Blog

  • ಗ್ರಾಮ ಪಂಚಾಯಿತಿ ವಿರುದ್ಧ ಬೈರಸಂದ್ರ ಪಾಳ್ಯದ ಗ್ರಾಮಸ್ಥರ ಧರಣಿ… ಏಕೆ?? ಸುದ್ದಿ ನೋಡಿ

    ದೊಡ್ಡಬಳ್ಳಾಪುರ: ಪಂಚಾಯಿತಿ ಅಧಿಕಾರಿಗಳು ಹಾಗೂ ಪಂಚಾಯಿತಿ ಅಧ್ಯಕ್ಷರು ಉದ್ದೇಶಪೂರ್ವಕವಾಗಿಯೇ ತಮ್ಮ ಮೇಲೆ ಇಲ್ಲಸಲ್ಲದ ಆಪಾದನೆಗಳನ್ನು ಮಾಡುತ್ತಾ ಏಕ ಪಕ್ಷಯವಾಗಿ ತಮ್ಮ ಮೇಲೆ ಆರೋಪಗಳನ್ನು ಮಾಡುತ್ತಿದ್ದಾರೆಂದು ಆರೋಪಿಸಿ ಬೈರಸಂದ್ರ ಪಾಳ್ಯದ ಗ್ರಾಮಸ್ಥರಾದ ಭಾರ್ಗವ್ ಗ್ರಾಮ ಪಂಚಾಯಿತಿ ಮುಂಭಾಗ ಪ್ರತಿಭಟನೆ ನೆಡೆಸಿದರು.

     

    ಏನಿದು ವಿಚಾರ….???

    ತಾಲೂಕಿನ ದೊಡ್ಡ ತುಮಕೂರು ಗ್ರಾಮ ಪಂಚಾಯಿತಿಗೆ ಹೊಂದಿಕೊಂಡಂತೆ ಬೈರಸಂದ್ರ ಪಾಳ್ಯ ಹಾಗೂ ಗೆಜ್ಜೆಗದಹಳ್ಳಿ ಎರಡು ಪ್ರಮುಖ ಕೆರೆಗಳಿದ್ದು ಕೆರೆಗಳ ಮಣ್ಣು ಊಳೆತ್ತುವ ವಿಚಾರದಲ್ಲಿ ಬಹಳಷ್ಟು ವಿವಾದಗಳು ಉದ್ಭವವಾಗಿದ್ದು ಅದಕ್ಕೆ ಸಂಬಂಧಿಸಿದಂತೆ ಸದ್ಯದ ಪರಿಸ್ಥಿತಿಯಲ್ಲಿ ಬೈರಸಂದ್ರ ಪಾಳ್ಯ ಕೆರೆಯಲ್ಲಿ ಮಣ್ಣು ಎತ್ತು ವಿಚಾರ ಪೊಲೀಸ್ ಠಾಣೆಯ ಮೆಟ್ಟಿಲೇರಿದೆ. ಮಣ್ಣು ಊಳೆತ್ತುವ ವಿಚಾರದಲ್ಲಿ ಬೈರಸಂದ್ರ ಪಾಳ್ಯದ ಗ್ರಾಮಸ್ಥರು ಗ್ರಾಮ ಪಂಚಾಯಿತಿಯಲ್ಲಿ ಅರ್ಜಿಯನ್ನು ಸಲ್ಲಿಸಿದ್ದು,ಆ ಸಂದರ್ಭದಲ್ಲಿ ಗ್ರಾಮ ಪಂಚಾಯತಿಯ ಅಧಿಕಾರಿಗಳು ಬೈರಸಂದ್ರ ಪಾಳ್ಯದ ಕೆರೆಯ ವ್ಯಾಪ್ತಿಯು ನಮಗೆ ಬರುವುದಿಲ್ಲವೆಂದು ಲಿಖಿತ ಮೂಲಕ ಉತ್ತರ ನೀಡಿರುತ್ತಾರೆ,ಆಗ ಬೈರಸಂದ್ರ ಪಾಳ್ಯದ ಗ್ರಾಮಸ್ಥರು ತಾವೇ ಕೆರೆಯ ಹೂಳೆತ್ತುವ ಸಲುವಾಗಿ ಕೆರೆಯ ಮಣ್ಣನ್ನು ಊರಿನ ಲೇಔಟ್ ಒಂದಕ್ಕೆ ಟ್ರ್ಯಾಕ್ಟರ್ ಮೂಲಕ ಸಾಗಿಸುವ ಕಾರ್ಯಕ್ಕೆ ಮುಂದಾಗಿದ್ದು,ಈ ಸಂಬಂಧ ಗ್ರಾಮ ಪಂಚಾಯತಿಯ ಅಧ್ಯಕ್ಷರು ಹಾಗೂ ಅಧಿಕಾರಿಗಳು ಮಣ್ಣು ಸಾಗಿಸುತ್ತಿರುವ ವಿಚಾರವಾಗಿ ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸುತ್ತಾರೆ.

     

    ಈ ಹಿನ್ನಲೆ ದೊಡ್ಡ ತುಮಕೂರು ಗ್ರಾಮ ಪಂಚಾಯತಿಯ ಮುಂಭಾಗ ಬೈರಸಂದ್ರ ಪಾಳ್ಯದ ಗ್ರಾಮಸ್ಥರು ಧರಣಿ ಕುಳಿತು ತಮಗೆ ಸೂಕ್ತ ನ್ಯಾಯ ಒದಗಿಸುವಂತೆ ಮನವಿ ಮಾಡಿದರೂ ಕೂಡ ಸ್ಥಳಕ್ಕೆ ದಾವಿಸದೇ ಪಂಚಾಯಿತಿ ಅಧಿಕಾರಿಗಳು ಹಾಗೂ ಪಂಚಾಯಿತಿ ಅಧ್ಯಕ್ಷರು ಯಾವುದೇ ರೀತಿಯ ಸ್ಪಂದನೆ ನೀಡುತ್ತಿಲ್ಲ ಎಂದು ಬೈರಸಂದ್ರ ಪಾಳ್ಯದ ನಿವಾಸಿ ಭಾರ್ಗವ್ ತಿಳಿಸಿದರು.

