ ಜಾಗವನ್ನ ಸುತ್ತಮುತ್ತಲಿನ 5 ಮಂದಿ ಒತ್ತುವರಿ ಮಾಡಿದ್ದರು, ನಂಜಪ್ಪ, ಸಂಜೀವರಾಯಪ್ಪ, ನಾರಾಯಣಪ್ಪ , ರವಿ.ಕವಿತಾ ಒತ್ತುವರಿ ಮಾಡಿದ್ದರು ,ಒತ್ತುವರಿ ಮಾಡಿದ ಜಾಗದಲ್ಲಿ ಮನೆ ಮತ್ತು ತೆಂಗಿನ ಮರಗಳನ್ನ ಹಾಕಿಕೊಂಡಿದ್ದರು, ಒತ್ತುವರಿ ತೆರವು ಮಾಡುವಂತೆ ವೆಂಕಟೇಶಪ್ಪ ಲೋಕಾಯುಕ್ತರಿಗೆ ದೂರು ನೀಡಿದ್ದರು, ಲೋಕಾಯುಕ್ತರ ಆದೇಶದ ಮೇರೆಗೆ ಕಂದಾಯ ಇಲಾಖೆ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದರು.

     

    ಉಪ ತಹಶೀಲ್ದಾರ್ ವೆಂಕಟೇಶ್ ಮೂರ್ತಿ, ತೂಬಗೆರೆ ಹೋಬಳಿ ರಾಜಸ್ವ ಅಧಿಕಾರಿ ನರಸಿಂಹ ಮತ್ತು ಭೂಮಾಪನ ಇಲಾಖೆಯ ಸಿಬ್ಬಂದಿಗಳು ಒತ್ತುವರೆ ತೆರವು ಕಾರ್ಯದಲ್ಲಿ ಭಾಗಿಯಾಗಿದ್ದರು, ಒತ್ತುವರಿ ಜಾಗದಲ್ಲಿ ಕಟ್ಟಲಾಗಿದ್ದ ಮನೆಯನ್ನ ಜೆಸಿಬಿ ಮೂಲಕ ಕೆಡವಲಾಗಿದ್ದು, ಒತ್ತುವರಿ ಜಾಗವನ್ನ ಗುರುತಿಸಿ ಟ್ರಂಚ್ ತೊಡಿ ಗಡಿಯನ್ನ ಗುರುತಿಸಲಾಗಿದೆ, ಒತ್ತುವರಿದಾರರು ಸಹ ಕಾರ್ಯಾಚರಣೆಗೆ ಸಹಕರಿಸಿದ್ದಾರೆ, ನಿರ್ಮಿತಿ ಕೇಂದ್ರದಿಂದ ಕಾಂಪೌಂಡ್ ನಿರ್ಮಾಣ ಮಾಡಿ, ಮುಂದಿನ ದಿನಗಳಲ್ಲಿ ಒತ್ತುವರಿಯಾಗದಂತೆ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಉಪ ತಹಶೀಲ್ದಾರ್ ವೆಂಕಟೇಶ್ ಮೂರ್ತಿ ತಿಳಿಸಿದರು