  • ಫೆ. 24 ರಿಂದ ಶುಶೂಷಾಧಿಕಾರಿಗಳ ಅನಿರ್ಧಿಷ್ಟಾವಧಿವರೆಗೆ ಆಹೋರಾತ್ರಿ ಧರಣಿ : ಹೋರಾಟ ಕುರಿತು ಕರ್ನಾಟಕ ರಾಜ್ಯ ಮಹಿಳಾ ಆಯೋಗಕ್ಕೆ ಮನವಿ ಸಲ್ಲಿಕೆ

    ಬೀದರ್ : ರಾಷ್ಟ್ರೀಯ ಆರೋಗ್ಯ ಅಭಿಯಾನ ಗುತ್ತಿಗೆ ಆಧಾರದಡಿಯಲ್ಲಿ ಸೇವೆಸಲ್ಲಿಸುತ್ತಿರುವ ಶುಶೂಷಾಧಿಕಾರಿಗಳು ತಮ್ಮ ಪ್ರಮುಖ ಬೇಡಿಕೆಗಳನ್ನು ಈಡೇರಿಸುವಂತೆ ರಾಜ್ಯ ಮಟ್ಟದಲ್ಲಿ ದಿನಾಂಕ: 24/02/2024 ರಂದು ಹಮ್ಮಿಕೊಂಡಿರುವ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಬೆಂಬಲ ನೀಡುವಂತೆ ಕೋರಿ ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರಾದ ಡಾ.ನಾಗಲಕ್ಷ್ಮೀ ಚೌಧರಿ ಅವರಿಗೆ ಬೀದರ್ ಜಿಲ್ಲೆಯ ಶುಶೂಷಾಧಿಕಾರಿಗಳು ಮನವಿ ಸಲ್ಲಿಸಿದರು.

     

    ಈ ಕುರಿತು ಶುಶೂಷಾಧಿಕಾರಿಗಳು ಮಾತನಾಡುತ್ತಾ ರಾಷ್ಟ್ರೀಯ ಆರೋಗ್ಯ ಅಭಿಯಾನದ ಶುಶೂಷಾಧಿಕಾರಿಗಳಾದ ನಾವು ಸುಮಾರು 15-20 ವರ್ಷಗಳಿಂದ ಗುತ್ತಿಗೆ ಆಧಾರದಲ್ಲಿ ಅತೀ ಕಡಿಮೆ ವೇತನದಲ್ಲಿ ಯಾವುದೇ ಸೌಲಭ್ಯಗಳಿಲ್ಲದೇ ಖಾಯಂ ನೌಕರರಷ್ಟೇ ಇಲಾಖೆಯು ವಹಿಸಿದ ಎಲ್ಲಾ ಕೆಲಸಗಳನ್ನು ಚಾಚೂ ತಪ್ಪದೇ ನಿರ್ವಹಿಸುತ್ತಿದ್ದೇವೆ.ಕೋವಿಡ್-19 ಸಂದರ್ಭದಲ್ಲೂ ಹೆಣ್ಣು ಮಕ್ಕಳೇ ಹೆಚ್ಚಾಗಿರುವ ನಾವು ನಮ್ಮ ಕುಟುಂಬವನ್ನು ಬಿಟ್ಟು ಜೀವದ ಹಂಗು ತೊರೆದು ಹಗಲಿರುಳೆನ್ನದೇ ಸಾರ್ವಜನಿಕರಿಗೆ ಪ್ರಾಮಾಣಿಕ ಸೇವೆ ನೀಡಿದ್ದೇವೆ.

    ಆದರೆ ಅಲ್ಪ ವೇತನದಲ್ಲಿ ಇನ್ನಿತರ ಯಾವುದೇ ಸೌಲಭ್ಯಗಳಿಲ್ಲದೇ ಕೌಟುಂಬಿಕ ಜೀವನ ನಿರ್ವಹಣೆ ಕಷ್ಟಕರವಾಗಿದ್ದು, ಈಗಾಗಲೇ ಹಲವಾರು ಬಾರಿ ನಮ್ಮ ಕುಂದುಕೊರತೆಗಳು ಹಾಗೂ ಬೇಡಿಕೆಗಳ ಬಗ್ಗೆ ಸರಕಾರಕ್ಕೆ ಮತ್ತು ಅಧಿಕಾರಿಗಳಿಗೆ ಮನವರಿಕೆ ಮಾಡಿ ಮನವಿ ಅಹವಾಲುಗಳನ್ನು ಸಲ್ಲಿಸಿದ್ದರೂ ಸಹ ಇಲ್ಲಿಯವರೆಗೆ ಯಾವುದೇ ಕ್ರಮ ಕೈಗೊಂಡಿರುವುದಿಲ್ಲ ಎಂದು ಶುಶೂಷಾಧಿಕಾರಿಗಳ ಸಮಸ್ಯೆ ಹಾಗೂ ಬೇಡಿಕೆಗಳನ್ನು ಅಧ್ಯಕ್ಷರಿಗೆ ಮನವರಿಕೆ ಮಾಡಿದರು.

     

    ಈ ಸಂದರ್ಭದಲ್ಲಿ ಬೀದರ್ ಜಿಲ್ಲೆಯ ಶುಶೂಷಾಧಿಕಾರಿಗಳಾದ ಅನಿತ ಸುನಿಲ್ ,ಎಲಿಜಬತ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

  • ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ವಿಶೇಷ ಯೋಜನೆ(ಎಸ್.ಸಿ.ಎಸ್.ಪಿ, ಟಿ.ಎಸ್.ಪಿ): ಫೆಬ್ರವರಿ ಅಂತ್ಯದೊಳಗೆ ಶೇ.100 ರಷ್ಟು ಪ್ರಗತಿ ಸಾಧಿಸಲು ಅಧಿಕಾರಿಗಳಿಗೆ ಡಿ.ಸಿ ಸೂಚನೆ

    ಬೆಂ ಗ್ರಾ.ಜಿಲ್ಲೆ, ಫೆ.12 : 2024-25 ನೇ ಸಾಲಿನಲ್ಲಿ ಎಸ್.ಸಿ.ಎಸ್.ಪಿ, ಟಿ.ಎಸ್.ಪಿ ಯೋಜನೆಯಡಿ ಇಲಾಖೆಗಳಿಗೆ ಬಿಡುಗಡೆ ಆಗಿರುವ ಅನುದಾನವನ್ನು ಫೆಬ್ರವರಿ ಮಾಹೆಯ ಅಂತ್ಯದೊಳಗೆ ವ್ಯಯಿಸುವ ಮೂಲಕ ಶೇಕಡ 100ರಷ್ಟು ಪ್ರಗತಿ ಸಾಧಿಸಲು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಎ.ಬಿ ಬಸವರಾಜು ಅವರು ಸೂಚಿಸಿದರು.

     

    ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ಇಂದು ನಡೆದ ಎಸ್.ಸಿ.ಪಿ-ಟಿ.ಎಸ್.ಪಿ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ ಸರ್ಕಾರದಿಂದ ಎಸ್.ಸಿ.ಎಸ್.ಪಿ, ಟಿ.ಎಸ್.ಪಿ ಯೋಜನೆಯಡಿ ಇಲಾಖೆಗಳಿಗೆ ಬಿಡುಗಡೆಯಾಗಿರುವ ಅನುದಾನವು ಸರಿಯಾಗಿ, ಸಮರ್ಪಕವಾಗಿ ಬಳಕೆಯಾಗಬೇಕು. ಕೆಲವು ಇಲಾಖೆಗಳು ಈಗಾಗಲೇ ಶೇಕಡ 100 ರಷ್ಟು ಪ್ರಗತಿ ಸಾಧಿಸಿದ್ದು, ಉಳಿದ ಇಲಾಖೆಗಳು ಫೆಬ್ರವರಿ ಅಂತ್ಯದೊಳಗೆ ಸಂಪೂರ್ಣ ಅನುದಾನ ಖರ್ಚು ಮಾಡಿ ಪ್ರಗತಿ ವರದಿ ನೀಡಬೇಕು ಎಂದರು.

     

    ಫಲಾನುಭವಿಗಳ ಆಯ್ಕೆ ಪಾರದರ್ಶಕವಾಗಿರಬೇಕು, ಅರ್ಹ ಫಲಾನುಭವಿಗಳನ್ನು ಗುರುತಿಸಿ ಅವಶ್ಯಕತೆ ಇರುವವರಿಗೆ ಸೌಲಭ್ಯ ಕಲ್ಪಿಸಿ. ಪ.ಜಾತಿ, ಪ.ಪಂಗಡಗಳು ವಾಸಿಸುವ ಗ್ರಾಮಗಳಲ್ಲಿ ಹದಗೆಟ್ಟ ರಸ್ತೆಗಳನ್ನು ಗುರುತಿಸಿ ರಸ್ತೆಗಳನ್ನು ನಿರ್ಮಿಸಿ. ಕಳೆದ ಸಾಲಿನಲ್ಲಿ ಸೌಲಭ್ಯ ಪಡೆದಿರುವ ಫಲಾನುಭವಿಗಳ ಈಗಿನ ಆರ್ಥಿಕ ಸ್ಥಿತಿಗತಿ, ಅನುದಾನ ಸದ್ಬಳಕೆ ಆಗಿದೆಯೇ? ಇಲ್ಲವೇ? ಎಂಬುದನ್ನು ಪರಿಶೀಲಿಸಿ ವರದಿ ನೀಡಿ ಎಂದರು.

     

    ಸಭೆಯಲ್ಲಿ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಟಿ.ಎಲ್.ಎಸ್ ಪ್ರೇಮ, ಜಿ.ಪಂ ಮುಖ್ಯ ಯೋಜನಾಧಿಕಾರಿ ರಾಮಕೃಷ್ಣಯ್ಯ, ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಕಲಾವತಿ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಸುನೀಲ್ ಕುಮಾರ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಉಪನಿರ್ದೇಶಕರಾದ ಅಶೋಕ್ ಕುಮಾರ್, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ರಮೇಶ್ ಸೇರಿದಂತೆ ಜಿಲ್ಲಾಮಟ್ಟದ ಅಧಿಕಾರಿಗಳು, ಸಿಬ್ಬಂದಿ ಉಪಸ್ಥಿತರಿದ್ದರು.

  • ನಾಳೆ(ಫೆ.13)ಪ್ರಸಿದ್ಧ ಶ್ರೀ ಪ್ರಸನ್ನ ವೆಂಕಟರಮಣಸ್ವಾಮಿ ಬ್ರಹ್ಮರಥೋತ್ಸವ

    ದೊಡ್ಡಬಳ್ಳಾಪುರ : ನಗರದ ತೇರಿನಬೀದಿಯ ಶ್ರೀ ಪ್ರಸನ್ನ ವೆಂಕಟರಮಣಸ್ವಾಮಿ ಬ್ರಹ್ಮರಥೋತ್ಸವವು 13-02-2025ನೇ ಗುರುವಾರ ಮಧ್ಯಾಹ್ನ 12.00 ಗಂಟೆಗೆ ನೆಡೆಯಲಿದೆ.

     

    ಹೌದು ಶ್ರೀ ಕ್ರೋಧಿನಾಮ ಸಂವತ್ಸರದ ಮಾಘ ಮಾಸದ ಬಹುಳ ಪ್ರತಿಪತ್ ಮಖಾ ನಕ್ಷತ್ರದ ತಾ॥ 13-02-2025ನೇ ಗುರುವಾರ ಮಧ್ಯಾಹ್ನ 12.00 ಗಂಟೆಯ ಮೇಲೆ ಸಲ್ಲುವ ಶುಭ ಅಭಿಜನ್ ಮುಹೂರ್ತದಲ್ಲಿ ಶ್ರೀಯವರ “ಬ್ರಹ್ಮರಥೋತ್ಸವೆ” ವು ಬಹಳ ವಿಜೃಂಭಣೆಯಿಂದ ನಡೆಯಲಿದೆ ಎಂದು ದೇವಾಲಯದ ಮೂಲಗಳು ತಿಳಿಸಿವೆ.

     

    ತಾ।। 13-02-2025ನೇ ಗುರುವಾರದ ಬ್ರಹ್ಮರಥೋತ್ಸವ ಮತ್ತು ತಾ।। 14-02-2025ನೇ ಶುಕ್ರವಾರ ನೆಡೆಯುವ ಪರಿಷೆಗೆ ತಾಲ್ಲೂಕಿನ ಭಕ್ತ ಮಹಾಶಯರೆಲ್ಲರೂ ಕುಟುಂಬ ಸಮೇತರಾಗಿ ಭಾಗವಹಿಸಿ, ತೀರ್ಥ ಪ್ರಸಾದಗಳನ್ನು ಸ್ವೀಕರಿಸಿ ಶ್ರೀ ಯವರ ಕೃಪಾಕಟಾಕ್ಷಕ್ಕೆ ಪಾತ್ರರಾಗಬೇಕಾಗಿ ಕೋರಲಾಗಿದೆ.

     

  • ಕೆಸ್ತೂರು ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷರಾಗಿ ಹುಸ್ಕೂರು ಬಿ.ಮಂಜುನಾಥ್ ಅವಿರೋಧ ಆಯ್ಕೆ

    ದೊಡ್ಡಬಳ್ಳಾಪುರ : ಕೆಸ್ತೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಹುಸ್ಕೂರು ಬಿ.ಮಂಜುನಾಥ್ ಅವಿರೋಧವಾಗಿಯಾಗಿದ್ದಾರೆ.

    ಕೆಸ್ತೂರು ಗ್ರಾಮ ಪಂಚಾಯಿತಿ ಪ್ರಭಾರ ಅಧ್ಯಕ್ಷರಾದ ಆಂಜಿನಮ್ಮ ರಾಜೀನಾಮೆ ನೀಡಿದ್ದರು, ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಫೆಬ್ರವರಿ 10ರ ಸೋಮವಾರ ಚುನಾವಣೆ ನಡೆಸಲಾಗಿತ್ತು, ಅಧ್ಯಕ್ಷ ಸ್ಥಾನಕ್ಕೆ ಹುಸ್ಕೂರ್ ಮಂಜುನಾಥ್ ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ ನೂತನ ಅಧ್ಯಕ್ಷರಾಗಿ ಬಿ.ಮಂಜುನಾಥ್ ಅವಿರೋಧವಾಗಿ ಚುನಾಯಿತರಾಗಿದ್ದಾರೆ,

     

    ನೂತನ ಅಧ್ಯಕ್ಷರಿಗೆ ಹೂಮಾಲೆ ಹಾಕುವ ಮೂಲಕ ಮುಖಂಡರು ಸೇರಿದಂತೆ ಗ್ರಾಮಸ್ಥರು ಅಭಿನಂದಿಸಿದರು 

     

    ಇದೇ ವೇಳೆ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಅಧ್ಯಕ್ಷನಾಗಲು ಅವಕಾಶ ನೀಡಿದ ಶಾಸಕರಾದ ಧೀರಜ್ ಮುನಿರಾಜು, ಜೆಡಿಎಸ್ ಜಿಲ್ಲಾಧ್ಯಕ್ಷರಾದ ಬಿ.ಮುನೇಗೌಡ, ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಹುಸ್ಕೂರು ಆನಂದ್, ಸದಸ್ಯರು ಗ್ರಾಮಸ್ಥರಿಗೆ ನಾವು ಕೃತಜ್ಞತೆ ಸಲ್ಲಿಸುವೆ, ಎಲ್ಲರ ಸಹಕಾರದೊಂದಿಗೆ ಗ್ರಾಮದ ಅಭಿವೃದ್ಧಿಗಾಗಿ ಕೆಲಸ ಮಾಡುವುದ್ದಾಗಿ ಹೇಳಿದರು

     

    ಗ್ರಾಮಗಳಲ್ಲಿ ಮೂಲಭೂತ ಸೌಕರ್ಯಗಳಾದ ನೀರು,ಚರಂಡಿ,ರಸ್ತೆ ಸೌಲಭ್ಯ ಮತ್ತು ಗ್ರಾಮಗಳಲ್ಲಿ ಸ್ವಚ್ಛತೆಯನ್ನು ಕಾಪಾಡುವ ಕೆಲಸ ಮಾಡಲಾಗುವುದು, ಇನ್ನೊಂದು ತಿಂಗಳಲ್ಲಿ ಪ್ರತಿಯೊಂದು ಗ್ರಾಮಕ್ಕೂ ಹೈಮಾಸ್ಟ್ ದೀಪಗಳ ಹಾಕುವುದ್ದಾಗಿ ಹೇಳಿದರು

     

    ಈ ವೇಳೆ ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಹುಸ್ಕೂರು ಆನಂದ್, ಉಪಾಧ್ಯಕ್ಷರಾದ ಅಂಜಿನಮ್ಮ, ಸದಸ್ಯರಾದ ಮುರುಳಿ, ಗಾಯಿತ್ರಿ, ಅಶ್ವಥ್ ನಾರಾಯಣ್, ಮುನಿರಾಜು, ರಾಜಮ್ಮ, ಕೃಷ್ಣಪ್ಪ, ಶೃತಿ, ಲಕ್ಷಮ್ಮ, ಮಧುಮಾಲತಿ, ರಾಜಣ್ಣ, ವಿಜಿಕುಮಾರ್,ಯಾಸ್ಮಿನ್ ತಾಜ್, ಪಂಕಜ, ಶ್ರವಣೂರು ರಾಜಮ್ಮ ಮುಖಂಡರಾದ ಅಶ್ವಥ್ ನಾರಾಯಣ್, ಪುಟ್ಟಬಸವರಾಜು, ವಿಜಯಕುಮಾರ್, ಕುಮಾರ್, ಲಕ್ಷ್ಮಿನಾರಾಯಣ್ ಹಾಜರಿದ್ದರು.

     

  • ವಿವಿಧ ಬೇಡಿಕೆಗಳ ಈಡೆರಿಕೆಗಾಗಿ ಆಗ್ರಹಿಸಿ ಗ್ರಾಮ ಆಡಳಿತ ಅಧಿಕಾರಿಗಳ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರವೇ ಬೆಂಬಲ

    ದೊಡ್ಡಬಳ್ಳಾಪುರ : ವಿವಿಧ ಬೇಡಿಕೆಗಳ ಈಡೆರಿಕೆಗಾಗಿ ಆಗ್ರಹಿಸಿ ಗ್ರಾಮ ಆಡಳಿತ ಅಧಿಕಾರಿಗಳು ಅನಿರ್ದಿಷ್ಟಾವಧಿ ಮುಷ್ಕರವನ್ನು ತಹಶೀಲ್ದಾರ್ ಕಛೇರಿ ಮುಂದೆ ನಡೆಸುತ್ತಿದ್ದು , ಸರ್ಕಾರಿ ಮುಷ್ಕರನಿರತ ನೌಕರರ ಬೇಡಿಕೆಗಳನ್ನು ಅದಷ್ಟು ಬೇಗೆ ಈಡೆರಿಸುವಂತೆ ಕರವೇ ಜಿಲ್ಲಾಧ್ಯಕ್ಷರಾದ ಪುರುಷೋತ್ತಮ್ ಗೌಡ ಸರ್ಕಾರವನ್ನ ಒತ್ತಾಯಿಸಿದ್ದಾರೆ

     

    ದೊಡ್ಡಬಳ್ಳಾಪುರ ತಹಶೀಲ್ದಾರ್ ಕಚೇರಿ ಮುಂದೆ 2ನೇ ದಿನ ಮುಷ್ಕರ ನಡೆಯುತ್ತಿದ್ದು, ಗ್ರಾಮ ಆಡಳಿತ ಅಧಿಕಾರಿಗಳ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರವೇ ನಾರಾಯಣಗೌಡ ಬಣ ಬೆಂಬಲ ಸೂಚಿಸಿದ್ದು , ಸದಾ ಕನ್ನಡ ನಾಡು ನುಡಿ ಬಗ್ಗೆ ಹೋರಾಟ ಮಾಡುತ್ತಿರುವ ಸಂಘಟನೆ ಸರ್ಕಾರಿ ನೌಕರರ ನ್ಯಾಯುಯುತ ಹೋರಾಟಕ್ಕೂ ಬೆಂಬಲ ನಿಲ್ಲುವುದು ನಮ್ಮ ಕರ್ತವ್ಯವಾಗಿದೆ ಎಂದು ಜಿಲ್ಲಾಧ್ಯಕ್ಷರಾದ ಪುರುಷೋತ್ತಮ್ ಗೌಡ ಹೇಳಿದರು.

     

    ಆಡಳಿತ ಯಂತ್ರದಲ್ಲಿ ಗ್ರಾಮ ಆಡಳಿತ ಅಧಿಕಾರಿಗಳ ಪಾತ್ರ ಬಹಳ ಮುಖ್ಯವಾಗಿದೆ, ಆದರೆ ತಮ್ಮ ಬೇಡಿಕೆಗಳ ಈಡೆರಿಕೆಗಾಗಿ ಮುಷ್ಕರಕ್ಕೆ ಕುರಿತುಕೊಳ್ಳುವ ಪರಿಸ್ಥಿತಿ ಗ್ರಾಮ ಆಡಳಿತ ಅಧಿಕಾರಿಗಳಿಗೆ ಎದುರಾಗಿರುವುದು ಬಹಳ ನೋವಿನ ವಿಚಾರವಾಗಿದೆ ಅವರ ಬೇಡಿಕೆಗಳು ನ್ಯಾಯಯುತವಾಗಿದೆ, 7ನೇ ವೇತನ ನೀಡುವುದು, ವಿಮಾ ಸೌಲಭ್ಯ , ಸುಸಜ್ಜಿತವಾದ ಕಟ್ಟಡ, ಇವು ಮೂಲಭೂತ ಸೌಲಭ್ಯಗಳಾಗಿದ್ದು ಇವುಗಳನ್ನು ಸರ್ಕಾರ ನೀಡು ಬೇಕು, ಗ್ರಾಮ ಆಡಳಿತ ಅಧಿಕಾರಿಗಳ ಬೇಡಿಕೆ ಈಡೇರದಿದ್ದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಅವರ ಪರವಾಗಿ ನಿಲ್ಲುವುದು, ಹಾಗೆಯೇ ಅಧಿಕಾರಿಗಳು ಭ್ರಷ್ಟಚಾರದಲ್ಲಿ ತೊಡಗಿದ್ದಾರೆ ನಮ್ಮ ಸಂಘಟನೆ ಭ್ರಷ್ಟಚಾರವನ್ನ ಬಲವಾಗಿ ಖಂಡಿಸುತ್ತದೆ ಎಂದಿದ್ದಾರೆ.

  • ಫೆ. 24 ರಿಂದ ಅನಿರ್ಧಿಷ್ಟಾವಧಿವರೆಗೆ ಆಹೋರಾತ್ರಿ ಧರಣಿ : ಮೂಲಭೂತ ಹಕ್ಕುಗಳನ್ನು ಪಡೆಯಲು ಹೋರಾಟಕ್ಕೆ ಮುಂದಾದ ಶುಕ್ರೂಷಾಧಿಕಾರಿಗಳು

    ಕರ್ನಾಟಕ : ನಮ್ಮ ಕುಂದುಕೊರತೆಗಳು ಹಾಗೂ ಬೇಡಿಕೆಗಳ ಬಗ್ಗೆ ಸರ್ಕಾರಕ್ಕೆ ಮತ್ತು ಅಧಿಕಾರಿಗಳಿಗೆ ಈಗಾಗಲೇ ಹಲವಾರು ಬಾರಿ ಮನವಿಗಳನ್ನು, ಅಹವಾಲುಗಳನ್ನು ಕೊಟ್ಟಿದ್ದರೂ ಅವರು ಇಲ್ಲಿಯವರೆಗೂ ಯಾವುದೇ ಕ್ರಮ ಕೈಗೊಂಡಿರುವುದಿಲ್ಲ ಆದ ಕಾರಣ ಫೆ. 24 ರಿಂದ ಅನಿರ್ಧಿಷ್ಟಾವಧಿವರೆಗೆ ಆಹೋರಾತ್ರಿ ಧರಣಿಗೆ ಕರೆ ನೀಡಲಾಗಿದೆ ಎಂದು ಕರ್ನಾಟಕ ರಾಜ್ಯ ಗುತ್ತಿಗೆ ಶುಕ್ರೂಷಾಧಿಕಾರಿಗಳ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾದ ಪಿ. ಎನ್. ರಾಧಾ ಸುರೇಶ್ ತಿಳಿಸಿದ್ದಾರೆ.

     

    ಈ ಕುರಿತು ಮಾತನಾಡಿದ ಅವರು ನಾವು ಸುಮಾರು 15-20 ವರ್ಷಗಳಿಂದ ಗುತ್ತಿಗೆ ಆಧಾರದಲ್ಲಿ ಅತೀ ಕಡಿಮೆ ವೇತನದಲ್ಲಿ ಯಾವುದೇ ಸೌಲಭ್ಯಗಳಿಲ್ಲದೇ ಖಾಯಂ ನೌಕರರಷ್ಟೇ ಇಲಾಖೆಯು ವಹಿಸಿದ ಎಲ್ಲಾ ಕೆಲಸಗಳನ್ನು ಚಾಚೂ ತಪ್ಪದೇ ನಿರ್ವಹಿಸುತ್ತಿದ್ದೇವೆ,”ಕೋವಿಡ್-19” ಸಂದರ್ಭದಲ್ಲೂ ಜೀವದ ಹಂಗು ತೊರೆದು ಸಾರ್ವಜನಿಕರಿಗೆ ಸೇವೆ ನೀಡಿದ್ದೇವೆ ಆದರೆ ನಮ್ಮ ಕುಂದು ಕೊರತೆಗಳನ್ನು ಈಡೇರಿಸುವಲ್ಲಿ ಸರ್ಕಾರ ವಿಫಲವಾಗಿದೆ, ಈ ನಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ “ಅನಿರ್ದೀಷ್ಟಾವದಿವರೆಗೆ ಆಹೋರಾತ್ರಿ ಧರಣಿಗೆ” ಕರೆ ನೀಡಿದ್ದು ಸನ್ಮಾನ್ಯ ರಾಜ್ಯಪಾಲರಿಗೆ “ಮುಷ್ಕರದ ಮುಂಗಡ ನೋಟಿಸು” ನೀಡಿದ್ದೇವೆ ಎಂದರು.

     

     

    ಪ್ರಮುಖ ಬೇಡಿಕೆಗಳೇನು…??

    1. ಗುತ್ತಿಗೆ ಶುಶೂಷಾಧಿಕಾರಿಗಳ “ಸೇವೆ ಖಾಯಂ” ಮಾಡಬೇಕು.

    2. ಸುಪ್ರೀಂ ಕೋರ್ಟ್‌ ಆದೇಶದಂತೆ “ಸಮಾನ ಕೆಲಸಕ್ಕೆ ಸಮಾನ ವೇತನ” ನಿಗಧಿ ಪಡಿಸಬೇಕು.

    ಕನಿಷ್ಠಪಕ್ಷ :- ಖಾಯಂ ಮಾಡುವವರೆಗೆ “ವೈಧ್ಯಕೀಯ ಶಿಕ್ಷಣ ಇಲಾಖೆಯಲ್ಲಿ” ಗುತ್ತಿಗೆ ಶುಶೂಷಾಧಿಕಾರಿಗಳಿಗೆ ವೇತನ ಕೊಟ್ಟಂತೆ ನಮಗೂ ಅದೇ ರೀತಿ ಕೊಡಬೇಕು.

    3. ಮುಂಬರುವ “ವಿಶೇಷ ನೇರ ನೇಮಕಾತಿಯಲ್ಲಿ ಜೇಷ್ಠತೆಯ ಆಧಾರದ” ಮೇಲೆ ಕೃಪಾಂಕ ಮತ್ತು ವಯೋಮತಿ ಸಡಿಲಿಕೆ ನೀಡಬೇಕು.

    ಈಗಾಗಲೇ ನಮ್ಮ ಇಲಾಖೆಯ ಗುತ್ತಿಗೆ ವೈದ್ಯಾಧಿಕಾರಿಗಳಿಗೆ “30 ಕೃಪಾಂಕ ಕೊಟ್ಟಂತೆ, ನಮಿಗೂ 1 ವರ್ಷದ ಗುತ್ತಿಗೆ ಸೇವೆಗೆ 3 ಕೃಪಾಂಕದಂತೆ ಗರಿಷ್ಠ 30 ಕೃಪಾಂಕ ನೀಡಬೇಕು.

    [ 8 ವರ್ಷಗಳಿಂದ ನೇಮಕಾತಿ ಆಗಿರುವುದಿಲ್ಲ ].

    4. “ಜಿಲ್ಲೆ ಯಿಂದ ಜಿಲ್ಲೆಗೆ ವರ್ಗಾವಣೆ ನೀಡಬೇಕು” ಇಲ್ಲಿಯವರೆಗೂ 2 ವರ್ಷಗಳಿಂದ ಜಿಲ್ಲೆಯಿಂದ ಜಿಲ್ಲೆಗೆ ವರ್ಗಾವಣೆ ಕೊಡಲು ಹಲವಾರು ಸಭೆಗಳು [EC Meeting] ಗಳನ್ನು ಮಾಡಿದ್ದಾರೆ. Policy ಮಾಡಿ ವರ್ಗಾವಣೆಗೆ ಅವಕಾಶ ಕಲ್ಪಿಸಬೇಕು.

    5.ಶುಕ್ರೂಷಾಧಿಕಾರಿ ತರಬೇತಿ ಪಡೆದು “PHCO [2 ANM] ಎದುರು ಹುದ್ದೆಯಲ್ಲಿ” ಸೇವೆ ಮಾಡಿರುವ ಶುಶ್ರುಷಾಧಿಕಾರಿಗಳ ಆ ಸೇವೆಯನ್ನು ನೇಮಕಾತಿಯಲ್ಲಿ ಪರಿಗಣಿಸಬೇಕು.[ಈಗಾಗಲೇ ಆದೇಶ ಹೊರಡಿಸಿದ್ದಾರೆ ಆದರೆ ಜಾರಿಗೆ ಆಗಿಲ್ಲ]

     

    ನಾವು ಸರ್ಕಾರಕ್ಕೆ ಹಾಗೂ ಸಾಮಾನ್ಯ ಜನರಿಗೆ ಸೇವೆ ಮಾಡುವಲ್ಲಿ ತೊಂದರೆ ಕೊಡಲು ಇಚ್ಚಿಸುವುದಿಲ್ಲ. ಆದರೆ ನಮ್ಮನ್ನ ಎಲ್ಲಾ ಸೌಲಭ್ಯಗಳಿಂದಲೂ ಕಡೆಗಣಿಸಿರುವುದರಿಂದ ನಮ್ಮ ಮೂಲಭೂತ ಹಕ್ಕುಗಳನ್ನು ಪಡೆಯಲು ನಾವು ಈ ಮುಷ್ಕರವನ್ನು ಮಾಡುವುದು ಅನಿವಾರ್ಯವಾಗಿದೆ ಎಂದು ತಿಳಿಸಿದ್ದಾರೆ.

     

     

     

  • ಇರುವೆ ಕಾಟ ಹೆಚ್ಚಾಗಿದೆ ಎಂಬ ಕಾರಣಕ್ಕೆ ಬೃಹತ್ ಮರಗಳನ್ನು ಕಡಿಸಿದ ತಾಲ್ಲೂಕು ಪಂಚಾಯತಿ

    ದೊಡ್ಡಬಳ್ಳಾಪುರ : ತಾಲ್ಲೂಕು ಪಂಚಾಯತಿ ಆವರಣದಲ್ಲಿ ಸೊಗಸಾಗಿ ಬೆಳದಿದ್ದ ಅಶೋಕ ಮರದ ದಿಮ್ಮಿಗಳನ್ನು ಬಿಟ್ಟು ದೊಡ್ಡ ದೊಡ್ಡ ರೆಂಬೆ-ಕೊಂಬೆಗಳನ್ನೂ ಸೇರಿದಂತೆ ಮರದಲ್ಲಿ ಒಂದು ಎಲೆಯನ್ನು ಬಿಡದೆ ಕಡಿದು ಹಾಕಲಾಗಿದೆ.

    ಇರುವೆ ಕಾಟ ಹೆಚ್ಚಾಗಿದೆ ಎಂಬ ಕಾರಣಕ್ಕೆ ಸರ್ಕಾರಿ ಕಚೇರಿಯ ಆವರಣದಲ್ಲಿ ಬೃಹತ್ ಮರಗಳನ್ನು ಕಡಿಸಿರುವ ಘಟನೆ ನಡೆದಿದೆ ಎರಡನೇ ಶನಿವಾರದ ರಜಾ ದಿನವಾದ ನಿನ್ನೆ ಮರಗಳನ್ನು ಕಡಿದಿದ್ದು ಇಂದು ಬೆಳಿಗ್ಗೆ ಕಡಿದ ಮರಗಳನ್ನು ಟ್ರಾಕ್ಟರ್‌ಗೆ ತುಂಬಿ ಸಾಗಿಸಲಾಗಿದೆ.

    ಈ ಬಗ್ಗೆ ಪ್ರತಿಕ್ರಿಯೆ ನೀಡಿದ ತಾಲ್ಲೂಕು ಪಂಚಾಯತಿ ಕಾರ್ಯನಿರ್ವಹಣ ಅಧಿಕಾರಿ ಮುನಿರಾಜು ಅವರ, ಕೆಂಪು ಇರುವೆಗಳ ಕಾಟ ಹೆಚ್ಚಾಗಿತ್ತು, ಬೃಹತ್ತಾಗಿ ಬೆಳೆದು ನಿಂತಿದ್ದ ಮರಗಳು ಪಕ್ಕದಲ್ಲಿನ ಕಟ್ಟಡಕ್ಕೂ ತೊಂದರೆ ಉಂಟು ಮಾಡುತ್ತಿದ್ದವು, ಇರುವೆಗಳಿಂದ ಸಿಬ್ಬಂದಿ ಸೇರಿದಂತೆ ಸಾರ್ವಜನಿಕರಿಗೂ ತೊಂದರೆಯಾಗುತ್ತಿತ್ತು, ಹಾಗಾಗಿ ಮರದ ಕೊಂಬೆಗಳನ್ನು ಕತ್ತರಿಸಲಾಗಿದೆ. ಅದು ಮತ್ತೆ ಬೆಳೆಯುತ್ತದೆ ಎಂದರು.

    ಇನ್ನೂ ಕರ್ನಾಟಕ ರಕ್ಷಣಾ ವೇದಿಕೆ ಕನ್ನಡಿಗರ ಬಣದ ರಾಜ್ಯಾಧ್ಯಕ್ಷ ಬಿ.ಎಸ್.ಚಂದ್ರಶೇಖರ್ ಮಾತನಾಡಿ ಬೇಸಿಗೆ ಕಾಲ ಸಮೀಪಿಸುತ್ತಿರುವ ಸಂದರ್ಭದಲ್ಲಿ ಮರಗಳ ಮಾರಣ ಹೋಮ ಮಾಡುವುದು ತರವಲ್ಲ, ಮರ ಕಡಿಯಲು ಅರಣ್ಯ ಇಲಾಖೆ ವತಿಯಿಂದ ಒಪ್ಪಿಗೆ ಪಡೆದಿದ್ದಾರಾ.. ಏನೊ ಗೊತ್ತಿಲ್ಲ. ಹಾಗೆ ನೋಡಿದರೆ ಇರುವೆ ಕಾಟಕ್ಕೆ ನಗರದಲ್ಲಿರುವ ಉದ್ಯಾನವನಗಳ ಮರಗಳನ್ನೂ ಕಡಿಯಬೇಕಾಗುತ್ತೆ, ಇರುವೆಗಳನ್ನು ತಡೆಗಟ್ಟಲು ಬೇರೆ ಮಾರ್ಗ ಇದೆ. ಸಾರ್ವಜನಿಕರಿಗೆ ಬುದ್ಧಿ ಹೇಳಬೇಕಿದ್ದ ಸರ್ಕಾರಿ ಅಧಿಕಾರಿಗಳು ಈ ರೀತಿ ಪರಿಸರ ನಾಶ ಮಾಡಲು ಮುಂದಾಗಿರುವುದು ಅಕ್ಷಮ್ಯ ಎಂದರು.

     

    ಇರುವೆ ಕಾಟ ಎಂದು ತಾಲ್ಲೂಕು ಪಂಚಾಯತಿ ಆವರಣದಲ್ಲಿ ಮರಗಳನ್ನು ಕಟಾವು ಮಾಡಿರುವ ಘಟನೆ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

  • ದೊಡ್ಡಬೆಳವಂಗಲ : ನಿರಾಶ್ರಿತರಿಗೆ ಹಕ್ಕು ಪತ್ರನೀಡಿದ್ದ ನಿವೇಶನದ ಸ್ಥಳದಲ್ಲಿ ಅಕ್ರಮ ಮನೆ ನಿರ್ಮಾಣ

    ದೊಡ್ಡಬಳ್ಳಾಪುರ: ತಾಲ್ಲೂಕಿನ ದೊಡ್ಡಬೆಳವಂಗಲ ಗ್ರಾಮ ಪಂಚಾಯಿತಿ ಬಿಲ್ ಕಲೆಕ್ಟರ್ ಪ್ರಭಾವತಿ ಎನ್ನುವವರು ಸರಸ್ವತಮ್ಮ ಎನ್ನುವವರಿಗೆ ಸರ್ಕಾರ ನಿರಾಶ್ರಿತರ ಯೋಜನೆಯಡಿ ಹಂಚಿಕೆ ಮಾಡಿದ್ದ ನಿವೇಶನವನ್ನು ಕಬಳಿಸುವ ಹುನ್ನಾರ ನಡೆಸಿ ಅಕ್ರಮ ಮನೆ ನಿರ್ಮಾಣ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

    ಬಿಲ್ ಕಲೆಕ್ಟರ್ ಪ್ರಭಾವತಿ ಹಾಗೂ ಆಕೆಯ ಪತಿ ನಂಜಪ್ಪ ಎನ್ನುವವರು ಸರಸ್ವತಮ್ಮ ಎನ್ನುವವರಿಗೆ ಸೇರಿದ ನಿವೇಶನದಲ್ಲಿ ಅಕ್ರಮವಾಗಿ ಮನೆ ನಿರ್ಮಾಣಮಾಡುತ್ತಿದ್ದಾರೆ ಎಂದು ಆರೋಪಿಸಿ ಸರಸ್ವತಮ್ಮ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಹಾಗೂ ದೊಡ್ಡಬೆಳವಂಗಲ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ಬಿಲ್ ಕಲೆಕ್ಟರ್ ಪ್ರಭಾವತಿ ವಿರುದ್ಧ ದೂರು ನೀಡಿದ್ದು.

     

    ಸರ್ಕಾರ ಹಂಚಿಕೆ ಮಾಡಿದ್ದ ನಿವೇಶನಕ್ಕೆ ಸಂಬಂದಿಸಿದಂತೆ ದೊಡ್ಡಬೆಳವಂಗಲ ಗ್ರಾಮ ಪಂಚಾಯಿತಿಯಲ್ಲಿ ಸರಸ್ವತಮ್ಮ ಹೆಸರಲ್ಲಿ ಖಾತೆ ಇದ್ದು 2021 ರವರೆಗೆ ಕಂದಾಯವನ್ನು ಕಟ್ಟಿಸಿ ಕೊಂಡಿದ್ದ ಬಿಲ್ ಕಲೆಕ್ಟರ್ ಪ್ರಭಾವತಿ ,ತಮ್ಮ ವಯಕ್ತಿಕ ಪ್ರಭಾವದಿಂದ ಅದೇ ಜಾಗಕ್ಕೆ ಅತೀಕ್ರಮ ಪ್ರವೇಶ ಮಾಡಿ ನಕಲಿ ದಾಖಲೆ ಸೃಷ್ಟಿಸಿ ನಮ್ಮ ಜಾಗದಲ್ಲಿ ಮನೆ ನಿರ್ಮಾಣ ಮಾಡುತ್ತಿದ್ದಾರೆ ಎಂದು ಆರೋಪಿದ್ದಾರೆ ಹಾಗೂ ಸೂಕ್ತ ನ್ಯಾಯ ಕೊಡಿಸುವಂತೆ ದೊಡ್ಡಬೆಳವಂಗಲ ಪೊಲೀಸ್ ಠಾಣೆಗೆ ಬಿಲ್ ಕಲೆಕ್ಟರ್ ಪ್ರಭಾವತಿ ವಿರುದ್ಧ ದೂರು ನೀಡಿದ್ದಾರೆ.

    ಇನ್ನೂ ಈ ಬಗ್ಗೆ ಪರ ವಿರೋಧದ ಚೆರ್ಚೆಗಳು ಜೋರಾಗಿದ್ದು ಗ್ರಾಮ ಪಂಚಾಯತಿ ಸರ್ಕಾರಿ ನೌಕರರು ಈಗಾದರೆ ಬಡವರ ನಿವೇಶನ ಉಳಿಯುತ್ತಾ ಎನ್ನುವ ಮಾತುಗಳು ಕೇಳಿ ಬಂದಿದ್ದು.ಗ್ರಾಮ ಪಂಚಾಯತಿಯಲ್ಲಿ ಖಾತೆ ಇರುವ ನಿವೇಶನದಲ್ಲಿ ಅಲ್ಲಿನ ಬಿಲ್ ಕಲೆಕ್ಟರ್ ಅಕ್ರಮವಾಗಿ ಮನೆ ನಿರ್ಮಾಣ ಕುರಿತು ದೊಡ್ಡಬೆಳವಂಗಲ ಗ್ರಾಮ ಪಂಚಾಯತಿ ಅಧಿಕಾರಿಗಳು ಸುಮ್ಮನೆ ಕುಳಿತಿರುವುದೇಕೆ ಎನ್ನುವ ಪ್ರೆಶ್ನೆಯೂ ಸಹ ಇಲ್ಲಿ ಉದ್ಭವವಾಗುತ್ತದೆ .ಬಿಲ್ ಕಲೆಕ್ಟರ್ ಪ್ರಭಾವತಿ ಸಾಕ್ಷಿ ನಾಶ ಮಾಡುವ ಸಂಭವವಿರುವುದರಿಂದ ಕೂಡಲೇ ಬಿಲ್ ಕಲೆಕ್ಟರ್ ಪ್ರಭಾವತಿ ವಿರುದ್ಧ ಕಾನೂನು ಕ್ರಮ ತೆಗೆದುಕೊಂಡು ಅಮಾನತ್ತು ಮಾಡುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.

  • Doddaballapura : ದಿವಂಗತ ಅಪ್ಪಯ್ಯಣ್ಣ ನಿವಾಸಕ್ಕೆ ಸಚಿವ ಕೆ.ಎಚ್.ಮುನಿಯಪ್ಪ ಭೇಟಿ

    ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯಿತಿ ಮಾಜಿ‌ ಸದಸ್ಯ ಹಾಡೋನಹಳ್ಳಿ ದಿ. ಅಪ್ಪಯ್ಯಣ್ಣನವರ ನಿವಾಸಕ್ಕೆ ಇಂದು(ಫೆ. 08)ಆಹಾರ ಮತ್ತು ನಾಗರಿಕ ಸರಬರಾಜು ಪೂರೈಕೆ ಸಚಿವ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ ಭೇಟಿ ನೀಡಿ ದಿ.ಅಪ್ಪಯ್ಯಣ್ಣನವರ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು.

    ರಾಜಕೀಯ ಹಾಗೂ ಸಾಮಾಜಿಕ ಕ್ಷೇತ್ರದ ಜೀವನದಲ್ಲಿ ಅನೇಕ ಹುದ್ದೆಗಳನ್ನು ಅಲಂಕರಿಸಿ ಸಾರ್ವಜನಿಕರಿಗೆ ನಿಸ್ವಾರ್ಥ ಸೇವೆ ಸಲ್ಲಿಸುವ ಮೂಲಕ ತಮ್ಮದೇ ಆದ ಛಾಪು ಉಳಿಸಿಕೊಂಡಿದ್ದರು, ಅವರ ಕುಟುಂಬ ಸದಸ್ಯರಿಗೆ ಅವರ ಅಗಲಿಕೆಯ ನೋವನ್ನು ಭರಿಸುವ ಶಕ್ತಿ ಕೊಡಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ ಎಂದು ಹೇಳಿದರು.

    ಇದೇ ಸಂದರ್ಭದಲ್ಲಿ ಶ್ರೀ ಕ್ಷೇತ್ರ ಘಾಟಿ ಸುಬ್ರಹ್ಮಣ್ಯ ದೇವಸ್ಥಾನ ಪ್ರಾಧಿಕಾರದ ಅಧ್ಯಕ್ಷ ರಂಗಪ್ಪ, ಸದಸ್ಯರಾದ ಆರ್.ವಿ.ಮಹೇಶ್ ಕುಮಾರ್, ರಮೇಶ್, ಕಾಂಗ್ರೆಸ್ ಮುಖಂಡರಾದ ರಾಮಕೃಷ್ಣಪ್ಪ , ರವಿ ಸಿದ್ದಪ್ಪ, . ಸವಿತಾ ಆನಂದ್, ನರಸಿಂಹಮೂರ್ತಿ ಸೇರಿದಂತೆ ಇತರರು ಉಪಸ್ಥಿತರಿದ್ದರು.